Breaking News

ಕ್ರೀಡೆ

ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಆತಿಥೇಯ ಭಾರತ ಮಹಿಳಾ ತಂಡ 347 ರನ್‌ಗಳ ಬೃಹತ್ ಅಂತರದಿಂದ ಗೆದ್ದು ಬೀಗಿತು…..

ಶನಿವಾರ, ಡಿಸೆಂಬರ್ 16ರಂದು ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಆತಿಥೇಯ ಭಾರತ ಮಹಿಳಾ ತಂಡ 347 ರನ್‌ಗಳ ಬೃಹತ್ ಅಂತರದಿಂದ ಗೆದ್ದು ಬೀಗಿತು. ಆಲ್‌ರೌಂಡರ್ ದೀಪ್ತಿ ಶರ್ಮಾ ಅವರ ಪಂದ್ಯ-ವಿಜೇತ ಪ್ರದರ್ಶನದ ಸಹಾಯದಿಂದ ಭಾರತ ಮಹಿಳಾ ತಂಡವು ಇಂಗ್ಲೆಂಡ್ ವನಿತೆಯರನ್ನು 347 ರನ್‌ಗಳಿಂದ ಸೋಲಿಸಲು ನೆರವಾಯಿತು ಮತ್ತು ಮಹಿಳಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದುವರೆಗಿನ ಅತಿದೊಡ್ಡ ಗೆಲುವು ದಾಖಲಿಸಿತು.ಭಾರತ …

Read More »

ಕೆ.ಎಲ್ ರಾಹುಲ್‌ ರೂ.1.5 ಕೋಟಿ ಮೌಲ್ಯದ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯನ್ನು ಖರೀದಿಸಿದ್ದಾರೆ…

ಕನ್ನಡಿಗ ಕ್ರಿಕೆಟಿಗ ಕೆ.ಎಲ್ ರಾಹುಲ್‌, ರೂ.1.5 ಕೋಟಿ ಮೌಲ್ಯದ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯನ್ನು ಖರೀದಿಸಿದ್ದಾರೆ ವಿಶ್ವಕಪ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅವರು, ರೂ.1.5 ಕೋಟಿ ಮೌಲ್ಯದ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಇತ್ತೀಚಿಗೆ, ಕೆ.ಎಲ್ ರಾಹುಲ್‌, ಹೊಚ್ಚ ಹೊಸ ಕಪ್ಪು ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯಲ್ಲಿ ಕಾಣಿಸಿಕೊಂಡಿದ್ದು, ಆ ವಿಡಿಯೋ ಆನ್‌ಲೈನ್‌ ನಲ್ಲಿ ಹರಿದಾಡುತ್ತಿದ್ದು, ಕಾರ್ಸ್ …

Read More »

ವಿರಾಟ್ ಕೊಹ್ಲಿ ತನ್ನ ಮೊದಲ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆಡಲಿದ್ದಾರೆ…

ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಮೂರು ಮಾದರಿಯ ಸರಣಿಗಳನ್ನು ಆಡಬೇಕಿದೆ. ಟಿ20 ಸರಣಿಯೊಂದಿಗೆ ಈ ಪ್ರವಾಸ ಆರಂಭವಾಗಲಿದೆ. ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದೆ, ಆದರೆ ಈ ಸರಣಿಯಲ್ಲಿ ಇನ್ನೂ 2 ಪಂದ್ಯಗಳು ಉಳಿದಿವೆ. ಭಾರತ, ಟಿ 20 ನಂತರ, 3 ಪಂದ್ಯಗಳ ಏಕದಿನ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯು ಆಡಲಿದೆ. ಭಾರತದ ಇಬ್ಬರು ದೊಡ್ಡ ಆಟಗಾರರಾದ ರೋಹಿತ್ ಶರ್ಮಾ …

Read More »

ಫೈನಲ್ ಪಂದ್ಯ ಆಡಿದ ಪಿಚ್‌ಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ‘ಸರಾಸರಿ’ ರೇಟಿಂಗ್ ನೀಡಿದೆ….

ಭಾರತ ತಂಡ ತವರಿನಲ್ಲಿ ನಡೆದ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿತ್ತು. ಅಲ್ಲದೆ ಸತತ 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಫೈನಲ್‌ ಹಂತವನ್ನು ಪ್ರವೇಶಿಸಿತ್ತು. ಭಾರತ ಮೂರನೇ ಬಾರಿ ವಿಶ್ವಕಪ್‌ ಗೆಲ್ಲಲಿದೆ ಎಂದು ಕ್ರಿಕೆಟ್‌ ಪಂಡಿತರೂ ಸಹ ಭವಿಷ್ಯ ನುಡಿದಿದ್ದರು. ನವೆಂಬರ್‌ 19 ಆ ದಿನ ಭಾರತದ ಪರವಾಗಿರಲಿಲ್ಲ. ಟೂರ್ನಿಯುದ್ದಕ್ಕೂ ಮೈಚಳಿ ಬಿಟ್ಟು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಪ್ಲೇಯರ್ಸ್‌ ಫೈನಲ್ ಪಂದ್ಯದಲ್ಲಿ ಮಕಾಡೆ ಮಲಗಿದರು. ಆಸೀಸ್‌ …

