Breaking News

ದೇಶ-ವಿದೇಶ

ಡಿಎಂಕೆ ಕೇಳಿದ ಪ್ರಶ್ನೆಗೆ ಸೂಪರ್​ ಸ್ಟಾರ್ ಕೊಟ್ಟ ಉತ್ತರ ಏನ್​ ಗೊತ್ತಾ?

ಚೆನ್ನೈ: ನನ್ನ ಮತ್ತು ನನ್ನ ಅಭಿಮಾನಿಗಳನ್ನ ಯಾವುದೇ ಶಕ್ತಿ ದೂರ ಮಾಡಲು ಆಗುವುದಿಲ್ಲ ಅಂತಾ ಸೂಪರ್​ ಸ್ಟಾರ್​ ರಜನಿಕಾಂತ್​​ ತಮ್ಮ ವಿರುದ್ಧ ಡಿಎಂಕೆ ಮಾಡಿದ್ದ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಈ ಹಿಂದೆ ಪಕ್ಷದಲ್ಲಿನ ಹುದ್ದೆಗಳಿಗಾಗಿ ಹಣದ ಆಮಿಷ ಒಡ್ಡುವವರಿಗೆ ತಮ್ಮ ಪಾರ್ಟಿಯಲ್ಲಿ ಅವಕಾಶವಿಲ್ಲ ಅಂತಾ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ನಿನ್ನೆ ಡಿಎಂಕೆ ಪಕ್ಷದ ಮುಖವಾಣಿ ಪತ್ರಿಕೆ ಮುರಸೋಳಿಯಲ್ಲಿ ರಜನಿ ಹೇಳಿಕೆಯನ್ನು ಟೀಕಿಸಲಾಗಿತ್ತು. ಮುಗ್ಧ ಅಭಿಮಾನಿ ಎಂಬ ಟೈಟಲ್​ನಡಿ ಬರೆಯಲಾಗಿದ್ದ ಲೇಖನದಲ್ಲಿ, …

Read More »

ನೋಡೋಕೆ ಮೊಬೈಲ್​​ ಫ್ಲಿಪ್​ ಕವರ್, ಒಳಗೆ ಇದ್ದಿದ್ದು ಚಿನ್ನದ ಬಿಸ್ಕೆಟ್..!

ಮುಂಬೈ: ಅಕ್ರಮವಾಗಿ ಗೋಲ್ಡ್​ ಹಾಗೂ ಇನ್ನಿತರ ವಸ್ತುಗಳನ್ನ ಸಾಗಿಸಲು ಖದೀಮರು ನಾನಾ ಐಡಿಯಾಗಳನ್ನ ಉಪಯೋಗಿಸ್ತಾರೆ ಈಗಾಗಲೇ ಹಲವು ಸಲ ಬಹಿರಂಗೊಂಡಿದೆ. ಇದಕ್ಕೀಗ ಹೊಸದೊಂದು ಸಾಕ್ಷಿ ದೊರಕ್ಕಿದ್ದು, ಗೋಲ್ಡ್​ ಬಿಸ್ಕೆಟ್​ಗಳನ್ನು ಮೊಬೈಲ್​ ಫ್ಲಿಪ್​ ಕವರ್​ನಲ್ಲಿ ಇಟ್ಟುಕೊಂಡು ವಿದೇಶಕ್ಕೆ ಹಾರಲು ಹೊರಟಿದ್ದ, ವ್ಯಕ್ತಿಯೊಬ್ಬನನ್ನ ಮುಂಬೈ ಛತ್ರಪತಿ ಶಿವಾಜಿ ಇಂಟರ್​ನ್ಯಾಷನಲ್​​ ಏರ್​ಪೋರ್ಟ್​ನ ಪೊಲೀಸರು ಬಂಧಿಸಿದ್ದಾರೆ.ಜಿತೇಂದ್ರ ಸೋಲಾಕಿ ಎಂಬ ವ್ಯಕ್ತಿ ಮೊಬೈಲ್​​ ಫ್ಲಿಪ್​ ಕವರ್​ನಲ್ಲಿ ಥೇಟ್​ ಮೊಬೈಲ್​ ರೀತಿಯಲ್ಲೇ ಕಾಣುವಂತೆ ಮೂರು ಚಿನ್ನದ ಬಿಸ್ಕೆಟ್​ಗಳನ್ನ ಅಡಗಿಸಿ …

Read More »

ಸಿಬಿಐ ಬೇಗುದಿ: 2 ವಾರದಲ್ಲಿ ವರ್ಮಾ ವಿಚಾರಣೆ ಮುಗಿಸುವಂತೆ ಸಿವಿಸಿಗೆ ಸುಪ್ರೀಂ ಆದೇಶ

ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ವಿಚಾರಣೆಯನ್ನು ಎರಡು ವಾರಗಳಲ್ಲಿ ಮುಗಿಸುವಂತೆ ಸುಪ್ರೀಂಕೋರ್ಟ್​ ಸಿವಿಸಿ(ಕೇಂದ್ರ ಜಾಗೃತಿ ಆಯೋಗ)ಗೆ ಆದೇಶಿಸಿದೆ. ಅಲ್ಲದೇ ಸಿವಿಸಿ ನಡೆಸುವ ವಿಚಾರಣೆಯ ಮೇಲ್ವಿಚಾರಕರನ್ನಾಗಿ ಸುಪ್ರೀಂ ಕೋರ್ಟ್​​ ನಿವೃತ್ತ ನ್ಯಾಯಾಮೂರ್ತಿ ಎ.ಕೆ ಪಟ್ನಾಯಕ್​ ಅವರನ್ನು ನೇಮಿಸಿದೆ. ಹಂಗಾಮಿ ಸಿಬಿಐ ನಿರ್ದೇಶಕ ಎಂ. ನಾಗೇಶ್ವರ್​ ರಾವ್​ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲವೆಂದು ತಿಳಿಸಿದೆ. ಪ್ರಕರಣದ ವಿಚಾರಣೆಯನ್ನು ದೀಪಾವಳಿ ಮುಗಿದ ನಂತರ ನವೆಂಬರ್​​ 12 ಕ್ಕೆ ನಡೆಸುವುದಾಗಿ ಹೇಳಿದೆ.ವಿಚಾರಣೆ ನಡೆಸಿದ …

Read More »

ಸಿವಿಸಿ ತನಿಖೆಗೆ ಸಹಕರಿಸದ ಅಲೋಕ್ ವರ್ಮಾ: ಕೇಂದ್ರ ಸರ್ಕಾರ.

ನವದೆಹಲಿ: ಬುಧವಾರ, ರಜೆಯಲ್ಲಿ ಕಳುಹಿಸಲಾದ ಅಲೋಕ್ ವರ್ಮಾ ಅವರು ಕೇಂದ್ರೀಯ ಜಾಗೃತ ಆಯೋಗದೊಂದಿಗೆ (ಸಿವಿಸಿ) ಸಹಕರಿಸುತ್ತಿರಲಿಲ್ಲ ಎಂದು ಸರ್ಕಾರ ಹೇಳಿದೆ. ಅಲ್ಲದೆ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಮನೆಗೆ ಕಳುಹಿಸಿರುವುದನ್ನು ಸಹ ಸಮರ್ಥಿಸಿಕೊಂಡಿದೆ. ಸಂಸ್ಥೆಯ ಹಿರಿಯ ಅಧಿಕಾರಿಗಳ ವಿರುದ್ಧ ‘ಭ್ರಷ್ಟಾಚಾರದ ಗಂಭೀರ ಆರೋಪಗಳ’ ಕಾರಣದಿಂದಾಗಿ, ‘ಅಸಾಮಾನ್ಯ ಮತ್ತು ಅಭೂತಪೂರ್ವ’ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ತನ್ನ …

Read More »

18 ಶಾಸಕರ ಅನರ್ಹ ಪ್ರಕರಣದ ತೀರ್ಪು ಇಂದು ಪ್ರಕಟ..

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹಾಗೂ ಸಿಎಂ ಪಳನಿಸ್ವಾಮಿ ಬಣ ವಿಲೀನದ ಬಳಿಕ, ದಿನಕರನ್ ಜೊತೆ ಗುರುತಿಸಿಕೊಂಡಿದ್ದ 18 ಶಾಸಕರ ಭವಿಷ್ಯ ಇಂದು ನಿರ್ಧಾರವಾಗಲಿದೆ.ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹಾಗೂ ಸಿಎಂ ಪಳನಿಸ್ವಾಮಿ ಬಣ ವಿಲೀನದ ಬಳಿಕ, ದಿನಕರನ್ ಜೊತೆ ಗುರುತಿಸಿಕೊಂಡಿದ್ದ ಎಐಎಡಿಎಂಕೆ ಪಕ್ಷದ 18 ಶಾಸಕರನ್ನು ಅನರ್ಹಗೊಳಿಸಿದ್ದ ಪ್ರಕರಣದ ತೀರ್ಪು ಇಂದು ಪ್ರಕಟಗೊಳ್ಳಲಿದ್ದು, 18 ಶಾಸಕರ ಭವಿಷ್ಯ ಇಂದು ನಿರ್ಧಾರವಾಗಲಿದೆ.1986ರ ಪಕ್ಷಾಂತರ ವಿರೋಧಿ ಕಾಯಿದೆಯ …

Read More »

ಸತತ ಏಳನೇ ದಿನವೂ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ

ನವದೆಹಲಿ: ಸತತ ಏಳನೇ ದಿನವೂ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದೆಹಲಿಯಲ್ಲಿ ಪೆಟ್ರೋಲ್ 0.09 ಪೈಸೆ ಇಳಿಕೆಯಾಗಿದ್ದು, 81.25 ರೂ.ಗೆ ಇಳಿದಿದೆ. ಡೀಸೆಲ್ ಬೆಲೆ 74.85 ರೂ.ಗೆ ಕುಸಿದಿದೆ. ಸದ್ಯ ಮುಂಬೈಯಲ್ಲಿ ಪೆಟ್ರೋಲ್ ದರ ಲೀಟರ್ಗೆ 86.73 ಮತ್ತು ಡೀಸೆಲ್ಗೆ 78.46 ರೂ. ಹಬ್ಬದ ಋತುವಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ಗಳ ಬೆಲೆ ಕುಸಿತದಿಂದಾಗಿ, ಸಾಮಾನ್ಯ ಜನರು ನಿಟ್ಟುಸಿರು ಬಿಡುವಂತಾಗಿದೆ.ಮಂಗಳವಾರ ಬೆಲೆ ಎಷ್ಟಿತ್ತು?ಮಂಗಳವಾರ, ದೆಹಲಿ ಮತ್ತು ಮುಂಬೈನಲ್ಲಿ ಪೆಟ್ರೋಲ್ ದರವನ್ನು ಪ್ರತಿ …

Read More »

CBI ಹಂಗಾಮಿ ಮುಖ್ಯಸ್ಥರಾಗಿ ಎಂ. ನಾಗೇಶ್ವರ್‌ ರಾವ್‌ ನೇಮಕ.

ನವದೆಹಲಿ: ಹಠಾತ್ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರವು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿ ರಾಕೇಶ್ ಅಸ್ತಾನಾ ಅವರನ್ನು ರಜೆಯಲ್ಲಿ ತೆರಳುವಂತೆ ಅದೇಶಿಸಿದೆ.ಮಂಗಳವಾರ ರಾತ್ರಿ ಸಂಪುಟದ ನೇಮಕಾತಿ ಸಮಿತಿಯ ವಿಶೇಷ ಸಭೆ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾಗೇಶ್ವರ್‌ ರಾವ್‌ ಅವರನ್ನು ಹುದ್ದೆಗೆ ನೇಮಕ ಮಾಡಿದ್ದಾರೆ.ಸಿಬಿಐನ ಇಬ್ಬರು ಮುಖ್ಯ ಅಧಿಕಾರಿಗಳ ಹಗ್ಗ-ಜಗ್ಗಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಇತಿಹಾದಲ್ಲೇ ಮೊದಲ ಬಾರಿಗೆ ಎನ್ನುವ ಹಾಗೆ ಅತ್ಯುನ್ನತಾ ತನಿಖಾ …

Read More »

ಭಾರತದಲ್ಲಿ 'ಪಟಾಕಿ' ಮಾರಾಟ ಬ್ಯಾನ್ ಆಗುತ್ತಾ?

ನವದೆಹಲಿ: ದೇಶದಲ್ಲಿ ‘ಪಟಾಕಿ’ ಮಾರಾಟವನ್ನು ನಿಷೇಧಿಸಬೇಕೇ ಅಥವಾ ಬೇಡವೇ ಎಂಬುದನ್ನು ಸುಪ್ರೀಂಕೋರ್ಟ್ ಇಂದು ನಿರ್ಧರಿಸಲಿದೆ. ಪಟಾಕಿ ಮಾರಾಟ ನಿಷೇಧಿಸುವಂತೆ ಕೋರಿ ಸುಪ್ರೀಂಕೋರ್ಟ್ ನಲ್ಲಿ ಹಲವಾರು ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಲಾಗಿದೆ.ಪಟಾಕಿಗಳ ಮೇಲೆ ನಿಷೇಧ ಹೇರುವ ಸಂದರ್ಭದಲ್ಲಿ ದೇಶದಲ್ಲಿ ಜೀವಿಸುವ ಮೂಲಭೂತ ಹಕ್ಕು ಮತ್ತು 1.3 ಶತಕೋಟಿ ಜನರ ಆರೋಗ್ಯದ ಹಕ್ಕನ್ನು ಒಳಗೊಂಡಂತೆ ಎಲ್ಲಾ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗಿದೆ ಎಂದು ಸುಪ್ರೀಂಕೋರ್ಟ್ ಆಗಸ್ಟ್ನಲ್ಲಿ ಹೇಳಿದೆ.ಸಂವಿಧಾನದ ಪರಿಚ್ಛೇದ 21 (ಜೀವಿಸುವ ಹಕ್ಕನ್ನು) ಜನರ ಎರಡೂ …

Read More »

ಚೈನಾದಲ್ಲಿ ಉದ್ಘಾಟನೆಯಾಯಿತು ವಿಶ್ವದ ಅತೀ ಉದ್ದದ ಸಮುದ್ರ ಸೇತುವೆ

ಹಾಂಗ್​ಕಾಂಗ್​​​: ಚೈನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಇಂದು ದಕ್ಷಿಣ ಚೀನಾದಲ್ಲಿ ಜಗತ್ತಿನ ಅತಿ ಉದ್ದದ ಹಾಂಗ್ ಕಾಂಗ್-ಝುಹೈ-ಮಕಾವು ಎನ್ನುವ ಸಮುದ್ರ ಸೇತುವೆಯನ್ನು ಉದ್ಘಾಟಿಸಿದ್ದಾರೆ. ಇದು ಚೀನಾದ ಆರ್ಥಿಕ ಉದಾರೀಕರಣಕ್ಕೆ ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.ಈ ಸೇತುವೆಯ ವಿಶೇಷತೆ ಏನು?ಹಾಂಗ್ ಕಾಂಗ್-ಝುಹೈ-ಮಕಾವು ಹೆಸರಿನ ಈ ಸೇತುವೆ ಸುಮಾರು 35 ಕಿಮೀ ಉದ್ದವಿದೆ. ಇದು ರಸ್ತೆ ವಿಭಜಕಗಳನ್ನು ಹೊಂದಿದೆ. ಅಲ್ಲದೇ 6.7 ಕಿಮೀ ಸುರಂಗ ಮಾರ್ಗವನ್ನು ಸಹ ಹೊಂದಿದೆ. ಇದು ಜಗತ್ತಿನ ಅತಿ ಉದ್ದದ …

Read More »

ರಾಷ್ಟ್ರ ರಾಜಧಾನಿಯಲ್ಲಿ ಇಂದು ಸಿಗಲ್ಲ ಪೆಟ್ರೋಲ್-ಡೀಸೆಲ್, ಕಾರಣ ತಿಳಿಯಿರಿ…

ರಾಷ್ಟ್ರ ರಾಜಧಾನಿಯಲ್ಲಿ ಇಂದು ಸಿಗಲ್ಲ ಪೆಟ್ರೋಲ್-ಡೀಸೆಲ್, ಕಾರಣ ತಿಳಿಯಿರಿ…ಸುಮಾರು 400 ಪೆಟ್ರೋಲ್ ಪಂಪ್ ಗಳು ಸೋಮವಾರ ರಾಷ್ಟ್ರೀಯ ರಾಜಧಾನಿಯಲ್ಲಿ ಬಂದ್ ಆಗಲಿವೆ.ನವದೆಹಲಿ: ತೈಲದ ಮೇಲೆ ವಿಧಿಸುವ ಮೌಲ್ಯವರ್ಧಿತ ತೆರಿಗೆ(ವ್ಯಾಟ್)ಯನ್ನು ಕಡಿತಗೊಳಿಸಲು ನಿರಾಕರಿಸಿದ ಎಎಪಿ ಸರ್ಕಾರದ ವಿರುದ್ಧ ಪೆಟ್ರೋಲ್ ಬಂಕ್ ಗಳು ಹಾಗೂ ಸಿಎನ್ಜಿ ಸಂಸ್ಥೆಗಳು ಪ್ರತಿಭಟನೆಗೆ ಮುಂದಾಗಿದ್ದು, ದೆಹಲಿ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್(ಡಿಪಿಡಿಎ) ಪ್ರತಿಭಟನೆಯ ನೇತೃತ್ವ ವಹಿಸಿದೆ. ಸೋಮವಾರ ಬೆಳಿಗ್ಗೆಯಿಂದ ಸಂಜೆವರೆಗೆ ಪ್ರತಿಭಟನೆ ನಡೆಯಲಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು …

Read More »