2023ರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸಾಧನೆ ಪ್ರತಿಯೊಬ್ಬರೂ ಕೊಂಡಾಡುವಂಥದ್ದು. ವಿಶ್ವಕಪ್ ನಲ್ಲಿ ಭಾರತದ ವಿಜಯಗಾಥೆ ಮುಂದುವರೆದಿದೆ. ಶ್ರೀಲಂಕಾವನ್ನು 302 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಟಾಪ್ 4ಕ್ಕೆ ಅರ್ಹತೆ ಪಡೆದ ಮೊದಲ ದೇಶ ಭಾರತ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ ತನ್ನ ಮಾರಕ ಬೌಲಿಂಗ್ ಮೂಲಕ 5 ವಿಕೆಟ್ ಕಬಳಿಸಿ ಬ್ಯಾಟ್ಸ್‌ಮನ್‌ಗಳನ್ನು ಮಕಾಡೆ ಮಲಗುವಂತೆ ಮಾಡಿದ್ದಾರೆ. ಶಮಿ ಆಟ ಎಲ್ಲರನ್ನೂ ಹುಬ್ಬೇರುವಂತೆ ಮಾಡಿತ್ತಾದರೂ ಈಪಂದ್ಯದಲ್ಲಿ ದಾಖಲೆ ಬರೆದದ್ದು ಮಾತ್ರ ಜಸ್ಪ್ರೀತ್ ಬುಮ್ರಾ. ಬುಮ್ರಾ ಈ ಪಂದ್ಯದಲ್ಲಿ ಕೇವಲ 1 ವಿಕೆಟ್ ಕಬಳಿಸಿದ್ದರೂ ಈ ಶ್ರೇಷ್ಠ ದಾಖಲೆಯನ್ನು ಬರೆದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





