ಪವರ್ ಸ್ಟಾರ್ ಎಂದೇ ಖ್ಯಾತಿ ಆಗಿರುವ ಪುನೀತ ಅವರು ಭಾರದ ಲೋಕಕ್ಕೆ ಹೋಗಿದ್ದಾರೆ. ಆದರೆ ಅವರ ಚಿತ್ರಗಳು ಎಲ್ಲರ ಮನದಲ್ಲಿ ಅಚ್ಚಳಿಯಾಗಿ ಉಳಿದಿವೆ. ಆದರೆ ಎಲ್ಲರ ಬಹು ನಿರೀಕ್ಷಿತ ಚಿತ್ರ ಇದೀಗ ಬಣ್ಣದ ಲೋಕಕ್ಕೆ ಕೆಲವು ಸಿದ್ಧತೆ ನಡೆದಿದೆ.
ಮಾರ್ಚ್ 17 ಪುನೀತ್ ರಾಜ್‌ಕುಮಾರ್ ಜನ್ಮದಿನ. ಅಂದೇ ಅವರ ನಟನೆಯ ‘ಜೇಮ್ಸ್’ ಚಿತ್ರ ರಿಲೀಸ್ ಆಗುತ್ತಾ ಎಂಬ ಪ್ರಶ್ನೆಗೆ ಈ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಉತ್ತರಿಸಿದ್ದಾರೆ. ಕೋವಿಡ್ ಹತೋಟಿಯಲ್ಲಿದ್ದು, ಜನ ಜೀವನ ನಾರ್ಮಲ್ ಆದರೆ ಆ ದಿನವೇ ಚಿತ್ರ ಬಿಡುಗಡೆ ಮಾಡುವ ಪ್ಲಾನ್ ಇದೆ ಎಂದಿದ್ದಾರೆ.
ಈಗ ಪುನೀತ್ ಅವರ ಡಬ್ಬಿಂಗ್ ಭಾಗ ಬಾಕಿ ಇದೆ. ಅದನ್ನು ಶಿವಣ್ಣ ಅವರು ಮಾಡುತ್ತಾರಾ ಎಂದು ಕೇಳಿದರೆ ಸದ್ಯಕ್ಕೆ ಆ ಯೋಚನೆ ಇಲ್ಲ. ಬದಲಿಗೆ ಪುನೀತ್ ಅವರ ಧ್ವನಿಯನ್ನು ಇಟ್ಟುಕೊಂಡೇ ಏನಾದರೂ ಹೊಸ ಪ್ರಯತ್ನ ಮಾಡಬೇಕು ಅನ್ನುವ ಯೋಚನೆ ಇದೆ. ಇನ್ನೊಂದೆರಡು ದಿನದಲ್ಲಿ ಈ ಬಗ್ಗೆ ಸ್ಪಷ್ಟಚಿತ್ರಣ ಸಿಗಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

