Breaking News

ಹುಬ್ಬಳ್ಳಿ-ಧಾರವಾಡ

ಗಾಂಜಾ ಸೇವಿಸುತ್ತಿದ್ದ ವಿದ್ಯಾರ್ಥಿಗಳು ಅರೆಸ್ಟ್: ಮಾದಕ ವ್ಯಸನದ ನಂಟು

ಹುಬ್ಬಳ್ಳಿ: ಇಲ್ಲಿನ ತೋಳನಕೆರೆ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಗೋಕುಲ ರೋಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿತರಿಂದ 75 ಗ್ರಾಂ ಗಾಂಜಾ, ಗಾಂಜಾ ಸೇವನೆಗೆ ಬಳಸುತ್ತಿದ್ದ ವಸ್ತುಗಳು ಹಾಗೂ 3 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ರಬಕವಿಯ ದಾದಾ ಎಂಬಾತನ ಬಳಿ ಗಾಂಜಾ ಖರೀದಿಸಿದ್ದ ಯುವಕರು, ತೋಳನಕೆರೆಗೆ ಬಳಿ ಸೇವಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಇನ್‌ಸ್ಪೆಕ್ಟರ್‌ ಜೆ.ಎಂ.ಕಾಲಿಮಿರ್ಚಿ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು. ಗಾಂಜಾ ಮಾರಾಟಗಾರ …

Read More »

ಹುಬ್ಬಳ್ಳಿ : ೫೩೪ ನೇ ಕನಕ ಜಯಂತಿ ಅಂಗವಾಗಿ ಸಾಂಸ್ಕೃತಿಕ ನಗರಿ ಧಾರವಾಡ ಜಿಲ್ಲೆಯ ಸುಕ್ಷೇತ್ರ ಮನಸೂರಿನ ಜಗದ್ಗುರು ಶ್ರೀ ಮಠದ ವಿದ್ಯಾಪೀಠದ ಆಶ್ರಯದಲ್ಲಿ ಐದು ದಿನಗಳವರೆಗೆ ರಾಜ್ಯ ಮಟ್ಟದ ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ದಿ. ೨೦ ರಿಂದ ೨೪ ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮನಸೂರು ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಮಹಾಮಠದದ ಶ್ರೀ ಬಸವರಾಜ ದೇವರು ತಿಳಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮನಸೂರು ಯಾಥ್ರಿ …

Read More »

ವಾಹಣ‌ ಸವಾರರಿಗೆ‌ ಬಿಗ್‌ ಶಾಕ್

ಇಂದಿನ ಪೆಟ್ರೋಲ್,ಡೀಸೆಲ್ ದರ ಎಷ್ಟು ಗೊತ್ತಾ? ಸತತ 7ನೇ ದಿನವೂ ಇಂಧನ ದರ ಏರಿಕೆ- ಬೆಂಗಳೂರಿನಲ್ಲಿ* ನವದೆಹಲಿ: ಜಾಗತಿಕವಾಗಿ ಕಚ್ಚಾತೈಲ ಬೆಲೆ ಸರಾಸರಿ 85 ಡಾಲರ್ ದಾಟಿ ಮುನ್ನುಗ್ಗುತ್ತಿದ್ದು, ಭಾರತದಲ್ಲಿ ಸತತ ಏಳು ದಿನಗಳಿಂದ ಇಂಧನ ದರದಲ್ಲಿ ಏರಿಕೆ ಕಂಡು ಬಂದಿದೆ. ಇಂದು ಪೆಟ್ರೋಲ್ ದರ ಪ್ರತಿ ಲೀಟರ್ ಮೇಲೆ 35 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಮೇಲೆ 36 ಪೈಸೆ ಹೆಚ್ಚಳವಾಗಿದೆ. ಮೇ 4ರಿಂದ ಇಂದಿನ …

Read More »

ಬಿಆರ್​​ಟಿಎಸ್​ಗೆ ಮತ್ತೊಂದು ರಾಷ್ಟ್ರೀಯ ಪ್ರಶಸ್ತಿ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಬಿಆರ್​​ಟಿಎಸ್ ಯೋಜನೆಯ ಯಶಸ್ಸಿಗೆ ಮತ್ತೊಂದು ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ನಗರ ಸಮೂಹ ಸಾರಿಗೆ ವ್ಯವಸ್ಥೆಯಡಿ ಉತ್ತಮ ಚತುರ ನಗರ ಸಾರಿಗೆ ವರ್ಗದಡಿ ಕೊಡಮಾಡುವ 2021ನೇ ಸಾಲಿನ ಶ್ರೇಷ್ಠತಾ ಪ್ರಶಸ್ತಿ ಹುಬ್ಬಳ್ಳಿ-ಧಾರವಾಡ ಬಿಆರ್​ಟಿಎಸ್ ಯೋಜನೆಗೆ ಲಭಿಸಿದೆ.ಅ.29 ರಂದು ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರದೀಪ್ ಸಿಂಗ್ ಪುರಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು.ಕಾರ್ಯಕ್ರಮದಲ್ಲಿ ನಗರ ಭೂ …

