Breaking News

ಹುಬ್ಬಳ್ಳಿ-ಧಾರವಾಡ

ಭದ್ರಾ ಮೇಲ್ದಂಡೆ ಯೋಜನೆಗೆ 5, 300 ಕೋಟಿ ಅನುದಾನ

ಬೆಂಗಳೂರು : ಭದ್ರಾ ಮೇಲ್ದಂಡೆ ಯೋಜನೆಗೆ 5, 300 ಕೋಟಿ ರೂಪಾಯಿ ಅನುದಾನ ನೀಡಿದ್ದಕ್ಕಾಗಿ ಪ್ರಹ್ಲಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ 5, 300 ಕೋಟಿ ರೂಪಾಯಿ ಅನುದಾನ ನೀಡಿದ್ದಕ್ಕಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ, ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮ್ ಹಾಗೂ ಜಲ ಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಹೃದಯ ಪೂರ್ವಕ …

Read More »

ಶೀಲ ಶಂಕಿಸಿ ಹೆಂಡತಿ ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ, ಗಂಡ ನೇಣಿಗೆ ಶರಣು

ಹುಬ್ಬಳ್ಳಿ:ಗಂಡನೊಬ್ಬ ಕುಡಿದ ಮತ್ತಿನಲ್ಲಿ ಹೆಂಡತಿ ಹಾಗೂ ಮಕ್ಕಳ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ಮಾಡಿ ತಾನು ಕೂಡಾ ನೇಣಿಗೆ ಶರಣಾದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಸುಳ್ಳ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ. ಸುಳ್ಳ ಗ್ರಾಮದ ಪಕ್ಕೀರಪ್ಪ ಮಾದರ ಎಂಬಾತ ಇಂದು ಬೆಳಗಿನ ನಾಲ್ಕು ಗಂಟೆಯ ಸುಮಾರಿಗೆ ಮನೆಯಲ್ಲಿನ ಟಿವಿ ಯಲ್ಲಿ ಸೌಂಡ್ ಜ್ಯಾಸ್ತಿ ಇಟ್ಟು ಮಾರಕಾಸ್ತ್ರದಿಂದ ಹೆಂಡತಿಯಾದ ಮುದಕವ್ವನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಮುದಕವ್ವ ಜೋರಾಗಿ ಕಿರುಚಿದಾಗ …

Read More »

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯ ಖಂಡಿಸಿ ಬೃಹತ್ ಪ್ರತಿಭಟನೆ

ಹುಬ್ಬಳ್ಳಿ:ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯಗಳು, ಕಡಲೆ ಬೆಳಗೆ , ಹತ್ತಿ ಬೆಲೆ ಏರಿಕೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಾಜಿ ಸಚಿವರಾದ ಕೆ.ಎನ್.ಗಡ್ಡಿ ಹಾಗೂ ಜಿ.ಪಂ. ಮಾಜಿ ಉಪಾಧ್ಯಕ್ಷ ಮತ್ತು ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶಿವಾನಂದ ಕರಿಗಾರ ಅವರ ನೇತೃತ್ವದಲ್ಲಿ ಬೃಹತ್ ರೈತ ಪ್ರತಿಭಟನೆಯನ್ನು ನಗರದ ಚೆನ್ನಮ್ಮ ವೃತ್ತದಲ್ಲಿಂದು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಿವಾನಂದ ಕರಿಗಾರ, ಜಿಲ್ಲೆಯ ರೈತರು ಬೆಳೆದ ಕಡಲೆ …

Read More »

ಕೋ ಆಫ್ ಸೊಸೈಟಿಯೊಂದರಲ್ಲಿ  ಕಳ್ಳತನ ಮಾಡಿದ್ದ ಆರೋಪಿ ಬಂಧನ

ಧಾರವಾಡ: ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಕೋ ಆಫ್ ಸೊಸೈಟಿಯೊಂದರಲ್ಲಿ ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿತನನ್ನು ಇಂದು ಬಂಧಿಸಿ ಆತನಿಂದ 17,90,000/- ರೂ ನಗದು, 21,00,000/- ರೂ ಮೌಲ್ಯದ 615.30 ಗ್ರಾಂ ಚಿನ್ನಾಭರಣಗಳು ಸೇರಿದಂತೆ ಒಟ್ಟು 39,90,000/- ರೂಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ  ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ರಮನ್ ಗುಪ್ತಾ IPS ರವರು ಶ್ಲಾಘಿಸಿ ಬಹುಮಾನ …

Read More »

ರಾಜಕಾರಣ ಹೊಲಸು ಹಿಡಿದಿದೆ-ಎಚ್.ವಿಶ್ವನಾಥ್ ಲೇವಡಿ

ಹುಬ್ಬಳ್ಳಿ: ರಾಜಕಾರಣ ಹೊಲಸು ಹಿಡದಿದೆ. ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿ ತಾಕತ್ ಇದೆಯಾ? ಧಮ್ ಇದೆಯಾ? ಅಂತಾರೆ. ಎಲ್ಲಿಗೆ ಹೋಗಿದೀವಿ ನಾವು, ರಾಜಕಾರಣಿಗಳು ಕನ್ನಡ ಭಾಷೆಯನ್ನು ಕೊಲ್ಲುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆತಂಕ ವ್ಯಕ್ತಪಡಿಸಿದರು. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು 50 ವರ್ಷದಿಂದ ರಾಜಕಾರಣ ನೋಡಿದ್ದೇನೆ. ಈಗ ರಾಜಕಾರಣ ಹೊಲಸಾಗಿದೆ. ಇದು ರಿಪೇರಿ ಆಗಲೇಬೇಕು. ಇವತ್ತು ಚುನಾವಣೆ ಕೂಡಾ ಹಾಗೆ ಆಗಿವೆ. ಇವತ್ತು ಚುನಾವಣೆ ಅಂದ್ರೆ ಎಷ್ಟು …

Read More »

ಗಾಂಜಾ ಮಾರಾಟಗಾರರ ಇಬ್ಬರು ಬಂಧನ

ಹುಬ್ಬಳ್ಳಿ: ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಬಂಧನ ಮಾಡುವಲ್ಲಿ ಹಳೇ ಹುಬ್ಬಳ್ಳಿಯ ಪೊಲೀಸರು ಯಶಸ್ವಿಯಾಗಿದ್ದಾರೆ ಹುಬ್ಬಳ್ಳಿಯ ಆನಂದ ನಗರದಲ್ಲಿನ ಕುಷ್ಠರೋಗ ಆಸ್ಪತ್ರೆಯ ಬಳಿಯಲ್ಲಿ ಗಾಂಜಾ ಮಾರಾಟ ಮಾಡಲು ಯತಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಶಿವು ಬನ್ನಿಕೊಪ್ಪ ನೇತೃತ್ವದ ತಂಡ ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಆರೋಪಿಗಳಿಂದ 722 ಗ್ರಾಂ ಗಾಂಜಾ ವಶಕ್ಕೆ ಪಡೆದು ಆರೋಪಿಗಳ …

Read More »

ಡಿಕೆ ಶಿವಕುಮಾರ್​ ಅವರ ಆಡಿಯೋ ರಿಲೀಸ್

ಬೆಳಗಾವಿ:  ಸಾಹುಕಾರ್, ಡಿಕೆ ಶಿವಕುಮಾರ್​ ಅವರ ಆಡಿಯೋ ರಿಲೀಸ್ ಮಾಡಿದ್ದು,  ಡಿಕೆಶಿ ಅವ್ರದ್ದೆನ್ನಲಾದ 18 ಸೆಕೆಂಡ್​ಗಳ ಆಡಿಯೋ ಇದಾಗಿದೆ. ರಮೇಶ್​ ಜಾರಕಿಹೊಳಿಯಿಂದ ಸ್ಫೋಟಕ ಆಡಿಯೋ ರಿಲೀಸ್​​ ಆಗಿದ್ದು, ಡಿಕೆಶಿ ಆಡಿಯೋದಲ್ಲಿ  ನನಗೆ ದುಬೈನಲ್ಲಿ ಮನೆ.. ಲಂಡನ್​​​​​ನಲ್ಲೂ ಮನೆ ಇದೆ. ದೆಹಲಿಯಲ್ಲೊಂದು ಮನೆ ತಗೊಂಡು ಇಟ್ಟಕೊಂಡಿದ್ದೀನಿ.  ಮುಂಬೈನಲ್ಲೂ ಒಂದು ಫ್ಲಾಟ್​​​ ಇದೆ ಎಂದಿದ್ದಾರೆ. ಆಡಿಯೋದಲ್ಲಿ ಕೋಟಿ ಕೋಟಿ ವ್ಯವಹಾರದ ಪ್ರಸ್ತಾಪ ಮಾಡಿದ್ದಾರೆ. ರೇಡ್​ ಆದಾಗ 40-50 ಕೋಟಿ ಸೀಜ್ ಆಗಿತ್ತು ಎಂದಿದ್ದಾರೆ. ಡಿ.ಕೆ.ಶಿವಕುಮಾರ್​​ ವಿರುದ್ಧ …

Read More »

