Breaking News

ಧಾರವಾಡ

ಅಮ್ಮಿನಬಾವಿ ಗ್ರಾಮದ 11 ವಿದ್ಯಾರ್ಥಿಗಳಿಗೆ ಕೋವಿಡ್​​ ದೃಢ

ಧಾರವಾಡ: ಜಿಲ್ಲೆಯಲ್ಲಿ ಮಹಾಮಾರಿಯ ಕಾಟಾ ದಿನೇ  ದಿನೆ ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಎಡಬಿಡದೆ ಕಾಡುತ್ತಿದೆ. ಈಗಷ್ಟೇ ಚೇತರಿಸಿಕೊಂಡಿದ್ದ ಜನರು ಮತ್ತೆ ಗೋಳಾಡುವಂತಾಗಿದೆ.  ಗ್ರಾಮೀಣ ಭಾಗದಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಅನುದಾನಿತ ಪ್ರೌಢ ಶಾಲೆಯ ಓರ್ವ ಮಹಿಳೆ ಸೇರಿದಂತೆ 11 ವಿದ್ಯಾರ್ಥಿಗಳಲ್ಲಿ ಕೋವಿಡ್​​ ಸೋಂಕು ದೃಢಪಟ್ಟಿದೆ. ಸದ್ಯ ಸೋಂಕಿತ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

Read More »

ಮಾಸ್ಕ್ ಇಲ್ಲಿದೆ ವಿದ್ಯಾರ್ಥಿಗಳಿಗೆ ಪ್ರವೇಶವಿಲ್ಲ

ಧಾರವಾಡ :  ಎಲ್ಲ ಶಾಲೆಗಳಲ್ಲಿ ಸುಮಾರು 100 ಜನರನ್ನು ಕೋವಿಡ್‌ ತಪಾಸಣೆ ಮಾಡಬೇಕು. ಈ ಪೈಕಿ 5ಕ್ಕಿಂತ ಹೆಚ್ಚು ಪಾಸಿಟಿವ್‌ ಪ್ರಕರಣಗಳು ಕಂಡು ಬಂದರೆ 5 ದಿನಗಳ ಕಾಲ ಶಾಲೆ ಮುಚ್ಚಬೇಕು . ಜಿಲ್ಲೆಯ ಶಾಲೆ – ಕಾಲೇಜುಗಳಲ್ಲಿ ಮಾಸ್ಕ್ ಧರಿಸದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಾರದು ಎಂದು ಡಿಸಿ ನಿತೇಶ ಪಾಟೀಲ ಹೇಳಿದರು. ನಗರದ ಡಿಸಿ ಕಚೇರಿ ನೂತನ ಸಭಾಂಗಣದಲ್ಲಿ ಕೋವಿಡ್‌ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. …

Read More »

ಮೋದಿಯವರಿಗೆ ದೇವರು ದೀರ್ಘಾಯುಷ್ಯ ನೀಡಲು ಎಂದು ಮೃತ್ಯಂಜಯ ಮಂತ್ರ ಪಠಣ

ಧಾರವಾಡ : ನಗರದ ಉಳವಿ ಚೆನ್ನಬಸವೇಶ್ವರ ದೇವಸ್ಥಾನದಲ್ಲಿ ಧಾರವಾಡ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಮಹಾ ಮೃತ್ಯಂಜಯ ಮಂತ್ರ ಪಠಣ ಕಾರ್ಯಕ್ರಮ ನಡೆಯಿತು. ಪ್ರಧಾನ ಮಂತ್ರಿ ಗಳಾದ ನರೇಂದ್ರ ಮೋದಿ ಯವರ ದೀರ್ಘಾಯುಷ್ಯಕ್ಕಾಗಿ ಈ ಪಠಣ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಎಲ್ಲ ಬಿಜೆಪಿ ಕಾರ್ಯಕರ್ತರು ಭಾಗವಹಿಸಿ ಮಹಾ ಮೃತ್ಯುಂಜಯ ಮಂತ್ರ ಪಠಣ ಮಾಡಿ ನರೇಂದ್ರ ಮೋದಿ ಯವರಿಗೆ ದೇವರು ದೀರ್ಘಾಯುಷ್ಯ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

Read More »

ಪಂಚಮಸಾಲಿ ಹಿತ ಕಾಪಾಡುತ್ತಾರೋ ಅವರೇ ಮುಂದಿನ ಸಿಎಂ ಅಗುತ್ತಾರೆ

ಧಾರವಾಡ: ಈಗಾಗಲೇ ಪಂಚಾಮಸಾಲಿ ಮೀಸಲಾತಿ ಹೋರಾಟ ನಡೆಯುತ್ತಾ ಬಂದಿದೆ. ಇದರ ಕುರಿತು ಸದನದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ‌ ಅವರು ಕೂಡಾ ಧ್ವನಿ ಎತ್ತಿದ್ದಾರೆ. ಇವರ ಹೊರತು ಯಾರು ಕೂಡಾ ಸದನದಲ್ಲಿ ಮೀಸಲಾತಿ ವಿಚಾರವಾಗಿ ಧ್ವನಿ ಎತ್ತಿರಲಿಲ್ಲ. ಈಗ ನಮ್ಮ ಸಮುದಾಯವರೇ ಸಿಎಂ ಆಗಿದ್ದಾರೆ. ಅವರು ಸಮುದಾಯದ ಹಿತ ಕಾಪಾಡುತ್ತಾರೆ ಎಂದು ಅಂದುಕೊಂಡಿದ್ದೇವೆ, ನೋಡೋಣ. ಯಾರು ಬಹು ಸಂಖ್ಯಾತ ಸಮುದಾಯವಾದ ಪಂಚಮಸಾಲಿ ಹಿತ ಕಾಪಾಡುತ್ತಾರೋ ಅವರೇ ಮುಂದಿನ ಸಿಎಂ ಅಗುತ್ತಾರೆ …

Read More »

ಬಡವರ ಹಣ ತಿಂದವ ಪಿಶಾಚಿ ಇದ್ದಂತೆ : ಸಿ.ಎಂ.ನಿoಬಣ್ಣರವರ

ಕಲಘಟಗಿ: ಒಳ್ಳೆಯ ಅಧಿಕಾರಿಗಳು ಇದ್ದೇ ಇದ್ದಾರೆ, ಕಾಮಗಾರಿಗಳು ಗುಣಮಟ್ಟದ್ದಾಗಿರಲಿ, ರೈತರ ಆದಾಯ ದ್ವಿಗುಣಗೊಳಿಸಿ, ಗುಣಮಟ್ಟದ ಸಾಮಗ್ರಿಗಳನ್ನು ಒದಗಿಸಿ, ಕೃಷಿ ಮಂತ್ರಿಗಳು ಜಾರಿಗೆ ತರುವ ಯೋಜನೆಗಳನ್ನು ರೈತರಿಗೆ ತಲುಪಿಸಿ. ರೈತನಿಲ್ಲದಿದ್ದರೆ ನಾವ್ಯಾರು ಇಲ್ಲ ಎಂದು ಶಾಸಕ ಸಿ.ಎಂ.ನಿoಬಣ್ಣರವರ ಹೇಳಿದರು. ತಾಲೂಕು ಪಂಚಾಯತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಪಕ್ಷ ಬೇಧ ಮರೆತು ನೆರೆಹಾವಳಿಯಿಂದ ಬಿದ್ದ ಮನೆಗಳಿಗೆ ಶೀಘ್ರ ಪರಿಹಾರ ನೀಡಿ, ಕೆಲವೆಡೆ ಪರಿಹಾರಗಳು ಸರಿಯಾಗಿ ರೈತರಿಗೆ ತಲುಪುತ್ತಿಲ್ಲ ಎಂಬ ದೂರುಗಳು ಬಂದಿವೆ. …

Read More »

ಧಾರವಾಡ ಇತಿಹಾಸ ಹೇಗೆ ತಿರುಚಿದ್ದಾರೆ ಅನ್ನೋದು ನನಗೆ ಗೊತ್ತು : ಸಿಎಂ

ಧಾರವಾಡ: ರಾಜ್ಯ ಇತರೆ ಐತಿಹಾಸಿಕ ಸ್ಥಳಗಳ ಪುಸ್ತಕ ಸಹ ತರುತ್ತೇವೆ. ಸರಣಿ ಗ್ರಂಥವನ್ನು ತರಲಾಗುವುದು. ರಾಜಕಾರಣಕ್ಕಾಗಿ ಪಾದಯಾತ್ರೆ, ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್​ನವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸಮಾಡ್ತಾರೆ. ಇಂಥವರಿಂದ ಪಾಠ ಕಲಿಯಬೇಕಾದ ಅವಶ್ಯಕತೆ ನಮಗಿಲ್ಲ. ಸಿದ್ದರಾಮಯ್ಯ ಹೇಳಿದ್ದಕ್ಕೆಲ್ಲ ನಾನು ಉತ್ತರ ಕೊಡುವುದಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿದರು. ಇತಿಹಾಸ ತಿರುಚುವವರು ಹೆಚ್ಚಾಗಿದ್ದಾರೆ. ನೀವು ಚರಿತ್ರೆ ಒಂದು …

Read More »

ಧಾರವಾಡದಲ್ಲಿ ಇಬ್ಬರಿಗೆ ತಗುಲಿದ ಓಮಿಕ್ರಾನ್ ಸೋಂಕು

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಇಬ್ಬರಿಗೆ ಓಮಿಕ್ರಾನ್ ಸೋಂಕು ತಗುಲಿದ್ದು, ಇದರ ಜೊತೆಗೆ ಕೊರೊನಾ ಸೋಂಕು ಕೂಡ ನಿಧಾನವಾಗಿ ಏರುಗತಿಯಲ್ಲಿ ಸಾಗುತ್ತಿದ್ದು, ಜನತೆ ಎಚ್ಚರಿಕೆ ವಹಿಸಬೇಕು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 53 ವರ್ಷದ ಮಹಿಳೆ, 14 ವರ್ಷದ ಬಾಲಕಿಯಲ್ಲಿ ಓಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ. ಇಬ್ಬರೂ ಹುಬ್ಬಳ್ಳಿಯವರಾಗಿದ್ದಾರೆ. ಡಿ.17 ರಂದು ಒಬ್ಬರಿಗೆ ಹಾಗು ಡಿ.19 ರಂದು ಮತ್ತೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ಇಬ್ಬರೂ ಸೋಂಕಿತರು …

Read More »

ಚಿಗರಿ ಸೇವೆ ರಾತ್ರಿ 10 ಗಂಟೆಗೆ ಸ್ಥಗಿತ: ಇಯರ್ ಎಂಡ್‌ ಟಫ್ ರೂಲ್ಸ್

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದ ನಡುವೆ ತ್ವರಿತ ಸಾರಿಗೆ ಸೇವೆಯನ್ನು ಕಲ್ಪಿಸುತ್ತಿರುವ ಚಿಗರಿ ಸೇವೆಯನ್ನು ಬಿ.ಆರ್.ಟಿ.ಎಸ್ ವ್ಯವಸ್ಥಾಪಕರ ಹಾಗೂ ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ಇಂದು ರಾತ್ರಿ ಸಾರಿಗೆ ಸೇವೆಯನ್ನು ರಾತ್ರಿ 11 ಗಂಟೆಯನ್ನು ಪರಿಷ್ಕರಣೆಗೊಳಿಸಿ 10 ಗಂಟೆ ವರೆಗೆ ನಿಗದಿಪಡಿಸಲಾಗಿದೆ. ಹೌದು.. ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಿದ್ದು,‌ಅಲ್ಲದೇ ನೈಟ್ ಕರ್ಫ್ಯೂ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಯಾರೂ ಕೂಡ ನಿಯಮ ಉಲ್ಲಂಘನೆ ಮಾಡಬಾರದು ಎಂಬುವಂತ ಹಿನ್ನಲೆಯಲ್ಲಿ ಚಿಗರಿ ಸೇವೆಯನ್ನು 10 …

