Breaking News

ಚಾಕು ತೋರಿಸಿ ಚಿನ್ನಾಭರಣ ಕಳವು

ಚಿಂತಾಮಣಿ: ಕುರುಬೂರು ಕೆರೆ ಬಳಿ ಕುರಿಗಳನ್ನು ಮೇಯಿಸುತ್ತಿದ್ದ ಮಹಿಳೆಗೆ ಚಾಕು ತೋರಿಸಿದ ದುಷ್ಕರ್ಮಿ ಚಿನ್ನದ ಓಲೆ ಮತ್ತು ತಾಳಿ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಕುರುಬೂರು ಪದ್ಮಾ (48) ಚಿನ್ನಾಭರಣ ಕಳೆದುಕೊಂಡವರು. ಮಂಗಳವಾರ ಕುರಿಗಳನ್ನು ಮೇಯಿಸಲು ಹೋಗಿದ್ದಾಗ ಬೈಕ್​ ಸವಾರ ನನ್ನ ಬಳಿ ಬಂದು ಚಾಕು ತೋರಿಸಿ ಬೆದರಿಸಿ ಒಡವೆ ಕೊಡು, ಇಲ್ಲವೇ ಕುರಿಗಳನ್ನು ಕೊಡು ಎಂದು ಬೆದರಿಸಿದ್ದಾನೆ. ಪ್ರತಿರೋಧ ಮಾಡಿದಾಗ ಓಲೆ, ತಾಳಿ ಕಿತ್ತುಕೊಂಡಿದ್ದಾನೆ. ಓಲೆಗಳನ್ನು ಕಿತ್ತುಕೊಂಡಾಗ ಎರಡೂ ಕಿವಿಗಳಿಗೆ ಗಾಯವಾಗಿದ್ದು, ಪಕ್ಕಕ್ಕೆ ತಳ್ಳಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *