Breaking News

ಸಿಗರೇಟ್ ಹೊತ್ತಿಸಲು ಬೆಂಕಿ ಪೊಟ್ಟಣ ನೀಡದ್ದಕ್ಕೆ ಜಗಳ: ಯುವಕನ ಕೊಲೆಯಲ್ಲಿ ಅಂತ್ಯ

ನವದೆಹಲಿ: ಸಿಗರೇಟ್ ಹೊತ್ತಿಸಲು ಬೆಂಕಿ ಪೊಟ್ಟಣ ನೀಡದ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕೇಶವಪುರಂ ಪ್ರದೇಶದ ಮದ್ಯದಂಗಡಿ ಬಳಿ ನಡೆದ ಘಟನೆಯಲ್ಲಿ 30 ವರ್ಷದ ಭವಾನಿ ಮೃತಪಟ್ಟಿದ್ದು, ಆಶಾರಾಂ ಗಾಯಗೊಂಡಿದ್ದಾರೆ. ಬೆಂಕಿ ಪೊಟ್ಟಣ ಕೇಳಿದಾಗ ಮೂವರು ನಿರಾಕರಿಸಿದ್ದರಿಂದ ವಾಗ್ವಾದ ನಡೆದಿದ್ದು, ಬಳಿಕ ಆರೋಪಿಗಳು ಚಾಕುವಿನಿಂದ ಭವಾನಿ ಮತ್ತು ಆಶಾರಾಂ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಭವಾನಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನರೇಶ್ ಬಹದ್ದೂರ್ ಅಲಿಯಾಸ್ ನೇಪಾಳಿ (19), ತರುಣ್ ಹಾಗೂ ಓರ್ವ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಕೇಶವಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Share News

About BigTv News

Check Also

ಪತ್ನಿಯನ್ನು ಕತ್ತು ಹಿಸುಕಿ ಹತ್ಯೆಗೈದು ಇಡೀ ರಾತ್ರಿ ಶವದ ಪಕ್ಕದಲ್ಲೇ ಮಲಗಿದ್ದ ಪಾಪಿ ಪತಿ.!

ದೆಹಲಿ: ಮದ್ಯ ಸೇವಿಸುವುದನ್ನು ಪತ್ನಿ ವಿರೋಧಿಸಿದ್ದಕ್ಕೆ ಕೋಪಗೊಂಡ ಪತಿಯೊಬ್ಬ 32 ವರ್ಷದ ಗೀತಾ ಭಾಟಿ ಅವರನ್ನು ಕತ್ತು ಹಿಸುಕಿ ಹತ್ಯೆಗೈದ …

Leave a Reply

Your email address will not be published. Required fields are marked *