Breaking News

ಕಠಿಣ ಲಾಕ್‌ಡೌನ್‌ ಹೇರಿಕೆಯನ್ನು ಸಮರ್ಥಿಸಿಕೊಂಡ ಚೀನಾ


ಬೀಜಿಂಗ್‌: ದೇಶದಲ್ಲಿ ಕೋವಿಡ್‌ ಹೊಸ ಪ್ರಕರಣಗಳು ಉಲ್ಬಣಿಸುತ್ತಿರುವ ನಡುವೆ ಕಠಿಣ ಲಾಕ್‌ಡೌನ್‌ ವಿರೋಧಿಸಿ ನಾಗರಿಕರು ಅಧ್ಯಕ್ಷ ಷಿ ಜಿನ್‌ಪಿಂಗ್‌ ಆಡಳಿತದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗಳು ತಣ್ಣಗಾಗಿಲ್ಲ. ಆದರೂ ನಾಗರಿಕರ ಒತ್ತಡಕ್ಕೆ ಮಣಿಯದ ಸರ್ಕಾರ, ಕಠಿಣ ಲಾಕ್‌ಡೌನ್‌ ಹೇರಿಕೆಯನ್ನು ಸಮರ್ಥಿಸಿಕೊಂಡಿದೆ.

ಕಠಿಣ ಲಾಕ್‌ಡೌನ್‌ ಹೇರಿದ್ದ ಷಿನ್‌ಜಿಯಾಂಗ್ ಪ್ರಾಂತೀಯ ರಾಜಧಾನಿ ಉರುಮ್ಕಿ ನಗರದಲ್ಲಿ ಅ‍ಪಾರ್ಟ್‌ಮೆಂಟ್‌ವೊಂದರಲ್ಲಿ ಕಳೆದ ವಾರ ಬೆಂಕಿ ಕಾಣಿಸಿಕೊಂಡು 10 ಜನರು ‌ಮೃತಪಟ್ಟಿದ್ದರು. ಹಾನ್ ಚೀನಿ ಪ್ರಜೆಗಳು ಮತ್ತು ಉಯಿಗರ್‌ ಮುಸ್ಲಿಮರು ಒಟ್ಟಾಗಿ ಚೀನಿ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿ, ಕಠಿಣ ಲಾಕ್‌ಡೌನ್‌ ತೆರವಿಗೆ ಒತ್ತಾಯಿಸಿದ್ದರು. ಮಾಧ್ಯಮ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳ ವಿರುದ್ಧ ಚೀನಿಯರ ಪ್ರತಿಭಟನೆ ಬೆಂಬಲಿಸಿ ವಿಶ್ವದಾದ್ಯಂತ ಒಂದು ಡಜನ್ ನಗರಗಳಲ್ಲಿ ಒಗ್ಗಟ್ಟಿನ ಪ್ರದರ್ಶನ ನಡೆದಿದೆ.

ವಿದ್ಯಾರ್ಥಿಗಳು ಮತ್ತು ವಲಸಿಗರ ನೇತೃತ್ವದಲ್ಲಿ ಲಂಡನ್, ಪ್ಯಾರಿಸ್, ಟೋಕಿಯೊ ಮತ್ತು ಸಿಡ್ನಿ ಸೇರಿ ಯುರೋಪ್, ಏಷ್ಯಾ ಮತ್ತು ಉತ್ತರ ಅಮೆರಿಕದ ನಗರಗಳಲ್ಲಿ ಸಣ್ಣದಾಗಿ ಪ್ರತಿಭಟನೆಗಳು ನಡೆದಿವೆ. ದೇಶದಲ್ಲಿ ಕೋವಿಡ್‌ ಪ್ರಕರಣಗಳನ್ನು ಶೂನ್ಯಕ್ಕಿಳಿಸಲು ಹೇರಿರುವ ಕಠಿಣ ಲಾಕ್‌ಡೌನ್‌ಗೆ ವ್ಯಕ್ತವಾಗುತ್ತಿರುವ ಪ್ರತಿಭಟನೆ, ಜನಾಕ್ರೋಶದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ‘ನೀವು ಉಲ್ಲೇಖಿಸುತ್ತಿರುವ ರೀತಿಯಲ್ಲಿ ದೇಶದಲ್ಲಿ ಅಂತಹದ್ದೇನು ಸಂಭವಿಸಿಲ್ಲ. ಸೋಂಕು ನಿರ್ಮೂಲನೆಗೆ ವಸ್ತುಸ್ಥಿತಿ ಆಧರಿಸಿ ದೇಶವು ಪರಿಣಾಮಕಾರಿಯಾದ ನೀತಿ ಅನುಸರಿಸುತ್ತಿದೆ. ಷಿ ಜಿನ್‌ಪಿಂಗ್‌ ಅವರ ನಾಯಕತ್ವ ಮೇಲೆ ಜನತೆ ಬೆಂಬಲವಿಟ್ಟಿರುವ ನಂಬಿಕೆ ಇದೆ. ನಮ್ಮ ಹೋರಾಟ ಏನಿದ್ದರೂ ಕೋವಿಡ್‌ ವಿರುದ್ಧ’ ಎಂದು ಪ್ರತಿಕ್ರಿಯಿಸಿದರು.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *