Breaking News

ಜಿಲ್ಲೆ

ಮುಸ್ಲಿಂ ಮಹಿಳೆಯಿಂದ ಶ್ರದ್ಧೆಯಿಂದ ಗಣೇಶ ವಿಗ್ರಹ ತಯಾರಿಕೆ

ಹುಬ್ಬಳ್ಳಿ :ಗೌರಿಗಣೇಶ ಹಬ್ಬಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇದ್ದು, ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಈಗಾಗಲೇ ಗಣೇಶ ಮೂರ್ತಿಗಳ ತಯಾರಿಕೆ ಕೆಲಸ ಭರದಿಂದ ಸಾಗಿದೆ. ನಗರದ ಗೋಪನಕೊಪ್ಪದಲ್ಲಿ ನಡೆಯುವ ಸುಪ್ರಸಿದ್ಧ ಗಣೇಶೋತ್ಸವಕ್ಕೆಂದು ತರಹೇವಾರಿ‌ ಗಣೇಶ ಮೂರ್ತಿಗಳು ಸಿದ್ಧವಾಗುತ್ತಿವೆ. ಅದೇ ಕಾಯದಲ್ಲಿರುವ ಮುಸ್ಲಿಮ್ ಮಹಿಳೆಯೊಬ್ಬರು ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ವಿಘ್ನ ನಾಶಕ‌ ಗಣಪನ ಆಕರ್ಷಕ ಮೂರ್ತಿಗಳನ್ನು ತಯಾರಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಮುಸ್ಲೀಮ್ ಧರ್ಮೀಯರಾದ ಸುಮನ್ ಹಾವೇರಿಯವರು …

Read More »

ಹುಬ್ಬಳ್ಳಿಯಲ್ಲಿ ಶಾದಿ ಮಹಲನಲ್ಲಿ ಜಷಣೆ ಆಜಾದಿ ಕಾರ್ಯಕ್ರಮ

ನವಲಗುಂದ: ಉಮ್ಮತಿ ಎಜೋಕೇಶನ್ ಆಂಡ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಪಟ್ಟಣದ ಶಾದಿ ಮಹಲದಲ್ಲಿ ಜಷಣೆ ಆಜಾದಿ ಎಂಬ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉರ್ದು ಸಾಹಿತಿ ಹಾಗೂ ಶಾಯರ್ ಅಝೀಜುಲ್ಲಾ ಸರ್ಮಸ್ತ ಅವರು ಸ್ವಾತಂತ್ರೋತ್ಸವ ಸಂದ್ರರ್ಭದಲ್ಲಿ ಹೋರಾಡಿ ವೀರ ಮರಣರಾದವರ ಬಗ್ಗೆ ಇತಿಹಾಸ ವಿವರಿಸದರು. ಇದೆ ವೇಳೆ ಉತ್ತಮ ಸಾಧನೆ ಮಾಡಿ ಎಂಬಿಬಿಎಸ್ ಓದುತ್ತಿರುವ ಒಂದೇ ಮನೆಯ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Read More »

ಹುಬ್ಬಳ್ಳಿಯಲ್ಲಿ ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಇಬ್ಬರು ಲಾರಿ ಚಾಲಕರು ಗಂಭೀರವಾಗಿ ಗಾಯ

ಹುಬ್ಬಳ್ಳಿ: ಹುಬ್ಬಳ್ಳಿ -ಧಾರವಾಡ ಬೈಪಾಸ್‌ನಲ್ಲಿ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಲಾರಿ ಚಾಲಕರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ತಾರಿಹಾಳ ಬ್ರಿಡ್ಜ್ ಬಳಿ ನಡೆದಿದೆ. ಕೊಲ್ಲಾಪುರದಿಂದ ಸರಕು ಹೇರಿಕೊಂಡು ಬರುತ್ತಿದ್ದ ಲಾರಿ ಹಾಗೂ ಹಾವೇರಿಯಿಂದ ಮುಂಬೈಗೆ ಸರಕು ಸಾಗಾಟ ಮಾಡುತ್ತಿದ್ದ ಲಾರಿ ನಡುವೆ ಈ ಅಪಘಾತ ನಡೆದಿದ್ದು, ಬೇರೆ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಈ ಅವಘಡ ನಡೆದಿದೆ. ಘಟನೆಯಲ್ಲಿ ಇಬ್ಬರು ಲಾರಿ ಚಾಲಕರಿಗೆ ಗಂಭೀರ …

Read More »

