admin
November 22, 2021
Breaking News, ಅಪರಾಧ, ಕರ್ನಾಟಕ, ತುಮಕೂರು
ತುಮಕೂರು: ಜಿಲ್ಲೆಯಲ್ಲಿ ಮಳೆಯಿಂದ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಲೇ ಇವೆ. ಅಕಾಲಿಕ ಮಳೆಯಿಂದ ಬೆಳೆಗಳು ನೆಲಕಚ್ಚಿವೆ. ಇನ್ನೊಂದೆಡೆ, ರಸ್ತೆ ಅಪಘಾತಗಳು ಕೂಡಾ ಸಂಭವಿಸುತ್ತಿವೆ. ಗುಬ್ಬಿ ತಾಲೂಕಿನ ತೊರೆಹಳ್ಳದ ಕೆರೆಕೋಡಿ ಬಳಿ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಕ್ಕದಲ್ಲೇ ಹರಿಯುತ್ತಿದ್ದ ಹಳ್ಳಕ್ಕೆ ಬಿದ್ದಿದೆ. ಈ ವೇಳೆ, ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ ಹಳ್ಳದಲ್ಲಿ ಮುಳುಗಿದ್ದ ಕಾರನ್ನು ಹೊರತೆಗೆಯಲು ತಕ್ಷಣಕ್ಕೆ ಸಾಧ್ಯವಾಗಿರಲಿಲ್ಲ. ನಂತರ ಸ್ಥಳೀಯರ ಸಹಕಾರದಿಂದ ಕ್ರೇನ್ ಬಳಸಿ ಕಾರನ್ನು ಹಳ್ಳದಿಂದ ಮೇಲೆತ್ತಲಾಗಿದೆ. …
Read More »
BigTv News
November 22, 2021
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ : ಹುಬ್ಬಳ್ಳಿ – ಧಾರವಾಡ ಮಹಾನಗರದಲ್ಲಿ ಕಿಸೆಗಳ್ಳತನ ಮಾಡಿ ಗೋವಾದಲ್ಲಿ ತಲೆಮರೆಸಿಕೊಂಡಿದ್ದ ಕಳ್ಳನನ್ನು ಹುಬ್ಬಳ್ಳಿ ನಗರ ಠಾಣೆ ಪೊಲೀಸರು 21 ವರ್ಷಗಳ ಬಳಿಕ ಪತ್ತೆ ಹಚ್ಚಿ ಬಂಧಿಸಿರುವ ಘಟನೆ ನಡೆದಿದೆ. ಹುಬ್ಬಳ್ಳಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2000 ರಲ್ಲಿ ಹುಬ್ಬಳ್ಳಿಯ ಗಣೇಶಪೇಟೆ ಅಬ್ದುಲ್ ವಾಚಮೇಕರ್ ಎಂಬಾತನನ್ನು ಕಿಸೆಗಳ್ಳತನ ಪ್ರಕರಣದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನಂತರ ಅಬ್ದುಲ್ ಬೇಲ್‌ನಿಂದ ಹೊರಗಡೆ ಮರಳಿ ಕೋರ್ಟ್‌ಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ …
Read More »
admin
November 19, 2021
Breaking News, ಕರ್ನಾಟಕ, ಬೆಂಗಳೂರು, ರಾಜಕೀಯ ಸುದ್ದಿ
ಮಂಗಳೂರು: ಕೇಂದ್ರ ಸರ್ಕಾರವು ದೇಶಕ್ಕೆ ಮಾರಕವಾಗಿರುವ ರೈತ ವಿರೋಧಿ ಕಾಯ್ದೆಗಳನ್ನು ರೈತರ ಜನಾಂದೋಲನಕ್ಕೆ ಮಣಿದು ಹಿಂಪಡೆದಿದೆ. ಆದರೆ 1 ವರ್ಷ 2 ತಿಂಗಳಲ್ಲಿ ಎಷ್ಟು ಶ್ರೀಮಂತರು ಈ ಕಾಯ್ದೆಯಿಂದ ಲಾಭ ಪಡೆದುಕೊಂಡಿದ್ದಾರೆಂದು ಸರ್ಕಾರ ಬಹಿರಂಗಪಡಿಸಲಿ ಎಂದು ಶಾಸಕ ಯು.ಟಿ ಖಾದರ್ ಹೇಳಿದರು. ‘ಬಿಜೆಪಿ ಮುಖಂಡರು ಕ್ಷಮೆ ಯಾಚಿಸಲಿ’: ಕಾಂಗ್ರೆಸ್ ಸರ್ಕಾರ ರೈತ ಮಸೂದೆಯನ್ನು ಜಾರಿಗೊಳಿಸಿತ್ತು. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈ ಕಾನೂನನ್ನು ತಿದ್ದುಪಡಿ ಮಾಡಿತು. ಹಾಗಾಗಿ ರೈತರು ನಿರಂತರ …
Read More »
admin
November 19, 2021
ಕರ್ನಾಟಕ, ಧಾರವಾಡ
ಧಾರವಾಡ : ಜಿಲ್ಲೆಯಲ್ಲಿ ಇಂದು ಬೆಳಿಗ್ಗೆಯಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಜಿಲ್ಲೆಯಲ್ಲಿ ಸತತವಾಗಿ ಸುರಿದ ಮಳೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅವಳಿ-ನಗರದ ಜನತೆ ಪರದಾಡುವಂತಾಗಿದೆ. ವಾಹನ ಸವಾರರಿಗೆ ಸಂಚಾರಕ್ಕೆ ಅಡೆತಡೆ ಉಂಟಾಯಿತು. ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ತೊಂದರೆ ಅನುಭವಿಸುವಂತಾಯಿತು. ಅಲ್ಲದೆ ಕೆಲ ಮನೆಗಳ ಮಾಳಿಗೆ ಹಾಗೂ ಗೋಡೆಗಳು ಸಹ ಕುಸಿದಿರುವುದು ಕಂಡು ಬಂತು. , ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಹೊಲಗಳಲ್ಲಿ …
Read More »
admin
November 19, 2021
Breaking News, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಧಾರವಾಡ: ಎಲ್ಲಿ ಹಳ್ಳಗಳನ್ನು ದಾಟಿಕೊಂಡು ಮಕ್ಕಳು ಶಾಲೆಗೆ ಹೋಗುತ್ತಾರೋ ಹಾಗೂ ಪ್ರವಾಹ ಎದುರಾಗುವ ಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಾದ್ಯಂತ ಎರಡ್ಮೂರು ದಿನಗಳಿಂದ ಮಳೆ ಸುರಿಯುತ್ತಿದ್ದು, ಇದರಿಂದ ಹಳ್ಳ, ಕೊಳ್ಳಗಳು ತುಂಬಿ ಬರುವ ಸಾಧ್ಯತೆ ಇದೆ. ಹೀಗಾಗಿ ಎಲ್ಲೆಲ್ಲಿ ಹಳ್ಳಗಳನ್ನು ದಾಟಿಕೊಂಡು ಮಕ್ಕಳು ಶಾಲೆಗೆ ಹೋಗಬೇಕೋ ಅಂತಹ ಪ್ರದೇಶದಲ್ಲಿನ ಶಾಲೆಗೆ ರಜೆ …
Read More »
admin
November 19, 2021
Breaking News, ಕರ್ನಾಟಕ, ರಾಜಕೀಯ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಕಾಂಗ್ರೆಸ್‌ನ ನಾಯಕರು ಪಾರ್ಟ್ ಟೈಮ್ ಲೀಡರ್ಸ್ ಇದ್ದಂತೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಪಾರ್ಟ್ ಟೈಮ್ ಅಲ್ಲ ಫುಲ್ ಟೈಮ್ ಲೀಡರ್ ಎಂದು ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದರು. ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ 15ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಆ ಮೂಲಕ ಹೊಸ ಇತಿಹಾಸವನ್ನು ಬರೆಯುತ್ತೇವೆ. ಹಿಂದುಳಿದವರನ್ನು ಕಾಂಗ್ರೆಸ್ ಕಡೆಗಣಿಸಿದ ಹಾಗೆ ಬಿಜೆಪಿ ಮಾಡಿಲ್ಲ. ಕಾಂಗ್ರೆಸ್ ಹಗರಣದ ರಾಜಕಾರಣ ಮಾಡುತ್ತಾ …
Read More »
admin
November 18, 2021
ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಧಾರವಾಡ: ಉತ್ತರ ಕರ್ನಾಟಕದಲ್ಲಿ ಇನ್ನೂ ಎರಡು ದಿನ ಭಾರಿ ಮಳೆ ಆಗಲಿದೆ ಎಂದು ಧಾರವಾಡ ಕೃಷಿ ವಿವಿ ಹವಾಮಾನ ಕೇಂದ್ರದ ಮುಖ್ಯಸ್ಥ ಡಾ.ಆರ್.ಹೆಚ್. ಪಾಟೀಲ್ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಮುಂದಿನ 48 ಗಂಟೆಗಳ ಅವಧಿಯಲ್ಲಿ ಜೋರು ಮಳೆಯಾಗಲಿದೆ. ವಾಯುಭಾರ ಕುಸಿತದ ಪರಿಣಾಮ ಮಳೆ ದಕ್ಷಿಣದಿಂದ ಈಗ ಉತ್ತರಕ್ಕೆ ಬಂದಿದೆ. ನಮ್ಮ ರಾಜ್ಯದ ದಕ್ಷಿಣ ಭಾಗದಂತೆ ಈಗ ಉತ್ತರ ಭಾಗದಲ್ಲಿಯೂ ಮಳೆಯಾಗಲಿದೆ ಎಂದರು.ನವೆಂಬರ್ 19 ಮತ್ತು 20ರಂದು …
