Breaking News

ದೇಶ-ವಿದೇಶ

ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ 30 ಮಂದಿ ಪ್ರಯಾಣಿಕರು ಮೃತ..

ಮನಿಲಾ (ಫಿಲಿಪ್ಪೀನ್ಸ್‌):ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ 30 ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ಫಿಲಿಪ್ಪೀನ್ಸ್‌ ರಾಜಧಾನಿ ಸಮೀಪದ ಸರೋವರದಲ್ಲಿ ಗುರುವಾರ ನಡೆದಿದೆ. ಘಟನೆಯಿಂದ 40 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಫಿಲಿಪ್ಪೀನ್ಸ್‌ ಕರಾವಳಿ ರಕ್ಷಣಾ ಪಡೆ ತಿಳಿಸಿದೆ.ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಘಟನೆ ಸಂಭವಿಸಿದೆ. ಬಲವಾದ ಗಾಳಿಯಿಂದಾಗಿ ಯಾಂತ್ರೀಕೃತ ದೋಣಿ ಒಂದು ಕಡೆಗೆ ವಾಲಿತ್ತು. ಇದರಿಂದ ಭಯಭೀತರಾದ ಪ್ರಯಾಣಿಕರು ದೋಣಿಯ ಒಂದೇ ಕಡೆ ಗುಂಪುಗೂಡಿದರು. ಇದರ ಪರಿಣಾಮ ದೋಣಿ ಸಮತೋಲನ ಕಳೆದುಕೊಂಡು …

Read More »

ಭಾರತ ತಂಡದ 2023-24ರ ಸಾಲಿನ ತವರು ಸರಣಿಗಳ ವೇಳಾಪಟ್ಟಿ ಬಿಡುಗಡೆ!

ದೆಹಲಿ: ಭಾರತ ತಂಡದ 2023-24ರ ಸಾಲಿನ ತವರು ಸರಣಿಗಳ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಜುಲೈ 25 ರಂದು ಪ್ರಕಟಿಸಿದೆ. ಅಕ್ಟೋಬರ್‌ 5 ರಿಂದ ಭಾರತದ ಆತಿಥ್ಯದಲ್ಲಿ 2023ರ ಏಕದಿನ ವಿಶ್ವಕಪ್‌ ಟೂರ್ನಿ ಆರಂಭವಾಗಲಿದೆ. ಈ ಮಹತ್ವದ ಟೂರ್ನಿಗೆ ಇನ್ನೂ 3 ತಿಂಗಳುಗಳು ಮಾತ್ರ ಬಾಕಿ ಇವೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಭಾರತ ಮೂರು ಪಂದ್ಯಗಳ ಏಕದಿನ ಸರಣಿಗೆ ಆತಿಥ್ಯ ವಹಿಸಲಿದೆ. ಸೆಪ್ಟಂಬರ್‌ 22 ರಿಂದ ಈ …

Read More »

ಮಹಿಳೆಯ ಬೆತ್ತಲೆ ಮೆರವಣಿಗೆ ಪ್ರಕರಣ ಅಪರಿಚತ ವ್ಯೆಕ್ತಿಗಳ ವಿರುದ್ಧ ಎಫ್ ಐ ಆರ್…

ಇಂಫಾಲ್ : ಮಣಿಪುರದಲ್ಲಿ ಮೇ 4ರಂದು ಇಬ್ಬರು ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆಯ ಪ್ರಕರಣದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ಹಾಗೂ ಅವರ ಮಗ ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಅವರ ಚಿತ್ರಗಳನ್ನು ಪ್ರಸಾರ ಮಾಡಿದಕ್ಕೆ ಭಾನುವಾರ ರಾತ್ರಿ ಪೊಲೀಸರು ಅಪರಿಚಿತರ ವಿರುದ್ಧ ಎಫ್ಐ ಆರ್ ದಾಖಲಿಸಿದ್ದಾರೆ.ಮಹಿಳೆಯರು ಮೆರವಣಿಗೆಯ ವಿಡಿಯೋಗಳ sreenshot ತೆಗೆದು ಆರ್ ಎಸ್ ಎಸ್ ಕಾರ್ಯಕರ್ತ ಹಾಗೂ ಅವನ್ ಮಗನ ಚಿತ್ರವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ …

Read More »

ದಿಲ್ಲಿಯಲ್ಲಿ ರಸ್ತೆಗೆ ನುಗ್ಗಿದ ನೀರು: ವಿದ್ಯುತ್ ಹರಿದು ಹಲವು ನಾಗರಿಕರಿಗೆ ವಿದ್ಯುದಾಘಾತ.

ಹೊಸದಿಲ್ಲಿ: ಯಮುನಾ ನದಿ ಉಕ್ಕೇರಿ ರಸ್ತೆಗಳಿಗೆ ಹರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಮನೆಗಳು, ಮಳಿಗೆಗಳು ಹಾಗೂ ಕಾರುಗಳು ಮುಳುಗಿ, ದಿಲ್ಲಿ ನಿವಾಸಿಗಳು ಅದರಿಂದ ಪಾರಾಗಲು ಹರಸಾಹಸ ಪಡುತ್ತಿದ್ದಾರೆ. ಈ ಸಂಕಷ್ಟದ ನಡುವೆಯೇ, ರಸ್ತೆಯಲ್ಲಿ ಹರಿಯುತ್ತಿರುವ ನೀರಿನಲ್ಲಿ ವಿದ್ಯುತ್ ಕಂಬಗಳಿಂದ ವಿದ್ಯುತ್ ಪ್ರವಹಿಸುತ್ತಿದ್ದು, ದಿಲ್ಲಿ ನಿವಾಸಿಗಳ ಗೋಳು ಮತ್ತಷ್ಟು ಹೆಚ್ಚಾಗಿದೆ. ಯಮುನಾ ನದಿಯ ಬದಿ ರಸ್ತೆಯಲ್ಲಿ ಓಡಾಡಬೇಕಾದ ಅನಿವಾರ್ಯಕ್ಕೆ ಈಡಾಗಿರುವ ದಿಲ್ಲಿ ನಾಗರಿಕರು ದಿಲ್ಲಿಯ ಐಟಿಒ ಬಳಿ ಬರಿಗಾಲಲ್ಲಿ ನಡೆಯುವಾಗ ವಿದ್ಯುತ್‌ …

Read More »

ಕಠಿಣ ಲಾಕ್‌ಡೌನ್‌ ಹೇರಿಕೆಯನ್ನು ಸಮರ್ಥಿಸಿಕೊಂಡ ಚೀನಾ

ಬೀಜಿಂಗ್‌: ದೇಶದಲ್ಲಿ ಕೋವಿಡ್‌ ಹೊಸ ಪ್ರಕರಣಗಳು ಉಲ್ಬಣಿಸುತ್ತಿರುವ ನಡುವೆ ಕಠಿಣ ಲಾಕ್‌ಡೌನ್‌ ವಿರೋಧಿಸಿ ನಾಗರಿಕರು ಅಧ್ಯಕ್ಷ ಷಿ ಜಿನ್‌ಪಿಂಗ್‌ ಆಡಳಿತದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗಳು ತಣ್ಣಗಾಗಿಲ್ಲ. ಆದರೂ ನಾಗರಿಕರ ಒತ್ತಡಕ್ಕೆ ಮಣಿಯದ ಸರ್ಕಾರ, ಕಠಿಣ ಲಾಕ್‌ಡೌನ್‌ ಹೇರಿಕೆಯನ್ನು ಸಮರ್ಥಿಸಿಕೊಂಡಿದೆ. ಕಠಿಣ ಲಾಕ್‌ಡೌನ್‌ ಹೇರಿದ್ದ ಷಿನ್‌ಜಿಯಾಂಗ್ ಪ್ರಾಂತೀಯ ರಾಜಧಾನಿ ಉರುಮ್ಕಿ ನಗರದಲ್ಲಿ ಅ‍ಪಾರ್ಟ್‌ಮೆಂಟ್‌ವೊಂದರಲ್ಲಿ ಕಳೆದ ವಾರ ಬೆಂಕಿ ಕಾಣಿಸಿಕೊಂಡು 10 ಜನರು ‌ಮೃತಪಟ್ಟಿದ್ದರು. ಹಾನ್ ಚೀನಿ ಪ್ರಜೆಗಳು ಮತ್ತು ಉಯಿಗರ್‌ ಮುಸ್ಲಿಮರು …

Read More »

3 ಬಸ್‌ಗಳು ನಡುವೆ ಡಿಕ್ಕಿ : ಕನಿಷ್ಠ 37 ಮಂದಿ ಪ್ರಯಾಣಿಕರು ಸಾವು

ನೈಜೀರಿಯಾ: ಈಶಾನ್ಯ ನೈಜೀರಿಯಾದ ಮೈದುಗುರಿ ನಗರದ ಹೊರಗೆ ಮೂರು ಬಸ್‌ಗಳು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 37 ಮಂದಿ ಪ್ರಯಾಣಿಕರು ಸಾವನ್ನಪ್ಪಿ ಹಲವರು ಗಂಭೀರ ಗಾಯಗೊಂಡಿರುವ ಘಟನೆ ಮಂಗಳವಾರ ಸಂಭವಿಸಿದೆ. ಮೈದುಗುರಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬಸ್ಸಿನ ಟಯರ್ ಸ್ಪೋಟಗೊಂಡ ಪರಿಣಾಮ ನಿಯಂತ್ರಣ ಕಳೆದುಕೊಂಡ ಬಸ್ಸು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಇನ್ನೊಂದು ಬಸ್ಸಿಗೆ ನೇರವಾಗಿ ಢಿಕ್ಕಿ ಹೊಡೆದಿದೆ, ಈ ವೇಳೆ ಒಂದು ಬಸ್ಸಿಗೆ ಬೆಂಕಿ ಹೊತ್ತಿಕೊಂಡಿದೆ …

Read More »

ವಿಮಾನ ಪತನ : 8 ಜನ ಸಾವು

ಕೊಲಂಬಿಯಾ : ಮೆಡಿಲಿನ್‌ನಲ್ಲಿ ಎಂಟು ಪ್ರಯಾಣಿಕರಿದ್ದ ಸಣ್ಣ ವಿಮಾನವೊಂದು ಪತನವಾಗಿದ್ದು, ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದಾರೆ. ಒಲಯಾ ಹೆರೆಯಾ ವಿಮಾನ ನಿಲ್ದಾಣದಿಂದ ಟೇಕ್‌ಆಫ್ ಆದ ನಂತರ ವಿಮಾನ ಪತನವಾಗಿದೆ. ಕೊಂಬಿಯಾದ ಎರಡನೇ ಅತಿದೊಡ್ಡ ನಗರವಾದ ಮೆಡೆಲಿನ್ ವಸತಿ ಪ್ರದೇಶದಲ್ಲಿ ವಿಮಾನ ಮನೆಯೊಂದಕ್ಕೆ ಅಪ್ಪಳಿಸಿದೆ. ವಿಮಾನದಲ್ಲಿದ್ದ ಎಂಟು ಪ್ರಯಾಣಿಕರು ಮೃತಪಟ್ಟಿದ್ದಾರೆ. ಇಂಜಿನ್ ವೈಫಲ್ಯದಿಂದ ಅವಘಡ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮನೆಗೆ ವಿಮಾನ ಡಿಕ್ಕಿ ಹೊಡೆದಿದ್ದು, ಮನೆಯಲ್ಲಿ ಯಾರಾದರೂ ಇದ್ದರೇ? ಇದ್ದರೆ …

Read More »

