Breaking News

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಮ್ಮ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಲು ಆರಂಭಿಸಿವೆ:ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪ್ರತಿಪಕ್ಷಗಳು ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರ ಮಾತುಗಳ ಮೇಲೆ ವಿಶೇಷ ಗಮನ ಹರಿಸುತ್ತಿವೆ. ನಮ್ಮ ಹಲವು ಯೋಜನೆಗಳು ಸಂಪೂರ್ಣವಾಗಿ ಜನರನ್ನು ತಲುಪಬೇಕು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಮ್ಮ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಲು ಆರಂಭಿಸಿವೆ. 135 ಶಾಸಕರಲ್ಲಿ ಹೆಚ್ಚಿನವರು ಮೊದಲ ಬಾರಿಗೆ ಹಾಗೂ ಒಂದಿಷ್ಟು ವರ್ಷಗಳ ಅಂತರದ ಬಳಿಕ ಆಗಮಿಸಿದ್ದೀರಿ. ಆದ್ದರಿಂದ ಮಾತನಾಡುವಾಗ, ಸಾಮಾಜಿಕ ಜಾಲತಾಣದಲ್ಲಿ ಸಂದೇಶ ನೀಡುವಾಗ ನಿಗಾ ವಹಿಸಿ. ಹಗುರವಾಗಿ ಯಾರ ಬಗ್ಗೆಯೂ ಮಾತನಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು.

ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಪ್ರಾರಂಭದಲ್ಲಿಯೇ ಅವರು ಮಾತನಾಡಿದರು. ನಮ್ಮ ಸರ್ಕಾರ ಸುಭದ್ರವಾಗಿದೆ. ಸರ್ಕಾರವನ್ನು ಡಿಸ್ಟರ್ಬ್ ಮಾಡುವ ಪ್ರಯತ್ನ ನಡೆಯುತ್ತೆ. ಇದರ ಬಗ್ಗೆ ನಿಮ್ಮ ಕಣ್ಣು, ಕಿವಿ ಚುರುಕಿರಬೇಕು. ನಿಮ್ಮನ್ನು ಬೇಕೆಂದೇ ದಾರಿ ತಪ್ಪಿಸುವ ಕೆಲಸ ಮಾಡ್ತಾರೆ. ಸರ್ಕಾರ ಬಂದು ಈಗ ಎರಡು ತಿಂಗಳಾಗಿದೆ. ಆಗಲೇ ಕೆಲವು ಸಂದರ್ಭಗಳು ಶುರುವಾಗಿವೆ. ನೀವು ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಈ ವೇಳೆ ಶಾಸಕ ಬಸವರಾಜ ರಾಯರೆಡ್ಡಿ ಮಧ್ಯಪ್ರವೇಶಿಸಿ, ನಮಗೆ ಎಲ್ಲೂ ಅಸಮಾಧಾನವಿಲ್ಲ. ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿವೆ. ನಾವು ಎಲ್ಲವೂ ಇಲ್ಲವೆಂದು ಹೇಳ್ತಿಲ್ಲ. ಸಚಿವರು ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಇದಷ್ಟೇ ನಾವು ಕೇಳಿದ್ದು. ನಾವು ಬೇರೆ ಉದ್ದೇಶ ಇಟ್ಕೊಂಡು ಪತ್ರ ಬರೆದಿದ್ದಲ್ಲ. ಪಕ್ಷ ವಿರೋಧಿ, ಸರ್ಕಾರದ ವಿರೋಧಿ ನಡೆಯೂ ಇಲ್ಲ. ನಾವು ಬರೆದಿರುವ ಪತ್ರವೇ ಬೇರೆ ಮಾಧ್ಯಮದಲ್ಲಿ ಬರುತ್ತಿರುವ ಪತ್ರವೇ ಬೇರೆ ಎಂದು ಸ್ಪಷ್ಟನೆ ನೀಡಿದರು.

Share News

About BigTv News

Check Also

10 ದಿನಗಳಲ್ಲಿ ನ್ಯಾಯ ಸಿಗದಿದ್ದರೆ ಸಲ್ಲೇಖನ ವ್ರತ! ಸರ್ಕಾರಕ್ಕೆ ಗುಣಧರನಂದಿ ಸ್ವಾಮೀಜಿಗಳ ಕೊನೆಯ ಎಚ್ಚರಿಕೆ…

ಜೈನ ನಿಗಮ ಮಂಡಳಿ ಸ್ಥಾಪನೆಗೆ ಆಗ್ರಹ: ಚಿಕ್ಕೋಡಿಯಿಂದ ಸುವರ್ಣಸೌಧದವರೆಗೆ ಪಾದಯಾತ್ರೆ ಘೋಷಣೆ! ಜೈನ ಸಮುದಾಯದ ಬೇಡಿಕೆ ಈಡೇರದಿದ್ದರೆ ಸಲ್ಲೇಖನ ವ್ರತದ …

Leave a Reply

Your email address will not be published. Required fields are marked *