Breaking News

ಸಿನಿಮಾ

ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ ಧನುಷ್, ಐಶ್ವರ್ಯ

ಚೆನ್ನೈ: ಬರೋಬ್ಬರಿ 18 ವರ್ಷಗಳ ಅವರ ವಿವಾಹದ ಪಯಣಕ್ಕೆ ನಟ ಧನುಷ್ ವಿದಾಯ ಹೇಳಿದ್ದಾರೆ. ಈ ಮೂಲಕ ರಜನಿಕಾಂತ್ ಅವರ ಪುತ್ರಿಯಾದ ಐಶ್ವರ್ಯ ಅವರಿಂದ ಪ್ರತ್ಯೇಕಗೊಂಡಿದ್ದಾರೆ. ಈ ಸಂಬಂಧ ಟ್ವಿಟರ್ನಲ್ಲಿ ಸ್ನೇಹಿತರು, ದಂಪತಿಗಳು, ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ 18 ವರ್ಷಗಳ ಕಾಲ ಜೀವನ ಮಾಡಿದೆವು. ಈ ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿದೆ ಎಂದು ಬರೆದಿದ್ದಾರೆ.ಇಂದು ನಾವು ನಮ್ಮ ಮಾರ್ಗಗಳು ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ. ಐಶ್ವರ್ಯ …

Read More »

ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳಿಗೆ ಸಿಹಿ ಸುದ್ದಿ

ಕೋವಿಡ್ ಕಾರಣಗಳಿಂದ ಫೆ.4ರಂದು ಬಿಡುಗಡೆಯಾಗಬೇಕಿದ್ದ ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಚಿತ್ರ ಆಚಾರ್ಯ ಯುಗಾದಿಗೆ ಬಿಡುಗಡೆಯಾಗಲಿದೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದ ಚಿತ್ರತಂಡ, ಈ ಯುಗಾಇಗೆ ಮೆಗಾಸ್ಟಾರ್ ಅವರ ಮಾಸ್ ಚಿತ್ರವನ್ನು ಬೆಳ್ಳಿತೆರೆ ಮೇಲೆ ನೋಡಲಿದ್ದೀರಿ. ಏ.1ಕ್ಕೆ ಆಚಾರ್ಯ ಬಿಡುಗಡೆಯಾಗಲಿದೆ ಎಂದಿದೆ.

Read More »

ಮಲಯಾಳಂನ ಸೂಪರ್ ಸ್ಟಾರ್ ಮಮ್ಮುಟಿಯವರಿಗೂ ಕೊರೋನಾ ಪಾಸಿಟಿವ್

ಕೇರಳ: ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ  ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿವೆ. ಈ ಸಂದರ್ಭದಲ್ಲಿಯೇ ಜನಪ್ರತಿನಿಧಿಗಳು, ಸ್ಟಾರ್ ನಟರಿಗೂ ಕೋವಿಡ್ ಶಾಕ್ ನೀಡುತ್ತಿದೆ. ಇಂದು ಮಲಯಾಳಂನ ಸೂಪರ್ ಸ್ಟಾರ್ ಮಮ್ಮುಟಿಯವರಿಗೂ  ಕೊರೋನಾ ಪಾಸಿಟಿವ್  ಎಂಬುದಾಗಿ ದೃಢಪಟ್ಟಿದೆ.

Read More »

ಮೀಟೂ ಪ್ರಕರಣ : ಅರ್ಜುನ್​ ಸರ್ಜಾಗೆ ಜಯ

ತಮ್ಮ ಜತೆ ಅರ್ಜುನ್​ ಸರ್ಜಾಅವರು ಅಸಭ್ಯವಾಗಿ ನಡೆದುಕೊಂಡಿದ್ದಾರೆ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಶ್ರುತಿ ಹರಿಹರನ್​ ಆರೋಪಿಸಿದ್ದರು. ಆ ಸಂಬಂಧ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿತ್ತು. 2018ರಲ್ಲಿ ಭಾರಿ ಸದ್ದು ಮಾಡಿದ್ದ ಮೀಟೂ ಆಂದೋಲನದಲ್ಲಿ ಅರ್ಜುನ್​ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್​  ಅವರು ಕೆಲವು ಗಂಭೀರ ಆರೋಪಗಳನ್ನು ಹೊರಿಸಿದ್ದರು.  ಮೂರು ವರ್ಷ ತನಿಖೆ ನಡೆಸಿದರೂ ಕೂಡ ಪೊಲೀಸರಿಗೆ ಸೂಕ್ತ ಸಾಕ್ಷಿಗಳು ಸಿಕ್ಕಿಲ್ಲ. ಹಾಗಾಗಿ ಪೊಲೀಸರು ನ್ಯಾಯಾಲಯಕ್ಕೆ …

Read More »

ಮಹೇಶ್ ಬಾಬು ಸಹೋದರ ನಿಧನ

ಟಾಲಿವುಡ್​​ ನಟ ಮಹೇಶ್ ಬಾಬು ಸಹೋದರ ಘಟ್ಟಮನೇನಿ ರಮೇಶ್ ಬಾಬು ನಿನ್ನೆ ಸಂಜೆ ನಿಧನರಾಗಿದ್ದಾರೆ. ಕರುಳು ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಹೈದರಾಬಾದ್​​ನಲ್ಲಿ ಸಾವನ್ನಪ್ಪಿದ್ದಾರೆ. ರಮೇಶ್ ಬಾಬು ಅವರಿಗೆ 56 ವರ್ಷಗಳಾಗಿತ್ತು.

Read More »

ಕಾಮಿಡಿ ಕಿಲಾಡಿ ಶೋ ಸ್ಕ್ರಿಪ್ಟ್‌ ರೈಟರ್ ಸಾವು

ಕಾಮಿಡಿ ಕಿಲಾಡಿಗಳು ಶೋನಲ್ಲಿ ಸ್ಕ್ರಿಪ್ಟ್‌ ರೈಟರ್ ಆಗಿ ಕೆಲಸ ಮಾಡುತ್ತಿದ್ದ ಹರ್ಷ ಕೊನೆ ಉಸಿರೆಳೆದಿದ್ದಾರೆ. ಈ ಬಗ್ಗೆ ನಟ ಜಗ್ಗೇಶ್ ಟ್ಟೀಟ್ ಮಾಡಿದ್ದಾರೆ. ‘ಕಾಮಿಡಿ ಕಿಲಾಡಿಗಳು ನಗುವಿಗೆ ಇವನ ಕೆಲ ಬರಹದ ನಾಟಕದ ಕೊಡುಗೆಯೂ ಕಾರಣ ಬಂಗಾರದಂತಹ ಯುವಕ ಕೇವಲ 27 ವರ್ಷಕ್ಕೆ ಯಮ ಇವನಿಗೆ ಪಾಶ ಹಾಕಿ ಕರೆದೊಯ್ದ! ಬಾಳಿ ಬದುಕಬೇಕಿದ್ದ ಈ ಕಂದನಿಗೆ ಈ ಸಾವು ನ್ಯಾಯವೇ. ಇವನ ಅಗಲಿಕೆ ದುಃಖ ಬರಿಸುವ ಶಕ್ತಿ ರಾಯರು ಇವನ …

Read More »

ಯಶ್ ಹೊಸ ಪೋಸ್ಟರ್ ರಿಲೀಸ್

ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ. ಈ ಹಿನ್ನಲೆಯಲ್ಲಿ ಕೆಜಿಎಫ್ 2 ಚಿತ್ರತಂಡ ಯಶ್ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಯಶ್ ಬರ್ತ್ ಡೇಗೆ ಕೆಜಿಎಫ್ 2 ಸಿನಿಮಾ ಟೀಸರ್ ಹೊರಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಈಗ ಅದು ಸುಳ್ಳಾಗಿದೆ. ಇದರ ಬದಲು ಫ್ಯಾನ್ಸ್ ಖುಷಿಯಾಗಲೆಂದು ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

Read More »

