Breaking News

ದೇಶ-ವಿದೇಶ

ಅಸ್ಸಾಂ ಕಳ್ಳಭಟ್ಟಿ ದುರಂತ: 80 ಸಾವು, 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು..

ಗುವಾಹಟಿ: ಗೋಲಾಘಾಟ್ ಮತ್ತು ಜೋರ್ಹತ್ ಜಿಲ್ಲೆಗಳಲ್ಲಿ ಚಹಾ ತೋಟದಲ್ಲಿ ಕೆಲಸ ಮಾಡುವ ಕೆಲಸಗಾರರು ಕಳ್ಳಭಟ್ಟಿ ಮದ್ಯವನ್ನು ಸೇವಿಸಿ ಈವರೆಗೂ 80 ಮಂದಿ ಮೃತಪಟ್ಟಿದ್ದಾರೆ. 200ಕ್ಕೂ ಹೆಚ್ಚು ಮಂದಿ ಇನ್ನೂ ನಿರ್ಣಾಯಕ ಸ್ಥಿತಿಯಲ್ಲಿದ್ದು ಅವರನ್ನು ಜೋರ್ಹತ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಸ್ಸಾಂ ಆರೋಗ್ಯ ಇಲಾಖೆ ಶನಿವಾರ ದೃಢಪಡಿಸಿದೆ.ಈ ದುರಂತದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ತೀವ್ರವಾಗಿ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಸುದ್ದಿ ಸಂಸ್ಥೆ ಪಿಟಿಐಗೆ …

Read More »

ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ ಇಬ್ಬರು ಶಂಕಿತ ಉಗ್ರರ ಬಂಧನ..

ಉತ್ತರ ಪ್ರದೇಶ ಪೊಲೀಸರು ಮತ್ತು ಉಗ್ರ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ ಶಹನಾವಾಜ್ ಮತ್ತು ಅಕಿಬ್ ಎಂಬ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ.ಲಕ್ನೋ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ದಾಳಿ ಬಳಿಕ ನಡೆಸಲಾದ ಕ್ಷಿಪ್ರ ಕಾರ್ಯಚರನೆಯಲ್ಲಿ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿರುವುದಾಗಿ ಉತ್ತರ ಪ್ರದೇಶ ಉಗ್ರ ನಿಗ್ರಹ ದಳ ಶುಕ್ರವಾರ ಘೋಷಿಸಿದೆ.ಉತ್ತರ ಪ್ರದೇಶ ಪೊಲೀಸರು ಮತ್ತು ಉಗ್ರ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ ಸಹರನಪುರ …

Read More »

ರಾಸಾಯನಿಕ ಗೋದಾಮಿನಲ್ಲಿ ಬೆಂಕಿ ಅನಾಹುತ; 69 ಮಂದಿ ಸಜೀವ ದಹನ

ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 69 ಮಂದಿ ಸಜೀವ ದಹನವಾದ ದಾರುಣ ಘಟನೆ ಬುಧವಾರ ತಡರಾತ್ರಿ ನಡೆದಿದೆ.ಢಾಕಾದ ಚೌಕ್‌ಬಜಾರ್ ಪ್ರದೇಶದ ಮಸೀದಿಯ ಹಿಂಭಾಗವಿರುವ ನಾಲ್ಕು ಅಂತಸ್ತಿನ ಹಾಜಿ ಶಾಹಿದ್ ಮ್ಯಾನ್ಶನ್ ಎಂಬ ಕಟ್ಟಡದಲ್ಲಿ ರಾಸಾಯಕ ಸಂಗ್ರಹಿಸಿಡಲಾಗಿದ್ದು, ನೆಲ ಮಹಡಿಯಲ್ಲಿ ಬುಧವಾರ ರಾತ್ರಿ ಇದ್ದಕ್ಕಿದಂತೆ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಸಮೀಪದ ಜನವಸತಿ ಕಟ್ಟಡಗಳೂ ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿದೆ.ಕಟ್ಟಡದ ಎರಡು, ಮೂರು ಮತ್ತು ನಾಲ್ಕನೇ …

Read More »

ನಾವೇ ದಾಳಿ ಮಾಡಿದ್ದು ಅನ್ನೋದಕ್ಕೆ ಸಾಕ್ಷ್ಯ ಕೊಡಿ ಎಂದ ಪಾಕ್!

ಇಸ್ಲಾಮಾಬಾದ್, ಫೆಬ್ರವರಿ 19: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇದೆ ಎಂದು ಆರೋಪಿಸಿರುವ ಭಾರತಕ್ಕೆ ಸಾಕ್ಷ್ಯ ನೀಡುವಂತೆ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಸವಾಲು ಹಾಕಿದ್ದಾರೆ. ಯಾರು ಗನ್ ಎತ್ತುತ್ತಾರೋ ಅವರನ್ನು ಇಲ್ಲವಾಗಿಸುತ್ತೇವೆ: ಸೇನೆ ಎಚ್ಚರಿಕೆ. ನನ್ನ ಈ ಹೇಳಿಕೆ ಭಾರತ ಸರ್ಕಾರಕ್ಕೆ. ನೀವು ಯಾವುದೇ ಸಾಕ್ಷ್ಯ ಇಲ್ಲದೆ ಪಾಕಿಸ್ತಾನ ಸರ್ಕಾರವನ್ನು ಆರೋಪಿಸಿದ್ದೀರಿ. ನಮ್ಮ ನೆಲದಿಂದ ಯಾರೂ ಹಿಂಸೆಯನ್ನು ಹರಡಬಾರದು ಎನ್ನುವುದು ನಮ್ಮ ಹಿತಾಸಕ್ತಿ. ಪಾಕಿಸ್ತಾನದಲ್ಲಿನ ಯಾರೊಬ್ಬರ …

Read More »

ನಿಮ್ಮ ಪ್ರೇಮಿಗಿಂದು ಚಾಕೊಲೇಟ್ ಕೊಡೋದು ಮರೆಯಬೇಡಿ

ಪ್ರೇಮಿಗಳಿಗೆ ಫೆಬ್ರವರಿ ತಿಂಗಳೆಂದರೆ ಹಬ್ಬವೇ ಸರಿ. ಅದ್ರಲ್ಲೂ ಫೆಬ್ರವರಿ 14 ನೇ ತಾರೀಖು ಬಂದ್ರೆ ಪ್ರೇಮ ಪಕ್ಷಿಗಳು ಸಂತೋಷದಿಂದ ಬಾನೆತ್ತರಕ್ಕೆ ಹಾರುತ್ತಾರೆ. ವ್ಯಾಲೆಂಟೈನ್ಸ್​ ಡೇಗೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಫೆಬ್ರವರಿ 7 ರಿಂದ ವ್ಯಾಲೆಂಟೈನ್ಸ್​ ವೀಕ್ ಪ್ರಾರಂಭವಾಗಿದೆ. ಪ್ರೇಮಿಗಳು ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು ಈ ವಾರವನ್ನು ಆಚರಿಸಿಕೊಳ್ಳುವುದು ಇದರ ವಿಶೇಷತೆ. ಪ್ರೇಮಿಗಳ ವಾರದ ಮೊದಲ ದಿನದಿಂದಲೇ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾ ಫೆ.14 ರ ವೇಳೆಗೆ ತನ್ನ ಸಂಗಾತಿಯ …

Read More »

ಮದುವೆಯಾಗಿ ಮೂರೇ ನಿಮಿಷಕ್ಕೆ ಗಂಡನಿಗೆ ಡಿವೋರ್ಸ್ ಕೊಟ್ಟಳು ಪತ್ನಿ….

ಕುವೈತ್​: ಮದುವೆಯಾಗಿ ಒಂದೇ ವರ್ಷಕ್ಕೆ ಅಥವಾ ಒಂದೇ ತಿಂಗಳಿಗೆ ಗಂಡ ಹೆಂಡತಿ ಡಿವೋರ್ಸ್​​ ಕೇಳಿರೋ ಪ್ರಕರಣಗಳ ಬಗ್ಗೆ ಕೇಳಿರ್ತೀರ. ಆದ್ರೆ ಇಲ್ಲೊಂದು ಜೋಡಿ ಮದುವೆಯಾದ ಮೂರೇ ನಿಮಿಷಕ್ಕೆ ಡಿವೋರ್ಸ್​ ಪಡೆದಿದೆ ಎಂದರೆ ನೀವು ನಂಬಲೇಬೇಕು. ಹೌದು. ಕುವೈತ್​​ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ದಂಪತಿ ಮದುವೆಯಾಗಿ ಕೇವಲ ಮೂರೇ ನಿಮಿಷದಲ್ಲಿ ವಿಚ್ಛೇದನ ಪಡೆದಿದ್ದಾರೆ. ಮದುವೆಯಾಗಿ ಅತ್ಯಂತ ಕಡಿಮೆ ಸಮಯದಲ್ಲೇ ದಾಂಪತ್ಯ ಜೀವನ ಮುರಿದುಬಿದ್ದಿರೋದು ಕುವೈತ್​​ನ ಇತಿಹಾಸದಲ್ಲೇ ಇದೇ ಮೊದಲು ಎಂದು ಹೇಳಲಾಗ್ತಿದೆ. …

Read More »

ಮೌನ ವ್ರತ ಕೈಗೊಳ್ತಾರಂತೆ ಅಣ್ಣಾ ಹಜಾರೆ. ಜ.30ರಿಂದ

ಮುಂಬೈ: ಸ್ವಾಮಿನಾಥನ್​ ವರದಿ ಜಾರಿಗೆ ತರೋದಾಗಿ ಕೇಂದ್ರ ಕೃಷಿ ಇಲಾಖೆ ನನಗೆ ಲಿಖಿತವಾಗಿ ಭರವಸೆ ನೀಡದಿದ್ದಲ್ಲಿ ಮೌನ ವ್ರತ ಮಾಡೋದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣ ಹಜಾರೆ ಎಚ್ಚರಿಸಿದ್ದಾರೆ. ಲೋಕ್​ಪಾಲ್​ ಮತ್ತು ಸ್ವಾಮಿನಾಥನ್​ ವರದಿ ಜಾರಿಗೆ ತರಬೇಕೆಂದು ಆಗ್ರಹಿಸಿ ಅಣ್ಣ ಹಜಾರೆ ಜ.30ರಿಂದ ಫೆ.5 ರ ತನಕ ಉಪವಾಸ ಸತ್ಯಾಗ್ರಹ ಮಾಡಿದ್ರು. ಇನ್ನು ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರ ಹಜಾರೆ ಬೇಡಿಕೆ ಪೂರೈಸುವುದಾಗಿ ಭರವಸೆ ನೀಡಿತ್ತು. ಆದ್ರೆ ಈವರೆಗೆ ಕೇಂದ್ರ …

Read More »

ಸೈಕಲ್ ಮೇಲೆ ಆನೆ ಸವಾರಿ ಬಿಜೆಪಿಯ ನಿದ್ದೆ ಕದ್ದಿದೆಯಂತೆ!’

07 Feb 2019ಲಖನೌ: ಉತ್ತರಪ್ರದೇಶದಲ್ಲಿ ಎಸ್​ಪಿ ಹಾಗೂ ಬಿಎಸ್​ಪಿ ಮೈತ್ರಿ ಬಿಜೆಪಿ ಅಗ್ರಗಣ್ಯ ನಾಯಕರ ನಿದ್ದೆಗೆಡಿಸಿದೆ ಅಂತ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಅಲಿಗಢನಲ್ಲಿ ಭೂತ್ ಮಟ್ಟದ ಸಭೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಮಾಯಾವತಿ-ಅಖಿಲೇಶ್ ಮೈತ್ರಿ ವಿರುದ್ಧ ಗುಡುಗಿದ ಬೆನ್ನಲ್ಲೇ ಮಾಯಾವತಿ ಈಗ ಕೌಂಟರ್ ನೀಡಿದ್ದಾರೆ. ನಮ್ಮ ಮೈತ್ರಿಯಿಂದ ಬಿಜೆಪಿ ಕೇವಲ ನಿದ್ದೆಗೆಟ್ಟಿಲ್ಲ, ಭಯದಿಂದ ನಡುಗುತ್ತಿದೆ. ಎಸ್​ಪಿ, ಬಿಎಸ್​ಪಿ ಮೈತ್ರಿಯಿಂದ ಬಿಜೆಪಿಗೆ ಸೋಲಿನ ಸೂಚನೆ ಸಿಕ್ಕಿದೆ. ಹೀಗಾಗಿ ಬಿಜೆಪಿ …

