Breaking News

ಜಿಲ್ಲೆ

ಬಾಲಕನೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಿಮ್ಸ್‌ಗೆ ದಾಖಲಾಗಿದ್ದಾನೆ,

ಬೆಂಗಳೂರು: ವಾಟ್ಸ್​ಆ್ಯಪ್​​ ಫಾರ್ವರ್ಡ್​ ಮೆಸೇಜ್​ಗಳು ಹೇಗೆ ಸಮಾಜವನ್ನ ಹಾಗೂ ಸಮಾಜದ ಜನರನ್ನು ತಲ್ಲಣಗೊಳಿಸುತ್ತವೆ ಎನ್ನುವುದಕ್ಕೆ ಈ ಘಟನೆ ಉತ್ತಮ ಉದಾಹರಣೆ. ಬರೊಬ್ಬರಿ ನಾಲ್ಕು ವರ್ಷದ ಹಿಂದಿನ ವಾಟ್ಸ್​ಆ್ಯಪ್​​ ಸಂದೇಶವೊಂದು ಮರಳಿ ಹರೆದಾಡುವ ಮೂಲಕ ಬೆಂಗಳೂರಿನ ಕುಟುಂಬವನ್ನು ಇಂಡಿಹಿಪ್ಪೆ ಮಾಡಿ ಹಾಕಿದೆ ಎಂದರೆ ನಂಬಲೇಬೇಕು. ‘‘ಚಿಕ್ಕ ಬಾಲಕನೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಿಮ್ಸ್‌ಗೆ ದಾಖಲಾಗಿದ್ದಾನೆ. ತಲೆಗೆ ಗಂಭೀರ ಗಾಯವಾಗಿದೆ. ಆತನ ಪೋಷಕರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ದಯವಿಟ್ಟು ಈ ಸಂದೇಶವನ್ನು ಫಾರ್ವರ್ಡ್ …

Read More »

ಶೂಟ್ ಮಾಡಿದ್ರೇ ಕಲ್ಲು ಹೊಡೀತೀನಿ- ವಾಗ್ಮೋರೆ ತಾಯಿ ಆವಾಜ್.?

ಆ್ಯಂಕರ್: ಗೌರಿ ಹತ್ಯೆಯ ಆರೋಪಿ ಪರಶುರಾಮ್ ವಾಗ್ಮೋರೆ ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣದಲ್ಲಿ ನಿರ್ದೋಶಿ ಎಂದು ವಿಜಯಪುರ ಜಿಲ್ಲಾ‌ ನ್ಯಾಯಾಲಯ ತೀರ್ಪು ನೀಡಿದೆ. 2012 ಜನವರಿ 1 ಕ್ಕೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ತಹಶಿಲ್ದಾರ ಕಚೇರಿ‌‌ ಬಳಿ ಪಾಕಿಸ್ತಾನ ಧ್ವಜ ಹಾರಿಸಿದ್ದ ಆರೋಪ ಪರಶುರಾಮ ವಾಗ್ಮೋರೆ ಮೇಲಿತ್ತು,  ವಾಗ್ಮೋರೆ ಸೇರಿದಂತೆ ಆರು ಮಂದಿ ನಿರ್ದೋಶಿ ಎಂದು ತೀರ್ಪು ನೀಡಿದ್ದು, ಸರಿಯಾದ ಸಾಕ್ಷಾಧಾರವಿಲ್ಲದೆ ಕೇಸ್ ಖುಲಾಸೆಗೊಳಿಸಲಾಗಿದೆ. ಗೌರಿ ಲಂಕೇಶ ಹತ್ಯೆ …

Read More »

ಶಿರೂರು ಶ್ರೀ ಸ್ವಾಮೀಜಿ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್; ಓರ್ವ ಮಹಿಳೆ ಪೊಲೀಸ್ ವಶಕ್ಕೆ

ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಪೊಲೀಸರು ಪ್ರಕರಣ ಸಂಬಂಧ ಓರ್ವ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಬ್ರಹ್ಮಾವರ ಮೂಲದ ಮಹಿಳೆಯೊಬ್ಬರನ್ನು ಪೊಲೀಸರು ಪ್ರಸ್ತುತ ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಬ್ರಹ್ಮಾವರ ಮೂಲದ ಈ ಮಹಿಳೆ ನಿತ್ಯ ಆಶ್ರಮಕ್ಕೆ ಆಗಮಿಸಿ ಸ್ವಾಮೀಜಿಗಳಿಗೆ ಫಲಾಹಾರ ತಯಾರಿಸಿ ನೀಡುತ್ತಿದ್ದರು ಎಂದು ತಿಳಿದುಬಂದಿದೆ. …

Read More »

12 ವರ್ಷದ ಬಳಿಕ ಮೈದುಂಬಿದ ಚೆಕ್ ಡ್ಯಾಂ..

ಆ್ಯಂಕರ್ : ಕಳೆದ 12 ವರ್ಷಗಳಿಂದ ತುಂಬದ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬೃಹತ್ ಚೆಕ್ ಡ್ಯಾಂ ಈ ವರ್ಷ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ. ನೋಡೋಕೆ ಮಿನಿ ಡ್ಯಾಂನಂತಿರೋ ಈ ಬೃಹತ್ ಚೆಕ್ ಡ್ಯಾಂ ತುಂಬಿರೋದ್ರಿಂದ ಕುಡಿಯೋ ನೀರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಥಳಿಯರಲ್ಲೂ ಸಂತಸ ಮೂಡಿದೆ. ಇದೊಂದೆ ಅಲ್ಲ, ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿರೋ ಭಾರೀ ಮಳೆಗೆ ಜಿಲ್ಲೆಯ ಎಲ್ಲಾ ನದಿಗಳು, ಹಳ್ಳ-ಕೊಳ್ಳಗಳು, ಚೆಕ್ …

Read More »

ಸಾವಲ್ಲೂ ಬಿಡಲಿಲ್ಲ ಸ್ವಾಮೀಜಿ ಸಣ್ಣತನ…

ಶಿರೂರು ಲಕ್ಷ್ಮೀವರತೀರ್ಥ ಶ್ರೀಗಳ ಅಗಲಿಕೆ ನೋವು ತಂದಿದೆ. ವಿಷ ಪ್ರಾಸನದ ಬಗ್ಗೆ ಮಾಹಿತಿಯಿಲ್ಲ ಎಂದು ಉಡುಪಿ ಪೇಜಾವರಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವ್ರು, ಶಿರೂರು ಸ್ವಾಮೀಜಿ ಎಲ್ಲಿ ಆಹಾರ ಸ್ವೀಕಾರ ಮಾಡಿದ್ದಾರೋ ಏನೋ ಗೊತ್ತಿಲ್ಲ. ಲಿವರ್, ಕಿಡ್ನಿ ಫೇಲ್ ಆಗಿತ್ತು ಎಂದು ಮಾಹಿತಿ ಬಂದಿದೆ. ಅವರಿಗೆ ವಿಷ ಪ್ರಷಾಣ ಯಾರು ಮಾಡ್ತಾರೆ.? ಶಿರೂರು ಸ್ವಾಮೀಜಿಗಳಿಗೆ ವಿಷ ನೀಡೋ ಪ್ರಮೇಯವೇ ಇಲ್ಲ. ಸ್ವಾಮಿಗಳು ಯಾರು …

Read More »

ಹೆತ್ತವರಿಗೇ ಬೇಡ್ವಾದ ಅನಾಥರಿಗೆ ದೇವರಾಗಿ ಬಂದ ಅಮೆರಿಕಾ ಮಾತೆ!

ಹುಟ್ಟು ಹಬ್ಬ ಆಚರಿಸಬೇಕಾದ ಹೆತ್ತವರು ಅವರನ್ನ ಪೊದೆಯಲ್ಲಿ ಬಿಸಾಕಿದ್ರು. ಆದ್ರೇ ತವರಿನ ಮಡಿಲು ಇವರನ್ನ ರಕ್ಷಿಸಿ ಮರು ಜೀವ ನೀಡಿತ್ತು. ಆ ಜೀವಗಳಿಗೆ ಇಂದು ವರುಷದ ಸಂಭ್ರಮ. ಆ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು ತವರು ಚಾರಿಟಬಲ್ ಟ್ರಸ್ಟ್. ತನಗರಿವಿಲ್ಲದಂತೆ ಆಟವಾಡುತ್ತಿರುವ ಮತ್ತು ಹೆತ್ತವರಿಂದ ನಿರ್ಲಕ್ಷಕ್ಕೆ ಒಳಗಾಗಿದ್ದ ಅನಾಥ ಮಕ್ಕಳಿಬ್ಬರ ಹುಟ್ಟುಹಬ್ಬ ಆಚರಣೆ. ಅಮೇರಿಕಾ ಪ್ರಜೆಗಳಿಬ್ಬರು ದತ್ತು ಪಡೆದು ಹೊಸ ಜೀವನ ನೀಡಿದ ಕ್ಷಣ. ಈ ಅಪರೂಪದ ಸಂಭ್ರಮಕ್ಕೆ ಸಾಕ್ಷಿಯಾದರು ಜಿಲ್ಲಾಧಿಕಾರಿ ರೋಹಿಣಿ …

Read More »

ಬೈಕ್​ ಕದಿಯುತ್ತಿದ್ದ ಸೈಕೋ ಪದವೀಧರನ ಬಂಧನ: ಕಂಟ್ರಿ ಪಿಸ್ತೂಲ್​ ವಶ

ಭಗ್ನ ಪ್ರೇಮಿಯಾಗಿ ಸೈಕೋ ಆಗಿದ್ದ ಇಂಜಿನಿಯರ್​ ವಿದ್ಯಾರ್ಥಿ ಬೈಕ್​ ಕಳವು ಮಾಡುತ್ತಿದ್ದಾಗ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ನಾಗರಬಾವಿ ನಿವಾಸಿಯಾಗಿರುವ ಶರತ್ ಬಂಧಿತ. ಈತನನ್ನು ಬಂಧಿಸಿದ ಪೊಲೀಸರು ರಾಯಲ್ ಎನ್​ಫೀಲ್ಡ್​ ಸೇರಿ ಒಟ್ಟು 9 ಲಕ್ಷ ರೂ.ಮೌಲ್ಯದ 10 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಒಂದು ಕಂಟ್ರಿಮೇಡ್ ಪಿಸ್ತೂಲ್​ ಕೂಡ ಜಪ್ತಿ ಮಾಡಿದ್ದಾರೆ.

Read More »