Read More »
admin
November 18, 2021
ಕರ್ನಾಟಕ, ರಾಜಕೀಯ ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡ :ಭಾರತೀಯ ಜನತಾ ಪಾರ್ಟಿಯ ಹು-ಧಾ ಪಶ್ಷಿಮ ವಿಧಾನಸಭಾ ಕ್ಷೇತ್ರದ ಕಾರ್ಯಕಾರಿಣಿ ಸಭೆಯು ನಗರದ ಖಾಸಗಿ ಹೊಟೆಲ್‌ನಲ್ಲಿ ಗುರುವಾರ ಜರುಗಿತು.ಸಭೆಯಲ್ಲಿ ಮುಖ್ಯ ಅಥಿಯಾಗಿ ಪಾಲ್ಗೊಂಡು ಮಾತನಾಡಿದ ಹು-ಧಾ ಮಹಾನಗರ ಜಿಲ್ಲಾ ಅಧ್ಯಕ್ಷರು ಆದ ಶಾಸಕ ಅರವಿಂದ ಬೆಲ್ಲದ,ಪಕ್ಷದ ಎಲ್ಲ ಮೋರ್ಚಾಗಳ ಪದಾಧಿಕಾರಿಗಳು ವಾರ್ಡ್ ಮಟ್ಟದಲ್ಲಿ ಸಭೆ ನಡೆಸಬೇಕು. ಪ್ರಮುಖವಾಗಿ ಯುವ ಮೋರ್ಚಾ, ಮಹಿಳಾ ಮೋರ್ಚಾ, ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಮೋರ್ಚಾ, ಹಿಂದುಳಿದ ವರ್ಗ ಮೋರ್ಚಾಗಳ ಪದಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ …
Read More »
admin
November 18, 2021
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಹಾಡಹಗಲೇ ಮಾರಕಾಸ್ತೃಗಳು ಸದ್ದು ಮಾಡುತ್ತಿವೆ. ದುಷ್ಕರ್ಮಿಗಳು ರೈಲ್ವೆ ನೌಕರನಿಗೆ ಚಾಕುವಿನಿಂದ ಇರಿದಿರುವ ಘಟನೆ ನಗರದ ರೇಲ್ವೆ ಶೆಡ್ ಮುಂಭಾಗದಲ್ಲಿ ನಡೆದಿದೆ. ಹುಬ್ಬಳ್ಳಿ- ಗದಗ ರಸ್ತೆಯಲ್ಲಿರುವ ಲೋಕೋ ಶೆಡ್ ಮುಂಭಾಗದಲ್ಲಿಯೇ ಚಂದ್ರಶೇಖರ ನಾಯ್ಡು ಎಂಬುವವರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಮೂರ್ನಾಲ್ಕು ಬಾರಿ ಇರಿದಿದ್ದರಿಂದ ತೀವ್ರವಾದ ರಕ್ತಸ್ರಾವವಾಗಿದೆ. ತಕ್ಷಣವೇ ರೈಲ್ವೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಧಾರವಾಡದ ಸತ್ತೂರ ಬಳಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆಯ …
Read More »
admin
November 18, 2021
ಕರ್ನಾಟಕ, ಕರ್ನಾಟಕ, ಗದಗ
ಗದಗ :ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಊರಿನ ವಾರ್ಡ್ 1 ರ ಹನಮಂತಗೌಡ ಬಸವನಗೌಡ ಪಾಟೀಲ್ ಎಂಬುವವರ ಮನೆಯು ಸಂಪೂರ್ಣವಾಗಿ ಬಿದ್ದಿದ್ದು ಅಧಿಕಾರಿಗಳು ಆಗಲಿ ಗ್ರಾಮ ಪಂಚಾಯತಿಯವರು ಬಂದು ನೋಡಿಕೊಂಡು ಹೋಗುತ್ತಾರೆ ಹೋರತು ಯಾರು ಪರಿಹಾರ ನೀಡುತ್ತಿಲ್ಲ ಎಂದು ಕಣ್ಣೀರು ಹಾಕಿದ ಅಜ್ಜಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ಸುಮಾರು 7 ತಿಂಗಳ ಹಿಂದೆಯೇ ಮಳೆಗೆ ಮನಿಯೊಂದು ಬಿದ್ದಿದ್ದು ಶಾಸಕರು ಬಂದು ನೋಡಿಕೊಂಡು ಹೋದರು ಇಲ್ಲಿವರೆಗೆ ಏನು ಮಾಡಿಲ್ಲ ಹಾಗೂ ಗ್ರಾಮ ಪಂಚಾಯತಿಯವರು …
Read More »