Read More »

ದೇವಸ್ಥಾನಕ್ಕೆ ಹಣಕೊಡದಿದ್ದಕ್ಕೆ ಮಗನಿಗೆ ಬಾಬನಿಂದ ನರಬಲಿಯ ಶಿಕ್ಷೆ

ಬಿಹಾರ್​​: ಬಾಬನೊಬ್ಬ ದೇವರಿಗೆ ತನ್ನ ಮಗನನ್ನೇ ನರಬಲಿ ಕೊಡೋದಿಕ್ಕೆ ಮುಂದಾಗಿದ್ದ ಘಟನೆ ಬಿಹಾರ್‌ನ ಮೋಹನ್‌ಪುರ್‌ನಲ್ಲಿ ನಡೆದಿದೆ. ಪುತ್ರನನ್ನು ನರಬಲಿ ನೀಡೋಕೆ ಅನುಮತಿ ನೀಡುವಂತೆ ಪೊಲೀಸರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾನೆ. ಸದ್ಯ ಪೊಲೀಸರಿಗೆ ಪತ್ರ ಬರೆದು ನಾಪತ್ತೆಯಾಗಿರೋ ಸುರೇಂದರ್ ಪ್ರಸಾದ್​ ಸಿಂಗ್​​ ಎಂಬ ಬಾಬಾನಿಗಾಗಿ ಖಾಕಿ ಶೋಧ ನಡೆಸುತ್ತಿದೆ. ಆತ ಮಾತನಾಡಿರುವ ವಿಡಿಯೋವೊಂದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮಗನನ್ನು ಬಲಿಕೊಡುವ ಬಗ್ಗೆ ಮಾತನಾಡಿರುವ ಸುರೆಂದರ್​, ನರಬಲಿ ಕೊಡುವುದು …

Read More »

ಸಿಬಿಐ ನಿರ್ದೇಶಕರಾಗಿ ರಿಷಿ ಕುಮಾರ್ ಶುಕ್ಲಾ ನೇಮಕ

ನವದೆಹಲಿ: ಐಪಿಎಸ್ ಅಧಿಕಾರಿ ರಿಷಿ ಕುಮಾರ್ ಶುಕ್ಲರನ್ನು ಹೊಸ ಕೇಂದ್ರ ತನಿಖಾಧಿಕಾರಿ (ಸಿಬಿಐ) ನಿರ್ದೇಶಕರಾಗಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಸರಕಾರ ಶನಿವಾರ ತಿಳಿಸಿದೆ.ರಿಷಿ ಕುಮಾರ್ ಶುಕ್ಲಾ ಅವರು 1983ರ ಮಧ್ಯಪ್ರದೇಶ ಕೆಡರ್​ನ ಐಪಿಎಸ್ ಅಧಿಕಾರಿಯಾಗಿದ್ದು, ಆ ರಾಜ್ಯ ಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಂಸತ್​ನ ನೇಮಕಾತಿ ಸಮಿತಿಯು ನೂತನ ನಿರ್ದೇಶಕರ ನೇಮಕಾತಿಗೆ ಅನುಮೋದನೆ ನೀಡಿದೆ. ಶುಕ್ಲಾ ಅವರು 2 ವರ್ಷಗಳವರೆಗೆ ಸಿಬಿಐನ ಚುಕ್ಕಾಣಿ ಹಿಡಿಯಲಿದ್ದಾರೆ.ಅಲೋಕ್ ವರ್ಮಾ, ರಾಕೇಶ್ ಆಸ್ತಾನಾ ವಿವಾವದ ಬಳಿಕ …

Read More »