ರಾತ್ರೋರಾತ್ರಿ ತಪ್ಪಿದ ಬಾರಿ ದುರಂತ

ಹುಬ್ಬಳ್ಳಿ: ಯುವಕನೊಬ್ಬ ಅತಿ ಜೋರಾಗಿ ಚಾಲನೆ ಮಾಡುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ತ ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ತಂತಿಗಳು ಕಾರಿನ ಮೇಲೆ ಬಿದ್ದರು ಕೂಡಾ ಕಾರಿನಲ್ಲಿದ್ದ 4 ಜನ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ತಡರಾತ್ರಿ ವಿದ್ಯಾನಗರದಲ್ಲಿ ನಡೆದಿದೆ. ವಿದ್ಯಾನಗರದ ಸೆವೆನ್ ಬೀನ್ಸ್ ಹೋಟೆಲ್ ಬಳಿಯಲ್ಲಿ ರಾತ್ರಿ ಸುಮಾರಿಗೆ 4 ಜನ ಯುವಕರು ಕಿಯಾ ಕಾರನ್ನು ವಿದ್ಯಾನಗರದಲ್ಲಿ ಅತಿ ಜೋರಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದರು. ಆದರೆ …

Read More »

ಧಾರವಾಡದಲ್ಲಿ ಲೋಕಾಯುಕ್ತ ಶಾಕ್.. ಅಧಿಕಾರಿ ಮನೆ ಮೇಲೆ ದಾಳಿ

ಧಾರವಾಡ: ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ ನಡೆದಿದೆ ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ಸಹಾಯಕ ಆಯುಕ್ತರಾಗಿದ್ದ ಧಾರವಾಡದ ನಿವಾಸಿಯ ಮನೆಯ ಮೇಲೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ರೇಡ್ ನಡೆದಿದ್ದು, ಮಹತ್ವದ ದಾಖಲೆಗಳು ಲಭಿಸಿವೆಯಂತೆ. ಧಾರವಾಡದ ಸಪ್ತಾಪುರದ ಮಿಚಿಗನ್ ಲೇ ಔಟ್‌ನಲ್ಲಿರುವ ಕೋಟಿ ಕೋಟಿ ಬೆಲೆಬಾಳುವ ಮನೆಯನ್ನ ಹೊಂದಿರುವ ಸಂತೋಷ ಆನಿಶೆಟ್ಟರ್, ಸದ್ಯ ಬೆಳಗಾವಿ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆನಿಶೆಟ್ಡರ್ ಮನೆಯಲ್ಲಿ ತನಿಖೆ ಆರಂಭಿಸಿರುವ ಲೋಕಾಯುಕ್ತ ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದಿದ್ದು, ಮತ್ತಷ್ಟು …

Read More »

ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ: 18 ಮಂದಿಗೆ ವಿಶಿಷ್ಟ ಸೇವಾ ಪದಕ ಪ್ರದಾನ..!

76 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕೇಂದ್ರ ಗೃಹ ಇಲಾಖೆ ರಾಜ್ಯದ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಹಾಗೂ 18 ಮಂದಿಗೆ ಪೊಲೀಸ್ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಸೇವೆಗೆ ಕೇಂದ್ರ ಗೃಹ ಇಲಾಕೆ ಪದಕ ಪ್ರದಾನ ಮಾಡಿದ್ದು, ಯಾವ್ಯಾವ ಅಧಿಕಾರಿಗಳಿಗೆ ಪದಕಕ್ಕೆ ಭಾಜನರಾಗಿದ್ದಾರೆ ಅಂತಾ ನೋಡೋದಾದ್ರೆ ಎಸ್ ಮುರುಗನ್ , ಎಡಿಜಿಪಿ – ರಾಷ್ಟ್ರಪತಿ ಪದಕ ಪ್ರಧಾನ ಸೀಮಂತ್ ಕುಮಾರ್ ಸಿಂಗ್, …

Read More »

6 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನ : ಶಾಸಕ ಯತ್ನಾಳ್

ವಿಜಯಪುರ : 6 ತಿಂಗಳಲ್ಲಿ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ. ಅಲ್ಲಿಯವರೆಗೆ ಸಮಾಧಾನದಿಂದ ಇರಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಚುನಾವಣೆಗೆ ಶ್ರಮಿಸಿದ ಕಾರ್ಯಕರ್ತರಿಗೆ ಔತಣಕೂಟ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಕಾಂಗ್ರೆಸ್ ಸರ್ಕಾರದಲ್ಲಿ ಅವರ ಶಾಸಕರಿಗೆಯೇ ನೀಡಲು ಅನುದಾನ ಇಲ್ಲ, ಈಗ ಆ ಶಾಸಕರೆ ಅಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಅದಕ್ಕಾಗಿ ನೀವು ಸ್ವಲ್ಪ ದಿನಗಳ ಕಾಲ ರೆಸ್ಟ್ ಮಾಡಿ, ಈಗ …

Read More »

ಧಾರವಾಡ ಕಾರು ಪಲ್ಟಿಯಾಗಿ ಇಬ್ಬರ ಸಾವು

ಧಾರವಾಡ: ಧಾರವಾಡ ಬೆಳಗಾವಿ ಬೈಪಾಸ್ ರಸ್ತೆಯಲ್ಲಿ ಪ್ರತಿದಿನ ಒಂದಿಲ್ಲೊಂದು ಅಪಘಾತಗಳು ಸಂಭವಿಸಿ ಜನ ಸಾವನ್ನಪ್ಪುತ್ತಲೇ ಇದ್ದಾರೆ. ಮೊನ್ನೆಯಷ್ಟೇ ಬೈಕ್ ಅಪಘಾತವಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಇದೀಗ ಕಾರು ಪಲ್ಟಿಯಾಗಿ ಮತ್ತಿಬ್ಬರು ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ತೇಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಧಾರವಾಡದಿಂದ ದಾಬಾಕ್ಕೆ ಊಟಕ್ಕೆಂದು ಹೋಗಿದ್ದ ವಿನಯ್ ಹಿರೇಮಠ (24) ಹಾಗೂ ಸಂದೀಪ್ (29) ಎಂಬುವರೇ ಈ ಘಟನೆಯಲ್ಲಿ ಸಾವನ್ನಪ್ಪಿದವರು. ಊಟ ಮಾಡಿಕೊಂಡು ಮರಳಿ ಬರುತ್ತಿದ್ದ …

Read More »

ಜಾತಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹೋರಾಟ

ಹುಬ್ಬಳ್ಳಿ ಹಿಂದು ಗಂಟೆಚೋರ ಹಾಗೂ ಗಿರಣಿ ವಡ್ಡರ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ನೀಡಿಕೆ ಹಾಗೂ ವಿವಿಧ ಬೇಡಿಕೆ ಈಡೇರಿಸುವ ಉಗ್ರ ಸ್ವರೂಪದ ಹೋರಾಟದ‌ ನಿರ್ಧಾರ ತೆಗೆದುಕೊಳ್ಳಲಾಯಿತು.ನಗರದ ಖಾಸಗಿ ಹೊಟೇಲ್ ನಲ್ಲಿಂದು ನಡೆದ ಹಿಂದು ಗಂಟೆಚೋರ ಹಾಗೂ ಗಿರಣಿ ವಡ್ಡರ ಸಮಾಜದ ಸಭೆಯಲ್ಲಿ ಒಮ್ಮತ ಅಭಿಪ್ರಾಯಕ್ಕೆ ಬರಲಾಯಿತು. ಸಮಾಜದ ಸಮಾಜ ಮಕ್ಕಳು ಶಿಕ್ಷ ಣದಿಂದ ವಂಚಿತರಾಗುತ್ತಿದ್ದು, ನ್ಯಾಯ ಸಿಗುವರೆಗೂ ಹೋರಾಟ, ಗಂಟಿಚೋರ್‌ ಸಮುದಾಯಕ್ಕೆ ತಮ್ಮ ಜಾತಿಯ ಬಗ್ಗೆ ಬೇರೆ ಬೇರೆ …

Read More »

ಕಾರ್ಯನಿರತ ಪತ್ರಕರ್ತರ ಸಂಘದಿಂದ ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಇಂದು ಹುಬ್ಬಳ್ಳಿ ಆರ್‌ನ್ ಶಟ್ಟಿ ಕಲ್ಯಾಣ ಮಂಟಪದಲ್ಲಿ ನೆರೆವೇರಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಕೆ.ವಿ ಪ್ರಭಾಕರ, ಮುಖ್ಯಮಂತ್ರಿ ಮಾಧ್ಯಮ ಸಂಯೋಜಕರು, ಕ.ಕಾ.ನಿ.ಪ ಸಂಘದ ಅಧ್ಯಕ್ಷ ಶಿವಾನಂದ ತಗಡೂರ, ಕ.ಕಾ.ನಿ.ಪ ಸಂಘದ ಉಪಾಧ್ಯಕ್ಷ ಪುಂಡಲಿಕ ಬಾಳೋಜಿ, ಕ.ಕಾ.ನಿ.ಪ ಕಾರ್ಯಕಾರಿಣಿ ಸದಸ್ಯ ಗಣಪತಿ ಗಂಗೋಳಿ, ಧಾರವಾಡ ಜಿಲ್ಲಾ ಕಾರ್ಯ …

Read More »