ನವಲಗುಂದ: ಹಮಾಲಿ ಹಾಗೂ ಇತರ ಅಸಂಘಟಿತ ಕಾರ್ಮಿಕರ ಮಕ್ಕಳಿಗೆ ಬೆಂಗಳೂರಿನ ಪಿ. ಸಿಂಫ್ಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ನೀಡಲಾಗುತ್ತಿರುವ ಶಿಕ್ಷಾದೀಪ ವಿದ್ಯಾರ್ಥಿ ವೇತನ ವಿತರಣಾ ಹಾಗೂ ಪಾಲಕರ ಸಭೆಯು ಹುಬ್ಬಳ್ಳಿ ಎಪಿಎಂಸಿ ಸಭಾಭವನದಲ್ಲಿ ಜರುಗಿತು.
ಸಭೆಯಲ್ಲಿ ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕಿನ ಹಮಾಲಿ ಕೂಲಿ ಕಾರ್ಮಿಕರ ಮಕ್ಕಳಾದ ಮೌಲಾಸಾಬ್ ಅಣ್ಣಿಗೇರಿ, ಪವಿತ್ರಾ ಸುಳ್ಳದ, ಸುಕನ್ಯಾ ಬೆಲಕೊಪ್ಪ, ರೂಪ ಕುಂಬಾರಗೌಡ್ರ, ಬಸಮ್ಮ ಕುಂಬಾರಗೌಡ್ರ ನಾಶಿರಬಾನು ಧಾರವಾಡ, ಪ್ರಭಾವತಿ ಮಾವಿನಕಾಯಿ, ಜನ್ನತಬಿ ಆದೋನಿ, ಮೇಘಾ ಬೆಲಕೊಪ್ಪ ಇವರುಗಳಿಗೆ ಶಿಕ್ಷಾದೀಪ ವಿದ್ಯಾರ್ಥಿ ವೇತನ ನೀಡಲಾಯಿತು.
ಹಮಾಲಿ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ. ಶಿಕ್ಷಾದೀಪ ಸಂಯೋಜಕರಾದ ಈರಪ್ಪ ನಾಯಕ. ಹಮಾಲಿ ಒಕ್ಕೂಟದ ಅಧ್ಯಕ್ಷ ಬಸವಣ್ಣೆಪ ನೀರಲಗಿ ನಾರಾಯಣ ಆರೇರ, ಕತಾಕಸಾಬ ಮುಲ್ಲಾ, ಹನಮಂತ ಅಂಬಿಗೇರ ಸೇರಿ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿನಿಯರು ಪಾಲಕರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

