Breaking News

ಹುಬ್ಬಳ್ಳಿ-ಧಾರವಾಡ

ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ

ಕುಂದಗೋಳ ಮತಕ್ಷೇತ್ರ ಹುಬ್ಬಳ್ಳಿ ತಾಲೂಕಿನ ಶೇರೆವಾಡ್ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಇವರ ಅಡಿಯಲ್ಲಿ ನಡೆದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯ ಉದ್ಘಾಟನೆಯನ್ನು ಕುಂದಗೋಳ ಮತಕ್ಷೇತ್ರದ ಶಾಸಕರಾದ ಶ್ರೀಮತಿ ಕುಸುಮಾವತಿ ಚ ಶಿವಳ್ಳಿಯವರು ನೆರವೇರಿಸಿದರು. ನಂತರ ಮಾತನಾಡಿದ ಅವರು ಮಹಿಳೆ ಅಬಲೇಯಲ್ಲ ಸಬಲೇ ಎನ್ನುವಂಥ ಹೆಮ್ಮೆಗೆ ಇಂದು ಧರ್ಮ ಸ್ಥಳ ಗ್ರಾಮಾಭಿವೃದ್ಧಿಯ ಸಂಸ್ಥೆ ಸೇವೆ ಮಾಡುತ್ತಿದೆ. ಇವರ ಕಾರ್ಯ …

Read More »

ಶ್ರೀ ರಾಮಲಿಂಗೇಶ್ವರ ಕಾಮದೇವರ ದರ್ಶನಕ್ಕೆ ಹರಿದು ಬಂದ ಜನಸಾಗರ

ನವಲಗುಂದ: ಇತಿಹಾಸ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ಕಾಮದೇವರ ಪ್ರತಿಷ್ಠಾಪನೆ ಕಾರ್ಯ ನಿನ್ನೆ ರಾತ್ರಿಯಿಂದ ನಡೆದು ಬೆಳಗಿನ ಜಾವ ಪೂರ್ಣಗೊಂಡು ದರ್ಶನ ಪ್ರಾರಂಭವಾಗಿದ್ದು, ಮೊದಲನೇ ದಿನದಿಂದಾನೆ ಭಕ್ತರು ಬೇರೆ ಬೇರೆ ಊರುಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇನ್ನು ಕಾಮದೇವರ ದರ್ಶನಕ್ಕೆ ಬಂದಂತ ಭಕ್ತರಿಗೆ ಪ್ರಸಾದ ವ್ಯವಸ್ತೆಯನ್ನು ಟ್ರಸ್ಟ್ ಕಮೀಟಿಯವರು ಮಾಡಿದ್ದು, ಪ್ರತಿಯೊಬ್ಬ ಭಕ್ತರು ಕಾಮದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಧಾರವಾಡ ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ನಿಂಗಣ್ಣ ಕರಿಕಟ್ಟಿ ಅರವಿಂದ್ ಕಟಗಿ …

Read More »

ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮೂರು ಕೋಟಿ ಹಣ ಜಪ್ತಿ

ಹುಬ್ಬಳ್ಳಿಯಲ್ಲಿ ರಮೇಶ್ ಬೊಣಗೇರಿ ಅವರ ನಿವಾಸದ ಮೇಲೆ ಸಿಸಿಬಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮೂರು ಕೋಟಿ ಹಣ ಜಪ್ತಿ ಮಾಡಿದ್ದಾರೆ. ಸಿಸಿಬಿ ಡಿವೈಎಸ್ಪಿ ನಾರಾಯಣ ಬರಮನಿ ಅವರ ನೇತೃತ್ವದಲ್ಲಿ ದಾಳಿ ಮಾಡಿದ್ದು, ಹುಬ್ಬಳ್ಳಿಯ ಆಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಕುರಿತು ಪ್ರಕರಣ ದಾಖಲಾಗಿದೆ.

Read More »

ಕರ್ನಾಟಕದಲ್ಲಿ 40% ಸರ್ಕಾರ ತೆಗೆಯಬೇಕಿದೆ- ದೆಹಲಿ ಸಿಎಂ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಗಮಸಿದ್ದು, ಪತ್ರಿಕಾಗೋಷ್ಟಿಯೊಂದಿಗೆ ಮಾತುಕತೆ. ದೆಹಲಿಯಲ್ಲಿ ನಾವೇನು ಮಾಡಿದ್ದೇವೆ ಅಂತ ಜನರಿಗೆ ಗೊತ್ತಿದೆ. ಕರ್ನಾಟಕದಲ್ಲಿ 40 ಪರ್ಸೆಂಟೇಜ್ ಸರ್ಕಾರವಿದೆ ಅದನ್ನು ಕಿತ್ತೊಗೆಯಬೇಕಿದೆ. ಪಂಜಾಬ್ ಮತ್ತು ದೆಹಲಿಯಲ್ಲಿ ಪ್ರಮಾಣಿಕ ಸರ್ಕಾರ ಕೊಟ್ಟಂತೆ ಇಲ್ಲಿಯೂ ಕೊಡ್ತೇವೆ ಎಂದು ಭರವಸೆಯನ್ನಾ ನೀಡುತ್ತಾ, ಈ ನಿಟ್ಟಿನಲ್ಲಿ ಎಎಪಿ ಬಲವರ್ಧನೆ ಮಾಡ್ತೇವೆ ಎಂದು ಹೇಳಿದರು.

Read More »

ಆಮ್ ಆದ್ಮ ಪಕ್ಷ ಖಾತೆಗೆ ಪ್ರಯತ್ನ ಅರವಿಂದ ಕೇಜ್ರಿವಾಲ್ ಗ್ರಾಂಡ್ ಎಂಟ್ರಿ

ಹುಬ್ಬಳ್ಳಿ: ವಿಧಾನ ಸಭೆ ಚುನಾವಣೆ ಹೊಸ್ತಿಲಲ್ಲಿ ಪಕ್ಷ ಸಂಘಟನೆಗೆ ಆಪ್ ಸಖತ್ ಪ್ಲಾನ್ ರೂಪಿಸಿದ್ದು, ಕರ್ನಾಟಕದಲ್ಲಿಯೂ ಆಮ್ ಆದ್ಮ ಪಕ್ಷ ಖಾತೆ ತೆರೆಯಲು ಪ್ರಯತ್ನ ಮುಂದುವರೆಸಿದೆ. 2023 ರ ವಿಧಾನಸಭಾ ಚುನಾವಣೆಯನ್ನು ಆಪ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಕ್ಕೆ ಅರವಿಂದ ಕೇರ್ಜಿವಾಲ್ ಗ್ರಾಂಡ್ ಎಂಟ್ರಿ ಕೊಟ್ಟಿದ್ದು, ಕರ್ನಾಟಕದ ಮಧ್ಯ ಭಾಗದಿಂದಲೇ ಪಕ್ಷ ಸಂಘಟನೆಗೆ ಅರವಿಂದ ಕೇಜ್ರಿವಾಲ್ ಮುಂದಾಗಿದ್ದಾರೆ. ದಾವಣಗೆರೆಯಲ್ಲಿ ನಡೆಯುವ ಬ್ಲಾಕ್ ಸದಸ್ಯರ ಪ್ರಮಾಣ ವಚನದ ಕಾರ್ಯಕ್ರಮದಲ್ಲಿ …

Read More »

ಅಳ್ಳಾವರದಲ್ಲಿ 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಕನ್ನಡಿಗರ ಸಾಂಸ್ಕೃತಿಕ ಮೇರು ಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು. ಈ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಅಳ್ಳಾವರದಲ್ಲಿ ತಾಲೂಕಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ. ಮಾ 11 ರಂದು ಅಳ್ಳಾವರ ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ಘಟಕದ ಅಧ್ಯಕ್ಷ ಡಾ:ಬಸವರಾಜ ಮೂಡಬಾಗಿಲ ಹೇಳಿದರು. ಇಲ್ಲಿನ …

Read More »

ಡಿಸಿಪಿ ಸಾಹಿಲ್ ಬಾಗ್ಲಾ ವರ್ಗಾವಣೆ

ಹುಬ್ಬಳ್ಳಿ ಧಾರವಾಡ ಸಹಾಯ ಪೋಲಿಸ್ ಆಯುಕ್ತ ಕಾನೂನೂ ಮತ್ತು ಸುವ್ಯವಸ್ತೆ ಅಧಿಕಾರಿ ಸಾಹಿಲ್ ಬಾಗ್ಲಾ ಅವರನ್ನು ಬೆಂಗಳೂರಿನ ಇಂಟೆಲಿಜೆನ್ಸ್ ಡಿಸಿಪಿ ಆಗಿ ಅಧಿಕಾರ ವಹಿಸಿಕೊಳ್ಳಲು ಕರ್ನಾಟಕ ಸರಕಾರ ಆದೇಶ ಹೊರಡಿಸಿದ್ದು, ಡಿಸಿಪಿ ಸಾಹಿಲ್ ಬಾಗ್ಲಾ ವರ್ಗಾವಣೆ ಮಾಡಿದೆ. ಬೆಳಗಾವಿಯ ಸಿವಿಲ್ ರೈಟ್ಸ್ ಎಸ್ ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜೀವ್ ಎಂ ಅವರನ್ನು ಹುಬ್ಬಳ್ಳಿ ಧಾರವಾಡ ನೂತನ ಸಹಾಯ ಪೋಲಿಸ್ ಆಯುಕ್ತರನ್ನಾಗಿ ನೆಮಕ ಮಾಡಲಾಗಿದೆ.