Read More »

ಕೊರಗ ಸಮುದಾಯದ ಮೇಲಿನ ಪೊಲೀಸರ ಪ್ರಕರಣ ಅಮಾನವೀಯ, ನಾಚಿಕೆಗೇಡಿನ ಸಂಗತಿ: ಸಿದ್ದರಾಮಯ್ಯ

ಬೆಂಗಳೂರು: ಕುಂದಾಪುರದ ಕೋಟ ತಟ್ಟುವಿನಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೆ ಈಡಾಗಿರುವ ಕೊರಗ ಸಮುದಾಯದ ಮೇಲೆ ಪೊಲೀಸರೇ ಪ್ರಕರಣ ದಾಖಲು ಮಾಡಿರುವುದು ನೋಡಿದರೆ ದೌರ್ಜನ್ಯ ಆಕಸ್ಮಿಕ ಅಲ್ಲ, ಯೋಜಿತ ಸಂಚಿನಂತೆ ಕಾಣುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಕೊರಗ ಸಮುದಾಯದ ಮೇಲೆ ಕೋಟ ಪೊಲೀಸರು ಪ್ರಕರಣ ದಾಖಲಿಸಿರುವುದು, ಅಮಾನವೀಯವಾದುದು ಮಾತ್ರವಲ್ಲ, ಅತ್ಯಂತ ನಾಚಿಕೆಗೇಡಿನ …

Read More »

ಧಾರವಾಡದ ಎಸ್‌ಡಿಎಂ ಬಳಿ‌ ಟೈರ್ ಬ್ಲಾಸ್ಟ್‌ ಆಗಿ ಕಾರು ಅಪಘಾತ-ತಪ್ಪಿದ ಭಾರಿ ಅನಾಹುತ

ಧಾರವಾಡ :ಕಾರೊಂದು ಅಪಘಾಕ್ಕಿಡಾದ ಪರಿಣಾಮ ಓರ್ವ ಮಹಿಳೆ ಗಾಯಗೊಂಡ ಘಟನೆ ಎಸಡಿಎಂ ಆಸ್ಪತ್ರೆಯ ಎದುರು ನಡೆದಿದೆ .ಬೆಳಗಾವಿ ಮೂಲದ ಶೋಯೇಬ್ ನಧಾಫ ಎಂಬುವವರಿಗೆ ಸೇರಿದ ಕಾರು ಇದಾಗಿದೆ. ಇದರಲ್ಲಿ ಮಹ್ಮದಲಿ ನದಾಫ್ ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದರು. ನವಲಗುಂದದ ಸಂಬಂಧಿಕರ ಗೃಹ ಪ್ರವೇಶ ಮುಗಿಸಿಕೊಂಡು ಧಾರವಾಡದ ಕಡೆ ಪ್ರಯಾಣ ಬೆಳೆಸಿದ್ದರು. ಆದರೆ ಎಸ ಡಿ ಎಂ ಆಸ್ಪತ್ರೆಯ ಎದುರು ಕಾರಿನ ಬಲಗಡೆಯ ಟಯರ್ ಬ್ಲಾಸ್ಟ್ ಆದ ಕಾರಣ ಬಲಬದಿಯ ರಸ್ತೆ ವಿಭಜಕಕ್ಕೆ …

Read More »