ಚೆನ್ನೈ: ಟಿಕ್ಟಾಕ್ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಭಾರತದಲ್ಲಿ ದಿನಬೆಳಗಾಗುವುದರೊಳಗೆ ಖ್ಯಾತಿ ಗಳಿಸಿದ ಚೀನಾದ ಟಿಕ್ಟಾಕ್ ವಿಡಿಯೋ ಆ್ಯಪ್ಗೆ ನಿಷೇಧ ಇಲ್ಲ. ಈ ಸಂಬಂಧ ಮದ್ರಾಸ್ ಹೈಕೋರ್ಟ್ ಇಂದು ತೀರ್ಪು ನೀಡಿದ್ದು, ಟಿಕ್ಟಾಕ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದಕ್ಕೆ ಅಡ್ಡಿಯಿಲ್ಲ. ಅದರ ಮೇಲಿನ ನಿಷೇಧ ತೆಗೆದುಹಾಕಲಾಗಿದೆ ಎಂದು ತಿಳಿಸಿದೆ.ದೇಶಾದ್ಯಂತ ಟಿಕ್ಟಾಕ್ ಆ್ಯಪ್ ಬಳಕೆ ನಿಷೇಧಿಸಿ ಏಪ್ರಿಲ್ 22ರಂದು ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಜೊತೆಗೆ ಟಿಕ್ಟಾಕ್ ಆ್ಯಪ್ ನಿಷೇಧ ಸಂಬಂಧ …
Read More »ಇನ್ನೂ ನಿಂತಿಲ್ಲ, ಉಗ್ರರ ವಿಸ್ಫೋಟದ ಕೃತ್ಯ..!
ಕೊಲೊಂಬೋ: ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಬಗ್ಗೆ ಮತ್ತಷ್ಟು ಮಾಹಿತಿ ಹೊರಬಿದ್ದಿದೆ. ಈ ಘಟನೆಯ ಹಿಂದೇ ವಿದೇಶಿ ಉಗ್ರ ಸಂಘಟನೆಯ ಕೈವಾಡ ಇದೆ ಅನ್ನೋದು ದೃಢವಾಗಿದೆ. ಇದರ ಬೆನ್ನಲ್ಲೆ ಪ್ರಧಾನಿ ರನೀಲ್ ವಿಕ್ರಮಸಿಂಘೇ ನಮ್ಮ ದೇಶದ ಪ್ರಜೆಗಳು ಬಾಂಬ್ಗಳ ಮಧ್ಯೆ ಓಡಾಡುತ್ತಿದ್ದಾರೆ ಅಂತಾ ಭವಿಷ್ಯದಲ್ಲಿ ಸಂಭವಿಸಬಹುದಾದ ವಿಸ್ಫೋಟಕ ಕೃತ್ಯದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಕ್ರಮಸಿಂಘೇ ಈಗಾಗಲೇ ಪ್ರಕರಣ ಸಂಬಂಧ ಹಲವರನ್ನು ಬಂಧಿಸಲಾಗಿದ್ದು, ಗುಪ್ತಚರ …
Read More »ಬಾಂಬ್ ದಾಳಿಗಳಲ್ಲಿ ಮೃತಪಟ್ಟ 8 ಮಂದಿ ಬೆಂಗಳೂರಿಗರ ವಿವರ ಲಭ್ಯ
ಬೆಂಗಳೂರು: ರಾಜ್ಯದಿಂದ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದವರ ಪೈಕಿ ಕೆಲವರು ಭಾನುವಾರ ಅಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಅಸುನೀಗಿದ್ದರು. ಕೆ. ಹನುಮಂತರಾಯಪ್ಪ, ಕೆ.ಎಂ ಲಕ್ಷ್ಮೀನಾರಾಯಣ, ಎಂ.ರಂಗಪ್ಪ, ಲಕ್ಷ್ಮಣ್ ಗೌಡ ರಮೇಶ್, ನಾಗರಾಜ್ ರೆಡ್ಡಿ, ಎಚ್ ಶಿವಕುಮಾರ್, ಎ.ಮಾರೇಗೌಡ, ಎಚ್.ಪುಟ್ಟರಾಜು ಹಾಗೂನಾರಾಯಣ್ ಚಂದ್ರಶೇಖರ್-ರೆಮುರಾಯ್ ತುಳಸಿರಾಮ್ ಎಂಬಿಬ್ಬರು ಮೃತಪಟ್ಟಿದ್ದರು. ಅವರ ವಿವರ ಇದೀಗ ಲಭ್ಯವಾಗಿದೆ. ಮೃತರ ವಿವರ ಇಲ್ಲಿದೆ:ಕೆ. ಹನುಮಂತರಾಯಪ್ಪ: ಕಾಚನಹಳ್ಳಿ ನಿವಾಸಿಯಾಗಿದ್ದ ಹನುಮಂತರಾಯಪ್ಪ ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಾಧ್ಯಕ್ಷ ಮತ್ತು …
Read More »ಕೋರ್ಟ್ ತೀರ್ಪಿನ ನಂತರ ಟಿಕ್ ಟಾಕ್ ಆಪ್ ನಿಷೇಧಿಸಿದ ಗೂಗಲ್ ಇಂಡಿಯಾ
ನವದೆಹಲಿ: ಮದ್ರಾಸ್ ಕೋರ್ಟ್ ತೀರ್ಪಿನ ನಂತರ ಈಗ ಗೂಗಲ್ ಇಂಡಿಯಾ ಚೀನಾ ಮೂಲದ ಟಿಕ್ ಟಾಕ್ ಆಪ್ ನ್ನು ಭಾರತದಲ್ಲಿ ನಿಷೇಧಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.ಚೀನಾ ಮೂಲದ ಬೈಟ್ ಡ್ಯಾನ್ಸ್ ಟೆಕ್ನಾಲಜಿ ಟಿಕ್ ಟಾಕ್ ಮೇಲಿನ ನಿಷೇಧವನ್ನು ತೆರವುಗೊಳಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಗೂಗಲ್ ಇಂಡಿಯಾ ಈಗ ಈ ಕ್ರಮವನ್ನು ತೆಗೆದುಕೊಂಡಿದೆ.ಆ ಮೂಲಕ ಈಗ ಟಿಕ್ ಟಾಕ್ ಗೆ ಈಗ ಮಾರುಕಟ್ಟೆಯಲ್ಲಿ ಭಾರಿ ಹಿನ್ನಡೆಯಾಗಲಿದೆ …
Read More »ವಸತಿ ಶಾಲಾ ವಿದ್ಯಾರ್ಥಿನಿಯರಿಗೆ ಡ್ರಗ್ಸ್ ನೀಡಿ ಅಧಿಕಾರಿಗಳಿಂದ ರೇಪ್! ತನಿಖೆಗೆ ಆದೇಶ..
ಮುಂಬೈ: ವಸತಿ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿಯರಿಗೆ ಶಾಲಾ ಅಧಿಕಾರಿಗಳೇ ಡ್ರಗ್ಸ್ ನೀಡಿ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ.ಹಾಸ್ಟೆಲ್ ಸೂಪರಿಂಟೆಂಡೆಂಟ್ ಚಬನ್ ಪಾಚೇರ್ ಮತ್ತು ಡೆಪ್ಯೂಟಿ ಸೂಪರಿಂಟೆಂಡೆಂಟ್ ನರೇಂದ್ರ ವಿರುತ್ಕರ್ ಅವರೇ ವಿದ್ಯಾರ್ಥಿಯರಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ ಆರೋಪಿಗಳಾಗಿದ್ದು, ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಹಾಸ್ಟೆಲ್ ವಾರ್ಡನ್ ಕಲ್ಪನಾ ಠಾಕ್ರೆ ಮತ್ತು ಸಹಾಯಕಿ ಲತಾ ಕನಕೆ ಅವರನ್ನು ಸಹ ಪೊಲೀಸರು …
Read More »ಚೆನ್ನೈ ಸೆಂಟ್ರೆಲ್ ಕ್ಷೇತ್ರದಲ್ಲಿ ಸೂಪರ್ಸ್ಟಾರ್ ರಜನೀಕಾಂತ್ ಮತದಾನ.