Read More »

ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಆಕಾಂಕ್ಷಿಗಳ ನಡುವೆ ಫ್ಯಾನ್ ಕುಕ್ಕರ್ ವಾರ್…

ಹುಬ್ಬಳ್ಳಿ ಧಾರವಾಡ ಚುನಾವಣೆಗೆ ಎರಡು ತಿಂಗಳು ಬಾಕಿ ಇರೋವಾಗಲೇ ದಿನದಿಂದ ದಿನಕ್ಕೆ ಚುನಾವಣೆ ಕಾವು ರಂಗೇರುತ್ತಿದೆ. ಟಿಕೆಟ್ ಘೋಷಣೆಗೂ ಮುನ್ನವೇ ರಾಜ್ಯದ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ,ಕಾಂಗ್ರೆಸ್ ಆಕಾಂಕ್ಷಿಗಳು ಮತದಾರರ ಒಲುವಿಗೆ ಗಿಫ್ಟ್ ಹಂಚುತ್ತಿದ್ದರೆ, ಮತ್ತೊಂದೆಡೆ ಕೈ ಟಿಕೆಟ್ ಆಕಾಂಕ್ಷಿಗಳು ಗಿಫ್ಟ್ ಹಂಚಿ ಸುದ್ದಿಯಾಗಿದ್ದಾರೆ. .ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಮ್ ಹುದ್ದಗೆ ಸಿದ್ದು, ಡಿಕೆ ನಡುವೆ ವಾರ್ ನಡೆದಿದ್ರೆ ,ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕೈ ನಾಯಕರ ನಡುವೆ ಫ್ಯಾನ್ ಕುಕ್ಕರ್ …

Read More »

ಅಡುಗೆ ಅನಿಲದ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಅಲ್ಪಸಂಖ್ಯಾತರಿಂದ ಪ್ರತಿಭಟನೆ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ನಿರಂತರವಾಗಿ ಅಡುಗೆ ಅನಿಲ ದರವನ್ನು ಏರುಸುತ್ತಲೇ ಇದೆ. ದೇಶದ ಜನರಿಗೆ ಅಚ್ಛೇದೀನ್ ಎಂಬ ಆಸೆಯನ್ನು ಹುಟ್ಟಿಸಿ ಜನರನ್ನ ಮೋಸಗೊಳಿಸುತ್ತಿರುವ ದೇಶದ ಪ್ರಥಮ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ ಎಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಏರಿಸುತ್ತಿರುವ ನರೇಂದ್ರ ಮೋದಿ ವಿರುದ್ಧ ಕಾರ್ಯಕರ್ತರು ಇಂದು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು. ವಾಣಿಜ್ಯ ಬಳಕೆಯ ಹಾಗೂ …

Read More »

ಧಾರವಾಡದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ

ಧಾರವಾಡ: ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಧಾರವಾಡದಲ್ಲಿ ರಾಯರೆಡ್ಡಿ ಅವರ ಫಾರ್ಮ್‌ಹೌಸ್‌ಗೆ ಆಗಮಿಸಿದ್ದರು. ಬೆಳಗಾವಿಯಿಂದ ರಸ್ತೆ ಮಾರ್ಗವಾಗಿ ಪ್ರಜಾಧ್ವನಿ ಬಸ್ ಮೂಲಕವೇ ಸಿದ್ದರಾಮಯ್ಯ ಅವರು ಧಾರವಾಡದ ಗೋವಾ ರಸ್ತೆಯಲ್ಲಿರುವ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರ ಫಾರ್ಮ್‌ಹೌಸ್‌ಗೆ ಹೊಗಿದ್ದು, ಭೋಜನ ಮಾಡಿ ವಿಶ್ರಾಂತಿ ಪಡೆದುಕೊಂಡು ಸಂಜೆ 5 ಗಂಟೆಗೆ ಧಾರವಾಡದ ಕಲಾಭವನದಲ್ಲಿ ನಡೆಯಲಿರುವ ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

Read More »