ಹುಬ್ಬಳ್ಳಿ: ಹು- ಧಾ ಮಹಾನಗರ ಪಾಲಿಕೆಯ ತಾರತಮ್ಯ ನೀತಿ ಹಾಗೂ ಕಿರುಕುಳದಿಂದ ಬೇಸತ್ತು ಪೌರ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಪೌರಕಾರ್ಮಿಕನ ಆತ್ಮಹತ್ಯೆಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿ ಹು-ಧಾ ಮಹಾನಗರ ಪೌರಕಾರ್ಮಿಕರು ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರತಿಭಟನೆ ನಡೆಸಿದರು.ಕಲ್ಲಪ್ಪ ಶಿವಲಿಂಗಪ್ಪ ಅಣ್ಣಿಗೇರಿ (34) ಆತ್ಮಹತ್ಯೆ ಮಾಡಿಕೊಂಡಿರುವ ಪೌರ ಕಾರ್ಮಿಕನ ಸಾವಿಗೆ ಹು-ಧಾ ಮಹಾನಗರ ಪಾಲಿಕೆಯ ತಾರತಮ್ಯ ಹಾಗೂ ಅವ್ಯವಸ್ಥೆಯೇ ಕಾರಣವಾಗಿದ್ದು, ಪೌರಕಾರ್ಮಿಕನ ಆತ್ಮಹತ್ಯೆಗೆ ಶೀಘ್ರವಾಗಿ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.ನೇರ ವೇತನಕ್ಕಾಗಿ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸಹ ನೇರ ವೇತನ ಜಾರಿಯಾಗಿರಲಿಲ್ಲ. ಕಳೆದ ವಾರ ನೇರ ವೇತನಕ್ಕೆ ಆಗ್ರಹಿಸಿ ಪ್ರಧಾನ ಮಂತ್ರಿಗಳಿಗೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟ್ವೀಟ್ ಸಹ ಮಾಡಿದ್ದ. ಆದರೆ ಟ್ವೀಟ್ ಗೆ ಪೂರಕ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಮನನೊಂದು ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಮಹಾನಗರ ಪಾಲಿಕೆಯ ತಾರತಮ್ಯ ನೀತಿಗೆ ಪೌರಕಾರ್ಮಿಕ ತನ್ನ ಜೀವವನ್ನು ಕಳೆದುಕೊಂಡಿದ್ದಾನೆ ಎಂದು ಮಾಹಾನಗರ ಪಾಲಿಕೆ ವಿರುದ್ಧ ಪೌರಕಾರ್ಮಿಕರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





