Breaking News

ಜಿಲ್ಲೆ

ಮೀನು ಕದ್ದ ಆರೋಪ : ಮರಕೆ ಕಟ್ಟಿ ಮಹಿಳೆ ಮೇಲೆ ಹಲ್ಲೆ

ಮೀನು ಕದ ಆರೋಪದಡಿ ಮಹಿಳೆ ಒಬ್ಬರನ್ನು ಮರಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಮಲ್ಪೆ ಬಂದಿರಿನಲ್ಲಿ ಮೂರು ದಿನಗಳ ಹಿಂದೆ ನಡೆಯಲಾಗಿದೆ ಎಂದು ಎನ್ನಲಾಗಿದೆ ಮತ್ತು ಮಹಿಳೆ ಒಂದು ಬುಟ್ಟಿ ಮೀನು ಕದ್ದಿದ್ದಾಳೆ ಎಂದು ಆರೋಪಿಸಿ ಮತ್ತೊಬ್ಬ ಮಹಿಳೆ ಅವಳಿಗೆ ಕಪಾಳ ಮೋಕ್ಷ ಮಾಡಿದ್ದಾಳೆ. ಬಳಿಕ ಮಹಿಳೆಯನ್ನು ಮರಕೆ ಕಟ್ಟಿ ಹಾಕಿ ಪ್ರತಿಯೊಬ್ಬ ಅವಾಚ ಶಬ್ದಗಳಿಂದ ನಿಂದಿಸಿ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಎನ್ನಲಾಗಿದೆ …

Read More »

ಪುಟ್ಟ ಮಕ್ಕಳನ್ನು ರಕ್ಷಿಸಲು ಸರ್ಪದೊಂದಿಗೆ ಹೋರಾಡಿ ಪ್ರಾಣ ಬಿಟ್ಟ ಶ್ವಾನ

ಹಾಸನ ತಾಲೂಕು ಕಟಾಯ ಗ್ರಾಮದಲ್ಲಿ ಸಾಕು ನಾಯಿ ಒಂದು ಕಾಳಿಂಗ ಸರ್ಪದೊಂದಿಗೆ ಹೋರಾಡಿ ತನ್ನ ಮಾಲೀಕನ ಮಕ್ಕಳ ಜೀವವನ್ನು ಕಾಪಾಡಿದೆ ಕೊನೆಗೆ ತನ್ನ ಪ್ರಾಣವನ್ನು ಕಳೆದುಕೊಂಡಿದೆ. ಸಮನ್ ಎಂಬುವರು ಸಾಕಿದ್ದ ಬಿಟ್ಬುಲ್ ನಾಯಿ ಒಂದು ಕಾಳಿಂಗ ಸರ್ಪದೊಂದಿಗೆ ಕಾಳಗ ನಡೆಸಿ ಪ್ರಾಣ ಬಿಟ್ಟಿದೆ ಹಾವಿನೊಂದಿಗೆ 15 ನಿಮಿಷಕ್ಕೂ ಹೆಚ್ಚು ಕಾಳಗ ನಡೆಸಿ ಅದನ್ನು ಕೊಂದು ಮತ್ತೆ ತಾನು ಪ್ರಾಣ ಬಿಟ್ಟಿದೆ. ಈ ವಿಷಯ ಕೇಳಿ ಕುಟುಂಬದವರು ಕಣ್ಣೀರಿಟ್ಟಿದ್ದಾರೆ.

Read More »

ನಾಪತ್ತೆಯಾಗಿದ್ದ ವಸತಿ ಶಾಲೆಯ ಇಬ್ಬರೂ ವಿದ್ಯಾರ್ಥಿಗಳು ಪತ್ತೆ.

ವಿದ್ಯಾರ್ಥಿಗಳು ಮಾರ್ಚ್​ 3ರಂದು ವಸತಿ ಶಾಲೆಯಿಂದ‌ ನಾಪತ್ತೆಯಾಗಿದ್ದರು. ಮಂಗಳೂರಿನ ಹೋಟೆಲ್​ವೊಂದರಲ್ಲಿ ಕೆಲಸಕ್ಕೆ ಸೇರಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಯಶ್ವಿತ್, ತರುಣ್ ಉತ್ತಮ ಸ್ನೇಹಿತರಾಗಿದ್ದಾರೆ. ಓದಿನಲ್ಲಿ ಆಸಕ್ತಿ ಇಲ್ಲದೆ ಇದ್ದರೂ ವಸತಿ ಶಾಲೆಯಲ್ಲಿ ಒಳ್ಳೆಯ ಹೆಸರು ಪಡೆದಿದ್ದರ.ಮಕ್ಕಳು ನಾಪತ್ತೆಯಾಗುತ್ತಿದ್ದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಿಸಿಕೊಂಡ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು, ವಿದ್ಯಾರ್ಥಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿದ್ದಾರೆ.ಅನುಮಾನಗೊಂಡು ಮಂಗಳೂರಿನಲ್ಲೂ ಹುಡುಕಾಟ ನಡೆಸಿದಾಗ ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ. ಪೊಲೀಸರು …

Read More »

ತಿಥಿ ಕಾರ್ಯದಿಂದ ವಾಪಸ್ಸಾಗ್ತಿದ್ದ ಓರ್ವನ ತಿಥಿ ಮಾಡುವ ಪರಿಸ್ಥಿತಿ!.

ಕಾರವಾರದ ಸಂಬಂಧಿಕರ ಮನೆಯಲ್ಲಿ ತಿಥಿ ಕಾರ್ಯ ಮುಗಿಸಿ ಮಾರುತಿ ಸುಜುಕಿ ಆಲ್ಟೋ ಕಾರಿನಲ್ಲಿ ಹುಬ್ಬಳ್ಳಿಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ತಿರುವಿನಲ್ಲಿ ರಸ್ತೆಗೆ ಅಡ್ಡಬಂದ ಆಕಳನ್ನು ತಪ್ಪಿಸಲು ಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಪಲ್ಟಿಯಾಗಿದೆ.ಘಟನೆಯಲ್ಲಿ ಶೈಲಾ ಸುರೇಶ್ ರಾಣೆ, ಸಂಜೀವ ಸಾವಳು ನಾಯ್ಕ ಹಾಗೂ ಶ್ವೇತಾ ಸಂಜೀವ ನಾಯ್ಕ ಇವರಿಗೆ ಗಾಯಗಳಾಗಿದೆ. ಇವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿ ಕಾರವಾರ ಕೀಮ್ಸ್ …

Read More »

2 ತಿಂಗಳ ಹಿಂದೆ ಹೂತಿಟ್ಟ ಶವ ಹೊರತೆಗೆದ ಪೊಲೀಸರು.ಮೃತದೇಹ ಯಾರದ್ದು?

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಮೂಲದ, ಸಾಫ್ಟವೇರ್‌ ಎಂಜಿನಿಯರ್‌ ಆಗಿದ್ದ ನವೀನ ವೀರಭದ್ರಪ್ಪ ಹೆಗಡೆ ಅವರ ಶವವನ್ನೇ ಹೊರತೆಗೆದು ಪರಿಶೀಲನೆ ನಡೆಸಲಾಯಿತು. ಮೃತ ನವೀನನ ತಂದೆ- ತಾಯಿ ತನ್ನ ಪುತ್ರ ಸಾವಿನ ಕುರಿತಾಗಿ ಸಂಶಯ ವ್ಯಕ್ತಪಡಿಸಿದ್ದರಿಂದ ಬೆಂಗಳೂರಿನಲ್ಲಿರುವ ತಿಲಕ್‌ನಗರ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದರು. ಗುಳೇದಗುಡ್ಡದಲ್ಲಿ ಕಳೆದ 2022 ರಿಂದ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟವೇರ್‌ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಅನಾರೋಗ್ಯ ಹಿನ್ನೆಲೆ ನವೀನ ಕೆಲ ತಿಂಗಳಿಂದ ಆಗಾಗ ಬೆಂಗಳೂರಿನ ಆಸ್ಪತ್ರೆಗೆ …

Read More »

ಏಕಾಏಕಿ ಮನೆಯ ಮೇಲ್ಛಾವಣಿ ಕುಸಿತ ಮನೆಯಲ್ಲಿದ್ದ ನಾಲ್ವರು ಬಚಾವ್!

ಮಹದೇವಪ್ಪ ಕುಲಕರ್ಣಿ ಎಂಬವರ ಮನೆ ಮೇಲ್ಛಾವಣಿ ಕುಸಿದಿದೆ. ಪವಾಡ ಎಂಬಂತೆ ಮನೆಯಲ್ಲಿದ್ದ ಮಹದೇವಪ್ಪ ಪತ್ನಿ ಲಲಿತಮ್ಮ ಹಾಗೂ ಇಬ್ಬರು ಮಕ್ಕಳಾದ ಪ್ರಶಾಂತ, ಶಂಕ್ರು ಬಚಾವ್‌ ಆಗಿದ್ದಾರೆ.ಘಟನಾ ಸ್ಥಳಕ್ಕೆ ಪಿಡಿಓ, ಹಾಗೂ ನಾಡ ಕಾರ್ಯಾಲಯ ಅಧಿಕಾರಿಗಳು, ಪಶು ವೈದ್ಯರು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಜಿಲ್ಲೆಯ ಮುಂಡರಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬಾದಾಮಿ ಆಟೊ ಚಾಲಕರಿಂದ ಪ್ರವಾಸಿಗರ ಸುಲಿಗೆ: ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್. ವಾಸನ ಹೇಳಿಕೆ.

ಬಾದಾಮಿಯ ಮೇಣಬಸದಿ ಆವರಣದಲ್ಲಿ ಕಾರ್ ಪಾರ್ಕಿಂಗ್ ಸ್ಥಳವಿದ್ದರೂ ಕೆಲವು ಆಟೊ ಚಾಲಕರು ಅಂಬೇಡ್ಕರ್ ವೃತ್ತದಲ್ಲಿಯೇ ಕಾರು ನಿಲ್ಲಿಸಿ, ‘ಕಾರ್ ಪಾರ್ಕಿಂಗ್ ಭರ್ತಿಯಾಗಿದೆ, ಜಾಗ ಇಲ್ಲ.ಆಟೊದಲ್ಲೇ ಹೋಗಿ’ ಎಂದು ದುಂಬಾಲು ಬೀಳುತ್ತಿದ್ದಾರೆ.ಮೇಣಬಸದಿ ಮತ್ತು ಭೂತನಾಥ ದೇವಾಲಯ ಸ್ಮಾರಕಗಳ ಸಂಪರ್ಕಕ್ಕಾಗಿ ಪ್ರವಾಸಿಗರಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆಯಿಂದ ಪಾರ್ಕಿಂಗ್ ಪ್ಲಾಜಾ ನಿರ್ಮಾಣ ಮತ್ತು ಹೊಂಡದ ದಂಡೆಯ 96 ಮನೆಗಳ ಸ್ಥಳಾಂತರದ ಬಳಿಕ ಅನುಕೂಲವಾಗಲಿದೆ. ಈ ಎರಡೂ ಕಾಮಗಾರಿ ಸರ್ಕಾರ ಕೈಗೊಳ್ಳಬೇಕಿದೆ.ಮಹಾಕೂಟ, ಪಟ್ಟದಕಲ್ಲು …

Read More »

ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಬಾಲಕ ಸಾವು!

ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಬಾಲಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ. ಮಂಗಳೂರಿನ ಮೇರಿಹಿಲ್‌ನಲ್ಲಿರುವ ಮಾತಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಈ ದುರಂತ ಸಂಭವಿಸಿದೆ.ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

Read More »

ಶಿವಮೊಗ್ಗದಲ್ಲಿ ವಿದ್ಯುತ್ ತಗಲಿ ಯುವತಿಯ ದುರಂತ ಸಾವು .

ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಎಮೆಹಟ್ಟಿ ಗ್ರಾಮದಲ್ಲಿ ಇಂದು ವಿದ್ಯುತ್ ತಗಳ್ಳಿ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ಕಂಡು ಬಂದಿದೆ. ಮೃತ ಯುವತ್ತಿಯನ್ನು ನಿಸರ್ಗ ಎಂದು ಗುರುತಿಸಲಾಗಿದೆ. ನಿಸರ್ಗ ನೀರಿನ ಟ್ಯಾಂಕಿಗೆ ನೀರು ಬಿಡುವ ಸಲುವಾಗಿ ಮೋಟರ್ ಆನ್ ಮಾಡಲು ತೆರಳಿದರು ಆ ವೇಳೆ ಅವರಿಗೆ ಕರೆಂಟ್ ಹೊಡೆದಿದೆ ಪರಿಣಾಮ ಸ್ಥಳದಲ್ಲಿ ಕುಸಿದು ಬಿದ್ದು ನಿಸರ್ಗ ಸಾವನಪ್ಪಿದ್ದಾಳೆ. ಈ ಬಗ್ಗೆ ಹೊಳೆಹೊನ್ನೂರು ಠಾನೆಯಲ್ಲಿ ಪ್ರಕರಣ ದಾಖಲೆಯಾಗಿದೆ.

Read More »

ಸ್ವಾಮೀಜಿ ಕಾಲಿಗೆ ಬಿದ್ದು ಹಣ ಪಡೆದ ಪೊಲೀಸರ ವರ್ಗಾವಣೆ…

ನಿನ್ನೆಯಷ್ಟೇ ಸ್ವಾಮೀಜಿ ಓರ್ವರ ಕಾಲಿಗೆ ಸಮವಸ್ತ್ರದಲ್ಲೇ ಪೊಲೀಸರು ನಮಸ್ಕಾರ ಮಾಡಿ ನೋಟು ಪಡೆದುಕೊಂಡ ವಿಡಿಯೋ ಬಿಗ್ ಟಿವಿ ನ್ಯೂಸ್ ಸುದ್ದಿ ಪ್ರಸಾರ ಮಾಡಿತ್ತು…. ಸಿದ್ದನಕೊಳ್ಳ ಶಿವಕುಮಾರ ಸ್ವಾಮೀಜಿ ಕಾಲಿಗೆ ಪೊಲೀಸರು ನಮಸ್ಕಾರ ಮಾಡಿ, ಹಣ ಪಡೆದಿದ್ದ ವಿಡಿಯೋ ಬೆನ್ನಲ್ಲೇ ಆರು ಜನ ಪೊಲೀಸರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಸ್ವಾಮೀಜಿಗೆ ನಮಸ್ಕಾರ ಮಾಡಲಿ, ಆದರೆ ಸಮವಸ್ತ್ರದಲ್ಲಿ ನಮಸ್ಕಾರ ಮಾಡುವುದಲ್ಲದೇ ಹಣ ಕೂಡ ಪಡೆದಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಜನ …

Read More »