
ಗದಗ :ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಊರಿನ ವಾರ್ಡ್ 1 ರ ಹನಮಂತಗೌಡ ಬಸವನಗೌಡ ಪಾಟೀಲ್ ಎಂಬುವವರ ಮನೆಯು ಸಂಪೂರ್ಣವಾಗಿ ಬಿದ್ದಿದ್ದು ಅಧಿಕಾರಿಗಳು ಆಗಲಿ ಗ್ರಾಮ ಪಂಚಾಯತಿಯವರು ಬಂದು ನೋಡಿಕೊಂಡು ಹೋಗುತ್ತಾರೆ ಹೋರತು ಯಾರು ಪರಿಹಾರ ನೀಡುತ್ತಿಲ್ಲ ಎಂದು ಕಣ್ಣೀರು ಹಾಕಿದ ಅಜ್ಜಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ಸುಮಾರು 7 ತಿಂಗಳ ಹಿಂದೆಯೇ ಮಳೆಗೆ ಮನಿಯೊಂದು ಬಿದ್ದಿದ್ದು ಶಾಸಕರು ಬಂದು ನೋಡಿಕೊಂಡು ಹೋದರು ಇಲ್ಲಿವರೆಗೆ ಏನು ಮಾಡಿಲ್ಲ ಹಾಗೂ ಗ್ರಾಮ ಪಂಚಾಯತಿಯವರು ಬಂದು ನೋಡೊಕೊಂಡು ಹೋದರು ಪರಿಹಾರ ನೀಡಿಲ್ಲ ಇನ್ನೂ ನಿನ್ನೆ ಮಳೆಯಾದರು ಎಲ್ಲ ನೀರು ಮನೆಯಲ್ಲಿಯೇ ಬರುತ್ತದೆ ಹಗೇ ಮಳೆಯಾದರೆ ಮನೆಯಲ್ಲಿ ಮಲಗಲು ಆಗಲ್ಲ ಆದರಿಂದ ಎಲ್ಲರೂ ರಾತ್ರಿ ಹೊತ್ತಿಗೆ ದೇವಸ್ಥಾನದಲ್ಲಿ ಮಲಗುತ್ತಿದ್ದೇವೆ.

ನಮಗೆ ಶಾಸಕರು ಮನೆ ನಿರ್ಮಾಣ ಮಾಡಲು ಸಹಾಯವಾದರೆ ನಮಗೆ ಸಹಾಯ ಮಾಡುವಂತೆ ಆಗುತ್ತೆ ಶಾಸಕರು ಮನೆಯನ್ನು ನೋಡಿಕೊಂಡು ಹೋಗಿದ್ದಾರೆ ಮತ್ತು ಅವರ ಮಗನು ನೋಡಿಕೊಂಡು ಹೋಗಿದ್ದಾರೆ ನಮಗೆ ಸಹಾಯ ಮಾಡಿ ಅಥವಾ ಮನೆಯನ್ನು ಹಾಕಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮನೆ ಬಿದ್ದಾಗ ತಹಶೀಲ್ದಾರ ಬಂದು ಮನೆ ವೀಕ್ಷಣೆ ಮಾಡಿದರು ಮಾಡಿದ ನಂತರ ಮನೆ ಪರಿಹಾರ ಬರಿ 3000 ಸಾವಿರ ರೂಪಾಯಿ ಬಂದಿದೆ ಈ ರೂಪಾಯಲ್ಲಿ ಮನೆ ನಿರ್ಮಾಣ ಮಾಡಲು ಆಗತ್ತ ಆಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





