BigTv News
November 5, 2023
News, ಕ್ರಿಕೆಟ್, ಕ್ರಿಕೆಟ್, ಕ್ರೀಡೆ, ದೆಹಲಿ
ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2023ರ ಏಕದಿನ ವಿಶ್ವಕಪ್ (World Cup 2023) ಟೂರ್ನಿಯಿಂದ ಹಾರ್ದಿಕ್ ಪಾಂಡ್ಯ ಹೊರಗುಳಿದಿದ್ದು, ಈ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ ಕೆಎಲ್ ರಾಹುಲ್ ಅವರನ್ನು ಉಪನಾಯಕನನ್ನಾಗಿ (Vice Captain) ನೇಮಿಸಿದೆ. ಗಾಯದ ಸಮಸ್ಯೆಯಿಂದಾಗಿ ಹಾರ್ದಿಕ್ ಪಾಂಡ್ಯ ವಿಶ್ವಕಪ್‌ನಿಂದ ಹೊರಗುಳಿದಿರುವುದನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಶನಿವಾರ ಬೆಳಗ್ಗೆ ಖಚಿತಪಡಿಸಿದೆ. ಪಾದದ ಗಾಯದಿಂದಾಗಿ ಪಾಂಡ್ಯ ಇನ್ನು ಮುಂದಿನ ಪಂದ್ಯಗಳಲ್ಲಿ ಭಾಗವಹಿಸುವುದಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ …
Read More »
BigTv News
November 3, 2023
ಕ್ರಿಕೆಟ್, ಕ್ರೀಡೆ, ಸುದ್ದಿ
2023ರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸಾಧನೆ ಪ್ರತಿಯೊಬ್ಬರೂ ಕೊಂಡಾಡುವಂಥದ್ದು. ವಿಶ್ವಕಪ್ ನಲ್ಲಿ ಭಾರತದ ವಿಜಯಗಾಥೆ ಮುಂದುವರೆದಿದೆ. ಶ್ರೀಲಂಕಾವನ್ನು 302 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಟಾಪ್ 4ಕ್ಕೆ ಅರ್ಹತೆ ಪಡೆದ ಮೊದಲ ದೇಶ ಭಾರತ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ ತನ್ನ ಮಾರಕ ಬೌಲಿಂಗ್ ಮೂಲಕ 5 ವಿಕೆಟ್ ಕಬಳಿಸಿ ಬ್ಯಾಟ್ಸ್‌ಮನ್‌ಗಳನ್ನು ಮಕಾಡೆ ಮಲಗುವಂತೆ ಮಾಡಿದ್ದಾರೆ. ಶಮಿ ಆಟ ಎಲ್ಲರನ್ನೂ ಹುಬ್ಬೇರುವಂತೆ …
Read More »
BigTv News
November 3, 2023
ಕರ್ನಾಟಕ, ಕ್ರಿಕೆಟ್, ಕ್ರೀಡೆ, ಬೆಂಗಳೂರು, ಸುದ್ದಿ
ನವದೆಹಲಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯಲ್ಲಿ ದುರಾಡಳಿತವಿದೆ ಎಂದು ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಪ್ರತಿಭೆಗಳನ್ನು ಬೆಳೆಯಲು ಬಿಡಲ್ಲ ಎಂದು ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಹಿರಿಯ ಕ್ರಿಕೆಟಿಗರನ್ನು ಕಡೆಗಣಿಸಿದ ರೀತಿ, ಹಲವರು ವಲಸೆ ಹೋಗುವಂತೆ ಮಾಡಿದ್ದರ ಬಗ್ಗೆ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಬಹಳಷ್ಟು ಪ್ರತಿಭೆಗಳು ದುರಾಡಳಿತಕ್ಕೆ ಬಲಿಯಾಗಿದ್ದಾರೆ. ಕೊನೆ ಬಾರಿ(2014-15)ರಣಜಿ ಟ್ರೋಫಿ ಗೆದ್ದ ತಂಡದಲ್ಲಿದ್ದ ಆಟಗಾರರು ವಿಭಜನೆಗೊಂಡು ಬೇರೆಡೆ ವಲಸೆ ಹೋಗಿದ್ದಾರೆ. …
Read More »
BigTv News
November 3, 2023
ಕ್ರಿಕೆಟ್, ಕ್ರೀಡೆ, ಸುದ್ದಿ
ಕ್ರಿಕೆಟ್ ವಿಶ್ವದ ಅತ್ಯಂತ ಶ್ರೀಮಂತ ಕ್ರೀಡೆ, ಫುಟ್‌ಬಾಲ್ ಬಿಟ್ಟರೆ ಕ್ರಿಕೆಟ್ ಆಟದಲ್ಲೇ ಹೆಚ್ಚು ದುಡ್ಡು ಇದೆ ಅನ್ನೋದು ಜಗತ್ತಿಗೇ ಗೊತ್ತು. ಆದರೆ ಈ ದುಡ್ಡಿನ ಜೊತೆ ಕ್ರಿಕೆಟ್ ಆಟದಲ್ಲಿ ಕ್ರೇಜ್ ಇದೆ, ಖುಷಿ ಇದೆ, ದಾಖಲೆಗಳ ದೊಡ್ಡ ಇತಿಹಾಸವೇ ಇದೆ. ಹೀಗಿದ್ದಾಗಲೇ, ನಿನ್ನೆ ಶ್ರೀಲಂಕಾ ಕ್ರಿಕೆಟ್ ತಂಡ ಭಾರತದ ಎದುರು ಹೀನಾಯವಾಗಿ ಸೋತು ಹಲವು ಇತಿಹಾಸ ಸೃಷ್ಟಿ ಮಾಡಿ ಹೋಗಿದೆ ಗೊತ್ತಾ? ಕ್ರಿಕೆಟ್ ಭಾಷೆಯಲ್ಲಿ ‘ಡಕ್ ಔಟ್’ ಎಂಬ ಪದವು, …
Read More »
BigTv News
November 3, 2023
ಕ್ರಿಕೆಟ್, ಕ್ರೀಡೆ, ಸುದ್ದಿ
2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ನೀಡುತ್ತಿರುವ ಅತ್ಯುತ್ತಮ ಪ್ರದರ್ಶನ ಮತ್ತು ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನ ನೋಡಿ ಪಾಕಿಸ್ತಾನದವರಿಗೆ ತಡೆದುಕೊಳ್ಳಲಾಗುತ್ತಿಲ್ಲ. ಕಾಲು ಕೆದರಿಕೊಂಡು ಏನಾದರೂ ಒಂದು ಆರೋಪ ಮಾಡುತ್ತಿದೆ. ಭಾರತ ತಂಡ ಈಗಾಗಲೇ ಏಳಕ್ಕೆ ಏಳು ಪಂದ್ಯಗಳ ಗೆಲುವಿನ ಮೂಲಕ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದರೆ, ಪಾಕಿಸ್ತಾನ ತಂಡ ಕೇವಲ ಮೂರು ಗೆಲುವು ಪಡೆದು ಸೆಮಿಫೈನಲ್‌ಗೆ ಅರ್ಹತೆ ಗಳಿಸಲು ಒದ್ದಾಡುತ್ತಿದೆ. ಇದೇ ವೇಳೆ ಶ್ರೀಲಂಕಾ ವಿರುದ್ಧ ಭಾರತದ ಗೆಲುವಿಗೆ …
Read More »
BigTv News
November 2, 2023
News, ಕರ್ನಾಟಕ, ಕ್ರಿಕೆಟ್, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಈಗ ಎಲ್ಲಿ ನೋಡಿದರಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂದೆ ಜೋರಾಗಿದೆ. ಆದರೆ ಹುಬ್ಬಳ್ಳಿ ಧಾರವಾಡ ನಗರ ಪೊಲೀಸರು ಮಿಂಚಿನ ವೇಗದಲ್ಲಿ ದಾಳಿ ಮಾಡಿ ಇಂದು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ಕಮರಿಪೇಟ ಪೊಲೀಸ್ ಠಾಣೆಯ ವ್ಯಾಪ್ತಿಯ ತೋರವೀಹಕ್ಕಲ ಹತ್ತಿರ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲ್ಯಾಡ ದೇಶಗಳ ನಡುವೆ ನಡೆಯುತ್ತಿರುವ ಕ್ರಿಕೆಟ್ ಪಂದ್ಯದ ವೇಳೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವವರ ಮೇಲೆ ಸಿಸಿಬಿ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವು ದಾಳಿ ಮಾಡಿ 03 …
Read More »
BigTv News
November 2, 2023
ಕ್ರಿಕೆಟ್, ಕ್ರೀಡೆ, ಸುದ್ದಿ
