ಬಿಹಾರ್: ಬಾಬನೊಬ್ಬ ದೇವರಿಗೆ ತನ್ನ ಮಗನನ್ನೇ ನರಬಲಿ ಕೊಡೋದಿಕ್ಕೆ ಮುಂದಾಗಿದ್ದ ಘಟನೆ ಬಿಹಾರ್‌ನ ಮೋಹನ್‌ಪುರ್‌ನಲ್ಲಿ ನಡೆದಿದೆ. ಪುತ್ರನನ್ನು ನರಬಲಿ ನೀಡೋಕೆ ಅನುಮತಿ ನೀಡುವಂತೆ ಪೊಲೀಸರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾನೆ. ಸದ್ಯ ಪೊಲೀಸರಿಗೆ ಪತ್ರ ಬರೆದು ನಾಪತ್ತೆಯಾಗಿರೋ ಸುರೇಂದರ್ ಪ್ರಸಾದ್ ಸಿಂಗ್ ಎಂಬ ಬಾಬಾನಿಗಾಗಿ ಖಾಕಿ ಶೋಧ ನಡೆಸುತ್ತಿದೆ. ಆತ ಮಾತನಾಡಿರುವ ವಿಡಿಯೋವೊಂದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮಗನನ್ನು ಬಲಿಕೊಡುವ ಬಗ್ಗೆ ಮಾತನಾಡಿರುವ ಸುರೆಂದರ್, ನರಬಲಿ ಕೊಡುವುದು ಅಪರಾಧವಲ್ಲ. ಕಾಮಾಕ್ಯ ದೇವಿ ನರಬಲಿ ನೀಡಲು ನನಗೆ ಆದೇಶಿಸಿದ್ದಾಳೆ. ಹೀಗಾಗಿ ನನ್ನ ಇಂಜಿನಿಯರಿಂಗ್ ಮಗನನ್ನು ದೇವಿಗೆ ಬಲಿ ನೀಡುತ್ತೇನೆ. ಏಕೆಂದರೆ ಆತ ನನ್ನ ದೇವಸ್ಥಾನಕ್ಕೆ ಯಾವುದೇ ಧನ ಸಹಾಯ ಮಾಡುತ್ತಿಲ್ಲ. ಹೀಗಾಗಿ ಅವನು ರಾವಣ. ಅವನನ್ನು ನಾನು ದೇವಿಗೆ ಬಲಿ ಕೊಡುತ್ತೇನೆ ಎಂದು ಹೇಳಿದ್ದಾನೆ. ಇನ್ನು ಅಲ್ಲಿನ ಸ್ಥಳೀಯರು ಹೇಳುವ ಪ್ರಕಾರ ಸುರೆಂದರ್ ಪ್ರಸಾದ್ ಸಿಂಗ್ನನ್ನು ಅವರು ಪಾಗಲ್ ಬಾಬಾ ಎಂದು ಕರೆಯುತ್ತಾರಂತೆ. ಅಲ್ಲದೇ ಆತ ವಿವಸ್ತ್ರವಾಗಿ ಓಡಾಡುವುದು, ಮನುಷ್ಯರ ತಲೆಬುರುಡೆಗಳನ್ನ ಕೈಯಲ್ಲಿ ಹಿಡಿದು ಸುತ್ತಾಡುತ್ತಾನಂತೆ. ಅವನು ಪಬ್ಲಿಸಿಟಿಗಾಗಿ ಈ ರೀತಿ ಮಾಡುತ್ತಿದ್ದ. ಈಗ ನರಬಲಿಯ ವಿಷಯವೂ ಕೂಡ ಇದೇ ರೀತಿ ಎನ್ನಿಸುತ್ತಿದೆ ಅಂತಾ ಸ್ಥಳೀಯರು ಹೇಳಿದ್ದಾರೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





