Breaking News

ದೇಶ-ವಿದೇಶ

ಒಮಿಕ್ರಾನ್ ಹೆಚ್ಚಳವಾದರೂ ಅಂತರರಾಜ್ಯ ಗಡಿ ಬಂದ್ ಇಲ್ಲ: ಸಚಿವ ಡಾ.ಅಶ್ವತ್ಥನಾರಾಯಣ

ಬೆಳಗಾವಿ: ಕೊರೊನ ಮತ್ತು ಒಮಿಕ್ರಾನ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದು ನಿಜವಾದರೂ ಬೆಳಗಾವಿ ಸೇರಿದಂತೆ ರಾಜ್ಯದ ಯಾವ ಕಡೆಗಳಲ್ಲೂ ಅಂತರರಾಜ್ಯ ಗಡಿಗಳನ್ನು ಬಂದ್ ಮಾಡುವ ಆಲೋಚನೆ ಸರಕಾರದ ಮುಂದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತರರಾಜ್ಯ ಗಡಿಗಳಲ್ಲಿ ರಾಜ್ಯದೊಳಕ್ಕೆ ಬರುವವರನ್ನು ಪರೀಕ್ಷೆಗೆ ಒಳಪಡಿಸಿ, ಹೆಚ್ಚಿನ ನಿಗಾ ವಹಿಸಲಾಗುವುದು. ಸೋಂಕಿತರು ಕಂಡುಬಂದರೆ ಅಂಥವರನ್ನು ಮಾತ್ರ ನಿಯಂತ್ರಿಸಲಾಗುವುದು. ಉಳಿದಂತೆ ಅಂತರರಾಜ್ಯ ಚಟುವಟಿಕೆ ಮತ್ತು ಓಡಾಟಗಳಿಗೆ …

Read More »

ಆಂಧ್ರಪ್ರದೇಶದ ಶಾಲೆಯಲ್ಲಿ ಕೊರೋನಾ ಸ್ಪೋಟ, 60 ರಲ್ಲಿ 19 ವಿದ್ಯಾರ್ಥಿಗಳಿಗೆ ಸೋಂಕು..!

ಆಂಧ್ರಪ್ರದೇಶ: ಕೊರೋನಾ ನಿಯಂತ್ರಿಸಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರಗಳಿಗೆ ಶಾಲೆಗಳು ಮತ್ತು ಕಾಲೇಜುಗಳು ತಲೆನೋವಾಗಿ ಪರಿಣಮಿಸಿದೆ‌. ಹೀಗಾಗಿಯೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಲೆಗಳನ್ನ ಬಂದ್ ಮಾಡಲಾಗಿದೆ‌. ಶಾಲೆಗಳು ಕೊರೋನಾ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿವೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಎಂಬುವಂತೆ ಆಂಧ್ರ ಪ್ರದೇಶದ ಶಾಲೆಯೊಂದರಲ್ಲಿ 19 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದೆ‌. ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ಕೋತವಲಸದಲ್ಲಿರುವ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ 19 ವಿದ್ಯಾರ್ಥಿಗಳು ಮತ್ತು ಒಬ್ಬ ಶಿಕ್ಷಕರಲ್ಲಿ ಸೋಂಕು …

Read More »

ಅನಾಥ ಮಕ್ಕಳ ತಾಯಿ ಇನ್ನಿಲ್ಲ

ನವದೆಹಲಿ: ಅನಾಥ ಮಕ್ಕಳ ತಾಯಿ ಎಂದೇ ಪ್ರಸಿದ್ಧ ಹೋದಿರುವ,   ಸಾವಿರಾರು ಅನಾಥ ಮಕ್ಕಳನ್ನ ಸಾಕುತ್ತಿದ್ದ ಸಿಂಧೂತಾಯಿ ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸಾವಿರಾರು ಮಕ್ಕಳನ್ನು ಭಿಕ್ಷೆ ಬೇಡಿ ಸಾಕಿದ್ದರು. ಅದರ ಜೊತೆಗೆ ಆ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದ್ದರು. ಆದ್ರೆ ಅವರು ಇಂದು ಎಲ್ಲರನ್ನ ಬಿಟ್ಟು ಬಾರದೂರಿಗೆ ಹೋಗಿದ್ದಾರೆ. ಡಾ.ಸಿಂಧೂತಾಯಿಗೆ 75 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಡಿ. 24ರಿಂದಲೂ ಆಸ್ಪತದರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ …

Read More »

ಮಹಾಮಾರಿಯನ್ನು ನಿಯಂತ್ರಣಕ್ಕೆ ಮಕ್ಕಳಿಂದ ಉತ್ತಮ ಸ್ಪಂದನೆ

ನವದೆಹಲಿ:  ದೇಶದಲ್ಲಿ ಕೊರೋನಾ ಹೆಚ್ಚಿದಂತೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ದೇಶಾದ್ಯಂತ ಇಂದಿನಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನ ಆರಂಭಿಸಲಾಗಿದೆ. ಮೊದಲ ದಿನವೇ 37.84 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದ್ದು ಉತ್ತಮ ಪ್ರತಿಕ್ರಿಯೆ ದೊರಕಿದೆ. COVID19 | CoWIN ಪೋರ್ಟಲ್‌ನ ಪ್ರಕಾರ ಮಕ್ಕಳಿಗೆ COVID19 ಲಸಿಕೆ ಹಾಕಿದ ಮೊದಲ ದಿನದಂದು ಸಂಜೆ 7 ಗಂಟೆಯವರೆಗೆ 15-18 …

Read More »

ಹೆತ್ತ ತಾಯಿಯ ಶವವನ್ನು ಹೊತ್ತು ನಡೆದ ಪುತ್ರಿಯರು

ಹೆತ್ತ ತಾಯಿಯ ಶವವನ್ನು ಹೊತ್ತ ರಸ್ತೆಯ ಮಧ್ಯೆದಲ್ಲಿ ಹೊತ್ತುಕೊಂಡ ನಡೆದ ಮನಕುಲಕುವ ಘಟನೆ ಓಡಿಶಾದ ಪುರಿಯಲ್ಲಿ ನಡೆದಿದೆ. ತಾಯಿಯ ಅಂತ್ಯಕ್ರಿಯೆಯಲ್ಲಿ ಹಾಜರಾಗಲು ಸಹೋದರರು ನಿರಾಕರಿಸಿದ ಹಿನ್ನೆಲೆಯಲ್ಲಿ ನಾಲ್ವರು ಮಹಿಳೆಯರೇ ತಮ್ಮ ತಾಯಿಯ ಶವವನ್ನು ಹೆಗಲ ಮೇಲೆ ಹೊತ್ತು ಬರೋಬ್ಬರಿ ನಾಲ್ಕು ಕಿಲೋಮೀಟರ್​ ದೂರ ಸಾಗಿ ಸ್ಮಶಾನಕ್ಕೆ ತಲುಪಿ ಅಂತ್ಯಕ್ರಿಯೆ ನಡೆಸಿದರು. ಭಾನುವಾರಂದು ಪುರಿಯ ಮಂಗಳ ಘಾಟ್​ನ ಅಷ್ಟಮಠಾಧೀಶರಾದ ಜಾತಿ ನಾಯಕ್​ ನಿಧನರಾಗಿದ್ದರು. ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರಿದ್ದಾರೆ. ಆದರೆ …

Read More »

ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಅರೆಸ್ಟ್ – ಪ್ರಜಾಪ್ರಭುತ್ವದ ಕೊಲೆ ಎಂದ ಜೆ.ಪಿ.ನಡ್ಡಾ

ಹೈದರಾಬಾದ್: ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ಬಂಧನದಿಂದ ಪ್ರಜಾಪ್ರಭುತ್ವದ ಕೊಲೆಯಾಗಿದೆ ಎಂದು ತೆಲಂಗಾಣ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಜೆ.ಪಿ. ನಡ್ಡಾ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣ ಸರ್ಕಾರವು ಸಂಜಯ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಅಮಾನವೀಯವಾಗಿ ನಡೆಸಿಕೊಂಡಿದೆ. ಸಂಜಯ್ ಅವರು ಸರ್ಕಾರದ ಎಲ್ಲಾ ಮಾರ್ಗಸೂಚಿಯನ್ನು ಅನುಸರಿಸಿಯೇ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೂ ಪೊಲೀಸರು ಅವರನ್ನು ಬಂಧಿಸುವ ಮೊದಲು ಅವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. …

Read More »

ಕೋವಿಡ್‌ 2022ರಲ್ಲಿ ಅಂತ್ಯವಾಗುತ್ತಾ?: WHO ಮುಖ್ಯಸ್ಥರ ಮಹತ್ವದ ಹೇಳಿಕೆ

ಹೊಸ ವರ್ಷ 2022 ಆರಂಭವಾಗುತ್ತಿದ್ದಂತೆ ವಿಶ್ವದಲ್ಲಿ ಕೊರೊನಾ ವೈರಸ್‌ ಸೋಂಕಿನ ಹೊಸ ಅಲೆಯು ಹರಡುವ, ಸೃಷ್ಟಿ ಆಗುವ ಭೀತಿ ಕಾಡುತ್ತಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಕೊರೊನಾ ವೈರಸ್‌ ಸೋಂಕಿನ ಅಂತ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಶ್ವದಲ್ಲಿ ಈ ಹೊಸ ವರ್ಷದಲ್ಲಿ ಕೊರೊನಾ ವೈರಸ್‌ ಸೋಂಕು ಏರಿಕೆ ಆಗುತ್ತಿದೆ ಎಂಬ ಹಿನ್ನೆಲೆಯಿಂದಾಗಿ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಕೋವಿಡ್‌ ನಿಯಮವನ್ನು ಕಠಿಣ ಮಾಡಿದೆ. ಕೆಲವು ರಾಷ್ಟ್ರಗಳಲ್ಲಿ ಲಾಕ್‌ಡೌನ್‌ನಂತಹ ಕ್ರಮವನ್ನು …

