ಹಾಂಗ್ಕಾಂಗ್: ಚೈನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಇಂದು ದಕ್ಷಿಣ ಚೀನಾದಲ್ಲಿ ಜಗತ್ತಿನ ಅತಿ ಉದ್ದದ ಹಾಂಗ್ ಕಾಂಗ್-ಝುಹೈ-ಮಕಾವು ಎನ್ನುವ ಸಮುದ್ರ ಸೇತುವೆಯನ್ನು ಉದ್ಘಾಟಿಸಿದ್ದಾರೆ. ಇದು ಚೀನಾದ ಆರ್ಥಿಕ ಉದಾರೀಕರಣಕ್ಕೆ ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.ಈ ಸೇತುವೆಯ ವಿಶೇಷತೆ ಏನು?ಹಾಂಗ್ ಕಾಂಗ್-ಝುಹೈ-ಮಕಾವು ಹೆಸರಿನ ಈ ಸೇತುವೆ ಸುಮಾರು 35 ಕಿಮೀ ಉದ್ದವಿದೆ. ಇದು ರಸ್ತೆ ವಿಭಜಕಗಳನ್ನು ಹೊಂದಿದೆ. ಅಲ್ಲದೇ 6.7 ಕಿಮೀ ಸುರಂಗ ಮಾರ್ಗವನ್ನು ಸಹ ಹೊಂದಿದೆ. ಇದು ಜಗತ್ತಿನ ಅತಿ ಉದ್ದದ ಸೇತುವೆ ಮತ್ತು ಸುರಂಗ ಮಾರ್ಗ ಎನ್ನುವ ದಾಖಲೆಗೆ ಪಾತ್ರವಾಗಿದೆ. ಇದು ಹಾಂಗ್ ಕಾಂಗ್ನ್ನು ಗುವಾಂಗ್ಡಾಂಗ್ ಪ್ರಾಂತ್ಯದ ಕಡಿಮೆ ಅಭಿವೃದ್ಧಿ ಹೊಂದಿದ ಪ್ರದೇಶದ ಜೊತೆ ಸಂಪರ್ಕಿಸುತ್ತದೆ. ಇದರ ನಿರ್ಮಾಣಕ್ಕೆ 120 ಶತಕೋಟಿ ಡಾಲರ್ ಖರ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಹಾಂಗ್ ಕಾಂಗ್ ಪ್ರಾದೇಶಿಕ ವಾಯುಯಾನ ಮತ್ತು ಲಾಜಿಸ್ಟಿಕ್ಸ್ ಹಬ್ ಆಗಿ ಏಕೀಕರಣಗೊಳ್ಳಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





