ಪ್ರೇಮಿಗಳಿಗೆ ಫೆಬ್ರವರಿ ತಿಂಗಳೆಂದರೆ ಹಬ್ಬವೇ ಸರಿ. ಅದ್ರಲ್ಲೂ ಫೆಬ್ರವರಿ 14 ನೇ ತಾರೀಖು ಬಂದ್ರೆ ಪ್ರೇಮ ಪಕ್ಷಿಗಳು ಸಂತೋಷದಿಂದ ಬಾನೆತ್ತರಕ್ಕೆ ಹಾರುತ್ತಾರೆ. ವ್ಯಾಲೆಂಟೈನ್ಸ್ ಡೇಗೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಫೆಬ್ರವರಿ 7 ರಿಂದ ವ್ಯಾಲೆಂಟೈನ್ಸ್ ವೀಕ್ ಪ್ರಾರಂಭವಾಗಿದೆ. ಪ್ರೇಮಿಗಳು ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು ಈ ವಾರವನ್ನು ಆಚರಿಸಿಕೊಳ್ಳುವುದು ಇದರ ವಿಶೇಷತೆ. ಪ್ರೇಮಿಗಳ ವಾರದ ಮೊದಲ ದಿನದಿಂದಲೇ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾ ಫೆ.14 ರ ವೇಳೆಗೆ ತನ್ನ ಸಂಗಾತಿಯ ಮನಗೆಲ್ಲಬಹುದು. ಇವತ್ತು ಚಾಕೋಲೆಟ್ ಡೇ. ಶುಭಕಾರ್ಯಕ್ಕೂ ಮುನ್ನ ಬಾಯಿ ಸಿಹಿ ಮಾಡಿದಂತೆ, ಪ್ರೇಮಿಗೆ ಚಾಕೊಲೇಟ್ ಗಿಫ್ಟ್ ನೀಡಿ ನಿಮ್ಮ ಮನದಾಳದ ಮಾತು ತಿಳಿಸಬಹುದು.ಫೆಬ್ರವರಿ 7 ರಿಂದ 14ರ ವರೆಗೆ ಪ್ರತಿ ದಿನವೂ ಪ್ರೇಮಿಗಳ ಹಬ್ಬವೇ ಸರಿ. ವಾರವಿಡೀ ಒಂದೋದು ವಿಶೇಷ ದಿನ ಆಚರಿಸುತ್ತಾರೆ. ಹಾಗೆ ನೋಡೋದಾದ್ರೆ, ಫೆಬ್ರವರಿ 7ರಂದು ರೋಸ್ ಡೇ ಆಚರಿಸಿದರೆ, ಫೆಬ್ರವರಿ 11ಕ್ಕೆ ಪ್ರಾಮಿಸ್ ಡೇ, 12ಕ್ಕೆ ಹಗ್ ಡೇ, 13 ಕ್ಕೆ ಕಿಸ್ ಡೇ, ಫೆಬ್ರವರಿ 14ಕ್ಕೆ ಲವರ್ಸ್ ಡೇ ಎಂದು ಆಚರಿಸುತ್ತಾರೆ. ಫೆಬ್ರವರಿ 9, ಅಂದ್ರೆ ಇಂದು ಪ್ರೇಮಿಗಳ ಚಾಕೊಲೇಟ್ ಡೇ. ಇಂದು ಪ್ರೇಮಿಗಳು ಹಾರ್ಟ್ ಸಿಂಬಲ್ ಇರುವ ದೊಡ್ಡ ದೊಡ್ಡ ಚಾಕೊಲೇಟ್ಗಳನ್ನು ಗಿಫ್ಟ್ ಮಾಡಿ ಸಂಭ್ರಮಿಸ್ತಾರೆ. ಹೀಗೆ ಲವ್ಬರ್ಡ್ಸ್ ವ್ಯಾಲೆಂಟೈನ್ಸ್ ವೀಕ್ ಆಚರಿಸ್ತಾರೆ. ಕೊನೇ ದಿನ ಅಂದ್ರೆ ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸಿ ಪರಸ್ಪರ ಪ್ರೇಮ ನಿವೇದನೆ ಮಾಡಿಕೊಳ್ತಾರೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





