Breaking News

ಬೆಳಗಾವಿ

ತಂದೆಯ ಸಮಾಧಿ ಪಕ್ಕದಲ್ಲೇ ಉಮೇಶ್​ ಕತ್ತಿ ಅಂತ್ಯಕ್ರಿಯೆ

ಬೆಳಗಾವಿ: ಮಂಗಳವಾರ ರಾತ್ರಿ ಹೃದಯಘಾತದಿಂದ ನಿಧನರಾಗಿರುವ ಸಚಿವ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ಏರ್​​ಲಿಫ್ಟ್ ಮಾಡಲಾಗುತ್ತಿದೆ. ತಂದೆಯ ಸಮಾಧಿ ಪಕ್ಕದಲ್ಲೇ ಉಮೇಶ್​ ಕತ್ತಿ ಅಂತ್ಯಕ್ರಿಯೆ ನಡೆಯಲಿದ್ದು ಈ ಹಿನ್ನೆಲೆ ಎರಡು ಎಕರೆ ಕಬ್ಬು ಕಟಾವು ಮಾಡಲಾಗಿದೆ. ಏರ್ ಅಂಬುಲೆನ್ಸ್ ಮೂಲಕ ಬೆಳಗಾವಿಗೆ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತಿದೆ. ಅಲ್ಲಿಂದ ಹುಕ್ಕೇರಿಯ ಬೆಲ್ಲದ ಬಾಗೇವಾಡಿಗೆ ರವಾನೆ ಮಾಡಲಾಗುತ್ತದೆ. ಮಧ್ಯಾಹ್ನ ಎರಡು ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸ್ವಗ್ರಾಮ …

Read More »

ವಿದ್ಯುತ್ ತಂತಿ ತಗಲಿ ಇಬ್ಬರು ಸಾವು

ಬೆಳಗಾವಿ: ತಾಲ್ಲೂಕಿನ ಸುಳಗಾ ಗ್ರಾಮದಲ್ಲಿ ಸೋಮವಾರ ಸಂಜೆ ಮಳೆ ನೀರು ಸೋರದಂತೆ ಮನೆ ಮಾಳಿಗೆ ಮನೆಯ ಮೇಲೆ ತಗಡಿನ ಪತ್ರಾಗಳನ್ನು ಹಾಕುವ ವೇಳೆ ವಿದ್ಯುತ್‌ ತಂತಿ ತಗಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸುಳಗಾ ನಿವಾಸಿ ವಿನಾಯಕ ಕೃಷ್ಣ ಕಾಲಖಾಂಬಕರ (25), ಬೆನಕನಹಳ್ಳಿ ನಿವಾಸಿ ವಿಲಾಸ ಗೋ‍ಪಾಲ ಅಗಸಗೇಕರ (57) ಮೃತಪಟ್ಟವರು. ವಿನಾಯಕ ಅವರ ಮನೆ ಮಳೆಯಿಂದಾಗಿ ಸೋರುತ್ತಿತ್ತು. ಈಗಾಗಲೇ ಇದ್ದ ತಗಡಿನ ಚಾವಣಿ ಮೇಲೆ ಹೊಸ …

Read More »

KPTCL ಪರೀಕ್ಷೆಯಲ್ಲಿ ಅಕ್ರಮ : ಮೂವರು ಬಂಧನ

ಬೆಳಗಾವಿ: ಕೆಪಿಟಿಸಿಎಲ್ (KPTCL) ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಹಿನ್ನೆಲೆ ಬೆಳಗಾವಿ ಪೊಲೀಸರಿಂದ ಮತ್ತೆ ಮೂವರ ಬಂಧನ ಮಾಡಿದ್ದು, ವಿಚಾರಣೆ ಮಾಡುತ್ತಿದ್ದಾರೆ. ಅತಿಥಿ ಉಪನ್ಯಾಸಕ, ಅಭ್ಯರ್ಥಿಗಳ ಇಬ್ಬರು ಸಂಬಂಧಿಕರನ್ನು ಬಂಧನ ಮಾಡಿಲಾಗಿದೆ. ಲೀಕ್ ಆದ ಪ್ರಶ್ನೆ ಪತ್ರಿಕೆ ನೋಡಿ ಅತಿಥಿ ಉಪನ್ಯಾಸಕ ಆದೇಶ ನಾಗನೂರಿ ಉತ್ತರ ಬರೆಯುತ್ತಿದ್ದರು ಎನ್ನಲಾಗುತ್ತಿದೆ. ಗದಗ ಮುನ್ಸಿಪಲ್ ಪಿಯು ಕಾಲೇಜಿನಿಂದ ಪ್ರಶ್ನೆಪತ್ರಿಕೆ ಲೀಕ್ ಆಗಿತ್ತು. ಹುಕ್ಕೇರಿ ತಾಲೂಕಿನ ಶಿರಹಟ್ಟಿ ಬಿ.ಕೆ.ಗ್ರಾಮದ ತೋಟದ ಮನೆಯಲ್ಲಿ ಉತ್ತರ …

Read More »

15 ಸಾವಿರ ಶಿಕ್ಷಕರನ್ನು ಶೀಘ್ರವೇ ಭರ್ತಿ ಮಾಡಲಾಗುವುದು : ಬೊಮ್ಮಾಯಿ

ಬೆಳಗಾವಿ: :  15 ಸಾವಿರ ಶಿಕ್ಷಕರನ್ನು ಶೀಘ್ರವೇ ಭರ್ತಿ ಮಾಡಲಾಗುವುದು. ಕಾಲೇಜಿನಲ್ಲಿ 6 ಸಾವಿರ ಸ್ಮಾರ್ಟ್‌ ಕ್ಲಾಸ್‌ಗಳನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ನಡೆದ ವಾಯವ್ಯ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ ಒಂದೇ ವರ್ಷದಲ್ಲಿ ಏಳು ಸಾವಿರ ಶಾಲಾ ಕೊಠಡಿಗಳನ್ನು ಗ್ರಾಮೀಣ ಭಾಗದಲ್ಲಿ ಕಟ್ಟಲು ಅನುದಾನ ನೀಡಿ, ಇದೇ ವರ್ಷದಲ್ಲಿ ಪೂರ್ತಿಗೊಳಿಸಲು ಸೂಚಿಸ ಲಾಗಿದೆ.ಏಳು ಸರಕಾರಿ ಎಂಜಿನಿಯರಿಂಗ್‌ …

Read More »

ಕಾಂಗ್ರೆಸ್‌ ಅಧಿಕಾರಕ್ಕೆ ಬಂದೇ ಬಿಡುತ್ತದೆ ಎಂಬ ಭ್ರಮೆ ಆ ಪಕ್ಷದಲ್ಲಿ ಹೆಚ್ಚಾಗಿದೆ : ಯಡಿಯೂರಪ್ಪ

ಬೆಳಗಾವಿ: ‘ಮುಂದೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದೇ ಬಿಡುತ್ತದೆ ಎಂಬ ಭ್ರಮೆ ಆ ಪಕ್ಷದಲ್ಲಿ ಹೆಚ್ಚಾಗಿದೆ. ವಿಧಾನ ಪರಿಷತ್‌ ಚುನಾವಣೆಯ ಎಲ್ಲ ಸ್ಥಾನಗಳಲ್ಲೂ ಅವರನ್ನು ಸೋಲಿಸುವ ಮೂಲಕ, ಭ್ರಮಾಲೋಕದಿಂದ ಹೊರತರಬೇಕು’ ಎಂದು ಶಾಸಕ ಬಿ.ಎಸ್‌.ಯಡಿಯೂರಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು. ವಿಧಾನ ಪರಿಷತ್‌ ವಾಯವ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ, ಪದವೀಧರ ಕ್ಷೇತ್ರದ ಅಭ್ಯರ್ಥಿ ಹಣಮಂತ ನಿರಾಣಿ ಅವರ ಪರ, ನಗರದಲ್ಲಿ ಬುಧವಾರ ಚುನಾವಣಾ ಪ್ರಚಾರ ಭಾಷಣ ಮಾಡಿ …

