2024ರ ಐಪಿಎಲ್ ಆವೃತ್ತಿಗಾಗಿ ಎಲ್ಲ ತಯಾರಿಗಳು ಆರಂಭವಾಗಿವೆ. ಇದಕ್ಕೂ ಮುನ್ನ ಡಿಸೆಂಬರ್ 19ರಂದು ದುಬೈನಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಭಾರತದ ಹೊರಗೆ ಹರಾಜು ನಡೆಯುತ್ತಿರುವುದು ಇದೇ ಮೊದಲ ನಿದರ್ಶನವಾಗಿದೆ. ಈ ಬಾರಿ ಒಟ್ಟು 1166 ಆಟಗಾರರು ಮಿನಿ ಹರಾಜಿಗೆ ನೋಂದಾಯಿಸಿಕೊಂಡಿದ್ದು, ಅದರಲ್ಲಿ 25 ಜನರು ತಮ್ಮನ್ನು ಅತಿ ಹೆಚ್ಚು ಮೂಲ ಬೆಲೆಯ 2 ಕೋಟಿ ರೂಪಾಯಿಗೆ ನೋಂದಾಯಿಸಿಕೊಂಡಿದ್ದಾರೆ. ಎಲ್ಲಾ ಹತ್ತು ಫ್ರಾಂಚೈಸಿಗಳು ಕೇವಲ 77 ಸ್ಲಾಟ್‌ಗಳನ್ನು ಭರ್ತಿ ಮಾಡಬೇಕಿದ್ದು, ಅದರಲ್ಲಿ 30 ವಿದೇಶಿ ಆಟಗಾರರಿಗೆ ಮೀಸಲಿವೆ. ಹರಾಜಿನಲ್ಲಿ ಸಾಗರೋತ್ತರ (ವಿದೇಶಿ) ಕಾಣಿಸಿಕೊಳ್ಳುವ ಕೆಲವು ದೊಡ್ಡ ಹೆಸರುಗಳೆಂದರೆ: ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ರಚಿನ್ ರವೀಂದ್ರ, ಟ್ರಾವಿಸ್ ಹೆಡ್, ಹ್ಯಾರಿ ಬ್ರೂಕ್, ಸ್ಟೀವ್ ಸ್ಮಿತ್ ಇತರರಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





