Breaking News

ಮೈಸೂರು: ಯುವತಿಯ ಮೃತದೇಹ ಪತ್ತೆ ಕೇಸ್ ಗೆ ಟ್ವಿಸ್ಟ್, ಅತ್ಯಾಚಾರ ಎಸಗಿ ಹತ್ಯೆಗೈದಿರುವ ಶಂಕೆ!

ಮೈಸೂರಿನಲ್ಲಿ ಯುವತಿಯ ಮೃತದೇಹ ಮತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದು ಎಂದು ಇದೀಗ ಯುವತಿಯ ಸಂಬಂಧಿ ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ಯುವತಿಯ ಸೋದರ ಮಾವನ ಮಗ ವೆಂಕಟೇಶ್ ಈ ಕುರಿತು ಗಂಭೀರವಾದ ಆರೋಪ ಮಾಡಿದ್ದಾರೆ.ಆಸ್ಪತ್ರೆಗೆ ಹೊರಡುವ ಮುನ್ನ ತಂದೆಗೆ ಯುವತಿ ಕರೆ ಮಾಡಿದ್ದಾಳೆ. ಮಳೆ ಬರುತ್ತಿದೆ ಆಟೋದಲ್ಲಿ ಹೋಗುವಂತೆ ತಂದೆ ತಿಳಿಸಿದ್ದರು. ಆದರೆ ಬೆಳಿಗ್ಗೆ ಕುತ್ತಿಗೆಗೆ ವೇಲ್ನಿಂದ ಬಿಗಿದು ಹತ್ಯೆ ಮಾಡಿದ್ದಾರೆ. ಇದನ್ನೆಲ್ಲಾ ನೋಡಿದರೆ ಯಾರೋ ಅತ್ಯಾಚಾರ ಎಸಗಿ ಯುವತಿಯನ್ನು ಕೊಲೆ ಮಾಡಿದ್ದಾರೆ. ಬಡವರ ಹೆಣ್ಣುಮಕ್ಕಳಿಗೆ ಇಂಥ ದುಸ್ಥಿತಿ ಬರುತ್ತಿದೆ ಎಂದು ವೆಂಕಟೇಶ್ ಆಕ್ರೋಶ ಹೊರಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಹಂತಕರಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಮೈಸೂರಿನ ಶವಗಾರದಲ್ಲಿ ಸೋದರ ಮಾವನ ಮಗವೆಂಕಟೇಶ್ ಹೇಳಿಕೆ ನೀಡಿದರು.

Share News

About BigTv News

Check Also

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಂಬ್ ಬೆದರಿಕೆ: ಪರಿಶೀಲನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸರು ಪರಿಶೀಲನೆ ನಡೆಸಿದರು. …

Leave a Reply

Your email address will not be published. Required fields are marked *