BigTv News
August 23, 2022
Breaking News, ಜಿಲ್ಲೆ, ಮಂಗಳೂರು
ಮಂಗಳೂರು: ಸೆಪ್ಟೆಂಬರ್ 2 ಶುಕ್ರವಾರದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಲಿದ್ದಾರೆ. ಸರ್ಕಾರದ ಅಧಿಕೃತ ಕಾರ್ಯಕ್ರಮ ಹಿನ್ನೆಲೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ.ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಯೋಗ ದಿನಾಚರಣೆ ಸಂದರ್ಭದಲ್ಲಿ ಇತ್ತೀಚೆಗೆ ಬೆಂಗಳೂರು, ಮೈಸೂರಿಗೆ ಬಂದಿದ್ದರು. ಪಣಂಬೂರುನಲ್ಲಿರುವ “ನವ ಮಂಗಳೂರು ಬಂದರು ಪ್ರಾಧಿಕಾರದ” ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಎನ್ ಎಂ ಪಿ ಟಿ ಯಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ದಕ್ಷಿಣ ಕನ್ನಡ ಜಿಲ್ಲಾ …
Read More »
BigTv News
August 22, 2022
Breaking News, ಜಿಲ್ಲೆ, ಮೈಸೂರು
ಮೈಸೂರು: ಈ ಬಾರಿಯ ದಸರಾ ಮಹೋತ್ಸ ಹಿನ್ನೆಲೆ ಮೈಸೂರು ನಗರದ ಪ್ರಮುಖ ವೃತ್ತ, ರಸ್ತೆ ಸೇರಿದಂತೆ ಒಟ್ಟು 110 ಕಿಲೋ ಮೀಟರ್ ದೀಪಾಲಂಕಾರಕ್ಕೆ ಸಿದ್ಧತೆ ಆರಂಭಿಸಲಾಗಿದೆ. ಪ್ರತಿವರ್ಷ ದಸರಾದಲ್ಲಿ ಪ್ರಮುಖ ಆಕರ್ಷಣೆಯೆಂದರೆ ಅದು ದೀಪಾಲಂಕಾರ. ಸಾವಿರಾರು ಪ್ರವಾಸಿರು, ಸ್ಥಳೀಯರು ಈ ದೃಶ್ಯದ ವೈಭವವನ್ನು ಕಣ್ತುಂಬಿಕೊಳ್ಳುತ್ತಾರೆ. ಮೈಸೂರಿನ ಹೃದಯ ಭಾಗದ ಪಾರಂಪರಿಕ ಕಟ್ಟಡಗಳು, ವಾಣಿಜ್ಯ ಸಂಕೀರ್ಣ, ವೃತ್ತಗಳು, ಮುಖ್ಯ ಜಂಕ್ಷನ್‌ಗಳನ್ನು ಒಳಗೊಂಡಂತೆ ವಿವಿಧೆಡೆ ದೀಪಾಲಂಕಾರ ಮಾಡಲಾಗುತ್ತದೆ. ದಸರಾ ಸಮಯದಲ್ಲಿ ಸಂಜೆ 7 …
Read More »
BigTv News
August 20, 2022
Breaking News, ಜಿಲ್ಲೆ, ಮೈಸೂರು
ಮೈಸೂರು: ಪ್ರಚೋದನಕಾರಿ ಹೇಳಿಕೆ ಆರೋಪದಡಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಾಗಿದೆ. ಬಿಜೆಪಿ ಮುಖಂಡ ತೋಟದಪ್ಪ ಬಸವರಾಜು ಎಂಬುವವರು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಡಿ ಮೈಸೂರಿನಲ್ಲಿ ದೂರು ದಾಖಲಿಸಿದ್ದಾರೆ. ಕೊಡಗಿನಲ್ಲಿ ತಮ್ಮ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ, ನಮಗೂ ಮೊಟ್ಟೆ ಎಸೆಯಲು ಬರಲ್ವಾ? ಕಾಂಗ್ರೆಸ್ ಕಾರ್ಯಕರ್ತರು ಹೋರಾಟ ಶುರು ಮಾಡಿದರೆ ಸಿಎಂ ಬೊಮ್ಮಾಯಿ, …
Read More »
BigTv News
August 18, 2022
Breaking News, ಜಿಲ್ಲೆ, ಮೈಸೂರು
ಮೈಸೂರು : ನಗರದ ಹೆಸರಾಂತ ವೈದ್ಯರು, ಭಾರತ್ ಕ್ಯಾನ್ಸರ್ ಆಸ್ಪತ್ರೆ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಎಂ.ಸಿ. ವಿಶ್ವೇಶ್ವರ ನಿಧನ. ಕಳೆದ ಕೆಲದಿನಗಳ ಹಿಂದಷ್ಟೆ ಅವರಿಗೆ ಪಿತ್ತಜನಕಾಂಗದ ಮರುಜೋಡಣೆ ಮಾಡಲಾಗಿತ್ತು. ಅದು ಅವರ ದೇಹಕ್ಕೆ ಹೊಂದದೆ ಆರೋಗ್ಯ ಸಮಸ್ಯೆ ಉಲ್ಭಣಿಸಿದ್ದು. ಇಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.ತಮ್ಮ ಸೇವೆಯ ಮೂಲಕ ಸಾಕಷ್ಟು ಜನ ಮನ್ನಣೆ ಗಳಿಸಿದ್ದ ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
Read More »
BigTv News
August 17, 2022
Breaking News, ಜಿಲ್ಲೆ, ಶಿವಮೊಗ್ಗ
ಶಿವಮೊಗ್ಗ: ನಗರದಲ್ಲಿ ವೀರ ಸಾರ್ವಕರ್ ಮತ್ತು ಟಿಪ್ಪು ಫೋಟೋ ಗಲಾಟೆ ನಡೆದಿತ್ತು. ಆದ್ರೆ ಗಲಾಟೆಗೆ ಸಂಬಂಧಪಡದ 20 ವರ್ಷದ ಪ್ರೇಮ್ ಸಿಂಗ್ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು. ಚಾಕು ಇರಿತಕ್ಕೆ ಸಂಬಂಧಿಸಿದಂತೆ ತಡರಾತ್ರಿಯೇ ಇಬ್ಬರನ್ನು ಬಂಧಿಸಲಾಗಿತ್ತು. ಶಿವಮೊಗ್ಗದ ಫಲಕ್ ಪ್ಯಾಲೇಸ್ ಹಿಂದೆ ಅವಿತುಕೊಂಡಿದ್ದ ಆರೋಪಿಯ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದಾರೆ. ಜಬೀವುಲ್ಲಾ ಬಂಧನಕ್ಕೆ ಮುಂದಾಗಿದ್ದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದನು. ಚಾಕು ತೋರಿಸಿ ಪರಾರಿಯಾಗಲು ಜಬೀವುಲ್ಲಾ ಪ್ರಯತ್ನಿಸಿದ್ದನು. ಈ ವೇಳೆ …
Read More »
BigTv News
August 17, 2022
Breaking News, ಜಿಲ್ಲೆ, ಮೈಸೂರು
ಮೈಸೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಗ್ರಾಮೀಣ ಭಾಗದ ಜಲಮೂಲಗಳನ್ನು ಸಂರಕ್ಷಿಸುವ ಸಲುವಾಗಿ ಮೈಸೂರು ತಾಲೂಕಿನಲ್ಲಿ ಉತ್ತಮ ಯೋಜನೆಯನ್ನು ರೂಪಿಸಲಾಗಿತ್ತು. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೈಗೊಳ್ಳಲಾದ ‘ಅಮೃತ ಸರೋವರ’ ಅಭಿಯಾನದಲ್ಲಿ ನಾಲ್ಕು ಕೆರೆ ದಂಡೆಯನ್ನು ಅಭಿವೃದ್ಧಿಪಡಿಸಲಾಗಿತ್ತು.ಇದೇ ಸ್ಥಳದಲ್ಲಿ ಹುತಾತ್ಮ ಯೋಧರ ಕುಟುಂಬದವರು ಧ್ವಜಾರೋಹಣ ನೆರವೇರಿಸಿದ್ದಾರೆ. ಮೈಸೂರು ತಾಲೂಕಿನ ಗುಂಗ್ರಾಲ್ ಛತ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಡದಕಲ್ಲಹಳ್ಳಿ ಗ್ರಾಮದ ಬಚ್ಚಲಗೆರೆ, ಡಿಎಂಜಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾದಳ್ಳಿ ಕೆರೆ, ಬೀರಿಹುಂಡಿ …
Read More »
BigTv News
August 16, 2022
Breaking News, ಜಿಲ್ಲೆ, ಬಾಗಲಕೋಟೆ
ಬಾಗಲಕೋಟೆ: ಸ್ವಾತಂತ್ರ್ಯ ಹೋರಾಟಗಾರ ತಮ್ಮಣ್ಣಪ್ಪ ಬುದ್ನಿ (94) ಸೋಮವಾರ ರಾತ್ರಿ 12 ಗಂಟೆಯಲ್ಲಿ ನಿಧನರಾದರು. ಮುಧೋಳ ತಾಲೂಕಿನ ಚಿಚಖಂಡಿ ಗ್ರಾಮದ ತಮ್ಮಣ್ಣಪ್ಪ ಬುದ್ನಿ ಅವರು ವಿನೋಭಾ ಬಾವೆ ಅವರ ಅನುಯಾಯಿ ಆಗಿದ್ದರು. ಬಾಲ್ಯದಲ್ಲೇ ಗಾಂಧೀವಾದಿಯಾಗಿದ್ದ ಅವರು ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡಿದ್ದರು. ಸ್ವಾತಂತ್ರ್ಯೋತ್ಸವ ಸಂಭ್ರಮದ ದಿನದ ರಾತ್ರಿಯೇ ಕೊನೆಯುಸಿರೆಳೆದಿದ್ದಾರೆ. ಮಂಗಳವಾರ ಮಧ್ಯಾಹ್ನ 12ಕ್ಕೆ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.
Read More »
BigTv News
August 16, 2022
Breaking News, ಜಿಲ್ಲೆ, ಮೈಸೂರು
ಮೈಸೂರು: ಅಂದುಕೊಂಡಂತೆ ಕಾಮಗಾರಿ ಸಾಗಿದ್ದರೇ ಆಗಸ್ಟ್ 15ರಂದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಒನ್ ವೇ ಸಂಚಾರಕ್ಕೆ ಚಾಲನೆ ನೀಡಬೇಕಿತ್ತು. ಆದ್ರೇ ದಶಪಥ ಕಾಮಗಾರಿಯಿಂದಾಗಿ ಬೆಂಗಳೂರು – ಮೈಸೂರು ಹೆದ್ದಾರಿ ಮೊದಲ ಹಂತದ ಕಾಮಗಾರಿ ವಿಳಂಬವಾಗಿದೆ. ಹೀಗಾಗಿ ಕೊಟ್ಟ ಮಾತಿಗೆ ತಪ್ಪಿದ್ದೇನೆ. ದಯವಿಟ್ಟು ಕ್ಷಮಿಸಿ ಎಂಬುದಾಗಿ ಸಂಸದ ಪ್ರತಾಪ್ ಸಿಂಹ ಜನತೆಯ ಕ್ಷಮೆಯಾಚಿಸಿದ್ದಾರೆ. ಈ ಕುರಿತಂತೆ ತಮ್ಮ ಫೇಸ್ ಬುಕ್ ಮುಖ ಪುಟದಲ್ಲಿ ಬರೆದುಕೊಂಡಿದ್ದು, ಜುಲೈನಲ್ಲಿ ಬೆಂಗಳೂರು-ನಿಡಘಟ್ಟ ರಸ್ತೆಯನ್ನು ಸಂಚಾರಕ್ಕೆ ತೆರವು ಮಾಡಿಸುತ್ತೇನೆ …
Read More »
BigTv News
August 16, 2022
Breaking News, ಜಿಲ್ಲೆ, ಶಿವಮೊಗ್ಗ
ಶಿವಮೊಗ್ಗ: ನಗರದಲ್ಲಿ ಚಾಕು ಇರಿತ ಪ್ರಕರಣ ಸಂಬಂಧಿಸಿ ಮೆಗ್ಗಾನ್ ಆಸ್ಪತ್ರೆಗೆ ಬಿ.ವೈ ವಿಜಯೇಂದ್ರ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಐಸಿಯುನಲ್ಲಿ ಪ್ರೇಮ್‌ಕುಮಾರ್‌ನಲ್ಲಿ ಭೇಟಿ ಬಳಿಕ ಮಾತನಾಡಿ. 8-10 ನಿಮಿಷ ತಡವಾಗಿದ್ರು, ಪ್ರೇಮ್ ಸಿಂಗ್ ಪ್ರಾಣಕ್ಕೆ ಅಪಾಯವಾಗಿಲ್ಲ. ದೇವರು ದೊಡ್ಡವನು ಯಾವುದೇ ಅಪಾಯ ಸಂಭವಿಸಿಲ್ಲ. ಶೀಘ್ರದಲ್ಲೇ ಪ್ರೇಮ್‌ಸಿಂಗ್ ಬೇಗ ಗುಣಮುಖರಾಗುವ ಭರವಸೆ ನೀಡುವ ಮೂಲಕ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾಧ್ಯಮಗಳಿಗೆ ಬಿ.ವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
Read More »
BigTv News
August 15, 2022
Breaking News, ಅಪರಾಧ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯಲ್ಲಿ ದಿನ ನಿತ್ಯ ಒಂದಿಲ್ಲ ಒಂದು ಹಲ್ಲೆಯ ಘಟನೆ ನಡಿತಾ ಇದೆ. ಇವತ್ತು ಕೂಡ ಇಬ್ಬರ ಮೇಲೆ ಚಾಕು ಇರಿತ ವಾಗಿದೆ. ಹಳೆ ಹುಬ್ಬಳ್ಳಿಯ ಹೇಗ್ಗೆರಿ ಯಲ್ಲಿ ಸನ್ಮೂನ್ ಕಾಬಾಡೆ ಅನ್ನೋ ಯುವಕನಿಗೆ ಹಣ ಕಾಸಿನ ವಿಷಯಕ್ಕೆ ಚಾಕು ಇರಿತ ಮಾಡಲಾಗಿದೆ. ಅನಿಲ್ ನಾಯ್ಕ್ ಅನ್ನೋ ವ್ಯಕ್ತಿ ಇಂದ ಹಲ್ಲೆ ಆಗಿದೆ ಎಂದು ತಿಳಿದು ಬಂದಿದೆ. ಹಾಗೂ ಕಸಬೇಪಟೆ ವ್ಯಾಪ್ತಿಯಲ್ಲಿ ಆಟೋ ಬಾಡಿಗೆ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿ ಅರ್ಬಾಜ್ …
Read More »