BigTv News
July 28, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಪೊಲೀಸ್ ಇಲಾಖೆ ಹೊಸ ಕ್ರಮ ಜಾರಿಗೆ ತಂದಿದ್ದು, ಇನ್ಮುಂದೆ ಮೇಲಧಿಕಾರಿಗಳು ಮಾತ್ರ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಬೇಕು.ಇನ್ಮುಂದೆ ಇನ್ಸ್ ಪೆಕ್ಟರ್ ಹಾಗೂ ಅವರ ಮೇಲಿನ ಅಧಿಕಾರಿಗಳು ಮಾತ್ರ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡಬೇಕು. ಈ ಬಗ್ಗೆ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಮೌಖಿಕವಾಗಿ ಸೂಚಿಸಿದ್ದಾರೆ.ಇದರಿಂದಾಗಿ ಎಎಸ್‌ಐ ಹಾಗೂ ಕಾನ್ಸ್ ಟೇಬಲ್ ಹೆಸರಲ್ಲಿ ನಡೆಯುತ್ತಿದ್ದ ಸುಲಿಗೆ ನಿಲ್ಲಲಿದೆ ಎಂಬುದು ಇಲಾಖೆಯ ಅಭಿಮತ. ಅಲ್ಲದೇ ವಾರದಲ್ಲಿ 2 …
Read More »
BigTv News
July 28, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಅವರ ಕುಟುಂಬ ಸದಸ್ಯರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪದಡಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ.ಎಸ್ ಎಂಬವರನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ಹನುಮಂತರಾಯ ಎಂಬವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಹೈಗ್ರೌಂಡ್ಸ್ ಠಾಣಾ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಉಡುಪಿ ಕಾಲೇಜು ವಿಡಿಯೋ ಚಿತ್ರೀಕರಣ ಪ್ರಕರಣದ ಕುರಿತು ರಾಜ್ಯ ಕಾಂಗ್ರೆಸ್ ಮಾಡಿದ್ದ ಟ್ವೀಟ್ ವಿರೋಧಿಸುವ ಭರದಲ್ಲಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ …
Read More »
BigTv News
July 28, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಪ್ರತಿಪಕ್ಷಗಳು ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರ ಮಾತುಗಳ ಮೇಲೆ ವಿಶೇಷ ಗಮನ ಹರಿಸುತ್ತಿವೆ. ನಮ್ಮ ಹಲವು ಯೋಜನೆಗಳು ಸಂಪೂರ್ಣವಾಗಿ ಜನರನ್ನು ತಲುಪಬೇಕು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಮ್ಮ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಲು ಆರಂಭಿಸಿವೆ. 135 ಶಾಸಕರಲ್ಲಿ ಹೆಚ್ಚಿನವರು ಮೊದಲ ಬಾರಿಗೆ ಹಾಗೂ ಒಂದಿಷ್ಟು ವರ್ಷಗಳ ಅಂತರದ ಬಳಿಕ ಆಗಮಿಸಿದ್ದೀರಿ. ಆದ್ದರಿಂದ ಮಾತನಾಡುವಾಗ, ಸಾಮಾಜಿಕ ಜಾಲತಾಣದಲ್ಲಿ ಸಂದೇಶ ನೀಡುವಾಗ ನಿಗಾ ವಹಿಸಿ. ಹಗುರವಾಗಿ ಯಾರ ಬಗ್ಗೆಯೂ ಮಾತನಾಡಬೇಡಿ ಎಂದು …
Read More »
BigTv News
July 28, 2023
ದೇಶ-ವಿದೇಶ, ಸುದ್ದಿ
ನೆದರ್ಲ್ಯಾಂಡ್ಸ್ :ಇಲ್ಲಿನ ಕರಾವಳಿಯಲ್ಲಿ ಸುಮಾರು 3,000 ಕಾರುಗಳನ್ನು ಸಾಗಿಸುತ್ತಿದ್ದ ಸರಕು ಸಾಗಣೆ ಹಡಗಿನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಓರ್ವ ಭಾರತೀಯ ಪ್ರಜೆ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ ಎಂದು ಡಚ್ ಕೋಸ್ಟ್ ಗಾರ್ಡ್ ಅಧಿಕಾರಿಗಳು ಹೇಳಿದ್ದಾರೆ.3000 ಕಾರುಗಳನ್ನು ಸಾಗಿಸುತ್ತಿದ್ದ ಕಾರ್ಗೊ ಹಡಗುಜರ್ಮನಿಯಿಂದ ಸಿಂಗಾಪುರಕ್ಕೆ ಹೊರಟಿದ್ದ ಫ್ರೀಮ್ಯಾಂಟಲ್ ಹೈವೇ ಎಂಬ ಹೆಸರಿನ ಹಡಗು ಮಂಗಳವಾರ ಮಧ್ಯರಾತ್ರಿ ಅಮೆಲ್ಯಾಂಡ್‌ನ ಡಚ್ ದ್ವೀಪದ ಬಳಿ …
Read More »
BigTv News
July 28, 2023
ದೇಶ-ವಿದೇಶ, ಸುದ್ದಿ
ಮನಿಲಾ (ಫಿಲಿಪ್ಪೀನ್ಸ್):ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ 30 ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ಫಿಲಿಪ್ಪೀನ್ಸ್ ರಾಜಧಾನಿ ಸಮೀಪದ ಸರೋವರದಲ್ಲಿ ಗುರುವಾರ ನಡೆದಿದೆ. ಘಟನೆಯಿಂದ 40 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಫಿಲಿಪ್ಪೀನ್ಸ್ ಕರಾವಳಿ ರಕ್ಷಣಾ ಪಡೆ ತಿಳಿಸಿದೆ.ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಘಟನೆ ಸಂಭವಿಸಿದೆ. ಬಲವಾದ ಗಾಳಿಯಿಂದಾಗಿ ಯಾಂತ್ರೀಕೃತ ದೋಣಿ ಒಂದು ಕಡೆಗೆ ವಾಲಿತ್ತು. ಇದರಿಂದ ಭಯಭೀತರಾದ ಪ್ರಯಾಣಿಕರು ದೋಣಿಯ ಒಂದೇ ಕಡೆ ಗುಂಪುಗೂಡಿದರು. ಇದರ ಪರಿಣಾಮ ದೋಣಿ ಸಮತೋಲನ ಕಳೆದುಕೊಂಡು …
Read More »
BigTv News
July 28, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ವಿದೇಶ ಪ್ರವಾಸಕ್ಕೆ ತೆರಳಿರುವ ನಡುವೆಯೇ ಬಿಜೆಪಿ ಹಿರಿಯ ನಾಯಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಕುಟುಂಬಸಮೇತ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಉಭಯ ನಾಯಕರ ಫಾರಿನ್ ಟ್ರಿಪ್ ಇದೀಗ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಕುಟುಂಬ ಸದಸ್ಯರು ಗುರುವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಪ್ರಯಾಣಿಸಿದರು. ಯಡಿಯೂರಪ್ಪ ಜೊತೆ ಪುತ್ರ …
Read More »
BigTv News
July 28, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಸರ್ಕಾರ ಕೆಡವಲು ಸಿಂಗಪುರ್ನಲ್ಲಿ ಕುಳಿತು ತಂತ್ರ ಹೆಣೆಯಲಾಗುತ್ತಿದೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಫೋಟೋಗಳ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖಡಕ್ ಉತ್ತರ ನೀಡಿದ್ದಾರೆ. ಕುಮಾರಸ್ವಾಮಿ ಅವರು ತಮ್ಮ ಕುಟುಂಬ ಸಮೇತರಾಗಿ ಯೂರೋಪ್ ಪ್ರವಾಸದಲ್ಲಿರುವ ಫೋಟೋಗಳನ್ನು ಜೆಡಿಎಸ್ ನಾಯಕರು ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಯುರೋಪ್‌ನ ಫಿನ್ಲ್ಯಾಂಡ್ನಲ್ಲಿ ಹೆಚ್ಡಿಕೆ ಹಾಗೂ ಕುಟುಂಬ ಸದಸ್ಯರು ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ. ವಿಧಾನಸಭಾ ಅಧಿವೇಶನ ಮುಗಿದ ಬೆನ್ನಲ್ಲೇ ಹೆಚ್.ಡಿ.ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ಸಹೋದರ …
Read More »
BigTv News
July 28, 2023
ದೆಹಲಿ, ಸುದ್ದಿ
ನವದೆಹಲಿ:ಹುಲಿ ಸಂರಕ್ಷಣೆಯ ಉದ್ದೇಶದಿಂದ ಆರಂಭಿಸಲಾಗಿದ್ದ ‘ಹುಲಿ ಯೋಜನೆ’ ಇತ್ತೀಚೆಗಷ್ಟೇ 50 ವರ್ಷಗಳನ್ನು ಪೂರೈಸಿದೆ. ಈ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ವಿಶ್ವದ ಶೇ.70ರಷ್ಟು ಹುಲಿಗಳು ಭಾರತದಲ್ಲಿ ಕಂಡುಬರುವುದು ಸರ್ಕಾರದ ಉಪಕ್ರಮದ ಫಲಿತಾಂಶ ಎಂದು ಹೇಳಿದ್ದಾರೆ.ಇಂದು ಚೆನ್ನೈನಲ್ಲಿ ನಡೆದ ಜಿ 20 ಪರಿಸರ ಮತ್ತು ಹವಾಮಾನ ಸುಸ್ಥಿರತೆ ಸಚಿವರ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ, ಪ್ರಾಜೆಕ್ಟ್ ಲಯನ್ ಮತ್ತು ಪ್ರಾಜೆಕ್ಟ್ ಡಾಲ್ಫಿನ್ ಯೋಜನೆ ಪ್ರಗತಿಯಲ್ಲಿದೆ ಎಂದು …
Read More »
BigTv News
July 28, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಅನುತ್ತೀರ್ಣರಾದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಮತ್ತೊಂದು ಪೂರಕ ಪರೀಕ್ಷೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ಧರಿಸಿದ್ದು, ಇಂದು ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಆಗಸ್ಟ್ 21ರಿಂದ ಸೆಪ್ಟೆಂಬರ್ 2ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ನಡೆಯಲಿವೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವೇಳಾಪಟ್ಟಿ ಪ್ರಕಟಿಸಿದೆ. 2022-23ನೇ ಸಾಲಿನಲ್ಲಿ ಹಾಗೂ ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮಾತ್ರ ಈ ಪರೀಕ್ಷೆಗೆ …
Read More »
BigTv News
July 28, 2023
ಕರ್ನಾಟಕ, ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಗೃಹ ಲಕ್ಷ್ಮಿ ಮತ್ತು ಗೃಹ ಜ್ಯೋತಿ ಯೋಜನೆಯಲ್ಲಿ ಸರ್ಕಾರ ನಿಯಮಗಳನ್ನು ಉಲ್ಲಂಘನೆ ಮಾಡಿದ ಖಾಸಗಿ ಆನ್ ಲೈನ್ ಸೆಂಟರಗಳು.ಇಷ್ಟು ಕಠಿಣವಾಗಿ ಸರ್ಕಾರದ ಆದೇಶ ಮಾಡಿದ್ದರು ಪ್ರಯೋಜನ ಆಗುತ್ತಿಲ್ಲ,ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿ ಯೋಜನೆಗಳು ಆನ್ ಲೈನ್ ಹಾಕಲು ಯಾವುದೇ ತರವಾಗಿ ಜನರಿಂದ ಹಣ ತೆಗೆದುಕೊಳ್ಳಬಾರದು ಎಂದು ಸರಕಾರ ಖಡಕ್ಕ್ ಎಚ್ಚರಿಕೆ ಕೊಟ್ಟರು,ಗೋಕುಲ್ ರೋಡ್ ಚೇತನ್ಯ ನಗರ್ ಬಳಿ ಖಾಸಗಿ ಆನ್ ಲೈನ್ ಸೆಂಟರ್ ನಲ್ಲಿ ಜನರ ಬಳಿ …
Read More »