Breaking News

ಗಾಯಗೊಂಡಿದ್ದರೂ ಐಪಿಎಲ್​ ಟೂರ್ನಿಯನ್ನು ಮಾತ್ರ ತಪ್ಪಿಸಿಕೊಳ್ಳುವುದಿಲ್ಲ ಯಾಕೆ?:ಕಪಿಲ್​ ದೇವ್

ನವದೆಹಲಿ:ಅಷ್ಟೇನೂ ಶಕ್ತವಲ್ಲದ ವೆಸ್ಟ್​ ಇಂಡೀಸ್​ ವಿರುದ್ಧ ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ ಸೋಲು ಕಂಡಿದ್ದು, ಕ್ರಿಕೆಟ್​ ಅಭಿಮಾನಿಗಳ, ವಿಶ್ಲೇಷಕರ ಕೆಂಗಣ್ಣಿಗೆ ಗುರಿಯಾಗಿದೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ದರ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ. ಏಕದಿನ ಕ್ರಿಕೆಟ್​ ವಿಶ್ವಕಪ್​ ಮುಂದಿಟ್ಟುಕೊಂಡು ಇನ್ನೂ ಪ್ರಯೋಗ ನಡೆಸುತ್ತಿರುವ ತಂಡದ ಆಡಳಿತ ಮಂಡಳಿ ಮತ್ತು ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗರು ಹರಿಹಾಯ್ದಿದ್ದಾರೆ.

1983ರ ವಿಶ್ವಕಪ್​ ವಿಜೇತ ನಾಯಕ, ಮಾಜಿ ಕ್ರಿಕೆಟಿಗ ಕಪಿಲ್​ ದೇವ್​ ಭಾರತ ಕ್ರಿಕೆಟ್​ ತಂಡದ ಹಿರಿಯ ಆಟಗಾರರೂ ಮತ್ತು ಬಿಸಿಸಿಐ ನೀತಿಯನ್ನು ಅಲ್ಲಗಳೆದಿದ್ದಾರೆ. “ನಿಮಗೆ ಟೀಂ ಇಂಡಿಯಾಕ್ಕಿಂತಲೂ ಐಪಿಎಲ್​ ಮುಖ್ಯವಾಯಿತೇ?. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ಯಾಕೆ” ಎಂದು ಪ್ರಶ್ನಿಸಿದ್ದಾರೆ.ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಟೀಂ ಇಂಡಿಯಾ ಬಗ್ಗೆ ಅಸಮಾಧಾನ ವ್ಯಕ್ತಪಡಿರುವ ಲೆಜೆಂಡರಿ ಕ್ರಿಕೆಟರ್​, “ಹಣದ ಹೊಳೆ ಹರಿಸುವ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ (ಐಪಿಎಲ್​) ಗಾಯಗೊಂಡರೂ ಲೆಕ್ಕಿಸದೇ ಭಾಗವಹಿಸುತ್ತೀರಿ. ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಸಣ್ಣ ಸಮಸ್ಯೆಯಾದರೂ ವಿಶ್ರಾಂತಿ ಬಯಸಿ ತಂಡದಿಂದ ಹೊರಗುಳಿಯುತ್ತೀರಿ. ನಿಮಗೆ ಆಟದ ಮೇಲೆ ಬದ್ಧತೆ ಇದೆಯೇ?” ಎಂದು ಹಿರಿಯ ಆಟಗಾರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರು.

“ಕ್ರಿಕೆಟ್​ನಲ್ಲಿ ಗಾಯ ಸಹಜ. ಹಾಗಂತ ಮಹತ್ವದ ಪಂದ್ಯಗಳಲ್ಲಿ ನೆಪ ಹೇಳಿ ಟೂರ್ನಿಯಿಂದ ಹೊರಗುಳಿಯುತ್ತೀರಿ. ಗಾಯಗೊಂಡಿದ್ದರೂ ಐಪಿಎಲ್​ ಟೂರ್ನಿಯನ್ನು ಮಾತ್ರ ತಪ್ಪಿಸಿಕೊಳ್ಳುವುದಿಲ್ಲ. ಆಗ ನಿಮಗೆ ನೆನಪಾಗುವುದಿಲ್ಲವಾ?. ಟೀಂ ಇಂಡಿಯಾ ಪರವಾಗಿ ಬದ್ಧತೆಯಿಂದ ಆಡುವ ಆಟಗಾರರು ಕಡಿಮೆಯಾಗಿದ್ದಾರೆ. ಇದನ್ನು ನಾನು ಬಹಿರಂಗವಾಗಿ ಹೇಳುತ್ತಿದ್ದೇನೆ” ಎಂದು ಕಿಡಿಕಾರಿದ್ದಾರೆ.

Share News

About BigTv News

Check Also

Featured Video Play Icon

ಹುಬ್ಬಳ್ಳಿ : ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ: ತಹಶೀಲ್ದಾರ ಕಲಗೌಡ ಪಾಟೀಲ..!

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಂತಕ ರಿತೇಶಕುಮಾರ್ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ …

Leave a Reply

Your email address will not be published. Required fields are marked *