Read More »

ಪಂತ್ ಕೇವಲ ಒಂದೇ ವರ್ಷದಲ್ಲಿ, ಅವರು ಕ್ರಿಕೆಟ್‌ಗೆ ಮರಳುವ ಸಾಮರ್ಥ್ಯವನ್ನು ಇದೇ ಎಂದು ಸಾಬೀತು ಮಾಡಿದ್ದಾರೆ….

ಟೀಮ್ ಇಂಡಿಯಾದ ಯುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ತಮ್ಮ ಫಿಟ್‌ನೆಸ್ ಬಗ್ಗೆ ಹೆಚ್ಚಿನ ಗಮನವನ್ನು ವಹಿಸುತ್ತಿದ್ದಾರೆ. ಇದನ್ನು ತಿಳಿದುಕೊಂಡು ಅಭಿಮಾನಿಗಳು ತುಂಬಾ ಸಂತೋಷಪಡುತ್ತಾರೆ. ಈಗ ಪಂತ್ ಅವರ ಫಿಟ್‌ನೆಸ್ ನೋಡಿದರೆ, ಅವರು ಶೀಘ್ರದಲ್ಲೇ ಕ್ರಿಕೆಟ್‌ಗೆ ಮರಳಬಹುದು ಎಂದು ಕಾಣಿಸುತ್ತದೆ. 2024 ವರ್ಷ ಪ್ರಾರಂಭವಾದ ತಕ್ಷಣ, ಅವರನ್ನು ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಬಹುದು. ಪಂತ್ ತಮ್ಮ ಸಾಮಾಜಿಕ ಖಾತೆಯ ಮೂಲಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಫಿಟ್ನೆಸ್ ಬಗ್ಗೆ …

Read More »

ಬಾಂಗ್ಲಾದೇಶದ ಅನುಭವಿ ವಿಕೆಟ್‌ಕೀಪರ್-ಬ್ಯಾಟರ್ ಮುಶ್ಫಿಕರ್ ರಹೀಮ್ ವಿಲಕ್ಷಣ ಶೈಲಿಯಲ್ಲಿ ಔಟಾಗುವ ಮೂಲಕ ಸುದ್ದಿ…

ಬುಧವಾರ ಮಿರ್‌ಪುರದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ನ್ಯೂಜಿಲೆಂಡ್‌ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಬಾಂಗ್ಲಾದೇಶದ ಅನುಭವಿ ವಿಕೆಟ್‌ಕೀಪರ್-ಬ್ಯಾಟರ್ ಮುಶ್ಫಿಕರ್ ರಹೀಮ್ ವಿಲಕ್ಷಣ ಶೈಲಿಯಲ್ಲಿ ಔಟಾಗುವ ಮೂಲಕ ಸುದ್ದಿಯಾಗಿದ್ದಾರೆ. ಬಾಂಗ್ಲಾದೇಶದ ಮೊದಲ ಇನಿಂಗ್ಸ್‌ನ 41ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. 35 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ರಹೀಮ್ ಕೈಲ್ ಜೇಮಿಸನ್ ಬೌನ್ಸ್ ಮಾಡಿದ ಚೆಂಡನ್ನು ರಕ್ಷಣಾತ್ಮಕವಾಗಿ ಆಡಿದರು. ಆದರೆ, ರಹೀಮ್ ಚೆಂಡು ವಿಕೆಟ್‌ಗೆ ಬಡಿಯುತ್ತದೆ ಎಂದು ಕೈಯಲ್ಲಿ ತಳ್ಳಿದ್ದು ಪ್ರಮಾದವಾಗಿದೆ. ಬ್ಯಾಟರ್ …

Read More »

ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಕೊನೆಯ ಐಪಿಎಲ್ ಬಗ್ಗೆ ಮಹತ್ವದ ಹೇಳಿಕೆ…

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ಆಡುವ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಕೊನೆಯ ಐಪಿಎಲ್ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಭರ್ಜರಿ ಫಾರ್ಮ್‌ನಲ್ಲಿರುವ ಮ್ಯಾಕ್ಸ್‌ವೆಲ್ 2024ರ ಐಪಿಎಲ್‌ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಇನ್ನು ಮುಂದೆ ನಡೆಯಲು ಸಾಧ್ಯವಿಲ್ಲ ಎಂದು ಅನಿಸುವ ತನಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡುವುದನ್ನು ಮುಂದುವರಿಸುತ್ತೇನೆ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ. 35 ವರ್ಷ ವಯಸ್ಸಿ ಮ್ಯಾಕ್ಸ್‌ವೆಲ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ …

Read More »

ಧೋನಿ 2024ರ ಐಪಿಎಲ್‌ನಲ್ಲಿ ಆಡಲು ಸಜ್ಜಾಗುತ್ತಿದ್ದಾರೆ….

ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಮೈದಾನಕ್ಕೆ ಇಳಿಯುವುದು ಖಚಿತವಾಗಿದೆ. 2023ರ ಐಪಿಎಲ್‌ ನಂತರ ನಿವೃತ್ತಿಯಾಗುತ್ತಾರೆ ಎನ್ನುವ ಊಹಾಪೋಹಗಳಿಗೆ ತೆರೆ ಎಳೆದ ಧೋನಿ, 2024ರ ಐಪಿಎಲ್‌ನಲ್ಲಿ ಆಡಲು ಸಜ್ಜಾಗುತ್ತಿದ್ದಾರೆ. ಮೊಣಕಾಲು ನೋವಿನ ನಡುವೆ ಕೂಡ ತಂಡವನ್ನು ಚಾಂಪಿಯನ್ ಮಾಡಿದ್ದ ಧೋನಿ, ನಂತರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈಗ ಚೇತರಿಸಿಕೊಂಡಿರುವ ಅವರು 2024ರ ಐಪಿಎಲ್‌ಗೆ ಸಿದ್ಧತೆ ಆರಂಭಿಸಿದ್ದಾರೆ. ಅದಕ್ಕೂ ಮುನ್ನ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಎಂಎಸ್ ಧೋನಿ …

Read More »

ಆಸ್ಟ್ರೇಲಿಯಾ ತಂಡವನ್ನ ಭಾರತ ಸಲೀಸಾಗಿ ಸೋಲಿಸಿ ಸರಣಿ ಗೆದ್ದಿದೆ…

ಕಳೆದ ಪಂದ್ಯದಲ್ಲಿ ಅಂದರೆ 3ನೇ ಟಿ20 ಮ್ಯಾಚ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಟೀಂ ವಿರುದ್ಧ ಬರೋಬ್ಬರಿ 200ಕ್ಕೂ ಹೆಚ್ಚು ರನ್ ಗಳಿಸಿತ್ತು. ಆದ್ರೂ ಭಾರತ ತಂಡ ಗೆಲ್ಲೋದಕ್ಕೆ ಆಗಲೇ ಇಲ್ಲ. ಇದೀಗ ಆ ಪಂದ್ಯದ ಸೇಡನ್ನೂ ಭಾರತ ತೀರಿಸಿಕೊಂಡಿದೆ.ಇನ್ನು ಭಾರತದ ಬ್ಯಾಟಿಂಗ್ ಸಮಯದಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳು ಅಬ್ಬರಿಸಿದ್ರು. ಆಗ ಭಾರತಕ್ಕೆ ನೆರವಾಗಿದ್ದು ರಿಂಕು ಸಿಂಗ್ ಅವರ 46 ರನ್‌ಗಳ ಕೊಡುಗೆ. ಹೀಗೆ ಕೇವಲ 29 ಬಾಲ್ ಆಡಿದ್ದ ರಿಂಕು ಸಿಂಗ್ …

Read More »

ಹರಾಜು ಪ್ರಕ್ರಿಯೆಗೆ 30 ವಿದೇಶಿ ಆಟಗಾರರಿಗೆ ಮೀಸಲಿವೆ….

2024ರ ಐಪಿಎಲ್ ಆವೃತ್ತಿಗಾಗಿ ಎಲ್ಲ ತಯಾರಿಗಳು ಆರಂಭವಾಗಿವೆ. ಇದಕ್ಕೂ ಮುನ್ನ ಡಿಸೆಂಬರ್ 19ರಂದು ದುಬೈನಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಭಾರತದ ಹೊರಗೆ ಹರಾಜು ನಡೆಯುತ್ತಿರುವುದು ಇದೇ ಮೊದಲ ನಿದರ್ಶನವಾಗಿದೆ. ಈ ಬಾರಿ ಒಟ್ಟು 1166 ಆಟಗಾರರು ಮಿನಿ ಹರಾಜಿಗೆ ನೋಂದಾಯಿಸಿಕೊಂಡಿದ್ದು, ಅದರಲ್ಲಿ 25 ಜನರು ತಮ್ಮನ್ನು ಅತಿ ಹೆಚ್ಚು ಮೂಲ ಬೆಲೆಯ 2 ಕೋಟಿ ರೂಪಾಯಿಗೆ ನೋಂದಾಯಿಸಿಕೊಂಡಿದ್ದಾರೆ. ಎಲ್ಲಾ ಹತ್ತು ಫ್ರಾಂಚೈಸಿಗಳು ಕೇವಲ 77 ಸ್ಲಾಟ್‌ಗಳನ್ನು ಭರ್ತಿ ಮಾಡಬೇಕಿದ್ದು, …

Read More »