Breaking News

ಧಾರವಾಡ

ಆಮ್ ಆದ್ಮ ಅಭ್ಯರ್ಥಿ ಪಟ್ಟಿ ಬಿಡುಗಡೆ

ಹುಬ್ಬಳ್ಳಿ: ಮುಂದಿನ ವಿಧಾನಸಭಾ ಚುನಾವಣೆಗೆ ಆಮ್ ಆತ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಧಾರವಾಡ ಜಿಲ್ಲೆಯ ಮೂರು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಎಎಪಿ ಪಕ್ಷದ ಮುಖಂಡ ಅನಂತಕುಮಾರ್ ಬುಗಡಿ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ವಿಕಾಸ ಸೊಪ್ಪಿನ, ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರಕ್ಕೆ ಬಸವರಾಜ ತೆರದಾಳ, ಕಲಘಟಗಿ ಕ್ಷೇತ್ರಕ್ಕೆ ಮಂಜುನಾಥ ಜಕ್ಕಣ್ಣನವರ ಅವರನ್ನು ಆಯ್ಕೆ …

Read More »

ಮಹಿಳಾ ಸಮಾವೇಶಕ್ಕೆ ನಟಿ ತಾರಾ, ಸಚಿವೆ ಶೋಭಾ ಕರಂದ್ಲಾಜೆ ಆಗಮನ

ಧಾರವಾಡ: ಕಡಪಾ ಮೈದಾನದಲ್ಲಿ ಮಹಿಳಾ ಮೋರ್ಚಾದಿಂದ ಮಹಿಳಾ ಸಮಾವೇಶ. ಮಹಿಳಾ ಯೋಜನೆಗಳನ್ನು ತಿಳಿಸಲು ಈ ಸಮಾವೇಶ ಹಮ್ಮಿಕೊಂಡಿದ್ದು , ಸಮಾವೇಶಕ್ಕೆ ನಟಿ ತಾರಾ, ಸಚಿವೆ ಶೋಭಾ ಕರಂದ್ಲಾಜೆ ಭಾಗಿಯಾಗಲಿದ್ದಾರೆ. ಮಹಿಳಾ ಮತಗಳನ್ನು ಸೆಳೆಯಲು ಬಿಜೆಪಿಯಿಂದ ಪ್ಲ್ಯಾನ್ ಮಾಡಿದ್ದು, ಸಮಾವೇಶಕ್ಕೆ ಸಾವಿರಾರು ಮಹಿಳೆಯರು ಭಾಗಿಯಾಗುವ ಸಾಧ್ಯತೆ ಇದೆ.

Read More »

ಸಿದ್ದರಾಮಯ್ಯಗೆ ಕ್ಷೇತ್ರ ಸಿಗದಂತಹ ಪರಿಸ್ಥಿತಿ-ಸಚಿವ ಪ್ರಹ್ಲಾದ್ ಜೋಶಿ

ಧಾರವಾಡ: ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಈಗ ಕೋಲಾರ ಕ್ಷೇತ್ರ ಬಿಟ್ಟು ವರುಣಾದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಅವರಿಗೆ ಕ್ಷೇತ್ರವೇ ಸಿಗಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು, ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ವ್ಯಂಗ್ಯವಾಡಿದರು.ಸಿದ್ದರಾಮಯ್ಯನವರಿಗೇ ಕ್ಷೇತ್ರ ಸಿಗಲಾರದಂತಹ ಸ್ಥಿತಿ ನಿರ್ಮಾಣವಾಗಿರುವಾಗ ಜನರು ಆ ಪಕ್ಷದ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಸಿ.ಟಿ.ರವಿ ಅವರು ಲಿಂಗಾಯತರ ಬಗ್ಗೆ ಹೇಳಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, …

Read More »

ಕನ್ನಡ ವಿರೋಧಿಗಳ ವಿರುದ್ದ ಸೆಟೆದು ನಿಂತಿದ್ದು ನಂಜೇಗೌಡ- ಶೋಭಾ ಕರಂದ್ಲಾಜೆ

ಹುಬ್ಬಳ್ಳಿ: ಉರಿಗೌಡ ನಂಜೇಗೌಡ ಧರ್ಮದ ಉಳುವಿಗಾಗಿ ಮತ್ತು ಹಿಂದೂಗಳ ನರಮೇಧ ಖಂಡಿಸಿ ಹೋರಾಟ ಮಾಡಿದವರು. ಉರಿಗೌಡ ನಂಜೇಗೌಡ ಬಗ್ಗೆ ನಮ್ಮ ಕರ್ನಾಟಕಕ್ಕೆ ಹಾಗೂ ನಮ್ಮ ಸಮಾಜಕ್ಕೆ ಹೆಮ್ಮೆ ಇದೆ. ಕೊಡವರ ನರಮೇಧ ಮಾಡಿದ ಮತ್ತು ಹಿಂದೂಗಳನ್ನ ಕೊಂದು ಹಾಕಿದ ಕನ್ನಡ ವಿರೋಧಿ ಟಿಪ್ಪು. ಅಂತವರ ವಿರುದ್ದ ಸೆಟೆದು ನಿಂತಿದ್ದು ಉರಿಗೌಡ ನಂಜೇಗೌಡ ‌‌ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಇನ್ನೂ ಸುಮರ್ಣ ಮಂಡ್ಯ ಪುಸ್ತಕವನ್ನು 2006 ರಲ್ಲಿ …

Read More »

ಬಿಜೆಪಿ ಸರ್ಕಾರ ದೇಶವನ್ನು ಗೂಂಡಾ ರಾಜ್ಯವನ್ನಾಗಿ ಮಾಡುವ ಸರ್ಕಾರ -ಸಲೀಂ ಅಹ್ಮದ

ಹುಬ್ಬಳ್ಳಿ: ಡಬಲ್ ಇಂಜಿನ್ ಬಿಜೆಪಿ ಸರ್ಕಾರ ರೌಡಿಗಳನ್ನು ಪೋಷಿಸುವ ಹಾಗೂ ದೇಶವನ್ನು ಗೂಂಡಾ ರಾಜ್ಯವನ್ನಾಗಿ ಮಾಡುವ ಸರ್ಕಾರ. ಕ್ರಿಮಿನಲ್ ಗಳನ್ನು ಪ್ರಧಾನಮಂತ್ರಿ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರು ಕೈ ಮುಗಿಯುವಂತೆ ಮಾಡಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ. ಬಿಜೆಪಿ ಸುಮಾರು 23 ಸಾವಿರ ರೌಡಿಗಳಿಗೆ ಕ್ಲೀನ್ ಚೀಟ್ ಕೊಡುವ ಮ‌ೂಲಕ ದೇಶವನ್ನು ಹಾಳು ಮಾಡಲು ಹೊರಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ ಹೇಳಿದರು. ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, …

Read More »

ಜ್ಯುವೇಲರಿ ಪ್ರದರ್ಶನ ಮತ್ತು ಮಹಿಳೆಯರಿಗೂ ಇಷ್ಟವಾಗುವಂತಹ.

ಹುಬ್ಬಳ್ಳಿ: ಓರ್ರಾ‌ ಫೈನ್ ಜ್ಯುವೇಲರಿ ವತಿಯಿಂದ ನಗರದ ಕೊಪ್ಪಿಕರ ರಸ್ತೆಯಲ್ಲಿರುವ ಮೆಟ್ರೋಪಾಲಿಸ್ ಹೊಟೇಲ್ ನಲ್ಲಿ ಆಯೋಜಿಸಲಾಗಿದ್ದ ಜ್ಯುವೇಲರಿ ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟನೆಯನ್ನು ಫ್ಯಾಶನ್ ಡಿಸೈನರ್ ಫಿರಡೋಸ್ ಹನ್ಸಿ ಹಾಗೂ ಕಿಮ್ಸ್ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕಿ ಡಾ. ವೀಣಾ ಕಾರಟಗಿ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಓರ್ರಾ ಫೈನ್ ಜ್ಯುವೇಲರಿ ಅವರು ಹುಬ್ಬಳ್ಳಿಯಲ್ಲಿ ಆಕರ್ಷಕ ಆಭರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಕೊಂಡಿದ್ದು ಖುಷಿಯ ಸಂಗತಿಯಾಗಿದೆ. ವೈವಿಧ್ಯಮಯ …

Read More »

ದಕ್ಷಿನ ಕನ್ನಡದಲ್ಲಿ ಆಝಾನ್ ಬಗ್ಗೆ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

ಮಂಗಳೂರಿನ ಕಾವೂರಿನಲ್ಲಿ ಬಿಜೆಪಿ ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಷಣ ಮಧ್ಯೆ ಆರಂಭವಾದ ಆಝಾನ್‍ಗೆ ಮಾಜಿ ಸಚಿವ ಈಶ್ವರಪ್ಪ ಕೋಪಗೊಂಡ ಘಟನೆ ನಡೆದಿದೆ. ಈಶ್ವರಪ್ಪನವ್ರು ಭಾಷಣ ಮಾಡ್ತಿದ್ದಾಗ ಸ್ಥಳೀಯ ಮಸೀದಿಯಿಂದ ಆಝಾನ್ ಕೇಳಿಬಂತು. ಇದಕ್ಕೆ ಸಿಟ್ಟಾದ ಈಶರಪ್ಪ ನನಗೆ ಎಲ್ಲಿ ಹೋದ್ರು ಇದೊಂದು ತಲೆನೋವು. ಮೈಕ್ ನಲ್ಲಿ ಕೂಗಿದ್ದಲ್ಲಿ ಮಾತ್ರವೇ ಅಲ್ಲಾಗೆ ಕಿವಿ ಕೇಳೋದಾ ಅಂತ ಹೇಳಿದ್ರು. ಸುಪ್ರೀಂ ಕೋರ್ಟ್ ಆದೇಶವಿದ್ದು, ಇಂದಲ್ಲ ನಾಳೆ ಇದು ಖತಂ ಆಗಲಿದೆ. ಇದರಲ್ಲೇನು ಅನುಮಾನ …

Read More »

ನಿವೃತ್ತ ನೌಕರರ ಜೀವನದ ಜೊತೆ ಸರ್ಕಾರದ ಚೆಲ್ಲಾಟ

ಹುಬ್ಬಳ್ಳಿ: ಸರ್ಕಾರ ಸಾರಿಗೆ ಇಲಾಖೆ ನೌಕರರ ಬೇಡಿಕೆ ಇಡೇರಿಸುದಿರಲಿ, ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾದವರಿಗೂ ಗ್ರ್ಯಾಚುಟಿ ಹಣ ಕೊಟ್ಟಿಲ್ಲ. ಸಾರಿಗೆ ಇಲಾಖೆಯ ನಡುವಳಿಕೆಯಿಂದ ಬೇಸತ್ತು ಸಾರಿಗೆ ನಿವೃತ್ತ ನೌಕರನೋರ್ವ ಇದೀಗ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾನೆ‌. ಒಂದು ಕಡೆ ಸರ್ಕಾರಕ್ಕೆ ಶಾಪ ಹಾಕ್ತಿರೋ ನಿವೃತ್ತ ಸಾರಿಗೆ ನೌಕರ.. ಇನ್ನೊಂದು ಕಡೆ ನಿವೃತ್ತಿ ನಂತರದ ಗ್ರ್ಯಾಚುಟಿ ಹಣಕ್ಕಾಗಿ ಮೋದಿಗೆ ಬರೆದಿರೋ ಪತ್ರ. ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. ಗೋಕುಲ್ ರಸ್ತೆಯ …

Read More »

ಆಟೋ-ಲಾರಿ ಡಿಕ್ಕಿ ಸ್ಥಳದಲ್ಲಿಯೇ ಆಟೋ ಚಾಲಕನ ಸಾವು

ವಿಜಯಪುರ: ನಗರದ ಹೊರವಲಯದ ರಿಂಗ್ ರೋಡ್ ರಸ್ತೆಯಲ್ಲಿ, ಆಟೋ ಹಾಗೂ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಆಟೋ ಚಾಲಕ ಸ್ಥಳದಲ್ಲಿ ಅಸುನೀಗಿರುವ ಘಟನೆ ಮಂಗಳವಾರ ನಡೆದಿದೆ. ಅಪಘಾತದಲ್ಲಿ ಆಟೋ ಚಾಲಕ ಸಾವನ್ನಪ್ಪಿದ್ದಾನೆ. ಆದ್ರೆ, ಮೃತಪಟ್ಟಿರುವ ಚಾಲಕನ ಹೆಸರು, ಮಾಹಿತಿ ಲಭ್ಯವಾಗಿಲ್ಲ. ಅಲ್ಲದೇ, ಲಾರಿ ಚಾಲಕ ಸ್ಥಳದಲ್ಲಿ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಜಯಪುರ ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Read More »

ಖಾಕಿ ಕಡಕ್ ಬಂದೋಬಸ್ತ್ ಏರಪೋರ್ಟ್ ನಲ್ಲಿಯು ಹೈ ಅಲರ್ಟ್

ಹುಬ್ಬಳ್ಳಿ: ಧಾರವಾಡ ಜಿಲ್ಲೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್. ಮಂಡ್ಯದಿಂದ ಹುಬ್ಬಳ್ಳಿ ಏರಪೋರ್ಟ್ ಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲ ರೀತಿಯ ಪರಿಶೀಲನೆ ನಡೆಸಿ, ಏರಪೋರ್ಟ್ ನಲ್ಲಿ ಟೈಟ್ ಸೆಕ್ಯೂರಿಟಿ ನಿಯೋಜನೆ ಮಾಡಿದ್ದು, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ನಿಂದ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಸದ್ಯ ಏರಪೋರ್ಟ್ ಡಿಸಿಪಿ, ಪೊಲೀಸ್ ಇನ್ಸಪೆಕ್ಟರ್, ಸೇರಿ ಸುಮಾರು 200ಕ್ಕೂ ಅಧಿಕ ಪೊಲೀಸ್ …

Read More »