ಪಕ್ಷಕ್ಕಿಂತ ಸಮುದಾಯವೇ ಮುಖ್ಯ ಎಂಬುದೇ ಅಲ್ಪಾಸಂಖ್ಯಾತರ ಕೂಗು-ಐ ಜಿ ಸನದಿ

ಹುಬ್ಬಳ್ಳಿ: ಮುಸ್ಲಿಂ ಸಮೂದಾಯದವರ ಜನಸಂಖ್ಯೆ ಹೆಚ್ಚಿರುವ ಕಡೆ ಕನಿಷ್ಟ ಪಕ್ಷ ಒಂದು ಟಿಕೆಟ್‌ ನೀಡಬೇಕೆಂದು ಮಾಜಿ ‌ಸಂಸದ ಐ ಜಿ ಸನದಿಯವರು ಒತ್ತಾಯಿಸಿದರು. ಅಲ್ಪಸಂಖ್ಯಾತರಿಗೆ ಹುಬ್ಬಳ್ಳಿ ಧಾರವಾಡ ದಲ್ಲಿ ಒಂದು ಟಿಕೆಟ್ ನೀಡುವಂತೆ ಕಾಂಗ್ರೆಸ್ ಗೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ನಿಂದ ಇಲ್ಲಿಯವರೆಗೂ ನಮ್ಮ ಸಮುದಾಯಕ್ಕೆ ಯಾವುದೇ ಅನ್ಯಾಯ ಆಗಿಲ್ಲ. ಕಾಂಗ್ರೇಸ್ ಪಕ್ಷದಲ್ಲಿ ಮೊದಲು ಪಾರ್ಟಿ ಅನ್ನುವ ಸಿದ್ದಾಂತ ವಿತ್ತು. ಆದ್ರೇ ಈಗ ಮುಸ್ಲಿಂ ಸಮುದಾಯದ ಧ್ವನಿ ಹೆಚ್ಚಾಗಿದೆ. ಪಾರ್ಟಿಗಿಂತ …

Read More »

ಅಲ್ಪಸಂಖ್ಯಾತರಿಗೂ ವಿಧಾನ ಸಭಾ ಟಿಕೆಟ್ ನೀಡಿ, ಕೊಡಲಿಲ್ಲ ಅಂದ್ರೆ ಮುಂದೆ ನೋಡಿ…!

ಹುಬ್ಬಳ್ಳಿ: ಧಾರವಾಡ ವಿಧಾನ ಸಭಾ 7 ಕ್ಷೇತ್ರದಲ್ಲಿ ಒಂದು ಎಸ್ ಸಿ ರಿಸರ್ವ ವೆಷನ್ ಇದ್ದು, ಉಳಿದ ಆರು ಕ್ಷೇತ್ರದಲ್ಲಿ ಯಾವುದಾದರೂ ಒಂದು ಕಡೆ ಮುಸ್ಲಿಂ ಆಕಾಂಕ್ಷಿಗಳಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು. ಹುಬ್ಬಳ್ಳಿಯ ಹೋಟೆಲ್ ಒಂದರಲ್ಲಿ ಸಭೆ ನಡೆಸಿದ ಮುಸ್ಲಿಂ ಸಮುದಾಯದವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್-73 ರ ವಿಧಾನ ಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಕಾಂಕ್ಷಿಯಾಗಿರುವ ಅಲ್ ಹಾಜ್ ಸಿ.ಎಸ್.ಮಹಬೂಬಭಾಷಾ ರವರಿಗೆ ಟಿಕೆಟ್ ನೀಡಬೇಕೆಂದು ಚರ್ಚೆ ನಡೆಸಿದರು. ಆರು ಬಾರಿ …

Read More »

ಕುಂದಗೋಳದಲ್ಲಿ ಮನೆ ಗೋಡೆಗೆ ಕಮಲದ ಬಣ್ಣ ಬರೆದ ಕೇಂದ್ರ‌ಗೃಹ ಸಚಿವ ಅಮೀತ್ ಶಾ..

ಹುಬ್ಬಳ್ಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಕುಂದಗೋಳ ಪಟ್ಟಣದಲ್ಲಿ ಅದ್ದೂರಿ ರೋಡ್ ಶೋ ನಡೆಸಿ ಮನೆಯೊಂದರ ಗೋಡೆಯಲ್ಲಿ ಬರೆದ ಕಮಲ ಚಿತ್ರಕ್ಕೆ ಬಣ್ಣ ಬಳೆದಿ ಚಾಲನೆ ನೀಡಿದರು. ಕುಂದಗೋಳ ಪಟ್ಟಣದ ಬಸವರಾಜ ಹಂಚಿನಮನಿ ಅವರ ಮನೆ ಗೋಡೆಯ ಮೇಲೆ ಕಮಲ ಚಿತ್ರಕ್ಕೆ ಬಣ್ಣ ತುಂಬುವ ಮೂಲಕ ಗೋಡೆ ಬರಹಕ್ಕೆ ಚಾಲನೆ ನೀಡಿದರು. ಕಮಲ ಚಿಹ್ನೆಗೆ ಕೇಸರಿ ಬಣ್ಣ ಬರೆದು ಚಾಲನೆ ನೀಡಿದರು. ಬಳಿಜ ಬಸವರಾಜ್ ಹಂಚಿನಮನಿ ಅವರ. …

Read More »