admin
January 21, 2022
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು : ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ ಯೋಜನೆಗೆ ಶೇ.15 ರಷ್ಟು ಸಹಾಯಧನ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ ಯೋಜನೆಗೆ ಶೇ.15 ರಷ್ಟು ಸಹಾಯಧನ ಹೆಚ್ಚಿಸಿದೆ. ಈ ಮೂಲಕ ಪಿಎಂಎಫ್‌ಎಂಇ ಯೋಜನೆಯ ಸಹಾಯಧನ ಶೇ.50 ರಷ್ಟಾಗಿದೆ. ಇನ್ನು ಈ ಯೋಜನೆ ರೈತರ ಆದಾಯ ದ್ವಿಗುಣಗೊಳಿಸಲಿದೆ’ ಎಂದರು.
Read More »
admin
January 18, 2022
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು: ಕೋವಿಡ್ 3ನೇ ಅಲೆ ತೀವ್ರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿಗೂ ಶಾಲೆ, ಕಾಲೇಜು ಹಾಸ್ಟೆಲ್‍ಗಳನ್ನು ಬಂದ್ ಮಾಡುವುದು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾತ್ರಿ ಕಫ್ರ್ಯೂನಿಂದ ಸಮಸ್ಯೆ ಬಗೆಹರಿಯುವುದಿಲ್ಲ.ಇದರಿಂದ ಕೆಲವರಿಗೆ ಅನಾನುಕೂಲವಾಗಿದೆ. ಅಂಥವರಿಗೆ ರಿಯಾಯ್ತಿ ನೀಡಬೇಕು. ನೈಟ್ ಕರ್ಫ್ಯೂ ಜಾರಿ ಅವಶ್ಯಕತೆ ಇಲ್ಲ ಎಂದರು. ವೀಕೆಂಡ್ ಕರ್ಫ್ಯೂನಿಂದ ಕೆಲವರಿಗೆ ಕಷ್ಟವಾಗಿದೆ. ಅಂಥವರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ರೈತರು ತಮ್ಮ ಉತ್ಪನ್ನಗಳನ್ನು …
Read More »
admin
January 18, 2022
Breaking News, ಬೆಂಗಳೂರು
ಬೆಂಗಳೂರು: ರಾಜ್ಯದಲ್ಲಿ ಇಂದು 27,156 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 14 ಜನ ಸೋಂಕಿತರು ಮೃತಪಟ್ಟಿದ್ದಾರೆ. 7827 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 32,47,243 ಕ್ಕೆ ಏರಿಕೆಯಾಗಿದೆ. ಇದುವರೆಗೆ 38,445 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. 29,91,472 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
Read More »
admin
January 17, 2022
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಏರಿಕೆ ಕ್ರಮದಲ್ಲಿ ಸಾಗುತ್ತಿದೆ.ಈಗ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ನನಗಿರುವ ಜ್ವರದ ಲಕ್ಷಣದಿಂದಾಗಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಕೋವಿಡ್ ದೃಢಪಟ್ಟಿದೆ. ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಕೊಳ್ಳಲು ಮನವಿ ಮಾಡಿದ್ದಾರೆ.
Read More »
admin
January 17, 2022
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು: ಒಂದೇ ದಿನ 18622 ಸೋಂಕಿತರು ಮಾತ್ರ ಪತ್ತೆಯಾಗಿದ್ದಾರೆ.ಇದು ನಿನ್ನೆ ದಾಖಲಾಗಿದ್ದ ಸೋಂಕಿತರಿಗಿಂತ 3 ಸಾವಿರ ಕಡಿಮೆ ಸೋಂಕಿತರು ಪತ್ತೆಯಾಗಿದ್ದಾರೆ.ವೀಕೆಂಡ್ ಕರ್ಫ್ಯೂ ಜಾರಿಯಿಂದಾಗಿ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ. ಶನಿವಾರ ಬೆಂಗಳೂರಿನಲ್ಲಿ 22317 ಸೋಂಕಿತರು ಪತ್ತೆಯಾಗಿದ್ದರು, ವಿಕೇಂಡ್ ಕರ್ಫ್ಯೂ ಆರಂಭದ ಮೊದಲ ದಿನ ಅಂದರೆ ನಿನ್ನೆ 21092 ಸೋಂಕಿತರು ಪತ್ತೆಯಾಗಿದ್ದರು. ಇಂದು ನಿನ್ನೆಗಿಂತ 3 ಸಾವಿರ ಕಡಿಮೆ ಸೋಂಕಿತರು ಪತ್ತೆಯಾಗಿದ್ದಾರೆ. ವಾರದ ಆರಂಭದಲ್ಲಿ ಅಬ್ಬರಿಸುವ ಕೊರೊನಾ ಸೋಂಕಿನ …
Read More »
admin
January 17, 2022
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು: ಜನವರಿ 25ರ ನಂತ್ರ ರಾಜ್ಯದಲ್ಲಿ ಕೊರೋನಾ ಪೀಕ್ ಗೆ ತಲುಪಲಿದೆ ಎಂದು ತಜ್ಞರು ತಿಳಿಸಿದ್ದಾರೆ. ವೀಕೆಂಡ್ ಕರ್ಪ್ಯೂ ಅಂತ್ಯ, ಮುಂದುವರಿಕೆ ಬಗ್ಗೆ ಶುಕ್ರವಾರ ಮತ್ತೆ ಸಭೆ ಕರೆಯಲಾಗುತ್ತದೆ. ಆ ಸಭೆಯಲ್ಲಿ ವೀಕೆಂಡ್ ಕರ್ಪ್ಯೂ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೆ ರಾಜ್ಯದಲ್ಲಿ ವೀಕೆಂಡ್ ಹಾಗೂ ನೈಟ್ ಕರ್ಪ್ಯೂ ಮುಂದುವರೆಯಲಿದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ ಎಂಬುದಾಗಿ ಕಂದಾಯ ಸಚಿವ ಆರ್ ಅಶೋಕ್ ಸ್ಪಷ್ಟ ಪಡಿಸಿದರು. ಈ …
Read More »
admin
January 17, 2022
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣ ಗಳ ಸಂಖ್ಯೆ ಹೆಚ್ಚಳವಾಗ್ತಿವೆ. ಈ ನಡುವೆ ಒಮಿಕ್ರಾನ್ ಆತಂಕವೂ ಶುರುವಾಗಿದೆ. ರಾಜ್ಯದಲ್ಲಿ ಇಂದು ಒಮಿಕ್ರಾನ್ ಸ್ಪೋಟವಾಗಿದ್ದು, ಬರೋಬ್ಬರಿ 287 ಮಂದಿಗೆ ಹೊಸ ವೈರಸ್ ವಕ್ಕರಿಸಿಕೊಂಡಿರುವುದು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ 766ಕ್ಕೆ ಏರಿಕೆಯಾಗಿದೆ.
