Breaking News

ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟನಿಂದ ಜಾಗೃತಿ ಅಭಿಯಾನ

ಹುಬ್ಬಳ್ಳಿ: ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ವತಿಯಿಂದ ಇಂದು ಸರಕು ಸಾಗಣಿಕೆ ವಾಹನಗಳಲ್ಲಿ ಸಾರ್ವಜನಿಕರನ್ನು ಕೊಂಡೊಯ್ಯುವ ಹಾಗೂ ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ವಾಹನ ನೀಡುವುದನ್ನು ಖಂಡಿಸಿ ವಿವಿಧ ಶಾಲಾ ಕಾಲೇಜಿನ ಸಹಯೋಗದೊಂದಿಗೆ ಜನಜಾಗೃತಿ ರ್ಯಾಲಿಯನ್ನು ನಗರದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಜನಜಾಗೃತಿ ಮಂಡಿಸಲಾಯಿತು.ಸರಕು ಸಾಗಾಟಕ್ಕೆ ಬಳಸುವ ವಾಹನಗಳಲ್ಲಿ ಸಾರ್ವಜನಿಕರ ಪ್ರಯಾಣ ನಿಷೇಧಿಸಿದ್ದರೂ ಕೂಡ ಸರಕು ಸಾಗಾಣಿಕೆಯ ವಾಹನಗಳಲ್ಲಿ ಸಾರ್ವಜನಿಕರನ್ನು ಸಾಗಿಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಅಲ್ಲದೇ ಸಾರ್ವಜನಿಕ ಈ ಬಗ್ಗೆ ಕಾಳಜಿ ವಹಿಸಬೇಕೆಂದು ಜಾಗೃತಿ ಮೂಡಿಸಲಾಯಿತು.ಹು-ಧಾ ಮಹಾನಗರ ವ್ಯಾಪ್ತಿಯಲ್ಲಿ ಹಾಗೂ ಧಾರವಾಡ ಜಿಲ್ಲೆಯಾಧ್ಯಂತ ಇಂತಹ ಘಟನೆಗಳು ಜರುಗದಂತೆ ಕಟ್ಟೆಚರ ವಹಿಸಲಾಗಿದ್ದು, ಸಾರಿಗೆ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕೆಂದು ಹಾಗೂ ಅಮೂಲ್ಯವಾದ ಜೀವನವನ್ನು ಕಾಪಾಡಿಕೊಳ್ಳಲು ಎಲ್ಲರೂ ಸಾರಿಗೆ ಸಂಚಾರಿ ನಿಯಮ ಪಾಲನೆಗೆ ಬದ್ದರಾಗಬೇಕೆಂದು ಘೋಷಣೆ ಕೂಗಿ ಶಾಲಾ ಮಕ್ಕಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು…

Share News

About admin

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *