Breaking News

ಧಾರವಾಡ

ಬಿಜೆಪಿಯ ಟಿಕೆಟ್ ಕೈ ತಪ್ಪಲು ಕಾರಣ ಬಿ.ಎಲ್. ಸಂತೋಷ್- ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ನನಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ಕೈ ತಪ್ಪಲು ಕಾರಣ ಬಿ.ಎಲ್. ಸಂತೋಷ್ ಅವರೇ ಕಾರಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇರವಾಗಿ ಆರೋಪಿಸಿದ್ದಾರೆ. ನನ್ನ ವಿರುದ್ದ ಬಿಎಲ್ ಸಂತೋಷ್ ಅವರು ಹೈಕಮಾಂಡ್ ಬಳಿ ಅಪಪ್ರಚಾರ ನಡೆಸಿತು. ಅವರ ಟೀಂ ಕೂಡ ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ನನ್ನ ವಿರುದ್ಧ ತಂತ್ರಗಾರಿಕೆ ಮಾಡಿದರು. ಅವರಿಂದಲೇ ನನಗೆ ಟಿಕೆಟ್ ತಪ್ಪಿತ್ತು ಎಂದು ಅವರು ಹೇಳಿದ್ದಾರೆ. ನಳಿನ್ ಕಟೀಲ …

Read More »

ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಅಂತ ಬಿಜೆಪಿಯವರೇ ನಿರ್ಧರಿಸಿದಂತಿದೆ- ಜಗದೀಶ್ ಶೆಟ್ಟರ

ಹುಬ್ಬಳ್ಳಿ: ಮೇ 13 ಕ್ಕೆ ಫಲಿತಾಂಶ ಬರುತ್ತೆ. ಆವಾಗ ನಾನು ಏನು ಅಂತ ಗೊತ್ತಾಗುತ್ತೆ ಎಂದು ಬಿಜೆಪಿ ನಾಯಕರಿಗೆ ಜಗದೀಶ್ ಶೆಟ್ಟರ್ ತಿರುಗೇಟು. ಬಿಜೆಪಿ ಕ್ಷೇತ್ರ ಅನ್ನೋ ರೀತಿಯಲ್ಲಿ ನಾನು ಸಂಘಟಿಸಿದೆ. ಹಲವಾರು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಕೊಂಡು ಬಂದಿದ್ದೇನೆ. ಇಡೀ ರಾಜ್ಯ ಸುತ್ತು ಹಾಕಿದ್ದೇನೆ. ಅದೇ ಕಾರಣಕ್ಕೆ ನನ್ನನ್ನ ಲಿಂಗಾಯಿತ ಲೀಡರ್ ಅಂತಾರೆ. ಇವರು ಎಷ್ಟರ ಮಟ್ಟಿಗೆ ಗೆಲ್ಲಿಸಿದ್ದಾರೆ. ತಮಗೆ ತಾವೇ ಲಿಂಗಾಯಿತ ಲೀಡರ್ ಅಂದ್ರ ಪ್ರಯೋಜನವಿಲ್ಲ. ಬಿಜೆಪಿಯ …

Read More »

ಜಗದೀಶ್ ಶೆಟ್ಟರ್ ಗೆ ಕಾಂಗ್ರೆಸ್ ನಿಂದ ಏನೂ ಆಗಲ್ಲ- ಅರವಿಂದ ಬೆಲ್ಲದ್

ಹುಬ್ಬಳ್ಳಿ : ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿದ್ದು ಬಿಜೆಪಿ. ಲಿಂಗಾಯತರಿಗೆ ಗೌರವ ಕೊಟ್ಟಿದ್ದು ಬಿಜೆಪಿ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಹೇಳಿಕೆ. ಲಿಂಗಾಯತ, ವೀರಶೈವರಿಗೆ ಹೆಚ್ಚು ಟಿಕೆಟ್ ಕೊಟ್ಟಿದ್ದು ಬಿಜೆಪಿ. ಕಾಂಗ್ರೆಸ್ ಲಿಂಗಾಯತರ ಮುಖ್ಯಮಂತ್ರಿ ಎಂದು ಹೇಳಲಿ ನೊಡೋಣ. ನಮ್ಮ ಧರ್ಮ ಒಡೆದಿದ್ದು ಕಾಂಗ್ರೆಸ್. ಬಿಜೆಪಿ ಶೆಟ್ಟರ್ ಅವರನ್ನು ಲಿಂಗಾಯತ ನಾಯಕ ಎಂದು ಬೆಳಸಲಿಲ್ಲ. ಶೆಟ್ಟರ್ ಬೆಳದಿದ್ದು, ಪಕ್ಷದ ತತ್ವ ಸಿದ್ದಾಂತದಿಂದ. ಕೆಲ ಕಾರ್ಯಕರ್ತರು ಜೀವ ಕೊಟ್ಟಿದ್ದಾರೆ. ಲಿಂಗಾಯತ …

Read More »

ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡದ ಶೆಟ್ಟರ್

ಹುಬ್ಬಳ್ಳಿ: ರಾಜೀನಾಮೆಗೆ ಶಿರಸಿಗೆ ಹೊರಟ ಶೆಟ್ಟರ್ ಗೆ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ, ತವನಪ್ಪ ಅಷ್ಟಗಿ ಶೆಟ್ಟರ್‌ಗೆ ಸಾಥ ನೀಡಿದ್ದು, ಇಂದು 11 ಗಂಟೆಗೆ ಸ್ಪೀಕರ್‌ಗೆ ಶೆಟ್ಟರ್‌ ರಾಜೀನಾಮೆ ಸಲ್ಲಿಸಲಿದ್ದಾರೆ . ಇಂದು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡದ್ದು, ರಾಹುಲ್ ಗಾಂಧಿಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲಿರುವ ಶೆಟ್ಟರ್.

Read More »

ಸ್ಪರ್ಧೆಯಿಂದ ಹಿಂದೆ ಸರಿಯೋ ಮಾತೇ ಇಲ್ಲ-ಮಾಜಿ ಸಿಎಂ ಶೆಟ್ಟರ್

ಹುಬ್ಬಳ್ಳಿ: ಬೆಳಿಗ್ಗೆ ಎಲ್ಲ ಕಾರ್ಯಕರ್ತರ ಸಭೆ ಕರೆದಿದ್ದೆ. ಎಲ್ಲರೂ ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ನಿರ್ಧಾರದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ ನೀಡಿದ್ದಾರೆ. ನಮ್ಮ ಜೊತೆ ಸಮಾಲೋಚನೆ ಮಾಡಲು ಸಿಎಂ, ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್ ಜೋಶಿ ಅವರು ನಮ್ಮ ಮನೆಗೆ ಬರಲಿದ್ದಾರೆ. ಮೂವರೂ ಸೇರಿ ನಮ್ಮ ಜೊತೆ ಸಮಾಲೋಚನೆ ಮಾಡಲಿದ್ದಾರೆ. ಸಮಾಲೋಚನೆ ನಂತರ ನಿರ್ಧಾರ ಪ್ರಕಟ ಮಾಡಲಿದ್ದೇವೆ. ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ …

Read More »

ಜಗದೀಶ್ ಶೆಟ್ಟರ್ ಅವರ ಟಿಕೆಟ್ ವಿಚಾರಕ್ಕೆ, ಅವರನ್ನು ಮನವೊಲಿಕೆ ಪ್ರಯತ್ನ ಮಾಡಿದ್ದೇವೆ-ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಅವರ ಟಿಕೆಟ್ ವಿಚಾರಕ್ಕೆ, ಅವರನ್ನು ಮನವೊಲಿಕೆ ಪ್ರಯತ್ನ ಮಾಡಿದ್ದೇವೆ. ಇವತ್ತಿಗೂ ಪ್ರಯತ್ನ ನಡೆಯುತ್ತಿದೆ. ನಿನ್ನೆ ಧರ್ಮೇಂದ್ರ ಪ್ರಧಾನ ಬಳಿ ಚರ್ಚೆ ಮಾಡಿದ್ದೇನೆ. ಬಿಜೆಪಿಗೆ ಶೆಟ್ಟರ್ ಅತ್ಯಂತ ನಿಷ್ಠರು. ಉತ್ತರ ಕರ್ನಾಟಕ ಭಾಗಕ್ಕೆ ಅತ್ಯಂತ ಅವಶ್ಯಕವಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಬೇಕೆಂದು ಹೇಳಿದ್ದೇನೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಅವರ ನಿವಾಸದ ಬಳಿ ಮಾತನಾಡಿದ ಅವರು, ಶೆಟ್ಟರ್ ಅವರು ಅತ್ಯಂತ ಅವಶ್ಯ ಇರೋ ನಾಯಕ. ನಡ್ಡಾ ಅವರಿಗೆ ಮಾತನಾಡಿದ್ದೇನೆ. …

Read More »

ಮಾನವ ಸರಪಳಿ ನಿರ್ಮಿಸುವ ಮೂಲಕ ಮತದಾನದ ಕುರಿತು ಮತದಾರರಲ್ಲಿ ಅರಿವು

ಹುಬ್ಬಳ್ಳಿ: ರಾಣಿ ಚೆನ್ನಮ್ಮ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಪಂಚಾಯತ ಹುಬ್ಬಳ್ಳಿ, ತಾಲೂಕು ಸ್ವೀಪ್ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹುಬ್ಬಳ್ಳಿ ಶಹರ ವತಿಯಿಂದ ಮತದಾರರ ಜಾಗೃತಿ ಅಭಿಯಾನದ ಅಂಗವಾಗಿ ಮಾನವ ಸರಪಳಿ ನಿರ್ಮಿಸುವ ಮೂಲಕ ಮತದಾನದ ಕುರಿತು ಮತದಾರರಲ್ಲಿ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಮತದಾನದ ಕುರಿತಾದ ಘೋಷಣೆಗಳನ್ನು ಕೂಗುವುದರ ಮೂಲಕ ಜಾಗೃತಿ ಮೂಡಿಸಲಾಯಿತು. ಹುಬ್ಬಳ್ಳಿ ಶಹರ ತಹಸೀಲ್ದಾರ ಕಲಗೌಡ ಪಾಟೀಲ, ಅಪರ …

Read More »

ಬಿಜೆಪಿಯಲ್ಲಿರೋ ಉತ್ಸಾಹ ಕಾಂಗ್ರೆಸ್ ನಲ್ಲಿ ನಾನು ನೋಡಿಲ್ಲ-ನಾಗರಾಜ್ ಛಬ್ಬಿ

ಹುಬ್ಬಳ್ಳಿ: ಕಲಘಟಗಿ ಟಿಕೆಟ್ ಕೊನೆಗೂ ನಾಗರಾಜ್ ಛಬ್ಬಿ ಪಾಲಾಗಿದೆ. ಇದರಿಂದ ಹಾಲಿ ಶಾಸಕ ಸಿಎಂ ನಿಂಬಣ್ಣವರ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಶಾಸಕ ಸಿಎಮ್ ನಿಂಬಣ್ಣವರ ಮನೆಗೆ ಭೇಟಿ ನೀಡಿದ ನಾಗರಾಜ್ ಛಬ್ಬಿ, ಸಿ ಎಂ ನಿಂಬಣ್ಣವರ್ ಕಾಲು ಮುಟ್ಟಿ ನಮಸ್ಕಾರ ಮಾಡಿ, ನಿಂಬಣ್ಣವರ್ ಮನವೊಲಿಕೆ ಮಾಡಿ ಚರ್ಚೆ ನಡೆಸಿದರು. ಟಿಕೆಟ್ ವಂಚಿತ ಶಾಸಕ ಸಿಎಮ್ ನಿಂಬಣ್ಣನವರ್ ಮಾತನಾಡಿದ್ದು, ನಾಗರಾಜ ಛಬ್ಬಿ ನನ್ನ ಮನೆಗೆ ಬಂದಿದ್ದರು, ಅತಿಥಿಗಳು ಮನೆಗೆ ಬಂದಾಗ ಸತ್ಕಾರ ಮಾಡುವ …

Read More »

ಸಾಮಾಜಿಕ ಜಾಲತಾಣದ ವಾರ್ ಬಗ್ಗೆ ಮಾತನಾಡಿರುವ ಶಾಸಕ ಅಮೃತ ದೇಸಾಯಿ

ಧಾರವಾಡ : ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಹೆಸರು ಅಂತಿಮಗೊಳ್ಳುತ್ತಿದ್ದಂತೆ ಶಾಸಕ ಅಮೃತ ದೇಸಾಯಿ ವೇದಿಕೆ ಕಾರ್ಯಕ್ರಮವೊಂದರಲ್ಲಿ ಹಾಕಿದ್ದ ಬಹಿರಂಗ ಸವಾಲಿಗೆ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ಕೊಡುತ್ತಿದ್ದಾರೆ. ಬಾರೋ ಅಂತ ಕರೆದವರು ಈಗ ಎಲ್ಲಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಸಾಮಾಜಿಕ ಜಾಲತಾಣದ ವಾರ್ ಬಗ್ಗೆ ಧಾರವಾಡದಲ್ಲಿ ಮಾತನಾಡಿರುವ ಶಾಸಕ ಅಮೃತ ದೇಸಾಯಿ, ಈಗಲೂ ಅವರಿಗೆ ಬಾರೋ ಅಂತಲೇ ಕರೆಯುತ್ತೇನೆ. ಅವರು …

Read More »

ನಮ್ಮ ಜೊತೆಗೆ ಓರ್ವ ಸೂಪರ್ ಸ್ಟಾರ್ ಬಂದಿದ್ದಾರೆಂಬ ಆತಂಕ ಕಳವಳ ವಿರೋಧಿಗಳಿಗೆ ಕಾಡುತ್ತಿದೆ- ಸಿಎಂ

ಹುಬ್ಬಳ್ಳಿ: ನಮ್ಮ ಜೊತೆಗೆ ಓರ್ವ ಸೂಪರ್ ಸ್ಟಾರ್ ಬಂದಿದ್ದಾರೆಂಬ, ಆತಂಕ, ಕಳವಳ ವಿರೋಧಿಗಳಿಗೆ ಕಾಡುತ್ತಿದೆ. ಹೀಗಾಗಿ ಅವರ ಸೋಲು ಗೋಡೆಯ ಮೇಲೆ ಕಾಣುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದೀಪ್ ಅವರನ್ನು ಸ್ಟಾರ್ ಪ್ರಾಚಾರಕರಾಗಿ ತೆಗೆದುಕೊಂಡ ಹಿನ್ನೆಲೆ ಎದುರಾದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿ, ಸ್ಟಾರ್ ನಟರನ್ನು ಚುನಾವಣೆಯಲ್ಲಿ ಪ್ರಚಾರಕ್ಕೆ ಬಳಕೆ ಮಾಡುವುದು ಹೊಸದಲ್ಲ, ದೇಶದಾದ್ಯಂತ ನಡೆದಿದೆ. ಇದೀಗ ರಾಜ್ಯದಲ್ಲಿ ಆಗತ್ತಿದೆ. …

Read More »