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ತವರು ಪಿಚ್ನಲ್ಲಿ ನಾಲ್ಕು ರನ್ ಗಳಿಸಿ ಔಟಾಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಮುಂಬೈ, ಮಹಾರಾಷ್ಟ್ರ: ಇಂಗ್ಲೆಂಡ್ ವಿರುದ್ಧ ಅಬ್ಬರಿಸಿದ್ದ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಈ ಬಾರಿ ತವರು ನೆಲದಲ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಲ್ಕು ರನ್ ಗಳಿಸಿ ಔಟಾಗಿದ್ದಾರೆ. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದೆ. …
Read More »
BigTv News
October 25, 2023
ಕ್ರಿಕೆಟ್, ಕ್ರೀಡೆ, ಸುದ್ದಿ
ಶ್ರೇಷ್ಠ ಬ್ಯಾಟ್ಸ್’ಮನ್ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ಕ್ರಿಕೆಟ್ ತಂಡ ವಿಶ್ವಕಪ್ ಟೂರ್ನಿಯುದ್ದಕ್ಕೂ ಕಳಪೆ ಪ್ರದರ್ಶನ ನೀಡಿದೆ. ಆರಂಭದಲ್ಲಿ ಉತ್ತಮವಾಗಿದ್ದರೂ ಸಹ ಆ ಬಳಿಕ ಸತತವಾಗಿ 3 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಭಾರತ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನದಂತಹ ತಂಡಗಳ ಎದುರು ಪಾಕ್ ಸೋಲೊಪ್ಪಿಕೊಂಡಿತ್ತು. ಈ ನಡುವೆ ಪಾಕಿಸ್ತಾನದ ಟಿವಿ ಚಾನೆಲ್’ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಿರಿಯ ಕ್ರೀಡಾ ಪತ್ರಕರ್ತ ಮತ್ತು ಬರಹಗಾರ ಅಯಾಜ್ ಮೆಮನ್ ಈ …
Read More »
BigTv News
October 25, 2023
ಕ್ರಿಕೆಟ್, ಕ್ರೀಡೆ, ಸುದ್ದಿ
ಭಾರತ ತಂಡದ ಬ್ಯಾಟರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಿಮಾಚಲ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರನ್ನು ಭೇಟಿ ಮಾಡಿದರು.ಧರ್ಮಶಾಲಾ(ಹಿಮಾಚಲ ಪ್ರದೇಶ) ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಹಿಮಾಚಲ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರನ್ನು ಭೇಟಿ ಮಾಡಿದರು.
Read More »
BigTv News
October 24, 2023
ಕ್ರಿಕೆಟ್, ಕ್ರೀಡೆ, ಚೆನ್ನೈ, ಸುದ್ದಿ
ಕ್ರಿಕೆಟ್ ಜಗತ್ತಿನ ಹೊಸ ಬದ್ದ ಎದುರಾಳಿಗಳೆಂದು ಬಿಂಬಿತವಾಗಿರುವ ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ತಂಡಗಳ ನಡುವಿನ ಕಾದಾಟದಲ್ಲಿ ಕೊನೆಗೂ ಆಫ್ಘಾನಿಸ್ತಾನ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ದಾಖಲಿಸಿದ ಅತಿದೊಡ್ಡ ಗೆಲುವು ಎನಿಸಿಕೊಂಡಿತು.ಇಲ್ಲಿನ ಚೆಪಾಕ್ ಮೈದಾನದಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವು ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 282 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ …
Read More »