Breaking News

ಕರ್ನಾಟಕ

ವಾಣಿಜ್ಯ ನಗರಿ ಏರ್ಪೋರ್ಟ್ ನಲ್ಲಿ ನಮೋಗೆ ಭರ್ಜರಿ ಸ್ವಾಗತ

ಧಾರವಾಡ: ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಕ್ಯಾಂಪಸ್, ಜಲಜೀವನ ಮಿಷನ್ ಯೋಜನೆಗ, ವಿವೇಕ ಯೋಜನೆ, ಸ್ಮಾರ್ಟ್ ಸಿಟಿ ಹಾಗೂ ಇನ್ನಿತರ ಯೋಜನೆಯ ಶಂಕು ಸ್ಥಾಪನೆಗಾಗಿ ಬಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

Read More »

ಮೋದಿ ಕಟೌಟ್ ಗಾಗಿ ಮುಗ್ಗಿಬಿದ್ದ ಜನ

ಧಾರವಾಡ: ನಮ್ಮ ಜನರಿಗೆ ಮೋದಿಯವರ ಮೇಲಿನ ಅಭಿಮಾನವೋ ಅಥವಾ ಕಟೌಟ್ ಮೇಲಿನ ಪ್ರೀತಿಯೋ ಗೊತ್ತಿಲ್ಲ.ಯಾವುದೇ ಸಭೆ ಸಮಾರಂಭಕ್ಕೆ ಹೋದರೂ ಕಟೌಟ್ ಬ್ಯಾನರ್ ಗಳಿಗೆ ಮುಗಿ ಬಿಳುವುದು ಸರ್ವೇ ಸಾಮಾನ್ಯವಾಗಿದೆ. ಧಾರವಾಡದ ಐಐಟಿ ಮುಂದೆ ಜನರು ಮೋದಿ ಕಟೌಟ್ ಗೆ ಮುಗಿಬಿದ್ದಿದ್ದಾರೆ. ಧಾರವಾಡ ಐಐಟಿ ಬಳಿಯ ಮೋದಿ ಕಟೌಟ್ ತಂದಿರೋ ಬಿಜೆಪಿ ಕಾರ್ಯಕರ್ತರು ಕೆಳಗೆ ಇಳಿಸುತ್ತಿದ್ದಂತೆಯೇ ಜನರು ಮುಗಿಬಿದ್ದಿದ್ದಾರೆ. ಕಟೌಟ್ ನೋಡುತ್ತಿದ್ದಂತೆಯೇ ಜನರಿಂದ ಜನರಿಂದ ನೂಕುನುಗ್ಗಲಾಗಿದ್ದಾರೆ.ಇನ್ನೂ ಐಐಟಿ ಮುಂಭಾಗದ ಬೃಹತ್ ವೇದಿಕೆ …

Read More »

ಮೋದಿ ಕಾರ್ಯಕ್ರಮಕ್ಕಾಗಿ ಸಾರ್ವಜನಿಕರಿಗೆ ಉಚಿತ ಬಸ್ ವ್ಯವಸ್ಥೆ

ಧಾರವಾಡ: ಐಐಟಿ ಉದ್ಘಾಟನೆಗೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯಾಹ್ನ ನರೇಂದ್ರ ಮೋದಿ ಅವರು ಐಐಟಿಗೆ ಆಗಮಿಸಲಿದ್ದು, ಅದಕ್ಕಾಗಿ ಧಾರವಾಡ ಸೇರಿದಂತೆ ಗ್ರಾಮಾಂತರ ಭಾಗದ ಜನರಿಗಾಗಿ ಉಚಿತ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಬಸ್‌ಗಳ ಮೂಲಕ ಲಕ್ಷಾಂತರ ಜನ ಈ ಕಾರ್ಯಕ್ರಮಕ್ಕೆ ಬರಲಿದ್ದು, ಸುಮಾರು 2 ಲಕ್ಷಕ್ಕೂ ಅಧಿಕ ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

Read More »

ಬಿಜೆಪಿ ಕಾರ್ಯಕರ್ತರಿಂದ ಹುಬ್ಬಳ್ಳಿಯಲ್ಲಿ ಬೈಕ್ ರ್ಯಾಲಿ

ಹುಬ್ಬಳ್ಳಿ: ಧಾರವಾಡದ ಐಐಟಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ, ಇಂದು ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ವತಿಯಿಂದ, ಬೈಕ್ ರ್‌ಯಾಲಿ ಮಾಡಿದರು. ಹು-ಧಾ ಪೂರ್ವ ಅಧ್ಯಕ್ಷರಾದ ಪ್ರಭು ನವಲಗುಂದಮಠ ರವರ ಅಧ್ಯಕ್ಷತೆಯಲ್ಲಿ ಮತ್ತು ಬಿಜೆಪಿ ಹಿರಿಯ ಮುಖಂಡರಾದ ಶಂಕರಣ್ಣ ಬಿಜವಾಡ ರವರ ನೇತೃತ್ವದಲ್ಲಿ, ನ್ಯೂ ಇಂಗ್ಲಿಷ್ ಮ್ಯಾದರ ಓಣಿಯಿಂದ ಹಳೇ ಹುಬ್ಬಳ್ಳಿ ನೇಕಾನಗರದ ವರೆಗೆ ಬೃಹತ್ ಬೈರ್ ‌ಯಾಲಿ ಮಾಡಲಾಯಿತು. ಈ …

Read More »

ಧಾರವಾಡಕ್ಕೆ ಮೋದಿ ಆಗಮನ, 2 ಸಾವಿರ ಜನ ಪೊಲೀಸರ ನಿಯೋಜನೆ

ಧಾರವಾಡ: ರಾಜ್ಯದ ಮೊದಲ ಐಐಟಿ ಕೇಂದ್ರ ಉದ್ಘಾಟನೆಗಾಗಿ ನಾಳೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಧಾರವಾಡಕ್ಕೆ ಆಗಮಿಸಲಿದ್ದು, ಅವರ ಭದ್ರತೆಗಾಗಿ ಪೊಲೀಸ್ ಸರ್ಪಗಾವಲು ಹೆಣೆಯಲಾಗಿದೆ. ಐವರು ಎಸ್‌ಪಿಗಳನ್ನೊಳಗೊಂಡು ಒಟ್ಟು 2 ಸಾವಿರ ಜನ ಪೊಲೀಸರನ್ನು ಕರ್ತವ್ಯಕ್ಕಾಗಿ ನಿಯೋಜನೆ ಮಾಡಲಾಗಿದೆ. ಧಾರವಾಡ ಹೊರವಲಯದ ಚಿಕ್ಕಮಲ್ಲಿಗವಾಡ ಬಳಿ ಐಐಟಿ ನೂತನ ಕ್ಯಾಂಪಸ್ ನಿರ್ಮಾಣವಾಗಿದ್ದು, ನಾಳೆ ಇದನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. 5 ಜನ ಎಸ್‌ಪಿ, 8 ಜನ ಅಡಿಷನಲ್ ಎಸ್ಎಪಿ, 28 …

Read More »

ಮೋದಿ ಆಗಮನಕ್ಕಾಗಿ ಪೂರ್ವಸಿದ್ಧತೆ- ಅಂತಿಮವಾಗಿ ಪರಿಶೀಲಿಸಿದ ಸಚಿವ ಪ್ರಹ್ಲಾದ ಜೋಶಿ

ಧಾರವಾಡ : ನಾಳೆ ಧಾರವಾಡದ ಐಐಟಿ ನೂತನ ಕ್ಯಾಂಪಸ್ ಉದ್ಘಾಟನೆಗೆ ಪ್ರಧಾನಿ ಮೋದಿ ಐಐಟಿಗೆ ಆಗಮಿಸಲಿದ್ದು, ಅದರ ಕೊನೆಯ ಹಂತದ ಸಿದ್ಧತೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪರಿಶೀಲನೆ ನಡೆಸಿದರು. ಸಚಿವರೊಂದಿಗೆ ಶಾಸಕ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ಮೇಯರ್ ಈರೇಶ ಅಂಚಟಗೇರಿ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸಹ ಭೇಟಿ ನೀಡಿದ್ದರು. ಕಾರ್ಯಕ್ರಮದ ಮುಖ್ಯವೇದಿಕೆ, ಸಿರಿಧಾನ್ಯಗಳ ಚಿತ್ರಣ, ಮೋದಿ ಆಗಮಿಸುವ ರಸ್ತೆ, ಹೆಲಿಪ್ಯಾಡ್ ಸೇರಿದಂತೆ ಇತ್ಯಾದಿ …

Read More »

ಹೋಳಿ ಹಬ್ಬದ ನಿಮಿತ್ತ ಪೊಲೀಸ್ ಪಡೆಗಳ ರೂಟ್ ಮಾರ್ಚ

ಹುಬ್ಬಳ್ಳಿ-ಧಾರವಾಡ: ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಾಳೆ ನಡೆಯಲಿರುವ ಹೋಳಿ ಹಬ್ಬದ ನಿಮಿತ್ತ ಶಾಂತಿ ಸುವ್ಯವಸ್ಥೆ ಕಾಪಾಡುವ ಕ್ರಮವಾಗಿ ಅಧೀನ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆ ನೀಡಿ ನಗರದ ಪ್ರಮುಖ ಸ್ಥಳಗಳಲ್ಲಿ ಮಾನ್ಯ ಪೊಲೀಸ್ ಆಯುಕ್ತರವರ ಮಾರ್ಗದರ್ಶನದಲ್ಲಿ ಪೊಲೀಸ್ ಪಡೆಗಳ ರೂಟ್ ಮಾರ್ಚ ನಡೆಸಲಾಯಿತು. ಪಥಸಂಚಲನದಲ್ಲಿ ಮಾನ್ಯ ಉಪ ಪೊಲೀಸ್ ಆಯುಕ್ತರು ಸೇರಿದಂತೆ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

Read More »

ಪೌರನೌಕರರಿಗೆ ಸಿಂಗಪುರ ಪ್ರವಾಸ-ಸಿಎಂ

13 ಸಾವಿರ ಪೌರ ಕಾರ್ಮಿಕರನ್ನು ಖಾಯಂ ಮಾಡಲಾಗಿದ್ದು, ಅವರನ್ನು ಇನ್ನು ಮುಂದೆ ಪೌರನೌಕರರು ಎಂದೇ ಕರೆಯಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. 300 ಪೌರಕಾರ್ಮಿಕರನ್ನು ಸಿಂಗಪುರ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ. ಇದರಿಂದಾ ನಗರಗಳ ಸ್ವಚ್ಛತೆ ಕಾರ್ಯ ಹೇಗೆ ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಅವರಿಗೆ ಈ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.

Read More »

ಆಟ್ಟಿಟ್ಯುಡ್ ವುಮೆನ್ ಫೌಂಡೇಶನ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಆಟ್ಟಿಟ್ಯುಡ್ ವುಮೆನ್ ಫೌಂಡೇಶನ್ (ರಿ) ವತಿಯಿಂದ ಹಳೆ ಹುಬ್ಬಳ್ಳಿಯ ಹೆಗ್ಗೇರಿಯಲ್ಲಿರುವ ಮಂಜುನಾಥ ಪ್ರೌಢ ಶಾಲೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಬಿ.ಜೆ.ಪಿ. ರಾಜ್ಯ ಪ್ರಕೋಷ್ಟಗಳ ಸಹಸಂಯೋಜಕರಾದ ಶ್ರೀ ಜಯತೀರ್ಥ ಕಟ್ಟಿಯವರು ಮಾತನಾಡುತ್ತ ಎಲ್ಲಿ ಮಹಿಳೆಯರಿಗೆ ಗೌರವ ಇರುತ್ತದೋ ಅಲ್ಲಿ ಯಶಸ್ಸು ಇದ್ದೇ ಇರುತ್ತದೆ‌ ಮತ್ತು ಅಲ್ಲಿ‌ ದೇವತೆಗಳು ಸುಪ್ರೀತರಾಗಿರುತ್ತಾರೆ ಎಂದು ಹೇಳಿದರು. ಇಂದು ಆಟೋ ಚಲಾಯಿಸುವುದರಿಂದ ಹಿಡಿದು ವಿಮಾನದ ಪೈಲಟ್ ವರೆಗೂ ಎಲ್ಲ ಕ್ಷೇತ್ರಗಳಲ್ಲೂ …

Read More »

ರೋಗಿಗಳ ಮುಂದೆಯೇ ರೀಲ್ಸ್ ಮಾಡಿದ ನರ್ಸ್‌

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯನೊರ್ವ ಪತಲಿ ಕಮರಿಯಾ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿ ,ಆಸ್ಪತ್ರೆಯಲ್ಲೇ ಕುಣಿದು ಕುಪ್ಪಳಿಸಿ ನಿನ್ನೆ ತಾನೇ ರೀಲ್ಸ್ ಮಾಡಲು ಹೋಗಿ ವೈರಲ್ ಆಗಿದ್ದರು. ಇಂದು ನರ್ಸ್ “ನಂದೇ ಈ ಸ್ವತ್ತು ಬಿಟ್ಟುಇರಲಾರೆ” ರೀಲ್ಸ್ ಮಾಡಿ ವೈರಲ್ ಆಗಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಮುಂದೆಯೇ ರೀಲ್ಸ್ ಮಾಡಿದ ನರ್ಸ್‌ ರೇಣುಕಾ ಸುಂಕದ ವಿರುದ್ದ ನೆಟ್ಟಿಗರ ಆಕ್ರೋಶ. ವೈದ್ಯ …

Read More »