Breaking News

ದೆಹಲಿ

50ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಸಚಿವರು ಪಕ್ಷದ ನಾಯಕರ ಭೇಟಿ :ಡಿಕೆ ಶಿವಕುಮಾರ್

ನವದೆಹಲಿ:2024ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಸುಮಾರು 50 ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಸಚಿವರು ಇಂದು ನವದೆಹಲಿಯಲ್ಲಿ ಪಕ್ಷದ ನಾಯಕರನ್ನು ಭೇಟಿಯಾಗಲಿದ್ದಾರೆ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಕೆಸಿ ವೆಂಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಇತರರು ಭಾಗವಹಿಸುವ ಸಾಧ್ಯತೆಯಿದೆ. ಕರ್ನಾಟಕ ಡಿಸಿಎಂ …

Read More »

ರಾಜ್ಯಸಭೆ ಮಂಗಳವಾರ ತನ್ನ ಶಾಸಕಾಂಗ ಸಭೆಯಲ್ಲಿ ಆರು ಮಸೂದೆಗಳ ಪಟ್ಟಿ…

ನವದೆಹಲಿ: ರಾಜ್ಯಸಭೆ ಮಂಗಳವಾರ ತನ್ನ ಶಾಸಕಾಂಗ ಸಭೆಯಲ್ಲಿ ಆರು ಮಸೂದೆಗಳನ್ನು ಪಟ್ಟಿ ಮಾಡಿದೆ. ಅವುಗಳಲ್ಲಿ ಎರಡನ್ನು ಮಂಡಿಸಲಾಗುವುದು ಮತ್ತು ನಾಲ್ಕನ್ನು ಸಚಿವರ ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಪಟ್ಟಿ ಮಾಡಲಾಗಿದೆ. ಅವುಗಳಲ್ಲಿ ವಕೀಲರ (ತಿದ್ದುಪಡಿ) ಮಸೂದೆ 2023 ಮತ್ತು ಪ್ರೆಸ್ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆ 2023 ಅನ್ನು ಮಂಡಿಸಲು ಪಟ್ಟಿ ಮಾಡಲಾಗಿದೆ. ಮಧ್ಯಸ್ಥಿಕೆ ಮಸೂದೆ, 2021, ಬಹು – ರಾಜ್ಯ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ 2023, ಜೈವಿಕ ವೈವಿಧ್ಯ …

Read More »

ಶೀಘ್ರದಲ್ಲೇ ರೈತರಿಗೆ ಸಿಗಲಿದೆ ಪಿಎಂ ಕಿಸಾನ್ 14ನೇ ಕಂತು: ಇಲ್ಲಿದೆ ಡಿಟೇಲ್ಸ್!

ಕೇಂದ್ರ ಸರ್ಕಾರವು ದೇಶದ ಲಕ್ಷಗಟ್ಟಲೆ ರೈತರಿಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿಯನ್ನು ನೀಡಬಹುದು. ವಾಸ್ತವವಾಗಿ, ದೇಶದ ರೈತರಿಗೆ ಆರ್ಥಿಕ ಸಹಾಯಕ್ಕಾಗಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ. ಈ ಯೋಜನೆಯಡಿ ಇದುವರೆಗೆ 13ನೇ ಕಂತಿನವರೆಗೆ ರೈತರಿಗೆ ಲಾಭವಿದೆ. ಈಗ ರೈತರು PM ಕಿಸಾನ್ 14 ನೇ ಕಂತು ದಿನಾಂಕ 2023 ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಏತನ್ಮಧ್ಯೆ, 27 ಜುಲೈ 2023 ರಂದು, ರಾಜಸ್ಥಾನದ ಸಿಕಾರ್‌ನಲ್ಲಿನ ಕಾರ್ಯಕ್ರಮದಿಂದ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಪ್ರಾರಂಭಿಸಿದ …

Read More »

ಗಾಯಗೊಂಡಿದ್ದರೂ ಐಪಿಎಲ್​ ಟೂರ್ನಿಯನ್ನು ಮಾತ್ರ ತಪ್ಪಿಸಿಕೊಳ್ಳುವುದಿಲ್ಲ ಯಾಕೆ?:ಕಪಿಲ್​ ದೇವ್

ನವದೆಹಲಿ:ಅಷ್ಟೇನೂ ಶಕ್ತವಲ್ಲದ ವೆಸ್ಟ್​ ಇಂಡೀಸ್​ ವಿರುದ್ಧ ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ ಸೋಲು ಕಂಡಿದ್ದು, ಕ್ರಿಕೆಟ್​ ಅಭಿಮಾನಿಗಳ, ವಿಶ್ಲೇಷಕರ ಕೆಂಗಣ್ಣಿಗೆ ಗುರಿಯಾಗಿದೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ದರ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ. ಏಕದಿನ ಕ್ರಿಕೆಟ್​ ವಿಶ್ವಕಪ್​ ಮುಂದಿಟ್ಟುಕೊಂಡು ಇನ್ನೂ ಪ್ರಯೋಗ ನಡೆಸುತ್ತಿರುವ ತಂಡದ ಆಡಳಿತ ಮಂಡಳಿ ಮತ್ತು ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗರು ಹರಿಹಾಯ್ದಿದ್ದಾರೆ. 1983ರ ವಿಶ್ವಕಪ್​ ವಿಜೇತ ನಾಯಕ, ಮಾಜಿ ಕ್ರಿಕೆಟಿಗ ಕಪಿಲ್​ ದೇವ್​ ಭಾರತ ಕ್ರಿಕೆಟ್​ …

Read More »

ಆಗಸದ ಕೌತುಕ ಸೂಪರ್‌ಮೂನ್ ಆಗಸ್ಟ್​ 1ರಂದು ಗೋಚರ…!

ನವದೆಹಲಿ: ಆಗಸ ಸದಾ ಕೌತುಕದ ಕಣಜ. ಅಲ್ಲಿ ನಡೆಯುವ ಅನೇಕ ಬೆಳವಣಿಗೆಗಳು ನಮಗೆ ಅಚ್ಚರಿ ಮೂಡಿಸುತ್ತವೆ. ಅದೇ ರೀತಿಯ ಘಟನೆಗಳಿಗೆ ಆಗಸ್ಟ್​ ತಿಂಗಳು ಸಾಕ್ಷಿಯಾಗಲಿದೆ. ಆಗಸ್ಟ್​ನಲ್ಲಿ ಬಾನಂಗಳದಲ್ಲಿ ಎರಡು ಬ್ಲೂ ಮೂನ್​ ಕಾಣಿಸಿಕೊಳ್ಳುತ್ತಿದೆ.ಸಾಮಾನ್ಯ ಹುಣ್ಣಿಮೆಯಲ್ಲಿ ಹೊಳೆಯುವ ಚಂದ್ರ ಈ ಬಾರಿ ಸೂಪರ್‌ಮೂನ್​ನಲ್ಲಿ ಮತ್ತಷ್ಟು ಪ್ರಖರವಾಗಿ ಕಾಣಿಸಿಕೊಳ್ಳಲಿದ್ದಾನೆ. ವರ್ಷದ ಮೊದಲ ಸೂಪರ್‌ಮೂನ್​ ಜುಲೈನಲ್ಲಿ ಗೋಚರಿಸಿತ್ತು. ಆದರೀಗ ಒಂದೇ ತಿಂಗಳಲ್ಲಿ ಎರಡು ಸೂಪರ್‌ಮೂನ್ ಅನ್ನು ನೀವು ಆನಂದಿಸಬಹುದು. ಅಪರೂಪದ ವಿದ್ಯಮಾನ ವಿಜ್ಞಾನಿಗಳು ಹೇಳುವಂತೆ, …

Read More »

ಸತತ 9 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಸಯಾಮಿ ಮಕ್ಕಳನ್ನು ಯಶಸ್ವಿಯಾಗಿ ಬೇರ್ಪಡಿಸಿದ ವೈದ್ಯರು…

ನವದೆಹಲಿ :ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್​- AIIMS) ತಜ್ಞ ವೈದ್ಯರು ಸತತ 9 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಒಂದು ವರ್ಷದ ಸಯಾಮಿ ಮಕ್ಕಳನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿ ಮೂಲದ ದೀಪಿಕಾ ಮತ್ತು ಅಂಕುರ್ ಗುಪ್ತಾ ದಂಪತಿಗೆ ರಿದ್ಧಿ ಮತ್ತು ಸಿದ್ಧಿ ಎಂಬ ಅವಳಿ ಹೆಣ್ಣು ಮಕ್ಕಳು ಜನಿಸಿದ್ದರು. ಈ ಮಕ್ಕಳ ಎದೆ ಮತ್ತು ಹೊಟ್ಟೆ ಭಾಗಗಳು ಕೂಡಿಕೊಂಡಿದ್ದವು.ರಿದ್ಧಿ ಮತ್ತು ಸಿದ್ಧಿ ಸುಮಾರು …

Read More »

ವಿಶ್ವದ ಶೇ.70ರಷ್ಟು ಹುಲಿಗಳು ಭಾರತದಲ್ಲಿ ಇದೆ: ನರೇಂದ್ರ ಮೋದಿ

ನವದೆಹಲಿ:ಹುಲಿ ಸಂರಕ್ಷಣೆಯ ಉದ್ದೇಶದಿಂದ ಆರಂಭಿಸಲಾಗಿದ್ದ ‘ಹುಲಿ ಯೋಜನೆ’ ಇತ್ತೀಚೆಗಷ್ಟೇ 50 ವರ್ಷಗಳನ್ನು ಪೂರೈಸಿದೆ. ಈ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ವಿಶ್ವದ ಶೇ.70ರಷ್ಟು ಹುಲಿಗಳು ಭಾರತದಲ್ಲಿ ಕಂಡುಬರುವುದು ಸರ್ಕಾರದ ಉಪಕ್ರಮದ ಫಲಿತಾಂಶ ಎಂದು ಹೇಳಿದ್ದಾರೆ.ಇಂದು ಚೆನ್ನೈನಲ್ಲಿ ನಡೆದ ಜಿ 20 ಪರಿಸರ ಮತ್ತು ಹವಾಮಾನ ಸುಸ್ಥಿರತೆ ಸಚಿವರ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾತನಾಡಿದ ಪ್ರಧಾನಿ, ಪ್ರಾಜೆಕ್ಟ್ ಲಯನ್ ಮತ್ತು ಪ್ರಾಜೆಕ್ಟ್ ಡಾಲ್ಫಿನ್ ಯೋಜನೆ ಪ್ರಗತಿಯಲ್ಲಿದೆ ಎಂದು …

Read More »

ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವನ್ನಾಗಿ ಮಾಡುವ ಭರವಸೆ: ನರೇಂದ್ರ ಮೋದಿ

ನವದೆಹಲಿ : ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಮೂರನೇ ಅವಧಿಯ ಭರವಸೆಗಳ ನೀಲನಕ್ಷೆಯನ್ನು ಪ್ರಸ್ತುತಪಡಿಸುವ ಸಂದರ್ಭದಲ್ಲಿ ಪ್ರಸ್ತುತಕ್ಕಿಂತ ವೇಗದ ಬೆಳವಣಿಗೆಯೊಂದಿಗೆ ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವನ್ನಾಗಿ ಮಾಡುವ ಭರವಸೆ ನೀಡಿದರು.ಪ್ರಧಾನಿ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರವು ಮುಂದಿನ ವರ್ಷದ ಮೇ ತಿಂಗಳಲ್ಲಿ ತನ್ನ 10 ವರ್ಷಗಳನ್ನು ಪೂರೈಸಲಿದೆ. ಅಭಿವೃದ್ಧಿ ವಿಚಾರದಲ್ಲಿ ಮೂರನೇ ಅವಧಿಗೆ ಚುನಾವಣೆ …

Read More »

ಕೇಂದ್ರ ಸರ್ಕಾರದ ವಿರುದ್ಧ 17 ಪ್ರತಿಪಕ್ಷಗಳ ನಾಯಕರು ಸಾಂಕೇತವಾಗಿ ಕಪ್ಪು ಬಟ್ಟೆ ಧರಿಸಿ ಗುರುವಾರ ಒಗ್ಗಟ್ಟು ಪ್ರದರ್ಶನ…

ನವದೆಹಲಿ: ಮಣಿಪುರ ಹಿಂಸಾಚಾರ ವಿಚಾರವಾಗಿ ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಭಾರಿ ಗದ್ದಲ ನಡೆಯುತ್ತಿರುವ ನಡುವೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ 17 ಪ್ರತಿಪಕ್ಷಗಳ ನಾಯಕರು ಸಾಂಕೇತವಾಗಿ ಕಪ್ಪು ಬಟ್ಟೆ ಧರಿಸಿ ಗುರುವಾರ ಒಗ್ಗಟ್ಟು ಪ್ರದರ್ಶಿಸಿದ್ದಾರೆ.ಮಣಿಪುರ ಪರಿಸ್ಥಿತಿಯ ಕುರಿತು ಪ್ರಧಾನಿ ಮೋದಿಯವರು ಹೇಳಿಕೆ ನೀಡುವಂತೆ ಪಟ್ಟು ಹಿಡಿದಿರುವ ನಾಯಕರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೊಠಡಿಯಲ್ಲಿ ಸಭೆ ನಡೆಸಿ ಸಂಸತ್ತಿನ ಉಭಯ …

Read More »

ಭಾರತ ತಂಡದ 2023-24ರ ಸಾಲಿನ ತವರು ಸರಣಿಗಳ ವೇಳಾಪಟ್ಟಿ ಬಿಡುಗಡೆ!

ದೆಹಲಿ: ಭಾರತ ತಂಡದ 2023-24ರ ಸಾಲಿನ ತವರು ಸರಣಿಗಳ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಜುಲೈ 25 ರಂದು ಪ್ರಕಟಿಸಿದೆ. ಅಕ್ಟೋಬರ್‌ 5 ರಿಂದ ಭಾರತದ ಆತಿಥ್ಯದಲ್ಲಿ 2023ರ ಏಕದಿನ ವಿಶ್ವಕಪ್‌ ಟೂರ್ನಿ ಆರಂಭವಾಗಲಿದೆ. ಈ ಮಹತ್ವದ ಟೂರ್ನಿಗೆ ಇನ್ನೂ 3 ತಿಂಗಳುಗಳು ಮಾತ್ರ ಬಾಕಿ ಇವೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಭಾರತ ಮೂರು ಪಂದ್ಯಗಳ ಏಕದಿನ ಸರಣಿಗೆ ಆತಿಥ್ಯ ವಹಿಸಲಿದೆ. ಸೆಪ್ಟಂಬರ್‌ 22 ರಿಂದ ಈ …

Read More »