ತಮಿಳುನಾಡು: ಲೋಕಸಭೆ ಚುನಾವಣೆಗೆ ದೇಶಾದ್ಯಂತ ಎರಡನೇ ಹಂತದ ಮತದಾನ ಆರಂಭವಾಗಿದೆ. ತಮಿಳುನಾಡಿನಲ್ಲಿ ಚೆನ್ನೈ ಸೆಂಟ್ರೆಲ್ ಲೋಕಸಭಾ ಕ್ಷೇತ್ರದಲ್ಲಿ ನಟ, ರಾಜಕಾರಣಿ ರಜನೀಕಾಂತ್ ಬೆಳಗ್ಗೆಯೇ ಮತಗಟ್ಟೆಗೆ ಬಂದು ವೋಟ್ ಮಾಡಿದ್ರು. ಸ್ಟೆಲ್ಲಾ ಮೇರಿಸ್ ಕಾಲೇಜಿಗೆ ಆಗಮಿಸಿ ನಟ ರಜನಿಕಾಂತ್ ತಮ್ಮ ಹಕ್ಕು ಚಲಾಯಿಸಿದರು.
Read More »ವೆಲ್ಲೂರು ಕ್ಷೇತ್ರದ ಲೋಕಸಭಾ ಚುನಾವಣೆ ರದ್ದಾಗುವ ಸಾಧ್ಯತೆ!
ನವದೆಹಲಿ: ತಮಿಳುನಾಡಿನ ವೆಲ್ಲೂರು ಕ್ಷೇತ್ರದ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಹಣದ ದುರ್ಬಳಕೆ ಮಾಡಿಕೊಳುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ರದ್ದಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.ಈ ಸಂಬಂಧ ರಾಷ್ಟ್ರಪತಿಗೆ ಶಿಫಾರಸು ಮಾಡಲು ಚುನಾವಣಾ ಆಯೋಗವು ಸಿದ್ಧತೆ ನಡೆಸಿದೆ ಎನ್ನಲಾಗಿದೆ.ಲೋಕಸಭಾ ಚುನಾವಣೆ ಅಧಿಸೂಚನೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿರುವುದರಿಂದ ಎಲ್ಲಾ ನಿರ್ಧಾರಗಳು ರಾಷ್ಟ್ರಪತಿಗಳ ಮೂಲಕವೇ ನಡೆಯಬೇಕು. ಹಾಗಾಗಿ ರಾಷ್ಟ್ರಪತಿಗಳೇ ರದ್ದುಗೊಳಿಸಬೇಕಿದೆ.ಕೆಲ ದಿನಗಳ ಹಿಂದೆ DMK ಅಭ್ಯರ್ಥಿ ಕಚೇರಿಯಲ್ಲಿ ಹೆಚ್ಚು ಮೊತ್ತದ ಹಣ ವಶಪಡಿಸಿಕೊಂಡ ಬೆನ್ನಲ್ಲೇ …
Read More »ಅಫಿಡವಿಟ್ ನಲ್ಲಿ ನಿರುದ್ಯೋಗಿ ಎಂದು ಘೋಷಿಸಿಕೊಂಡ ಕನ್ನಯ್ಯ ಕುಮಾರ್..
ನವದೆಹಲಿ: ಬಿಹಾರದ ಬೆಗುಸಾರೈ ನಿಂದ ಎಡಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿದ್ಯಾರ್ಥಿ ನಾಯಕ ಕನ್ನಯ್ಯ ಕುಮಾರ್ ಈಗ ನಾಮಪತ್ರ ಸಲ್ಲಿಸುವ ವೇಳೆ ತಮ್ಮನ್ನು ನಿರುದ್ಯೋಗಿ ಎಂದು ಘೋಷಿಸಿಕೊಂಡಿದ್ದಾರೆ.2016 ರಲ್ಲಿ ಜೇನ್ಯು ಪ್ರಕರಣದಲ್ಲಿ ದೇಶವ್ಯಾಪಿ ಖ್ಯಾತಿ ಗಳಿಸಿದ್ದ ಕನ್ನಯ್ಯ ಕುಮಾರ್ ಈಗ ಅಧಿಕೃತವಾಗಿ ಚುನಾವಣಾ ಕಣಕ್ಕೆ ಕಾಲಿಟ್ಟಿದ್ದಾರೆ.ಈಗ ಬೆಗುಸಾರೈನಲ್ಲಿ ಬಿಜೆಪಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿರುದ್ಧ ಪ್ರಮುಖ ಸ್ಪರ್ಧಿಯಾಗಿ ಕಣಕ್ಕೆ ಇಳಿದಿದ್ದಾರೆ. ತಮ್ಮ ಆದಾಯವನ್ನು 8.5 ಲಕ್ಷ ಎಂದು ಘೋಷಿಸಿಕೊಂಡಿರುವ ಅವರು …
Read More »ಮಣ್ಣಿನ ದಿಬ್ಬ ಕುಸಿದು 10 ಮಹಿಳಾ ಕಾರ್ಮಿಕರು ಸಾವು..
ತೆಲಂಗಾಣ: ಮಣ್ಣಿನ ದಿಬ್ಬ ಕುಸಿದು 10 ಮಹಿಳಾ ಕಾರ್ಮಿಕರು ಮೃತಪಟ್ಟ ಘಟನೆ ತೆಲಂಗಾಣದ ನಾರಾಯಣ್ ಪೇಟೆಯ ತಿಲೆರು ಗ್ರಾಮದಲ್ಲಿ ನಡೆದಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದ 10 ಮಹಿಳಾ ಕಾರ್ಮಿಕರು ಮೃತಪಟ್ಟಿದ್ದಾರೆ. ಕುಸಿದ ದಿಬ್ಬದಿಂದ ಹೊರಬರಲು ಸಾಧ್ಯವಾಗದೇ ಮಣ್ಣಿನಡಿ ಸಿಲುಕಿದ್ದಾರೆ. ಈಗಾಗಲೇ 10 ಮೃತದೇಹಗಳನ್ನು ಹೊರತೆಗೆದಿದ್ದು, ಐವರು ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಕುಟುಂಬಕ್ಕೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ …
Read More »ಪೊಲೀಸ್ ಅಧಿಕಾರಿಗಳ ಟ್ರಾನ್ಸ್ಫರ್; ಚುನಾವಣಾ ಆಯೋಗದ ವಿರುದ್ಧ ‘ದೀದಿ’ ಕಿಡಿ…
ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೇಂದ್ರ ಚುನಾವಣಾ ಆಯೋಗ ವರ್ಗಾವಣೆ ಮಾಡಿದ್ದಕ್ಕೆ ಸಿಎಂ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ. ಪಕ್ಷಪಾತ ಮಾಡುವ ಮೂಲಕ ಹಿರಿಯ ಅಧಿಕಾರಿಗಳನ್ನು ಟ್ರಾನ್ಸ್ಫರ್ ಮಾಡಲಾಗಿದೆ. ಬಿಜೆಪಿ ಅಣತಿಯಂತೆ ಚುನಾವಣಾ ಆಯೋಗ ನಡೆದುಕೊಳ್ಳುತ್ತಿದೆ ಅಂತಾ ಆಯೋಗಕ್ಕೆ ಬರೆದ ಪತ್ರದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಯೋಗದ ನಡವಳಿಕೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಂವಿಧಾನ ಬದ್ಧವಾಗಿ ಚುನಾವಣೆ ನಡೆಸಲು ಆಯೋಗ ಇದೆಯಾ ಅಥವಾ ಬಿಜೆಪಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