Read More »
admin
January 17, 2022
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು: ನಗರದಲ್ಲಿ 144 ಸೆಕ್ಷನ್ ವಿಸ್ತರಣೆ ಮಾಡಿ ಜನವರಿ 31ರವರೆಗೆ ರಾತ್ರಿ 10ಗಂಟೆಯಿಂದ ಬೆಳಗ್ಗೆ 5ಗಂಟೆವೆರಗೂ ಬೆಂಗಳೂರು ನಗರದಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಆದೇಶ ಹೊರಡಿಸಿದ್ದಾರೆ. ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ144 ಸೆಕ್ಷನ್ ಜಾರಿ ವೇಳೆ ನಗರದಲ್ಲಿ ಯಾವುದೇ ರ್ಯಾಲಿ, ಪ್ರತಿಭಟನೆ ಹಾಗೂ ಸಭೆ ಸಮಾರಂಭಗಳಿಗೆ ಅವಕಾಶವಿಲ್ಲ. ಇನ್ನು ಐದು ಜನಕ್ಕಿಂದ ಹೆಚ್ಚು ಜನರು ಗುಂಪುಗೂಡದಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿದರೆ ಎನ್ಡಿಎಂಎ ಆಯಕ್ಟ್ …
Read More »
admin
January 17, 2022
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು: ಭೀಮ ಜುವೆಲರ್ಸ್‌ನ ಮೊದಲ ರಾಯಭಾರಿ ಆಗಿ ನಟಿ ಪೂಜಾ ಹೆಗ್ಡೆ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದೆ. ತನ್ನ 97 ವರ್ಷಗಳ ಇತಿಹಾಸದಲ್ಲಿ ಬ್ರ್ಯಾಂಡ್ ರಾಯಭಾರಿಯನ್ನು ನೇಮಿಸುತ್ತಿರುವುದು ಇದೇ ಮೊದಲು ಎಂದು ಕಂಪನಿಯು ತಿಳಿಸಿದೆ. ‘ಹೊಸ ಮಾರುಕಟ್ಟೆಗಳು ಮತ್ತು ಹೊಸ ಗ್ರಾಹಕರನ್ನು ತಲುಪಲು ಪೂಜಾ ಹೆಗ್ಡೆ ಅವರು ನಮಗೆ ನೆರವಾಗಲಿದ್ದಾರೆ’ ಎಂದು ಭೀಮ ಜುವೆಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಶರಣ್ ಭಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read More »
admin
January 17, 2022
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು: ರಾಜಧಾನಿಯಲ್ಲಿ ಕೊರೋನಾ ಪ್ರಕಣಗಳ ಏರಿಳಿತ ಮುಂದುವರಿದಿದ್ದು, ಭಾನುವಾರ ಹೊಸದಾಗಿ 21,071 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಐವರು ಮೃತಪಟ್ಟಿದ್ದಾರೆ. ಶನಿವಾರಕ್ಕೆ ಹೋಲಿಸಿದರೆ (22,284) ಭಾನುವಾರ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ.ಹೊಸದಾಗಿ 12,460 ಪುರುಷರು ಮತ್ತು 8,610 ಮಹಿಳೆಯರಲ್ಲಿ ಪತ್ತೆಯಾದ ಪ್ರಕರಣಗಳಿಂದ ಈವರೆಗಿನ ಸೋಂಕಿತರ ಒಟ್ಟು ಸಂಖ್ಯೆ 14,16,807ಕ್ಕೆ ತಲುಪಿದೆ. ಒಂದೇ ದಿನ 2,142 ಪುರುಷರು ಮತ್ತು 1836 ಮಹಿಳೆಯರು ಸೇರಿ ಒಟ್ಟು 3,978 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಬಿಡುಗಡೆಯಾದವರ …
Read More »