Breaking News

ರಾಜಧಾನಿಯಲ್ಲಿ ತುಸು ಇಳಿಕೆ ಕಂಡ ಕೋವಿಡ್


ಬೆಂಗಳೂರು:  ರಾಜಧಾನಿಯಲ್ಲಿ ಕೊರೋನಾ ಪ್ರಕಣಗಳ ಏರಿಳಿತ ಮುಂದುವರಿದಿದ್ದು, ಭಾನುವಾರ ಹೊಸದಾಗಿ 21,071 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಐವರು ಮೃತಪಟ್ಟಿದ್ದಾರೆ.

ಶನಿವಾರಕ್ಕೆ ಹೋಲಿಸಿದರೆ (22,284) ಭಾನುವಾರ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ.
ಹೊಸದಾಗಿ 12,460 ಪುರುಷರು ಮತ್ತು 8,610 ಮಹಿಳೆಯರಲ್ಲಿ ಪತ್ತೆಯಾದ ಪ್ರಕರಣಗಳಿಂದ ಈವರೆಗಿನ ಸೋಂಕಿತರ ಒಟ್ಟು ಸಂಖ್ಯೆ 14,16,807ಕ್ಕೆ ತಲುಪಿದೆ. ಒಂದೇ ದಿನ 2,142 ಪುರುಷರು ಮತ್ತು 1836 ಮಹಿಳೆಯರು ಸೇರಿ ಒಟ್ಟು 3,978 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ 12,54,153ಕ್ಕೆ ಏರಿಕೆಯಾಗಿದೆ. ಐವರ ಸಾವಿನಿಂದ ಒಟ್ಟು ಮೃತರ ಸಂಖ್ಯೆ 16,454ಕ್ಕೆ ಏರಿದೆ. ಸದ್ಯ ಸೋಂಕಿಗೆ ಒಳಗಾಗಿರುವ ಒಟ್ಟು 1,46,200 ಸೋಂಕಿತರಿಗೆ ನಿಗದಿತ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *