Breaking News

ಹುಬ್ಬಳ್ಳಿ-ಧಾರವಾಡ

ಮಾ. 25ಕ್ಕೆ ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ಮೋದಿ ಆಗಮನ

ಚಿಕ್ಕಬಳ್ಳಾಪುರ: ಸತ್ಯಸಾಯಿ ಲೋಕಸೇವಾ ಸಂಸ್ಥೆ 350 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಖಾಸಗಿ ಮೆಡಿಕಲ್ ಕಾಲೇಜು ಉದ್ಘಾಟನೆ ನಿಮಿತ್ತ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸಲಿದ್ದಾರೆ. ಸತ್ಯಸಾಯಿ ಗ್ರಾಮದಲ್ಲಿ ವಿನೂತನ ಶೈಲಿಯಲ್ಲಿ 350 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗಿದೆ. ಕಟ್ಟಡಕ್ಕೆ ಶ್ರೀ ಸತ್ಯಸಾಯಿ ರಾಜೇಶ್ವರಿ ಕಟ್ಟಡ ಎಂದು ನಾಮಕರಣ ಮಾಡಲಾಗಿದೆ. ಮೆಡಿಕಲ್ ಕಾಲೇಜು ಆರಂಭಕ್ಕೆ ಅನುಮತಿ ನೀಡಲಾಗಿದೆ. ಇದರಿಂದ ಎಲ್ಲ ಅಂದುಕೊಂಡಂತೆ ಆದರೆ 2023-24ರಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ …

Read More »

ಪ್ರಕೃತಿಯ ನಿರ್ಲಕ್ಷ್ಯ: ಕಾಂಕ್ರಿಟ್ ಕಾಡುಗಳ ನಿರ್ಮಾಣ

ಹುಬ್ಬಳ್ಳಿ: ನಮ್ಮ ಜೀವನದ ಅಸ್ತಿತ್ವ ಮತ್ತು ಸುಸ್ಥಿರತೆಯು ನಮ್ಮ ಪರಿಸರದಿಂದ ಮಾತ್ರ ಸಾಧ್ಯ. ಆದರೆ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳು ವೇಗವಾಗಿ ಬೆಳೆಯುತ್ತಿದ್ದರೆ, ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನೃಪತುಂಗ ಬೆಟ್ಟದಲ್ಲಿ ಮರಗಳ ಮಾರಣ ಹೋಮವಾಗುತ್ತಿದೆ. ನಗರಗಳು ಬೆಳೆದಂತೆ ಜನರಿಗೆ ಶುದ್ಧ ಗಾಳಿ ಸಿಗುತ್ತಿಲ್ಲ. ಮರಗಳನ್ನು ಕಡಿದು ಕಾಂಕ್ರಿಟ್ ಕಾಡುಗಳನ್ನು ನಿರ್ಮಿಸಲಾಗುತ್ತಿದೆ. ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಸುಂದರವಾದ ಬೆಟ್ಟವೆಂದು ಕರೆಯುವ ನೃಪತುಂಗ ಬೆಟ್ಟವೊಂದಿದೆ. ಈ ಬೆಟ್ಟದಲ್ಲಿ ಪ್ರಾಕೃತಿಕವಾಗಿ ಸಾವಿರಾರು ಸಂಖ್ಯೆಯಲ್ಲಿ …

Read More »

ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾದ ಬಸವರಾಜ ಮಲಕಾರಿ ಅವರಿಂದಾ ಯುವಕರಿಗೆ ಕ್ರೀಡಾ ಮಹತ್ವ

ಹುಬ್ಬಳ್ಳಿ-ಧಾರವಾಡ: ಕ್ರೀಡೆಗಳನ್ನು ಆಡುವುದರಿಂದಾ ಜವಾಬ್ದಾರಿ, ನಾಯಕತ್ವ ಮತ್ತು ಆತ್ಮವಿಶ್ವಾಸದಿಂದ ಕೆಲಸ ಮಾಡಲು ಕಲಿಯುವಂತಹ ಕೌಶಲ್ಯಗಳನ್ನು ಬೇಳೆಯುತ್ತವೆ. ದೇಹವನ್ನು ಪೋಷಿಸಲು ಆರೋಗ್ಯಕರ ಪೋಷಕಾಂಶಗಳ ಆಹಾರ ಅಗತ್ಯವಿರುವಂತೆ, ಕ್ರೀಡೆಗಳನ್ನು ಆಡುವುದು ನಮ್ಮ ಜೀವನವನ್ನು ವಿಶೇಷವಾಗಿ ಬೆಳೆಯುವ ಮಕ್ಕಳಿಗೆ ಮಹತ್ತರವಾದ ಮಹತ್ವವನ್ನು ಹೊಂದಿದೆ. ಹುಬ್ಬಳ್ಳಿ ಧಾರವಾಡ ಪಶ್ಚಿಮ 74 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂಬರ್ ೧೩ ರಲ್ಲಿ ಕರ್ನಾಟಕ ಯುನಿವರ್ಸಿಟಿ ಮೈದಾನದಲ್ಲಿ ವಾರ್ಡ್ ನಂಬರ್ 19 ವಾರ್ಡ್ ನಂಬರ್ 20ರ ಯುವಕರಿಗೆ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಮಾತನಾಡಿದ ಹುಬ್ಬಳ್ಳಿ ಧಾರವಾಡ …

Read More »

ಹೋಳಿ ಹಬ್ಬದಲ್ಲಿ ಅಹಿತಕರ ಘಟನೆಗಳಿಗೆ ಸೂಕ್ತ ಕಾನೂನು ಕ್ರಮ- ಹು-ಧಾ ಪೊಲೀಸ್ ಖಡಕ್ ಎಚ್ಚರಿಕೆ

ನಗರದ ಕಾರವಾರ ರಸ್ತೆಯಲ್ಲಿರುವ ಸಿಎಆರ್ ಮೈದಾನದಲ್ಲಿ ಹು-ಧಾ ನಗರ ಪೊಲೀಸ್ ಕಮೀಷನರೇಟ್ ಘಟಕದ ವತಿಯಿಂದ ಹೋಳಿ ಹಬ್ಬದ ಅಂಗವಾಗಿ ಸಾರ್ವಜನಿಕ ಶಾಂತಿ ಸೌಹಾರ್ದ ಸಭೆ ನಡೆದಿದ್ದು, ಹೋಳಿ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೇ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು https://fb.watch/j5CCsO6CDl/?mibextid=RUbZ1f ಎಂದು ಹು-ಧಾ ಪೊಲೀಸ್ ಆಯುಕ್ತರಾದ ರಮನ್ ಗುಪ್ತಾ ಖಡಕ್ ಎಚ್ಚರಿಕೆ ನೀಡಿದ್ದಾರೆ. ಎಲ್ಲಾ ಹಬ್ಬಗಳು ಉತ್ತಮ ಸಂದೇಶಗಳನ್ನು ಕೊಡುತ್ತವೆ. ಹೀಗಾಗಿ ಎಲ್ಲಾ ಹಬ್ಬಗಳನ್ನು ಎಲ್ಲರೂ ಆಚರಿಸೋಣ. …

Read More »

ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಸೇವೆ: ಸಿಎಂ ಬೊಮ್ಮಾಯಿ

ಬೆವಿಕಂ ವ್ಯಾಪ್ತಿಯ ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆ ಜಿಲ್ಲೆ, ಕಚೇರಿ ಕಟ್ಟಡಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನರವೇರಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸುಮಾರು 16 ಸಾವಿರ ಕೋಟಿ ರೂ.ಗಳ ವಿದ್ಯುತ್ ಸಬ್ಸಿಡಿಯನ್ನು ನೀಡಿದ್ದರೂ ಎಸ್ಕಾಂಗಳು ಸಾಲದಲ್ಲಿದೆ ಎಂದರು. ಕಳೆದ ಒಂದೂವರೆ ವರ್ಷದಲ್ಲಿ ಇಂಧನ ಕ್ಷೇತ್ರಕ್ಕೆ 9 ಸಾವಿರ ರೂ.ಗಳನ್ನು ನೀಡಲಾಗಿದೆ. ಎಸ್ಕಾಮ್ ಹಾಗೂ ಕರ್ನಾಟಕ ವಿದ್ಯುತ್ ನಿಗಮಕ್ಕೆ …

Read More »

H3N2 ವೈರಸ್‌ ಸೋಂಕು: ಜನರಿಗೆ ಮುನ್ನೆಚ್ಚರಿಕೆ

ಎಚ್‌3ಎನ್‌2 ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ, ತಾಂತ್ರಿಕ ಸಮಿತಿ ಹಾಗೂ ಹಿರಿಯ ಅಧಿಕಾರಿಗೊಳೊಂದಿಗೆ ಸಚಿವರು ಸಭೆ ನಡೆದಿದ್ದು, H3N2 ವೈರಸ್‌ ಸೋಂಕುಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿಲ್ಲ. ಎಲ್ಲಾ ಆಸ್ಪತ್ರೆಗಳ ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕೆಂದು ಸೂಚನೆ ನೀಡಿ ಆದೇಶ ಹೊರಡಿಸಲಾಗುವುದು. ಹಾಗೆಯೇ ಜನರು ಮುನ್ನೆಚ್ಚರಿಕೆ ವಹಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇನ್‌ಫ್ಲುಯೆಂಜಗೆ …

Read More »

ಬಿಜೆಪಿ ರಥಯಾತ್ರೆ ಪ್ರಾರಂಭ ಮಧ್ಯದಲ್ಲಿಯೇ ಮೊಟಕು

ಬಿಜೆಪಿ ರಥಯಾತ್ರೆ ಪ್ರಾರಂಭವಾಗಿದ್ದು, ಅಶೋಕ್ ಮತ್ತು ಸೋಮಣ್ಣ ಮಧ್ಯೆ ಗೊಂದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ನಾಯಂಡನಹಳ್ಳಿವರೆಗೂ ಸಾಗದೇ ರಥಯಾತ್ರೆ ಮಧ್ಯದಲ್ಲಿಯೇ ಮೊಟಕುಗೊಂಡಿದೆ. ನಾಗರಭಾವಿಯಿಂದ ನಾಯಂಡಹಳ್ಳಿ ವರೆಗೂ ರಥಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಆದರೆ ನಾಯಂಡಹಳ್ಳಿವರೆಗೂ ರಥಯಾತ್ರೆಯಲ್ಲಿ ತೆರಳಲು ಸಾಧ್ಯವಿಲ್ಲವೆಂದು ಅಶೋಕ್ ನಿರಾಕರಿಸಿ ಯಾತ್ರೆಯಿಂದ ಹೊರಹೊರಟರು. ಅಶೋಲ್ ಹೋದ‌ ಹಿನ್ನೆಲೆಯಲ್ಲಿ ಕೋಪಗೊಂಡು ಸೋಮಣ್ಣನವರು ನಾಗರಬಾವಿಯಲ್ಲೆ ಯಾತ್ರೆ ಮೊಟಕುಗೊಳಿಸಿ, ತಮ್ಮ ಕ್ಷೇತ್ರದಲ್ಲಿ ಸಾಗುತ್ತಿದ್ದ ರಥಯಾತ್ರೆ ವಾಹನ ಬಿಟ್ಟು ಕಾರಿನಲ್ಲಿ ತೆರಳಿದ್ದಾರೆ.

Read More »

ಪತ್ರಕರ್ತರ ಸಂಘದಿಂದಾ ಪ್ರತಿಭಟನೆ, ಸರ್ಕಾರಕ್ಕೆ ಎಚ್ಚರಿಕೆ

ಹುಬ್ಬಳ್ಳಿ: ನಗರದ ಮಿನಿ ವಿಧಾಸೌಧ ಕಚೇರಿ‌ ಮುಂಭಾಗದಲ್ಲಿ ಪ್ರತಿಭಟಿಸಿದ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಮಾಧ್ಯಮ ಅಕಾಡೆಮಿಯಿಂದ ಕೊಡಮಾಡುವ ನಾಲ್ಕು ವರ್ಷಗಳ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು, ಆಯಾ ಪುರಸ್ಕೃತರು ಕೆಲಸ ಮಾಡುತ್ತಿರುವ ಜಿಲ್ಲೆಯ ಹೆಸರಿನ ಜೊತೆಗೆ ಮರುಪ್ರಕಟಿಸಬೇಕು. ಇಲ್ಲವಾದರೆ ನಾವು ಮಾರ್ಚ್ 13ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ತಹಶೀಲ್ದಾರರ ಮೂಲಕ‌ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮಾಧ್ಯಮ ಅಕಾಡೆಮಿ ಸದ್ಯ …

Read More »

ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದ ಕೂಪವಾಗಿದೆ- ಸಿಎಂ

ಕಾಂಗ್ರೆಸ್‌ನಿಂದ ಮಾರ್ಚ್ 9ರಂದು ಕರ್ನಾಟಕ ಬಂದ್ ಕರೆ ವಿಚಾರವಾಗಿ ಹುಬ್ಬಳ್ಳಿ ನಿವಾಸದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದ ಕೂಪವಾಗಿದೆ. ಕಾಂಗ್ರೆಸ್ಸಿನ ಕೈ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬಿಸ್ಕೆಟ್, ಕಾಫಿಯಲ್ಲೂ ಭ್ರಷ್ಟಾಚಾರ ಬಿಟ್ಟಿಲ್ಲ. ಎಂ.ಬಿ.ಪಾಟೀಲ್, ಜಾರ್ಜ್, ಮಹದೇವಪ್ಪಗೆ ಕೇಳಬೇಕು ಸಿದ್ದರಾಮಯ್ಯ ಎಷ್ಟೆಲ್ಲ ಟಾರ್ಗೆಟ್ ಕೊಟ್ಟಿದ್ದರು ಅಂತ. ಭ್ರಷ್ಟಾಚಾರದ ಕೂಪದಲ್ಲಿ ಇರುವವರು ಆಪಾದನೆ ಮಾಡಿದರೆ ನಡೆಯಲ್ಲ. ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ …

Read More »

ವಿದ್ಯುತ್ ತಂತಿ ತಗಲೀ ಎರಡು ಆಕಳುಗಳ ಸಾವು

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮದಲ ಮಟ್ಟಿ ಗ್ರಾಮದಲ್ಲಿ ದನದ ಕೊಟ್ಟಿಗೆಗೆ ವಿದ್ಯುತ್ ತಂತಿ ತಗಲೀ ಸುಟ್ಟು ಕರಕಲಾಗಿ ಎರಡು ಜರ್ಸಿ ಆಕಳು ಸಾವನ್ನಪ್ಪಿದ್ದಾವೆ. ಸುಮಾರು ಬೆಳಗ್ಗೆ 12 ಗಂಟೆಗೆ ಬರಮಪ್ಪ ಬುಜುಬಲಿ ತಬ್ಗೊಂಡ ಎಂಬುವವರ ದನದ ಕೊಟ್ಟಿಗೆಗೆ ವಿದ್ಯುತ್ ಕಂಬದಿಂದ ಕಿಡಿಹಾರಿ ಕೆಳಗಡೆ ಇದ್ದ ಕಬ್ಬಿಣ ರೌದಿಯ ಮುಖಾಂತರ ದನಕರಗಳು ಇರುವ ಶೆಡ್ಡಿಗೆ ಬೆಂಕಿ ಹತ್ತಿಕೊಂಡು ಉರಿದು ಒಳಗಡೆ ಇದ್ದ ಹತ್ತು-ಹನ್ನೆರಡು ಆಕಳು ಹಾಗೂ ಎಮ್ಮೆಗಳು ಇದ್ದವು …

Read More »