Read More »

ಖರ್ಗೆಗೆ ನಾಯಕತ್ವ ಕೊಟ್ಟರೆ ಕಾಂಗ್ರೆಸ್‌ ಜತೆಗೆ ಕೈ ಜೋಡಿಸುವ ಚಿಂತನೆ : ಕುಮಾರಸ್ವಾಮಿ

ಬೆಳಗಾವಿ: ಮುಂದಿನ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ನಾಯಕತ್ವ ಕೊಟ್ಟರೆ ಕಾಂಗ್ರೆಸ್‌ ಜತೆಗೆ ಕೈ ಜೋಡಿಸುವ ಬಗ್ಗೆ ಯೋಚಿಸಲಾಗುವುದು ಎಂದು ಎಚ್‌. ಡಿ. ಕುಮಾರಸ್ವಾಮಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಖರ್ಗೆ ಹಿರಿಯ ನಾಯಕರು. ಆ ಪಕ್ಷಕ್ಕೆ ನಿಷ್ಠೆ ಯಿಂದ ಕೆಲಸ ಮಾಡಿದ್ದಾರೆ. ಹಲವು ಬಾರಿ ಅವರಿಗೆ ಅನ್ಯಾಯ ಆಗಿದ್ದರೂ ನಿಷ್ಠೆಯಿಂದ ನಡೆದುಕೊಂಡಿದ್ದಾರೆ ಎಂದರು. ಪ್ರವಾಹದಲ್ಲಿ ಮನೆ ಬಿದ್ದವರಿಗೆ ಇನ್ನೂ ಮನೆ ನಿರ್ಮಿಸಿ ಕೊಟ್ಟಿಲ್ಲ. ಕೊಡಗು, ಚಿಕ್ಕಮಗಳೂರಿನಲ್ಲಿ ಮನೆ ಕಟ್ಟಲಿಲ್ಲ. …

Read More »

ವಿಗ್ರಹ ಕದ್ದ ಕಳ್ಳರು: ಸ್ಥಳಕ್ಕೆ ಪೋಲಿಸರು ಭೇಟಿ

ಬೆಳಗಾವಿ: ದೇವಸ್ಥಾನದ ಗರ್ಭಗುಡಿಯಲ್ಲಿದ್ದ ದೇವರ ವಿಗ್ರಹವನ್ನು ಕಳ್ಳರು ಕದ್ದಿರುವ ಘಟನೆ. ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಡೆದಿದೆ. ಕೊಕಟನೂರ ಗ್ರಾಮದ ಬೀರೇಶ್ವರ ದೇವಸ್ಥಾನದ ದೇವರ ವಿಗ್ರಹ ಕದ್ದು ಪರಾರಿಯಾಗಿದ್ದು, ತಡರಾತ್ರಿ ನಡೆದ ಈ ಘಟನೆ ಬೆಳಿಗ್ಗೆ ಪೂಜಾರಿ ಪೂಜೆಗೆ ಬಂದಾಗ ಬೆಳಕಿಗೆ ಬಂದಿದೆ. ವಾಮಾಚಾರಿಗಳು, ನಿಧಿಗಳ್ಳರು ದೇವರ ಮೂರ್ತಿ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Read More »

2023ರ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಜನರಿಗೆ ಬಂಪರ್ ಕೊಡುಗೆ : ಸಿದ್ದರಾಮಯ್ಯ

ಬೆಳಗಾವಿ : ಮುಂಬರುವ 2023ರ ಚುನಾವಣೆಯಲ್ಲಿ ಜನಾಶೀರ್ವಾದಿಂದ ನಾವು ಅಧಿಕಾರಕ್ಕೆ ಬಂದರೆ 10 ಕೆ.ಜಿ. ಅಕ್ಕಿ ಉಚಿ​ತ​ವಾಗಿ ಕೋಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಘೋಷಿ​ಸಿ​ದ​ರು. ರಾಮದುರ್ಗ ತಾಲೂಕಿನ ಅವರಾದಿ ಗ್ರಾಮದಲ್ಲಿ ಭಾನು​ವಾ​ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಉದ್ಘಾಟಿಸಿ ಮಾತನಾಡಿ, ಪಿಎಸ್‌ಐ ನೇಮಕಾತಿಯಲ್ಲಿ ಸುಮಾರು .300 ಕೋಟಿ ಹೊಡೆದಿದ್ದಾರೆ ಎಂದು ಆರೋಪಿಸಿದರು. ಇಂಥ ಸರ್ಕಾರ ಯಾವುದೇ ಕಾರ​ಣಕ್ಕೂ ಇರ​ಬಾ​ರದು, ಇಂಥ ಸರ್ಕಾ​ರ​ವನ್ನು ಬೇರು ಸಮೇತ ಕಿತ್ತು ಎಸೆದಾಗ ದೇಶ, ನಾವು, …

Read More »

ದಲಿತ ಹೋರಾಟಗಾರ , ಬರಹಗಾರ ರವೀಂದ್ರ ಹಾರೋಹಳ್ಳಿ‌ ಬಂಧನ

ಚಿಕ್ಕೋಡಿ/ ಬೆಳಗಾವಿ: ದಲಿತ ಹೋರಾಟಗಾರ ಹಾಗೂ ಬರಹಗಾರ ರವೀಂದ್ರ ಹಾರೋಹಳ್ಳಿ ಅವರನ್ನು ಜಿಲ್ಲೆಯ ಚಿಕ್ಕೋಡಿ ಠಾಣೆಯ ಪೊಲೀಸರು ಮೈಸೂರಿನ ಹಾರೋಹಳ್ಳಿಯಲ್ಲಿ ಶುಕ್ರವಾರ ಬಂಧಿಸಿದ್ದಾರೆ. ‘ಅವರನ್ನು, 2017ರ ಡಿಸೆಂಬರ್‌ನಲ್ಲಿ ವಾಟ್ಸ್‌ಆಯಪ್‌ ಮತ್ತು ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟ್‌ಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.

Read More »

ವರುಣನ ಆರ್ಭಟಕ್ಕೆ ಎಮ್ಮೆ, ಮಹಿಳೆ ಬಲಿ

ಬೆಳಗಾವಿ: ಜಿಲ್ಲೆಯ ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದ ಕೃಷಿಕ‌ ಮಹಿಳೆ ಸಿಡಿಲು ಬಡೆದು ಮೃತಪಟ್ಟಿದ್ದಾರೆ. ವೆಂಕಟಾಪುರ ಗ್ರಾಮದ ಮಲ್ಲಮ್ಮ ವಟವಟಿ(38) ಮೃತ ಮಹಿಳೆ. ಜಾನುವಾರುಗಳಿಗೆ ಮೇವು ತರುವಾಗ ಸಿಡಿಲು ಬಡಿದು ಮಹಿಳೆ ಮೃತರಾಗಿದ್ದಾರೆ. ಸಿಡಿಲಿಗೆ ಹೊಟ್ಟೆಯ ಭಾಗ ಛಿದ್ರವಾಗಿದೆ. ಕುಲಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಳೆಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ ಎರಡಕ್ಕೇರಿದೆ. ಕಳೆದ ವಾರ ಮರ ಬಿದ್ದು ನಗರದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದರು. ಇನ್ನು ಸವದತ್ತಿ ತಾಲೂಕಿನ …

Read More »