ಹುಬ್ಬಳ್ಳಿ: ಉತ್ತರ ಕರ್ನಾಟಕ ಅಭಿವೃದ್ಧಿಗೆ ರಾಜ್ಯ ಮೈತ್ರಿ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನ ಮಾಡ್ತಾಯಿಲ್ಲಾ ಈ ಹಿನ್ನಲೆಯಲ್ಲಿ ಅಗಸ್ಟ್ 12 ರಂದು ಉತ್ತರ ಕರ್ನಾಟಕದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಮಾಡುತ್ತೇನೆ ಎಂದು ಕನ್ನಡ ಪರ ಸಂಘಟನೆ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದರು.ನಗರದಲ್ಲಿಂದು ಹಿರಿಯ ಪತ್ರಕರ್ತರಾದ ನಾಡೋಜ ಪಾಟೀಲ ಪುಟ್ಟಪ್ಪನವರನ್ನು ಬೇಟಿ ನೀಡಿ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಂಜೂಂಡಪ್ಪ ವರದಿಯನ್ನು ಸರಿಯಾಗಿ ಅನುಷ್ಠಾನ ಮಾಡಿಲ್ಲಾ. ಮಹದಾಯಿ ವಿಷಯದಲ್ಲಿ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದರು.ಜಿಂದಾಲ್ ಉಳಿಸಿಕೊಳ್ಳಲು ಒಬ್ಬ ಮಂತ್ರಿಯನ್ನು ನೇಮಕ ಮಾಡ್ತಾರೆ. ಅದರೆ ಮಹದಾಯಿ ವಿಷಯದಲ್ಲಿ ಓರ್ವ ಮಂತ್ರಿಯನ್ನು ನೇಮಕ ಮಾಡಿಲ್ಲಾ ಎಂದು ಗಂಭೀರವಾಗಿ ಆರೋಪಿಸಿದರು.ಅಗಸ್ಟ್ ೧೨ ರಂದು ಉತ್ತರ ಕರ್ನಾಟಕದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಮಾಡುತ್ತೇನೆ. ಬೀದರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಲಗಿ ಮಲಗಿ ಹೋರಾಟ ಮಾಡುತ್ತೇನೆ ಎಂದು ಅವರು ಹೇಳಿದರು. ಉತ್ತರ ಕರ್ನಾಟಕ ಕುಡಿಯುವ ನೀರು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಹೋರಾಟ ಮಾಡಲಾಗುತ್ತದೆ.ಶಾಸಕರ ರಾಜೀನಾಮೆ ಕುರಿತು ಮಾತನಾಡಿದ ಅವರು, ಶಾಸಕರು ಹಾದಿ ಬೀದಿಯಲ್ಲಿ ಹೋಗುವವರಿಗೆ ರಾಜೀನಾಮೆ ಕೊಡೋಕೆ ಆಗೋದಿಲ್ಲ. ರಾಜ್ಯಪಾಲರಿಗೆ ರಾಜೀನಾಮೆ ಕೊಡುವ ಬದಲು ಸ್ಪೀಕರ್ ಅವರಿಗೆ ಕೊಡಬೇಕು.ಇದು ಬ್ಲ್ಯಾಕ್ ಮೇಲೆ ತಂತ್ರ ಎಂದು ಅವರು ಹೇಳಿದರು.ಬಿಜೆಪಿಯವರ ನಡೆ ಸರಿಯಾಗಿಲ್ಲಾ. ಬಿಜೆಪಿಯವರ ಬಹಿರಂಗವಾಗಿ ವ್ಯಾಪಾರಕ್ಕೆ ಇಳದಿದ್ದಾರೆ.ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಗ್ಯಾರಂಟಿ ಬರುತ್ತದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





