Breaking News

ವಿದ್ಯಾರ್ಥಿಗಳ ಕನಸು ನನಸುಗೊಳಿಸುವ ಬಸವೇಶ್ವರ ಗ್ರಾಮೀಣ ಶಿಕ್ಷಣ..

ಹುಬ್ಬಳ್ಳಿ, ಮೇ.28-* ಇಲ್ಲಿನ ಸತ್ತೂರನಲ್ಲಿನ ಬಸವೇಶ್ವರ ಗ್ರಾಮೀಣ ಶಿಕ್ಷಣ ಮತ್ತು ಅಭಿವೃದ್ಧಿ ಟ್ರಸ್ಟ ಪ್ರತಿಕ್ಷಣವೂ ಸ್ಪರ್ಧಾತ್ಮಕವಾಗಿರುವ ಈ ದಿನಮಾನಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ಸಾಕಾರಗೊಳಿಸುವಲ್ಲಿ ಬಹಳ ದೊಡ್ಡ ಹೆಜ್ಜೆ ಇಟ್ಟಿದೆ.ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ 2005 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಮೊದಲು ಕೇವಲ 5 ವಿದ್ಯಾರ್ಥಿಗಳಿಂದ ಚಾಲನೆ ಹೊಂದಿ ಇದೀಗ ಬಿ.ಇಡಿ. ಎಂ.ಇಡಿ, ಬಿ.ಬಿ.ಎ, ಎಂ.ಬಿ.ಎ, ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು, ಪಿಯುಸಿ ಕಲಾ, ವಾಣಿಜ್ಯ, ವಿಜ್ಞಾನ ಸೇರಿದಂತೆ ಇತ್ಯಾದಿ ಕೋರ್ಸ್ ಗಳವರೆಗೆ ಬೋಧನೆಯನ್ನು ವಿಸ್ತರಿಸಿಕೊಂಡು ಹೆಮ್ಮರವಾಗಿ ಬೆಳೆದು ನಿಂತಿದೆ.ವಿಧಾನಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಕಟ್ಟಿ ಬೆಳೆಸಿದ ಈ ಸಂಸ್ಥೆಯನ್ನು ಅವರ ಸಹೋದರ ಶರಣಪ್ಪ ಕೊಟಗಿ (ಮತ್ತಿಕಟ್ಟಿ) ನೈಜ ಸಾರಥ್ಯದಲ್ಲಿ ನಡೆಯುತ್ತಿರುವ ಈ ಸಂಸ್ಥೆ ಈವರೆಗೆ ಗುಣಮಟ್ಟ ಶಿಕ್ಷಣದಿಂದ ಹೆಸರಾಗಿದ್ದು ವಿಶ್ವವಿದ್ಯಾಲಯಗಳ ಮಟ್ಟದಲ್ಲೂ ಹೆಸರುಗಳಿಸಿದೆ. ಈ ಸಂಸ್ಥೆ ಪ್ರಸಕ್ತ ಸಾಲಿನಲ್ಲಿ ಉತ್ತರ ಕರ್ನಾಟಕದ ಬಡ, ರೈತರ ಮಕ್ಕಳು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಿ.ಇಡಿ ಪ್ರವೇಶವನ್ನು ಬಯಸುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಅದೇ ರೀತಿ ಪಿಯುಸಿಗೆ ಪ್ರವೇಶಾರ್ಥಿ ಬಯಸುವ ರೈತರ ಮಕ್ಕಳು, ಸೈನಿಕರ ಮಕ್ಕಳು, ಅಂಗವಿಕಲ ಮಕ್ಕಳಿಗೆ ಶೇ.25 ರಷ್ಡು ಶುಲ್ಕ ವಿನಾಯಿತಿ ಕೊಡಲಾಗಿದೆ. ಆಸಕ್ತ‌ ಮಕ್ಕಳು ತಮ್ಮ ಅಗತ್ಯ ದಾಖಲಾತಿಗಳೊಂದಿಗೆ ಸಂಸ್ಥೆಗೆ ಭೇಟಿ ನೀಡಬಹುದು.ಹೆಚ್ಚಿನ ಮಾಹಿತಿಗಾಗಿ 8951333427, 9448128062, 9904246922 ಗೆ ಸಂಪರ್ಕಿಸಬಹುದು.ಕೋಟ್ಉತ್ತರ ಕರ್ನಾಟಕ ಭಾಗ ಸರಿಯಾದ ಮಳೆಯಿಲ್ಲದೇ ಬರಗಾಲದಿಂದ ತತ್ತರಿಸುತ್ತಿದ್ದು ಈ ಹಿನ್ನೆಲೆಯಲ್ಲಿ ದುಡಿಯಲು ಕೆಲಸಗಳಿಲ್ಲದೇ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಕಲಿಸಲು ಕಷ್ಟವಾಗುತ್ತಿದೆ ಈ ಕಾರಣದಿಂದಲೇ ಶ್ರೀ ಬಸವೇಶ್ವರ ಗ್ರಾಮೀಣ ಶಿಕ್ಷಣ ಮತ್ತು ಅಭಿವೃದ್ಧಿ ಟ್ರಸ್ಟ್ ಬಡ ರೈತರ ಮಕ್ಕಳು, ಸೈನಿಕರ ಮಕ್ಕಳು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಿ.ಇಡಿ ಗೆ ಉಚಿತ ಪ್ರವೇಶಾತಿ, ಪಿಯುಸಿಗೆ ಶೇ.25 ರಷ್ಟು ಶುಲ್ಕ ರಿಯಾಯಿತಿ ನೀಡಲಾಗಿದೆ.ಶರಣಪ್ಪ ಕೊಟಗಿ, ಟ್ರಸ್ಟಿನ ಕಾರ್ಯದರ್ಶಿ*ಬಾಕ್ಸ್ಇಂಟೀರಿಯಲ್ ಪ್ಯಾಶನ್ ಡಿಸೈನ್ಧಾರವಾಡದ ಚನ್ನಬಸವೇಶ್ವರ ನಗರದ ಲೌಕ್ಯ ಬಿಲ್ಡಿಂಗ್ ನಲ್ಲಿ ಟ್ರಸ್ಟ್ ವತಿಯಿಂದ ಪ್ರಸಕ್ತ ಸಾಲಿನಿಂದ ಇಂಟರ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇಂಟೀರಿಯರ್ ಪ್ಯಾಶನ್ ಡಿಸೈನ್ ಹೊಸ ಕೋರ್ಸ್ ಕೂಡಾ ಆರಂಭಿಸಲಾಗಿದ್ದು ಆಸಕ್ತರು ಪ್ರವೇಶ ತೆಗೆದುಕೊಳ್ಳಬಹುದು.

Share News

About admin

Check Also

ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಮಹಿಳೆ ಬಲಿ..! ಕುತ್ತಿಗೆಗೆ ಸಿಲುಕಿದ ದಾರ, ಲ್ಯಾಬ್ ಟೆಕ್ನಿಷಿಯನ್ ದಾರುಣ ಸಾವು..!

News Audio ಸ್ಕೂಟಿಯಲ್ಲಿ ಲ್ಯಾಬ್‌ಗೆ ತೆರಳುತ್ತಿದ್ದಾಗ ಅವಘಡ | ರಸ್ತೆಯಲ್ಲೇ ತೀವ್ರ ರಕ್ತಸ್ರಾವ, ಮಾಂಜಾ ದಾರದ ಅಪಾಯಕ್ಕೆ ಮತ್ತೊಂದು ಜೀವ …

Leave a Reply

Your email address will not be published. Required fields are marked *