Read More »

ರಾಜಸ್ಥಾನದಲ್ಲಿ ಓಮಿಕ್ರಾನ್‌ನಿಂದ ಚೇತರಿಸಿಕೊಂಡಿದ್ದ ವ್ಯಕ್ತಿ ಸಾವು

ಜೈಪುರ: ಕೋವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದ 73 ವರ್ಷದ ವ್ಯಕ್ತಿಯೊಬ್ಬರು ಶುಕ್ರವಾರ ಉದಯಪುರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಡಿಸೆಂಬರ್ 15 ರಂದು ಈ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಬಂದಿತ್ತು ಮತ್ತು ಜ್ವರ, ಕೆಮ್ಮು ಹಾಗೂ ಮೂಗು ಸೋರುವಿಕೆಯಂತಹ ರೋಗಲಕ್ಷಣಗಳನ್ನು ಹೊಂದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಡಾ ಖಾರಾಡಿ ಹೇಳಿದ್ದಾರೆ. ಮೃತ ವ್ಯಕ್ತಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮತ್ತು ಹೈಪೋಥೈರಾಯ್ಡಿಸಮ್ ಅನ್ನು ಹೊಂದಿದ್ದರು. …

Read More »

ಅವಕಾಶ ಸಿಕ್ಕಾಗಲೆಲ್ಲ ನಾವು ಪುಟಿದೇಳುತ್ತೇವೆ: ವಿರಾಟ್ ಕೊಹ್ಲಿ

ಸೆಂಚುರಿಯನ್: ದಕ್ಷಿಣಾ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು 113ರನ್ ಅಂತರದ ಗೆಲುವು ಸಾಧಿಸಿರುವ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಸದ್ಯ 1-0 ಮುನ್ನಡೆ ಪಡೆದುಕೊಂಡಿದೆ. ತಮ್ಮ ತಂಡವು ಮುಂದಿನ ಪಂದ್ಯದಲ್ಲಿಯೂ ಜಯ ಸಾಧಿಸಲಿದೆ ಎಂದು ಕೊಹ್ಲಿ ವಿಶ್ವಾಸದಿಂದ ಹೇಳಿದ್ದಾರೆ. ಗೆಲುವಿನ ಬಳಿಕ ಬಿಸಿಸಿಐ ಟಿವಿಯಲ್ಲಿ ಮಾತನಾಡಿರುವ ಅವರು, ‘ದಕ್ಷಿಣ ಆಫ್ರಿಕಾದಲ್ಲಿನ ಈ ಸರಣಿಯು ಯಾವುದೇ …

Read More »

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕೋವಿಡ್-19 ಪಾಸಿಟಿವ್; ಶೌಚಾಲಯದಲ್ಲಿ 5 ತಾಸು ಐಸೊಲೇಟ್ ಆದ ಸೋಂಕಿತೆ!

ಶಿಕಾಗೋ: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕೋವಿಡ್-19 ಪಾಸಿಟೀವ್ ಕಂಡುಬಂದ ಹಿನ್ನೆಲೆಯಲ್ಲಿ ಆಕೆ ಶೌಚಾಲಯದಲ್ಲೇ ಐಸೊಲೇಟ್ ಆದ ವಿಲಕ್ಷಣ ಘಟನೆ ಅಮೆರಿಕಾದಲ್ಲಿ ವರದಿಯಾಗಿದೆ. ಶಿಕಾಗೋದಿಂದ ಐಸ್ಲ್ಯಾಂಡ್ ಗೆ ತೆರಳುತ್ತಿದ್ದ ಮಹಿಳೆಗೆ ಮಾರ್ಗಮಧ್ಯೆ ಕೋವಿಡ್ ಪಾಸಿಟೀವ್ ಕಾಣಿಸಿಕೊಂಡಿತ್ತು. ಆದ ಕಾರಣ ಆಕೆ ಸತತ ಮೂರು ಗಂಟೆಗಳ ಕಾಲ ಶೌಚಾಲಯದಲ್ಲೇ ಐಸೊಲೇಟ್ ಆಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಮಿಚಿಗನ್ ನಲ್ಲಿ ಶಿಕ್ಷಕಿಯಾಗಿರುವ ಮಾರಿಸಾ ಫೋಟಿಯೊ, ವಿಮಾನ ಪ್ರಯಾಣದ ಮಾರ್ಗಮಧ್ಯದಲ್ಲಿರಬೇಕಾದರೆ ಆಕೆಗೆ ಗಂಟಲು ಬೇನೆ ಬಾಧಿಸಲು …

Read More »