Breaking News

ಜನತೆಗೆ ಕ್ಷಮೆಯಾಚಿಸಿದ ಸಂಸದ ಪ್ರತಾಪ್ ಸಿಂಹ .. ಯಾಕೆ ಗೊತ್ತಾ?


ಮೈಸೂರು: ಅಂದುಕೊಂಡಂತೆ ಕಾಮಗಾರಿ ಸಾಗಿದ್ದರೇ ಆಗಸ್ಟ್ 15ರಂದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಒನ್ ವೇ ಸಂಚಾರಕ್ಕೆ ಚಾಲನೆ ನೀಡಬೇಕಿತ್ತು. ಆದ್ರೇ ದಶಪಥ ಕಾಮಗಾರಿಯಿಂದಾಗಿ ಬೆಂಗಳೂರು – ಮೈಸೂರು ಹೆದ್ದಾರಿ ಮೊದಲ ಹಂತದ ಕಾಮಗಾರಿ ವಿಳಂಬವಾಗಿದೆ.

ಹೀಗಾಗಿ ಕೊಟ್ಟ ಮಾತಿಗೆ ತಪ್ಪಿದ್ದೇನೆ. ದಯವಿಟ್ಟು ಕ್ಷಮಿಸಿ ಎಂಬುದಾಗಿ ಸಂಸದ ಪ್ರತಾಪ್ ಸಿಂಹ ಜನತೆಯ ಕ್ಷಮೆಯಾಚಿಸಿದ್ದಾರೆ. ಈ ಕುರಿತಂತೆ ತಮ್ಮ ಫೇಸ್ ಬುಕ್ ಮುಖ ಪುಟದಲ್ಲಿ ಬರೆದುಕೊಂಡಿದ್ದು, ಜುಲೈನಲ್ಲಿ ಬೆಂಗಳೂರು-ನಿಡಘಟ್ಟ ರಸ್ತೆಯನ್ನು ಸಂಚಾರಕ್ಕೆ ತೆರವು ಮಾಡಿಸುತ್ತೇನೆ ಎಂದಿದ್ದೆ, ನಂತರ ಆಗಸ್ಟ್ 15 ರಂದು ಬಿಡದಿ, ರಾಮನಗರ ಚನ್ನಪಟ್ಟಣ ಬೈಪಾಸ್ ಓಪನ್ ಮಾಡುತ್ತೇವೆ ಎಂದೆ. ಮಾತಿಗೆ ತಪ್ಪಿದ್ದೇನೆ, ದಯವಿಟ್ಟು ಕ್ಷಮಿಸಿ. ಎಲ್ಲ ಪ್ರಯತ್ನಗಳ ನಡುವೆಯೂ ಇನ್ನೂ ವಾರ, ಹತ್ತು ದಿನಗಳ ಕೆಲಸ ಬಾಕಿಯಿದೆ. ಗುಡ್ಡ ಕಡಿದು ರಸ್ತೆ ನಿರ್ಮಾಣ ನಡೆಯುತ್ತಿದೆ, ಸ್ವಲ್ಪ ಕಾಲಾವಕಾಶ ನೀಡಿ, ಪ್ಲೀಸ್ ಎಂದಿದ್ದಾರೆ.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *