Shaikh BigTv
October 10, 2024
Breaking News, ಧಾರವಾಡ
ಕುಂದಗೋಳ : ರಾತ್ರೋರಾತ್ರಿ ಗುಡೇನಕಟ್ಟಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಯಾರೋ ಸದ್ದಿಲ್ಲದೆ ಪ್ರತಿಷ್ಠಾಪನೆ ಮಾಡಿದ್ದು ಸಂಪೂರ್ಣ ಗ್ರಾಮವೇ ಗೊಂದಲಕ್ಕೆ ಸಿಲುಕಿದೆ. ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ 5 ರಿಂದ 6 ಫೂಟ್ ಎತ್ತರದ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಆದರೆ, ಯಾರು ಈ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ ಎಂಬುದಕ್ಕೆ ಸೂಕ್ತ ಸ್ಪಷ್ಟನೆ ಸಿಕ್ಕಿಲ್ಲ, ಮಾರುತಿ ದೇವಸ್ಥಾನದ ಬಳಿಯಿರುವ ಸರ್ಕಲ್’ನಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಮುಖ್ಯವಾಗಿ ಸಿಸಿ ಕ್ಯಾಮೆರಾ ವ್ಯವಸ್ಥೆ …
Read More »
Shaikh BigTv
October 9, 2024
Breaking News, ಧಾರವಾಡ
ಕಲಘಟಗಿ : ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ಒಂದು ತಿಂಗಳಿನಿಂದ ಗ್ರಾಮಸ್ಥರಿಗೆ ಭಯ ಹುಟ್ಟಿಸಿದ್ದ ಚಿರತೆ ಇಂದು ಸೆರೆ ಸಿಕ್ಕಿದೆ. ತಬಕದಹೊನ್ನಳ್ಳಿ ಗ್ರಾಮದ ಸುತ್ತ ಮುತ್ತಲಿನ ಹೊಲಗಳಲ್ಲಿನ ನಾಯಿ ಹಾಗೂ ಆಕಳುಗಳ ಮೇಲೆ ದಾಳಿ ಮಾಡಿದ್ದ ಚಿರತೆ ಒಂದು ತಿಂಗಳಿನಿಂದ ಭಯ ಹುಟ್ಟಿಸಿತ್ತು.ಅರಣ್ಯ ಇಲ್ಲಾಖೆ ಅಧಿಕಾರಿಗಳು ಚಿರತೆ ಸೇರೆಗಾಗಿ ಗ್ರಾಮದ ಹೊರವಲಯದಲ್ಲಿ ಬೊನ್ ಇಟ್ಟು ಕಾರ್ಯಚರಣೆ ನಡೆಸಿದ್ದರು. ಇಂದು ಮುಂಜಾನೆ ಚಿರತೆ ಬೋನಿಗೆ ಬಿದ್ದಿದೆ. ದಿನನಿತ್ಯ ಭಯದಿಂದ ಓಡಾಡುತ್ತಿದ್ದ ಗ್ರಾಮದ ಜನರು …
Read More »
Shaikh BigTv
October 9, 2024
Breaking News, ಧಾರವಾಡ
ಧಾರವಾಡ: ಹರಿಯಾಣ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಧಾರವಾಡದಲ್ಲೂ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಧಾರವಾಡದ ಸುಭಾಷ ರಸ್ತೆಯಲ್ಲಿರುವ ಬಿಜೆಪಿ ಕಚೇರಿ ಎದುರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನ್ನಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
Read More »
Shaikh BigTv
October 8, 2024
Breaking News, ಧಾರವಾಡ
ಧಾರವಾಡ: ನಾಡ ಹಬ್ಬ ದಸರಾಕ್ಕೆ ಸರ್ಕಾರವೇ 15 ದಿನಗಳ ಕಾಲ ಶಾಲೆಗೆ ಅಧಿಕೃತ ರಜೆ ಘೋಷಣೆ ಮಾಡಿದೆ. ಆದರೆ, ಕೆಲ ಕ್ರಿಶ್ಚಿಯನ್ ಶಾಲೆಗಳು ಸರ್ಕಾರದ ಆದೇಶವನ್ನು ಮೀರಿ ಶಾಲೆಗಳನ್ನು ನಡೆಸುತ್ತಿವೆ ಎಂದು ಶ್ರೀರಾಮ ಸೇನೆ ಕಾರ್ಯಕರ್ತರು ಹಾಗೂ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ಧಾರವಾಡದ ಬಾಸೆಲ್ ಮಿಶನ್ ಶಾಲೆಗೆ ತೆರಳಿ ಶಾಲೆಯ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು. ನಾಡಹಬ್ಬ ದಸರಾಕ್ಕೆ ರಜೆ ಘೋಷಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಕ್ರಿಶ್ಚಿಯನ್ …
Read More »
Shaikh BigTv
October 6, 2024
Breaking News, ಧಾರವಾಡ
ನವಲಗುಂದ: ಹಮಾಲಿ ಹಾಗೂ ಇತರ ಅಸಂಘಟಿತ ಕಾರ್ಮಿಕರ ಮಕ್ಕಳಿಗೆ ಬೆಂಗಳೂರಿನ ಪಿ. ಸಿಂಫ್ಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ನೀಡಲಾಗುತ್ತಿರುವ ಶಿಕ್ಷಾದೀಪ ವಿದ್ಯಾರ್ಥಿ ವೇತನ ವಿತರಣಾ ಹಾಗೂ ಪಾಲಕರ ಸಭೆಯು ಹುಬ್ಬಳ್ಳಿ ಎಪಿಎಂಸಿ ಸಭಾಭವನದಲ್ಲಿ ಜರುಗಿತು. ಸಭೆಯಲ್ಲಿ ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕಿನ ಹಮಾಲಿ ಕೂಲಿ ಕಾರ್ಮಿಕರ ಮಕ್ಕಳಾದ ಮೌಲಾಸಾಬ್ ಅಣ್ಣಿಗೇರಿ, ಪವಿತ್ರಾ ಸುಳ್ಳದ, ಸುಕನ್ಯಾ ಬೆಲಕೊಪ್ಪ, ರೂಪ ಕುಂಬಾರಗೌಡ್ರ, ಬಸಮ್ಮ ಕುಂಬಾರಗೌಡ್ರ ನಾಶಿರಬಾನು ಧಾರವಾಡ, ಪ್ರಭಾವತಿ ಮಾವಿನಕಾಯಿ, ಜನ್ನತಬಿ ಆದೋನಿ, …
Read More »
Shaikh BigTv
October 6, 2024
Breaking News, ಧಾರವಾಡ
ಧಾರವಾಡ: ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ನೀಡಲಾಗುತ್ತಿರುವ ಊಟ ಸರಿಯಾಗಿಲ್ಲ ಎಂದು ಆರೋಪಿಸಿ ಸಪ್ತಾಪುರ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ಹಾಸ್ಟೆಲ್‌ನ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ನೀಡಿದ ಅನ್ನ ಹಾಗೂ ಸಾಂಬಾರನ್ನು ಡಿಸಿ ಕಚೇರಿಗೆ ತಂದು ದಿಢೀರ್ ಪ್ರತಿಭಟನೆ ನಡೆಸಿದರು. ಹಾಸ್ಟೆಲ್‌ನ ಅನ್ನದ ಪಾತ್ರೆ, ಸಾಂಬಾರಿನ ಬಕೆಟ್ ಹಿಡಿದು ಬಂದ ವಿದ್ಯಾರ್ಥಿಗಳು, ಅವುಗಳನ್ನು ಡಿಸಿ ಕಚೇರಿ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು. ಹಾಸ್ಟೆಲ್‌ನಲ್ಲಿ ನೀಡುತ್ತಿರುವ ಊಟ ಕಳಪೆ ಗುಣಮಟ್ಟದ್ದಾಗಿದ್ದು, ಈ ಹಿಂದೆಯೇ ಈ …
Read More »
Shaikh BigTv
October 4, 2024
Breaking News, ಧಾರವಾಡ
ಕುಂದಗೋಳ : ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣ ವಿಚಾರವಾಗಿ ಪೂರ್ವಭಾವಿ ಸಭೆ ಬಹಿಷ್ಕಾರ ಹಾಕಿದ ಸಮಾಜದ ಬಾಂಧವರನ್ನು ಸಂತೈಸುವ ಕೆಲಸವನ್ನು ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಮಹರ್ಷಿ ವಾಲ್ಮೀಕಿ ಭವನ ನೆನೆಗುದಿಗೆ ಬಿದ್ದಿದೆ, ಜಾಗ ಹಂಚಿಕೆ ವಿಷಯವಾಗಿ ಪಟ್ಟಣ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಬಂಧಪಟ್ಟಂತೆ ಮುಂದಿನ ಕ್ರಮ ತಿಳಿಯುತ್ತಿಲ್ಲ ಎಂದು ಇತ್ತಿಚಿಗೆ ತಾಲೂಕಿನ ಎಸ್.ಸಿ ಮತ್ತು ಎಸ್.ಟಿ ಸಮಾಜ ಬಾಂಧವರು ವಾಲ್ಮೀಕಿ ಜಯಂತಿ …
Read More »
Shaikh BigTv
October 4, 2024
Breaking News, ಧಾರವಾಡ
ನವಲಗುಂದ : ಲೋಕಾಯುಕ್ತ ವಿಶೇಷ ತನಿಖಾ ದಳದ ಮುಖ್ಯಸ್ಥ ಎಡಿಜಿಪಿ ಎಂ.ಚಂದ್ರಶೇಖರ್ ಅವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಕರ್ನಾಟಕ ರಾಜ್ಯ ಜಾತ್ಯತೀತ ಜನತಾದಳದ ನವಲಗುಂದ ಕಾರ್ಯಕರ್ತರು ಒತ್ತಾಯಿಸಿ, ತಹಶೀಲ್ದಾರ ಸುಧೀರ ಸಾಹುಕಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಅಧ್ಯಕ್ಷ ಶ್ರೀಶೈಲಯ್ಯ ಮೂಲಿಮನಿ, ನಮ್ಮ ನಾಯಕರು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಎಡಿಜಿಪಿ ಎಂ.ಚಂದ್ರಶೇಖರ ಅವಹೇಳನಕಾರಿ ಪದಬಳಸಿ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದು ಸರಿಯಲ್ಲ. …
Read More »
Shaikh BigTv
October 3, 2024
Breaking News, ಧಾರವಾಡ
ಧಾರವಾಡ : ರಾಜ್ಯದ ಹಳದಿ ಬೋರ್ಡ್ ಟ್ಯಾಕ್ಸಿ ಚಾಲಕರು ಮತ್ತು ಆಟೋರಿಕ್ಷಾ ಚಾಲಕರ ಮೆಟ್ರಿಕ್ ನಂತರದ ಉನ್ನತ ಶಿಕ್ಷಣಕ್ಕಾಗಿ ವಿದ್ಯಾನಿಧಿ ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಗ್ರಾಮ-ಒಂದು, ಕರ್ನಾಟಕ-ಒಂದು ಮೂಲಕ ಸೇವಾ ಸಿಂಧು ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು, ಚಾಲಕರು, ವೃತ್ತಿಪರರು ಸೇವಾ ಸಿಂಧು ವೆಬ್‌ಸೈಟ್, ಆಧಾರ್ ಸಂಖ್ಯೆ ಮತ್ತು ವಿದ್ಯಾರ್ಥಿಗಳ ಆಧಾರ್ ಸಂಖ್ಯೆ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read More »
Shaikh BigTv
October 3, 2024
Breaking News, ಧಾರವಾಡ
ನವಲಗುಂದ: ನಾಡಿಗೆಲ್ಲ ಅಹಿಂಸಾ ಧರ್ಮವನ್ನು ಬೋಧಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಪ್ರತಿಯೊಬ್ಬರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದು ಅವರನ್ನೆಲ್ಲ ನೆನೆದು ಗೌರವ ಸಮರ್ಪಣೆ ಪ್ರತಿಯೊಬ್ಬರ ಕರ್ತವ್ಯ ಎಂದು ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಸರ್ಕಾರಿ ಮಾದರಿ ಕೇಂದ್ರ ಶಾಲೆ ನಂ-3ರಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಜಿಯವರ ಜಯಂತಿಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಬ್ರಿಟಿಷರಿಂದ ಅಹಿಂಸಾ ಮಾರ್ಗದ ಮೂಲಕ ನಮ್ಮ ದೇಶವನ್ನು …
Read More »