ನ್ಯೂ ಲುಕ್ ನಲ್ಲಿ ಅಭಿಮಾನಿಗಳ ಗಮನ ಸೆಳೆದಿರುವ ಹ್ಯಾಟ್ರಿಕ್‌ ಹೀರೋ

“ಟಗರು’ ಚಿತ್ರದ ಸಕ್ಸಸ್‌ ಬಳಿಕ ಮತ್ತೂಮ್ಮೆ ನಟ ಶಿವರಾಜಕುಮಾರ್‌ ಹಾಗೂ ಡಾಲಿ ಧನಂಜಯ್‌ ಈ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಇಬ್ಬರೂ ಕೂಡ ಎರಡು ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ನಟ ಶಿವರಾಜಕುಮಾರ್‌ ಹುಟ್ಟುಹಬ್ಬದ ವೇಳೆ ಬೈರಾಗಿ ಬಿಡುಗಡೆಯಾಗಲಿದೆ. ತನ್ನ ಟೈಟಲ್‌ ಮತ್ತು ಫ‌ಸ್ಟ್‌ಲುಕ್‌ ಮೂಲಕ ಅಭಿಮಾನಿಗಳ ಗಮನ ಸೆಳೆದಿರುವ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಅಭಿನಯದ 123ನೇ ಚಿತ್ರ “ಬೈರಾಗಿ’ಯ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದೆ. ಈ ವಾರಾಂತ್ಯದಲ್ಲಿ “ಭೈರಾಗಿ’ಯ …

Read More »

ಅಪ್ಪು ಧ್ವನಿಯಲ್ಲಿ ಅರಳಿದೆ ಚಿತ್ರ’ಜೇಮ್ಸ್‌’

ಪವರ್ ಸ್ಟಾರ್ ಎಂದೇ ಖ್ಯಾತಿ ಆಗಿರುವ ಪುನೀತ ಅವರು ಭಾರದ ಲೋಕಕ್ಕೆ ಹೋಗಿದ್ದಾರೆ. ಆದರೆ ಅವರ ಚಿತ್ರಗಳು ಎಲ್ಲರ ಮನದಲ್ಲಿ ಅಚ್ಚಳಿಯಾಗಿ ಉಳಿದಿವೆ. ಆದರೆ ಎಲ್ಲರ ಬಹು ನಿರೀಕ್ಷಿತ ಚಿತ್ರ ಇದೀಗ ಬಣ್ಣದ ಲೋಕಕ್ಕೆ ಕೆಲವು ಸಿದ್ಧತೆ ನಡೆದಿದೆ. ಮಾರ್ಚ್ 17 ಪುನೀತ್‌ ರಾಜ್‌ಕುಮಾರ್‌ ಜನ್ಮದಿನ. ಅಂದೇ ಅವರ ನಟನೆಯ ‘ಜೇಮ್ಸ್‌’ ಚಿತ್ರ ರಿಲೀಸ್‌ ಆಗುತ್ತಾ ಎಂಬ ಪ್ರಶ್ನೆಗೆ ಈ ಚಿತ್ರದ ನಿರ್ದೇಶಕ ಚೇತನ್‌ ಕುಮಾರ್‌ ಉತ್ತರಿಸಿದ್ದಾರೆ. ಕೋವಿಡ್‌ ಹತೋಟಿಯಲ್ಲಿದ್ದು, …

Read More »

ಭಾರಿ ಕಲೆಕ್ಷನ್ ಮಾಡಿದ ‘ಬಡವ ರಾಸ್ಕಲ್​

ಡಾಲಿ ಧನಂಜಯ​ ಅವರು ಮೊದಲ ನಿರ್ಮಾಣದಲ್ಲೇ ಯಶಸ್ಸು ಪಡೆದಿದ್ದಾರೆ. ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.ಧನಂಜಯಗೆ ಸಿಕ್ಕ ಈ ಗೆಲುವು ಅವರ ವೃತ್ತಿ ಜೀವನದ ದೃಷ್ಟಿಯಿಂದ ಬಹಳ ಮಹತ್ವ ಪಡೆದುಕೊಂಡಿದೆ. ಈ ಚಿತ್ರ ಒಟ್ಟೂ ಮಾಡಿದ ಗಳಿಕೆ ಎಷ್ಟು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ‘ಬಡವ ರಾಸ್ಕಲ್​’ 15 ಕೋಟಿ ಕಲೆಕ್ಷನ್​ ಮಾಡಿದೆ ಎನ್ನುವ ಸುದ್ದಿ ಗಾಂಧಿ ನಗರದ ಅಂಗಳದಲ್ಲಿ ಹರಿದಾಡಿತ್ತು. ಹಾಸನ, ಬಳ್ಳಾರಿ ಮೊದಲಾದ ಜಿಲ್ಲೆಗಳಿಗೆ ತೆರಳಿ ಅಭಿಮಾನಿಗಳಿಗೆ ಧನ್ಯವಾದ …

Read More »