Breaking News

27 ಮಂದಿಗೆ ಗುಂಡಿಟ್ಟ ತಾಲಿಬಾನ್‌ ಉಗ್ರರು

ಕಾಬೂಲ್‌: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು, ಆಳ್ವಿಕೆ ನಡೆಸುತ್ತಿರುವ ತಾಲಿಬಾನ್‌ ಉಗ್ರರು ಕಳೆದ ತಿಂಗಳು ಆಫ್ಘನ್‌ನ ಕಣಿವೆಯಲ್ಲಿ 27 ಮಂದಿಗೆ ಗುಂಡಿಟ್ಟು, ನರಮೇಧ ನಡೆಸಿದ್ದಾರೆ.

ಯುದ್ಧದಲ್ಲಿ ಸತ್ತಿದ್ದಾರೆ ಎಂದು ಬಿಂಬಿಸಲಾಗಿದ್ದ ಸಾವಿನ ಹಿಂದಿನ ಸತ್ಯವನ್ನು ಇದೀಗ ಬ್ರಿಟನ್‌ ಮೂಲದ ಎನ್‌ಜಿಒ ಒಂದು ಬಯಲಿಗೆಳೆದಿದೆ. ಐವರು ವ್ಯಕ್ತಿಗಳ ಕೈಗಳನ್ನು ಕಟ್ಟಿ ಹಾಕಿ, ಕಣ್ಣಿಗೆ ಬಟ್ಟೆ ಕಟ್ಟಿ, ಸುಮಾರು 20 ಸೆಕೆಂಡುಗಳ ಕಾಲ ತಾಲಿಬಾನಿಯರು ಗುಂಡು ಹಾರಿಸಿರುವ ವಿಡಿಯೋ ಕೂಡ ಎಲ್ಲೆಡೆ ಹರಿದಾಡಿದೆ.

ಅವುಗಳನ್ನೆಲ್ಲ ಪರಿಶೀಲನೆ ನಡೆಸಲಾಗಿದ್ದು, ತಾಲಿಬಾನಿಯರು ತಮ್ಮನ್ನು ವಿರೋಧಿಸಿದ 27 ಮಂದಿಗೆ ಈ ರೀತಿ ಗುಂಡಿಟ್ಟು ಕೊಲೆ ಮಾಡಿದ್ದಾರೆ ಎಂದು ಎನ್‌ಜಿಒ ವರದಿ ಮಾಡಿದೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *