ಡಾಲಿ ಧನಂಜಯ ಅವರು ಮೊದಲ ನಿರ್ಮಾಣದಲ್ಲೇ ಯಶಸ್ಸು ಪಡೆದಿದ್ದಾರೆ. ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ಧನಂಜಯಗೆ ಸಿಕ್ಕ ಈ ಗೆಲುವು ಅವರ ವೃತ್ತಿ ಜೀವನದ ದೃಷ್ಟಿಯಿಂದ ಬಹಳ ಮಹತ್ವ ಪಡೆದುಕೊಂಡಿದೆ. ಈ ಚಿತ್ರ ಒಟ್ಟೂ ಮಾಡಿದ ಗಳಿಕೆ ಎಷ್ಟು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ‘ಬಡವ ರಾಸ್ಕಲ್’ 15 ಕೋಟಿ ಕಲೆಕ್ಷನ್ ಮಾಡಿದೆ ಎನ್ನುವ ಸುದ್ದಿ ಗಾಂಧಿ ನಗರದ ಅಂಗಳದಲ್ಲಿ ಹರಿದಾಡಿತ್ತು.
ಹಾಸನ, ಬಳ್ಳಾರಿ ಮೊದಲಾದ ಜಿಲ್ಲೆಗಳಿಗೆ ತೆರಳಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ‘ಬಡವ ರಾಸ್ಕಲ್’ ಗೆದ್ದ ಸಂಭ್ರಮದಲ್ಲಿ ರಾಜ್ಯದ ಕೆಲ ಜಿಲ್ಲೆಗಳಿಗೆ ಧನಂಜಯ ಅವರು ಭೇಟಿ ನೀಡಿದ್ದಾರೆ.
ರಾಯಚೂರು, ಬೆಳಗಾವಿ ಮೊದಲಾದ ಕಡೆಗೆ ತೆರಳೋಕೆ ಸಾಧ್ಯವಾಗಿಲ್ಲ.
ಇದಕ್ಕೆ ಧನಂಜಯ ಅವರು ಉತ್ತರ ನೀಡಿದ್ದಾರೆ. ಅವರ ಲೆಕ್ಕಾಚಾರದ ಪ್ರಕಾರ ಸಿನಿಮಾ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

