ಹುಬ್ಬಳ್ಳಿ: ಪ್ರಕೃತಿಯ ಮಡಿಲಲ್ಲಿ ನಿತ್ಯ ಅಚ್ಚರಿ, ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಅಂತದೇ ಒಂದು ಘಟನೆ ಕಲಘಟಗಿ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಕುರುವಿನಕೊಪ್ಪ ಗ್ರಾಮದ ಭೀಮಶಿ ಮಹದೇವಪ್ಪ ಗಾಯಕವಾಡ ಎಂಬುವವರ ಜಮೀನಲ್ಲಿರುವ ಹುತ್ತದ ಮೇಲೆ ಶಿವ, ಪಾರ್ವತಿ ಮತ್ತು ಗಣಪತಿ ಹೊಲುವ ಆಕೃತಿ ಮೂಡಿದೆ. ಈ ಆಕೃತಿಯನ್ನು ನೋಡಿದ ಗಾಯಕವಾಡ ಕುಟುಂಬದವರು ಅಚ್ಚರಿಗೊಂಡಿದ್ದಾರೆ.ಗಾಯಕವಾಡ ಕುಟುಂಬದವರು ತಮ್ಮ ಜಮೀನಿನಲ್ಲಿರುವ ಉಡಚಮ್ಮ ದೇವಿಗೆ ಪ್ರತಿ ಅಮವಾಸ್ಯೆ ಹಾಗೂ ಹುಣ್ಣುಮೆಯಂದು ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಆದ್ರೆ ಈ ಅಮವಾಸ್ಯೆಯ ಪೂಜೆ ಸಲ್ಲಿಸಲು ಹೋದಾಗ ಅಚ್ಚರಿಯನ್ನು ಕಂಡು ಪುಳಕಿತರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಹುತ್ತವಿದ್ದು, ನಾವು ಅಷ್ಟೊಂದು ಲಕ್ಷ್ಯಕೊಟ್ಟು ವೀಕ್ಷಣೆ ಮಾಡಿರಲಿಲ್ಲ. ಆದ್ರೆ ಈ ಬಾರಿ ಹುತ್ತದ ಮೇಲೆ ಕಾಣಿಸಿಕೊಂಡಿರುವ ಶಿವ, ಪಾವರ್ತಿ ಹಾಗೂ ಗಣೇಶ ಮೂರ್ತಿ ಆಶ್ಚರ್ಯ ತಂದಿದೆ ಎನ್ನುತ್ತಾರೆ. ವಿಷಯ ತಿಳಿಯುತ್ತಿದಂತೆ ಗ್ರಾಮಸ್ಥರು ಕೂಡ ಸ್ಥಳಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಫೋಟೋ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