Read More »

ಸಿಎಂ ಕುಮಾರಸ್ವಾಮಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಧಾರವಾಡ: ರಾಜ್ಯದಲ್ಲಿ ಅಲ್ಪ ಮತಕ್ಕೆ ಕುಸಿದ ರಾಜ್ಯ ಸಮ್ಮಿಶ್ರ ಸರಕಾರದ ಮುಖ್ಯ ಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿಯವರು ನೈತಿಕ ಹೊಣೆ ಹೊತ್ತು ಕೂಡಲೇ ರಾಜಿನಾಮೆ ನೀಡಲು ಒತ್ತಾಯಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಇಂದು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಯನ್ನು ನಡೆಸಿದರು. ರಾಜ್ಯದಲ್ಲಿ ಜನವಿರೋಧಿ ಸಮ್ಮಿಶ್ರ ಸರಕಾರ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದ್ದು, ಈ ಸರಕಾರದ ಕಾರ್ಯವೈಖರಿಯಿಂದಾಗಿ ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಶಾಸಕರು, ಸಚಿವರು ರಾಜಿನಾಮೆ ನೀಡುವ …

Read More »

ಶಿಕ್ಷಕರ ಸಂಘಟನೆ ನೀಡಿದ್ದ ಬಂದ ಕರೆ ವಿಫಲ.

ಧಾರವಾಡ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಇಂದು ರಾಜ್ಯಾದ್ಯಂತ ರಾಜ್ಯದ 55,066 ಸರ್ಕಾರಿ ಶಾಲೆಗಳ ಬಂದ್ ಗೆ ಕರೆ ನೀಡಲಾಗಿತ್ತು. ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿ, ವರ್ಗಾವಣೆ ಸೇರಿದಂತೆ ಇತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಂಘ ಬಂದ್ ಗೆ ಕರೆ ನೀಡಿತ್ತು.ಆದರೆ ಬಂದ್ ಗೆ ಧಾರವಾಡದಲ್ಲಿ ನೀರಸ ವ್ಯಕ್ತವಾಗಿದೆ. ಪ್ರತಿದಿನದಂತೆ ಶಾಲಾ ತರಗತಿಗಳು ಯಥಾ ಪ್ರಕಾರ ನಡೆಯುವ ಮೂಲಕ ಶಿಕ್ಷಕರು ಬಂದ್ ಗೆ …

Read More »

ಕಾರು-ಲಾರಿ ನಡುವೆ ಭೀಕರ ಅಪಘಾತ; ಐವರ ದುರ್ಮರಣ.

ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನವಲಗುಂದ ಬಳಿ ನಡೆದಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮತ್ತೋರ್ವನ ಸ್ಥಿತಿ ಚಿಂತಾಜನಕವಾಗಿದೆ. ಮೃತರನ್ನು ರವಿ ಹಂಡಿ, ಲೇಖಾಶ್ರೀ ಹಂಡಿ, ಜವೀನ್ ಕುಮಾರ್ ಹಂಡಿ ಹಾಗೂ ಇಬ್ಬರು ಮಕ್ಕಳಾದ ಶರಣ್ ಮತ್ತು ವರ್ಷ ಅಂತ ಗುರುತಿಸಲಾಗಿದೆ. ಮೃತರು ಬಾಗಲಕೋಟೆಯ ಕಾಂಗ್ರೆಸ್​ ಮುಖಂಡ ಆನಂದ ಜಿಗಜಿಣಗಿಯವರ ಕುಟುಂಬದವರು …

Read More »

ಬಿಜೆಪಿಯವರು ರಾಷ್ಟ್ರಪತಿ ಆಡಳಿತ ಹೇರಲು ಮುಂದಾಗಿದ್ದಾರೆ: ಹೊರಟ್ಟಿ

ಹುಬ್ಬಳ್ಳಿ: ಆಪರೇಷನ್ ಕಮಲ ಮಾಡಿ ಬಿಜೆಪಿಯವರು ಸರಕಾರ ರಚಿಸುತ್ತಾರೆ ಎನ್ನುವ ನಂಬಿಕೆ ನನಗಿಲ್ಲ. ನನಗೆ ಬಂದ ಮಾಹಿತಿಯ ಪ್ರಕಾರ, ಬಿಜೆಪಿಯವರು ಅತೃಪ್ತ ಶಾಸಕರಿಂದ ರಾಜೀನಾಮೆ ಕೊಡಿಸಿ ರಾಷ್ಟ್ರಪತಿ ಆಡಳಿತ ಹೇರಲು ಮುಂದಾಗಿದ್ದಾರೆ. ಬಳಿಕ ಚುನಾವಣೆ ಗೆ ಹೋಗಲು ಬಿಜೆಪಿಯವರು ಸಿದ್ದತೆ ನಡೆಸಿದ್ದಾರೆ. ಲೋಕ ಸಭೆಯಲ್ಲಿ ಸಿಕ್ಕ ಗೇಲುವಿನಿಂದ , ವಿಧಾನ ಸಭೆ ಚುನಾವಣೆ ಗೆ ಹೋದರೆ 150 ಸ್ಥಾನಗಳನ್ನ ಸುಲಭವಾಗಿ ಗೆಲ್ಲಬಹುದು ಎನ್ನುವ ಲೆಕ್ಕ ಚಾರದಲ್ಲಿ ಬಿಜೆಪಿ ನಾಯಕರಿದ್ದಾರೆಂದು ವಿಧಾನ …

Read More »

ವಿದ್ಯಾರ್ಥಿಗಳ ಕನಸು ನನಸುಗೊಳಿಸುವ ಬಸವೇಶ್ವರ ಗ್ರಾಮೀಣ ಶಿಕ್ಷಣ..

ಹುಬ್ಬಳ್ಳಿ, ಮೇ.28-* ಇಲ್ಲಿನ ಸತ್ತೂರನಲ್ಲಿನ ಬಸವೇಶ್ವರ ಗ್ರಾಮೀಣ ಶಿಕ್ಷಣ ಮತ್ತು ಅಭಿವೃದ್ಧಿ ಟ್ರಸ್ಟ ಪ್ರತಿಕ್ಷಣವೂ ಸ್ಪರ್ಧಾತ್ಮಕವಾಗಿರುವ ಈ ದಿನಮಾನಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ಸಾಕಾರಗೊಳಿಸುವಲ್ಲಿ ಬಹಳ ದೊಡ್ಡ ಹೆಜ್ಜೆ ಇಟ್ಟಿದೆ.ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ 2005 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಮೊದಲು ಕೇವಲ 5 ವಿದ್ಯಾರ್ಥಿಗಳಿಂದ ಚಾಲನೆ ಹೊಂದಿ ಇದೀಗ ಬಿ.ಇಡಿ. ಎಂ.ಇಡಿ, ಬಿ.ಬಿ.ಎ, ಎಂ.ಬಿ.ಎ, ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು, ಪಿಯುಸಿ ಕಲಾ, ವಾಣಿಜ್ಯ, ವಿಜ್ಞಾನ ಸೇರಿದಂತೆ ಇತ್ಯಾದಿ ಕೋರ್ಸ್ …

Read More »

ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟನಿಂದ ಜಾಗೃತಿ ಅಭಿಯಾನ

ಹುಬ್ಬಳ್ಳಿ: ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ವತಿಯಿಂದ ಇಂದು ಸರಕು ಸಾಗಣಿಕೆ ವಾಹನಗಳಲ್ಲಿ ಸಾರ್ವಜನಿಕರನ್ನು ಕೊಂಡೊಯ್ಯುವ ಹಾಗೂ ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ವಾಹನ ನೀಡುವುದನ್ನು ಖಂಡಿಸಿ ವಿವಿಧ ಶಾಲಾ ಕಾಲೇಜಿನ ಸಹಯೋಗದೊಂದಿಗೆ ಜನಜಾಗೃತಿ ರ್ಯಾಲಿಯನ್ನು ನಗರದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಜನಜಾಗೃತಿ ಮಂಡಿಸಲಾಯಿತು.ಸರಕು ಸಾಗಾಟಕ್ಕೆ ಬಳಸುವ ವಾಹನಗಳಲ್ಲಿ ಸಾರ್ವಜನಿಕರ ಪ್ರಯಾಣ ನಿಷೇಧಿಸಿದ್ದರೂ ಕೂಡ ಸರಕು ಸಾಗಾಣಿಕೆಯ ವಾಹನಗಳಲ್ಲಿ ಸಾರ್ವಜನಿಕರನ್ನು ಸಾಗಿಸುವವರ …

Read More »