ಕುಂದಗೋಳ: ಮೇಲ್ಪಾವಣಿ ಕುಸಿದು ಸಾವನ್ನಪ್ಪಿದ ಬಾಲಕಿ ಅಮೃತಾ ಗದಿಗೆಪ್ಪ ಮೆಣಸಗೊಂಡ 5 ವರ್ಷದ ಬಾಲಕಿ ಕುಟುಂಬಕ್ಕೆ ಪರಿಹಾರ ಒದಗಿಸುವ ಕಾರ್ಯವನ್ನು ತಾಲೂಕು ಆಡಳಿತ ಮಾಡಿದೆ. ಕಳೆದ ಶುಕ್ರವಾರವಷ್ಟೇ ಮಗು ಮೃತಪಟ್ಟಿತ್ತು, ಘಟನೆಯ ವಿಷಯ ತಿಳಿದ ತಾಲೂಕು ಆಡಳಿತ ಜಿಲ್ಲಾಡಳಿತಕ್ಕೆ ಮಾಹಿತಿ ಸಲ್ಲಿಸಿ ಎನ್. ಡಿ. ಆರ್. ಎಫ್ ನಿರ್ದೇಶನದ ಪ್ರಕಾರ 4 ಲಕ್ಷ ಹಣ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 1 ಲಕ್ಷ ರೂಪಾಯಿ ಸೇರಿ ಒಟ್ಟು 5 ಲಕ್ಷ ರೂಪಾಯಿಗಳ ಪರಿಹಾರದ ಮೊತ್ತವನ್ನು 3 ದಿನಗಳ ಒಳಗಾಗಿ ನೀಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