ಇಸ್ರೇಲ್‌ ನ ಪ್ರಧಾನ ಮಂತ್ರಿಯಾಗಿ ಬೆಂಜಮಿನ್ ನೆತನ್ಯಾಹು ಮತ್ತೆ ಆಯ್ಕೆ

ಇಸ್ರೇಲ್‌: ಇಲ್ಲಿಯ ಪ್ರಧಾನ ಮಂತ್ರಿಯಾಗಿ ಬೆಂಜಮಿನ್ ನೆತನ್ಯಾಹು ಮತ್ತೆ ಆಯ್ಕೆಯಾಗಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಯೇರ್ ಲ್ಯಾಪಿಡ್ ಅವರನ್ನು ಬೆಂಜಮಿನ್ ನೆತನ್ಯಾಹು ಸೋಲಿಸುವ ಮೂಲಕ ಮತ್ತೆ ಇಸ್ರೇಲ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈ ವೇಳೆ, ಸೋಲನ್ನು ಒಪ್ಪಿಕೊಂಡಿರುವ ಜೈರ್ ಲ್ಯಾಪಿಡ್ ಅವರು ಬೆಂಜಮಿನ್ ನೆತನ್ಯಾಹು ಅವರನ್ನು ಅಭಿನಂದಿಸಿದ್ದಾರೆ. ವ್ಯವಸ್ಥಿತವಾಗಿ ಅಧಿಕಾರ ಹಸ್ತಾಂತರಕ್ಕೆ ಸಿದ್ಧತೆ ನಡೆಸುವಂತೆ ಲ್ಯಾಪಿಡ್ ಎಲ್ಲ ಇಲಾಖೆಗಳಿಗೂ ಸೂಚಿಸಿದ್ದಾರೆ. ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಚಲಾವಣೆಯಾಗಿದ್ದ ಮತಗಳ ಮತಗಳ ಎಣಿಕೆ ಕಾರ್ಯ ನಿನ್ನೆ …

Read More »

ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಸ್ಫೋಟ  : 5 ಜನ ಸಾವು

ಖಝಾಕಿಸ್ತಾನ್‌ :  ದೇಶದ ಮಧ್ಯಭಾಗದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಸ್ಫೋಟ ಸಂಭವಿಸಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರ್ಸೆಲರ್ ಮಿತ್ತಲ್‌ಗೆ ಸೇರಿದ ಲೆನಿನ್ ಗಣಿ ಪ್ರದೇಶದಲ್ಲಿ “ಡ್ರೈನೇಜ್ ಬಾವಿ ಕೊರೆಯುವ ಸಂದರ್ಭದಲ್ಲಿ‌ ಮಿಥೇನ್ ಅನಿಲ ದಿಢೀರ್‌ ಬಿಡುಗಡೆಯಾಗಿದ್ದು ಐವರು ಕಾರ್ಮಿಕರ ಸಾವಿಗೆ ಕಾರಣವಾಗಿದೆ” ಎಂದು ದೇಶದ ತುರ್ತು ಸಚಿವಾಲಯದ ವಕ್ತಾರ ಹೇಳಿದ್ದಾರೆ.”ನಾಲ್ಕು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು 106 ಜನರನ್ನು ಸ್ಥಳಾಂತರಿಸಲಾಗಿದೆ” …

Read More »

ಅಮೆರಿಕದಲ್ಲಿ ಭೀಕರ ಅಪಘಾತ : 3 ಭಾರತೀಯ ವಿದ್ಯಾರ್ಥಿಗಳು ಸಾವು

ವಾಷಿಂಗ್ಟನ್; ಅಮೆರಿಕದಲ್ಲಿ ಭೀಕರ ಅಪಘಾತ ನಡೆದಿದ್ದು, ಮೂವರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಯುನೈಟೆ ಸ್ಟೇಟ್ಸ್‌ನ ಪಶ್ಚಿಮ ಮ್ಯಾಸಚೂಸೆಟ್ಸ್‌ನಲ್ಲಿ ಈ ಘಟನೆ ನಡೆದಿದೆ. ಕಾರು ಹಾಗೂ ಮತ್ತೊಂದು ವಾಹನದ ನಡುವೆ ಡಿಕ್ಕಿ ಸಂಭವಿಸಿ ಭೀಕರ ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶ ಮೂಲದವರಾದ ಪ್ರೇಮ್ ಕುಮಾರ್ ರೆಡ್ಡಿ ಗೋಡಾ (27), ಪಾವನಿ ಗುಲ್ಲಪಲ್ಲಿ (22) ಮತ್ತು ಸಾಯಿ ನರಸಿಂಹ ಪಟಂಶೆಟ್ಟಿ (22) ಮೃತ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಐವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ …

Read More »